ಪ್ರಸ್ತುತ ಐಫೋನ್ (iPhone) ಗಳನ್ನು ತೈವಾನ್ (Tavian) ಮೂಲದ ಫಾಕ್ಸ್ಕಾನ್ (Foxconn) ಮತ್ತು ವಿಸ್ಟ್ರಾನ್ ಕಂಪನಿ (Vestron Company) ತಯಾರಿಸುತ್ತಿದೆ. ಬಹುತೇಕ ಆಪಲ್ ಕಂಪನಿ (Apple Company) ತಯಾರಿಸುತ್ತಿರುವ ಎಲ್ಲಾ ಐಫೋನ್ಗಳ ಉತ್ಪಾದನೆ ಚೀನಾ ಮತ್ತು ತೈವಾನ್ನಲ್ಲಿ ಆಗುತ್ತಿದೆ. ಚೀನಾ (China) ದ ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಚೀನಾದಲ್ಲಿ ಉಂಟಾಗುತ್ತಿರುವ ಕೆಲ ತೊಂದರೆಗಳಿಂದ ಕೆಲವು ವಸ್ತುಗಳ ಉತ್ಪಾದನೆ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹಲವು ದೇಶಗಳು ತಮಗೆ ಬೇಕಾದ ವಸ್ತುಗಳನ್ನು ಉತ್ಪಾದನೆ ಮಾಡಲು ಆರಂಭಿಸಿಕೊಂಡಿವೆ.
ಭಾರತದಲ್ಲಿ ಐಫೋನ್ ತಯಾರು
ಭಾರತ ಕೂಡ ಚೀನಾದ ಅವಲಂಬನೆ ಕಡಿಮೆ ಮಾಡಲು ದಿಟ್ಟ ಹೆಜ್ಜೆ ಇಟ್ಟಿದ್ದು, ಭಾರತದಲ್ಲೇ ಐಫೋನ್ ತಯಾರಿಸಲು ಸಜ್ಜಾಗಿದೆ. ಪ್ರಸ್ತುತ ಎಲ್ಲಾ ಐಫೋನ್ಗಳಲ್ಲಿ ಸುಮಾರು 5% ರಷ್ಟು ಉತ್ಪಾದಿಸುತ್ತಿರುವ ಭಾರತವು ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಒಟ್ಟು ಉತ್ಪಾದನೆಯ 20% ನಷ್ಟು ಭಾಗವನ್ನು ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮದ ಕಾರ್ಯನಿರ್ವಾಹಕರು ಕೂಡ ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಭಾರತದಿಂದ ಹೆಚ್ಚಿನ ಮೌಲ್ಯದ ಉತ್ಪಾದನೆಯ ಪಾಲನ್ನು ನಿರೀಕ್ಷಿಸುತ್ತಿದ್ದಾರೆ.
ವಿಸ್ಟ್ರಾನ್ ಕಂಪನಿ ಜೊತೆ ಮಾತುಕತೆ
ಚೀನಾದ ಮೊಬೈಲ್ ಉದ್ಯಮಕ್ಕೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ತಯಾರಾಗುವ ಐಫೋನ್ಗೆ ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ಬೇಡಿಕೆ ಇದೆ. ಹೀಗಾಗಿ ಭಾರತ ವಿಸ್ಟ್ರಾನ್ ಕಂಪನಿಯೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನೊಂದು ವಿಚಾರವೆಂದರೆ ವಿಸ್ಟ್ರಾನ್ ಕಂಪನಿ ಜೊತೆ ಮಾತುಕತೆ ಮಾಡಿದ್ದು, ಭಾರತದ ಟಾಟಾ ಕಂಪನಿ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ.
ಇದನ್ನೂ ಓದಿ: ಥೈಲ್ಯಾಂಡ್ ಅಖಾಡಕ್ಕೆ ಟೆಸ್ಲಾ ಎಂಟ್ರಿ, ಚೈನೀಸ್ ಬ್ರ್ಯಾಂಡ್ಗಳಿಗೆ ಕಠಿಣ ಪೈಪೋಟಿ!
ಚೀನಾ ಕೂಡ ದೇಶ ಅನುಭವಿಸುತ್ತಿರುವ ಕೆಲವು ತೊಂದರೆಗಳಿಂದಾಗಿ ದೇಶದ ಹೊರಗೆ ಐಫೋನ್ ಫೋನ್ಗಳ ತಯಾರಿಕೆಯನ್ನು ವಿಸ್ತರಿಸಲು ಮುಂದಾಗಿದೆ. ಈಗಾಗಲೇ ಫಾಕ್ಸ್ಕಾನ್ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಕೆಲಸ ನಡೆಯುತ್ತಿದೆ. ಈ ಅಂಶ ಕೂಡ ಭಾರತಕ್ಕೆ ಐಫೋನ್ ತಯಾರಿಸಲು ನೆರವಾಗಿದೆ.
ಚೀನಾ ಅನುಭವಿಸುತ್ತಿರುವ ತೊಂದರೆಗಳು
ಚೀನಾ ಮತ್ತು ಯುಎಸ್ ನಡುವೆ ಚಿಪ್ ಯುದ್ಧ ದೊಡ್ಡದಾಗಿ ನಡೆಯುತ್ತಿದೆ. ಅಷ್ಟೇ ಅಲ್ಲದೇ ಕೋವಿಡ್ ಉಲ್ಬಣ, ಸಾಲು ಸಾಲು ಲಾಕ್ಡೌನ್ಗಳು ದೇಶದಲ್ಲಿನ ಫಾಕ್ಸ್ಕಾನ್ ಸೌಲಭ್ಯಗಳಲ್ಲಿ ಉತ್ಪಾದನೆಯನ್ನು ಅಡ್ಡಿಪಡಿಸುತ್ತಿದೆ. ಹೀಗಾಗಿ ಕಂಪನಿಯು ಚೀನಾದಿಂದ ಸ್ಥಳಾಂತರಗೊಳ್ಳುವ ತನ್ನ ಯೋಜನೆಗಳನ್ನು ಮತ್ತಷ್ಟು ವೇಗಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಕೋವಿಡ್ ಲಾಕ್ಡೌನ್ ಹಾಗೂ ಯುಎಸ್ನೊಂದಿಗೆ ರಾಜಕೀಯ ಸಮಸ್ಯೆ ಎದುರಿಸುತ್ತಿರುವ ಚೀನಾಗೆ ಭಾರತ ಈ ಮೂಲಕ ಪೈಪೋಟಿ ನೀಡಲಿದೆ. ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನಾಕ್ಕೆ ಇದು ನುಂಗಲಾರದ ತುತ್ತು ಕೂಡ ಆಗಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಪ್ರಯೋಜನಗಳು
ಚೀನಾ ಅನುಭವಿಸುತ್ತಿರುವ ತೊಂದರೆಗಳು ಭಾರತಕ್ಕೆ ವರದಾನವಾಗಿವೆ. ಫಾಕ್ಸ್ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವುದರಿಂದ ಭಾರತದಲ್ಲಿ ಆಪಲ್ನ ಉತ್ಪಾದನೆಯು ತೀವ್ರವಾಗಿ ಏರಿಕೆಯಾಗಲಿದೆ.
ಇದನ್ನೂ ಓದಿ: ಜನಸಾಮಾನ್ಯರಿಗೆ ಬಿಗ್ ರಿಲೀಫ್, ಫಸ್ಟ್ ಟೈಮ್ ಇ-ಬೈಕ್ ಟ್ಯಾಕ್ಸಿಗೆ ಪರವಾನಗಿ ನೀಡಿದ ಸಾರಿಗೆ ಪ್ರಾಧಿಕಾರ!
ಕಳೆದ ತಿಂಗಳು, ಪ್ರಸಿದ್ಧ ಆಪಲ್ ವಿಶ್ಲೇಷಕ ಮಿಂಗ್-ಚಿ ಕುವೊ ಟ್ವೀಟ್ನಲ್ಲಿ ಫಾಕ್ಸ್ಕಾನ್ ತನ್ನ ಭಾರತದ ಸ್ಥಾವರದಲ್ಲಿ ಸಾಮರ್ಥ್ಯದ ವಿಸ್ತರಣೆಯನ್ನು ವೇಗಗೊಳಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. "ಇದರ ಪರಿಣಾಮವಾಗಿ, ಭಾರತದಲ್ಲಿ ಫಾಕ್ಸ್ಕಾನ್ ತಯಾರಿಸಿದ ಐಫೋನ್ಗಳು 2023 ರಲ್ಲಿ ವರ್ಷಕ್ಕೆ ಕನಿಷ್ಠ 150% ರಷ್ಟು ಬೆಳೆಯುತ್ತವೆ ಮತ್ತು 40-45% ಐಫೋನ್ಗಳನ್ನು ಭಾರತದಿಂದ ರಫ್ತು ಮಾಡಬಹುದು (ಪ್ರಸ್ತುತ 2-4 %)" ಎಂದು ಕುವೊ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ