• Home
  • »
  • News
  • »
  • business
  • »
  • Jio Mart Bestival Sale: ಮತ್ತೆ ಬಂತು ಇಂಡಿಯಾದ ಅತಿದೊಡ್ಡ ಸೇಲ್​ ಉತ್ಸವ, 'ಬೆಸ್ಟಿವಲ್ ಸೇಲ್'​ನಲ್ಲಿ ಎಲ್ಲವೂ ಬೆಸ್ಟ್​ ಬಾಸ್!

Jio Mart Bestival Sale: ಮತ್ತೆ ಬಂತು ಇಂಡಿಯಾದ ಅತಿದೊಡ್ಡ ಸೇಲ್​ ಉತ್ಸವ, 'ಬೆಸ್ಟಿವಲ್ ಸೇಲ್'​ನಲ್ಲಿ ಎಲ್ಲವೂ ಬೆಸ್ಟ್​ ಬಾಸ್!

ಬೆಸ್ಟಿವಲ್​ ಸೇಲ್​

ಬೆಸ್ಟಿವಲ್​ ಸೇಲ್​

Bestival Sale: ಜಿಯೋ ಮಾರ್ಟ್ (Jio Mart)​ ಕೂಡ ಬಿಗ್ಗೆಸ್ಟ್​ ಸೇಲ್​ ಆರಂಭಿಸಿದೆ. ಜಿಯೋ ಮಾರ್ಟ್ ಮತ್ತು ಸ್ಮಾರ್ಟ್ ಸ್ಟೋರ್ಗಳ ಸಹಭಾಗಿತ್ವದಲ್ಲಿ ಭಾರತದ ಅತಿದೊಡ್ಡ ಉತ್ಸವ 'ಬೆಸ್ಟಿವಲ್ ಸೇಲ್' (Bestival Sale) ಆರಂಭವಾಗಿದೆ.

  • News18 Kannada
  • Last Updated :
  • New Delhi, India
  • Share this:

ದೀಪಾವಳಿ ಸೀಸನ್ (​Deepavali Season) ಹತ್ತಿರ ಬರುತ್ತಿದೆ. ಪೆಸ್ಟಿವಲ್​ ಸೀಸನ್​ (Festival Season) ಅಂದರೆ ಮೊದಲೇ ಕೇಳಬೇಕಾ? ಸಾಕಷ್ಟು ಕಂಪೆನಿಗಳು ಭಾರೀ ರಿಯಾಯಿತಿ (Discount) ಕೂಡು ಅನೌನ್ಸ್ ಮಾಡುತ್ತವೆ. ಇನ್ನೂ ಆನ್​ಲೈನ್​ ಶಾಪಿಂಗ್ (Online Shopping) ಮಾಡುವವರಿಗೂ ಅಂತೂ ಭರ್ಜರಿ ರಸದೌತಣ. ಇದೀಗ ಜಿಯೋ ಮಾರ್ಟ್ (Jio Mart)​ ಕೂಡ ಬಿಗ್ಗೆಸ್ಟ್​ ಸೇಲ್​ ಆರಂಭಿಸಿದೆ. ಜಿಯೋ ಮಾರ್ಟ್ ಮತ್ತು ಸ್ಮಾರ್ಟ್ ಸ್ಟೋರ್ಗಳ ಸಹಭಾಗಿತ್ವದಲ್ಲಿ ಭಾರತದ ಅತಿದೊಡ್ಡ ಉತ್ಸವ 'ಬೆಸ್ಟಿವಲ್ ಸೇಲ್' (Bestival Sale) ಆರಂಭವಾಗಿದೆ. ರಿಲಯನ್ಸ್ ರಿಟೇಲ್​ನ ಜಿಯೋಮಾರ್ಟ್ (Jio Mart) ಮತ್ತು ಸ್ಮಾರ್ಟ್ ಸ್ಟೋರ್​ಗಳ (SMART Stores) 'ಬೆಸ್ಟಿವಲ್ ಸೇಲ್' ಅಕ್ಟೋಬರ್ 14 ರಿಂದ ಆರಂಭವಾಗಿದ್ದು, ಇದೇ ತಿಂಗಳ 24 ರವರೆಗೆ ನಡೆಯಲಿದೆ.


ಬೆಸ್ಟಿವಲ್​ ಸೇಲ್​ ಆರಂಭ!


ಇದು ಇ-ಮಾರುಕಟ್ಟೆ ಪ್ಲಾಟ್​ಫಾರ್ಮ್​ ಮತ್ತು ಸ್ಮಾರ್ಟ್ ಬಜಾರ್, ಸ್ಮಾರ್ಟ್ ಸೂಪರ್​ಸ್ಟೋರ್​​ ಮತ್ತು ಸ್ಮಾರ್ಟ್ ಪಾಯಿಂಟ್ ಸೇರಿದಂತೆ ಸ್ಮಾರ್ಟ್ ಸ್ಟೋರ್​ಗಳಲ್ಲಿ ಆರಂಭವಾಗಿದೆ. ಆನ್​ಲೈನ್​ ಫ್ಲಾಟ್​ಫಾರ್ಮ್ ಜಿಯೋ ಮಾರ್ಟ್ ನಡೆಸುವ ಹಬ್ಬದ ಸೀಸನ್ ಮಾರಾಟ ಆರಂಭಿಸಿದ್ದು, ಈ ಸೇಲ್​ನಲ್ಲಿ ಎಲೆಕ್ಟ್ರಾನಿಕ್ಸ್, ಮನೆ ಮತ್ತು ಅಡುಗೆಮನೆ, ಫ್ಯಾಷನ್ ಮತ್ತು ಲೈಫ್​ಸ್ಟೈಲ್​, ಸೌಂದರ್ಯವರ್ಧಕ, ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು ಮೇಲೆ ಬಂಪರ್ ಆಫರ್ ನೀಡುತ್ತದೆ.


ಇಲ್ಲಿ ಏನೆಲ್ಲಾ ಖರೀದಿಸಬಹುದು ನೋಡಿ!


ವಿಶಾಲವಾದ ಮತ್ತು ವೈವಿಧ್ಯಮಯ ಭಾರತೀಯ ಕೈಮಗ್ಗ ಮತ್ತು ಕರಕುಶಲ ಉದ್ಯಮದ ಪ್ರಾದೇಶಿಕ ಕುಶಲಕರ್ಮಿಗಳನ್ನು ಜಿಯೋಮಾರ್ಟ್ ಮುಂದುವರಿಸಲು 'ಬೆಸ್ಟಿವಲ್ ಸೇಲ್' ಸಾಕ್ಷಿಯಾಗಲಿದೆ. ಉದಾಹರಣೆಗೆ, ಈ ಹಬ್ಬದ ಸೀಜನ್​ನಲ್ಲಿ ಗುಜರಾತ್​​ನ ಪೋಚಂಪಲ್ಲಿ ಸೀರೆಗಳು ಮತ್ತು ಬಾಂಧನಿ ಜೊತೆಗೆ ಪಂಜಾಬಿ ಜುಟ್ಟಿಗಳು, ಜೈಪುರಿ ಬ್ಲಾಕ್ ಪ್ರಿಂಟ್ ಕ್ವಿಲ್ಟ್​​ಗಳು ಜೊತೆಗೆ ಹಿತ್ತಾಳೆ ಬಟ್ಟಲುಗಳು ಮತ್ತು ಮೊರಾದಾಬಾದ್ನ ವಿಶೇಷ ಪೂಜಾ ಪರಿಕರಗಳು ಮತ್ತು ಪರಿಸರ ಸ್ನೇಹಿ ಕರ್ನಾಟಕದ ಚನ್ನಪಟ್ಟಣದ ಮರದ ಆಟಿಕೆಗಳನ್ನು ಖರೀದಿಸಬಹುದಾಗಿದೆ.


ಇದನ್ನೂ ಓದಿ: ಇನ್ನೊಂದೇ ದಿನ ಬಾಕಿ, ಜಸ್ಟ್​ 17 ಸಾವಿರಕ್ಕೆ ಖರೀದಿಸಿ ಐಫೋನ್​!


ಮುಂದಿನ 10 ದಿನಗಳವರೆಗೆ ಅಂದರೆ ದೀಪಾವಳಿವರೆಗೆ ನಡೆಯುವ ಈ ಸೇಲ್​ ಬೆಸ್ಟಿವಲ್ ಸೇಲ್ ಎಂದು ಕರೆಯಲಾಗುತ್ತದೆ. ಇದನ್ನು 3,000 ಕ್ಕೂ ಹೆಚ್ಚು ಸ್ಮಾರ್ಟ್ ಸ್ಟೋರ್​​ಗಳ ನೆಟ್​ವರ್ಕ್​ಗೆ ವಿಸ್ತರಿಸಲಾಗಿದೆ. ಮಾರಾಟಗಾರರಿಗೆ ಭಾರತದ ಅತಿದೊಡ್ಡ ಇ-ಮಾರುಕಟ್ಟೆಯನ್ನು ಮತ್ತಷ್ಟು ಹತ್ತಿರವಾಗಿಸಲು ಜಿಯೋಮಾರ್ಟ್ ಪ್ರಸ್ತುತ ತನ್ನ ವ್ಯಾಪ್ತಿಯನ್ನು ಎಲ್ಲಾ ವರ್ಗಗಳಲ್ಲಿ 19,000 ಪಿನ್ ಕೋಡ್​​ಗಳಿಗೆ ವಿಸ್ತರಿಸಿದೆ. ಈ ಕ್ಷಿಪ್ರ ವಿಸ್ತರಣೆಯು ಜಿಯೋಮಾರ್ಟ್​ನ ಅತಿದೊಡ್ಡ ಸ್ವದೇಶಿ ಇ-ಮಾರುಕಟ್ಟೆಯಾಗಿಸುವ ಗುರಿ ಹೊಂದಿದೆ.


ದೀಪಾವಳಿ ಅಗತ್ಯ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ!


ದೀಪಾವಳಿ ಪ್ರಯುಕ್ತ ಏರ್ಪಡಿಸಲಾದ ಈ ಸೇಲ್​ನಲ್ಲಿ ವಿಶೇಷ ಕೊಡುಗೆಗಳು ಮತ್ತು ಆಕರ್ಷಕ ಆಫರ್​​ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಬ್ಯಾಂಕ್ ಟೈ-ಅಪ್​ಗಳು ಮತ್ತು ದೀಪಾವಳಿ ಅಗತ್ಯ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ. ಅಲ್ಲದೇ ಸಾಮಾನ್ಯ ಸರಕುಗಳು, ಉಡುಪುಗಳು, ಸೌಂದರ್ಯ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಪ್ರತ್ಯೇಕವಾಗಿ ಜಿಯೋಮಾರ್ಟ್ ಆನ್​ಲೈನ್​ ಹಾಗೂ ನೆರೆಹೊರೆಯ ಸ್ಮಾರ್ಟ್ ಸ್ಟೋರ್​ಗಳಲ್ಲಿ ಲಭ್ಯವಿದೆ.


ಇದನ್ನೂ ಓದಿ: ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿಎನ್‌ಜಿ ಕಾರು ಬಿಡುಗಡೆ, 5 ಲಕ್ಷ ಕೊಟ್ಟು ಮನೆಗೆ ತನ್ನಿ!


ರಿಲಯನ್ಸ್ ರಿಟೇಲ್‌ನ ಕಿರಾಣಿ ವಿಭಾಗದ ಸಿಇಒ ದಾಮೋದರ್ ಮಾಲ್ ಮಾತನಾಡಿ, “3000ಕ್ಕೂ ಅಧಿಕ ಸ್ಮಾರ್ಟ್ ಸ್ಟೋರ್​​ಗಳು ಮತ್ತು ಜಿಯೋಮಾರ್ಟ್​ನ ಪ್ರಬಲ ಸಂಯೋಜನೆಯು ಭಾರತದಾದ್ಯಂತ ಗ್ರಾಹಕರಿಗೆ ಒಂದು ವರದಾನವಾಗಿದೆ. ರಾಷ್ಟ್ರವ್ಯಾಪಿ ಸ್ಟೋರ್​ಗಳ ಜಾಲದ ಈ ಸಂಗಮ ಮತ್ತು ಅದೇ ಬೆಲೆಯಲ್ಲಿ ಡಿಜಿಟಲ್ ಶಾಪಿಂಗ್ ಮಾಡುವ ಅನುಭವ ವಿಶಿಷ್ಟವಾಗಿದೆ. ಈ ಹಬ್ಬದ ಸೀಜನ್​ನಲ್ಲಿ ಸ್ಟೋರ್​ಗಳು ಅಪ್ಲಿಕೇಶನ್​​ಗಳ ಮೂಲಕ ದಿನಸಿ ವಸ್ತುಗಳನ್ನು ಖರೀದಿಸುವ ಆಯ್ಕೆ ಕುಟುಂಬಗಳಿಗೆ ಇಷ್ಟವಾಗುತ್ತದೆ ಎಂಬ ಖಾತ್ರಿ ನನಗಿದೆ ಎಂದಿದ್ದಾರೆ.


ಇದೇ ಸಂದರ್ಭದಲ್ಲಿ ಜಿಯೋಮಾರ್ಟ್‌ನ ಸಿಇಒ ಸಂದೀಪ್ ವರಗಂಟಿ ಮಾತನಾಡಿ, ಆನ್‌ಲೈನ್ ಪ್ಲಾಟ್ಫಾರ್ಮ್ ಕಳೆದ 15 ದಿನಗಳಲ್ಲಿ ದಿನಸಿಯೇತರ ವರ್ಗಗಳ ಮಾರಾಟದಲ್ಲಿ 3 ಪಟ್ಟು ಹೆಚ್ಚಳವಾಗಿದೆ ಎಂದಿದ್ದಾರೆ.

Published by:ವಾಸುದೇವ್ ಎಂ
First published: