India No. 1: ಅರಬ್ ದೇಶಗಳಿಗೆ ಆಹಾರ ರಫ್ತು: 15 ವರ್ಷ ಬಳಿಕ ಭಾರತ ನಂ. 1

India beat Brazil in Agri exports to Arab- ಅರಬ್ ಲೀಗ್​ನ 22 ದೇಶಗಳಿಗೆ ಕೃಷಿ ಉತ್ಪನ್ನಗಳನ್ನ ರಫ್ತು ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನಕ್ಕೇರಿದೆ. 15 ವರ್ಷಗಳಲ್ಲಿ ಭಾರತ ಈ ಹಂತಕ್ಕೇರಿದ್ದು ಇದೇ ಮೊದಲೆನ್ನಲಾಗಿದೆ.

ತರಕಾರಿ ಮಾರುಕಟ್ಟೆಯ ಸಾಂದರ್ಭಿಕ ಚಿತ್ರ

ತರಕಾರಿ ಮಾರುಕಟ್ಟೆಯ ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ಸಾವೊ ಪೌಲೋ: ಕೊರೋನಾ ವೈರಸ್ ಭಾರತದ ಆರ್ಥಿಕತೆಯನ್ನ ಹಿಂಡಿ ಹಿಪ್ಪೆ ಮಾಡಿದ್ದು ಹೌದು. ಜೊತೆಗೆ ಭಾರತಕ್ಕೆ ಕೆಲ ವಿಚಾರಗಳಲ್ಲಿ ಅನುಕೂಲವನ್ನೂ ಮತ್ತು ಅವಕಾಶವನ್ನೂ ಒದಗಿಸಿಕೊಟ್ಟಿದೆ. ಉದಾಹರಣೆಗೆ ಅರಬ್ ದೇಶಗಳೊಂದಿಗಿನ ಆರ್ಥಿಕ ವ್ಯವಹಾರ. ಈಗ ಬಂದಿರುವ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿಯೊಂದರ ಪ್ರಕಾರ ಅರಬ್ ದೇಶಗಳಿಗೆ ಆಹಾರ ರಫ್ತು ಮಾಡುವುದರಲ್ಲಿ ಭಾರತವೇ ಮುಂದಿದೆ. ಬ್ರೆಜಿಲ್ ದೇಶವನ್ನು ಮೀರಿಸಿ ಭಾರತ ಈ ವಿಚಾರದಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ. ಇದಕ್ಕೆ ಕೋವಿಡ್ ಸಾಂಕ್ರಾಮಿಕ ಸಂದರ್ಭವೇ ಕಾರಣ ಎನ್ನಲಾಗಿದೆ.

    ಬ್ರೆಜಿಲ್ ದೇಶದ ಅತಿ ದೊಡ್ಡ ವ್ಯಾವಹಾರಿಕ ಪಾಲುದಾರ ಎಂದರೆ ಅರಬ್ ದೇಶಗಳ ಗುಂಪು (ಲೀಗ್ ಆಫ್ ಅರಬ್ ಸ್ಟೇಟ್ಸ್). ಆದರೆ, ಕೊರೋನಾ ಬಿಕ್ಕಟ್ಟು ಉದ್ಭವಿಸಿದ ಬಳಿಕ ಅರಬ್ ನಾಡಿಗೆ ಆಹಾರ ಸರಬರಾಜು ಮಾಡಲು ಬ್ರೆಜಿಲ್​ಗೆ ಕಷ್ಟವಾಗಿದೆ. ಕಾರಣ, ಎರಡೂ ಸ್ಥಳಗಳ ಮಧ್ಯೆ ಇರುವ ಅಗಾಧ ದೂರ. ಈ ಹಿನ್ನೆಲೆಯಲ್ಲಿ ಭಾರತದಿಂದ ಅರಬ್ ದೇಶಗಳು ಹೆಚ್ಚು ಆಹಾರ ಆಮದು ಮಾಡಿಕೊಂಡಿವೆ.

    ಕೋವಿಡ್ ಬಿಕ್ಕಟ್ಟಿಗೆ ಮುಂಚೆ, ಅಂದರೆ 2020ಕ್ಕೆ ಮುಂಚಿನ ಸಂದರ್ಭಗಳಲ್ಲಿ ಬ್ರೆಜಿಲ್​ನಿಂದ ಆಹಾರ ಉತ್ಪನ್ನಗಳನ್ನ ಹೊತ್ತ ಹಡಗು 30 ದಿನಗಳಲ್ಲಿ ಸೌದಿ ಅರೇಬಿಯಾವನ್ನ ತಲುಪುತ್ತಿತ್ತು. ಆದರೆ, ಸಾಂಕ್ರಾಮಿಕ ಸ್ಥಿತಿಯಲ್ಲಿ ಈಗ ಬ್ರೆಜಿಲ್​ನಿಂದ ಸೌದಿ ಅರೇಬಿಯಾಗೆ ಒಂದು ಹಡಗು ಬರಲು ಸರಾಸರಿಯಾಗಿ 60 ದಿನ ಆಗುತ್ತಿದೆ. ಇಷ್ಟು ವಿಳಂಬವು ಬ್ರೆಜಿಲ್ ರಫ್ತಿಗೆ ಹೊಡೆತ ಕೊಟ್ಟಿದೆ.

    ಭಾರತದಿಂದ ಹಣ್ಣ, ತರಕಾರಿ, ಸಕ್ಕರೆ, ಧಾನ್ಯ, ಮಾಂಸ ಇತ್ಯಾದಿ ಆಹಾರ ಉತ್ಪನ್ನಗಳು ಅರಬ್ ದೇಶಗಳಿಗೆ ಕೇವಲ ಒಂದು ವಾರದಲ್ಲಿ ಸಾಗಣೆ ಆಗುತ್ತವೆ. ಹೀಗಾಗಿ, ಬ್ರೆಜಿಲ್​ಗೆ ಆದ ಹಿನ್ನಡೆ ಭಾರತಕ್ಕೆ ವರದಾನ ಆಗಿದೆ.

    ಇದನ್ನೂ ಓದಿ: Reliance ಮತ್ತೊಂದು ಮೈಲಿಗಲ್ಲು.. ಅಬುಧಾಬಿಯ TAZIZ ಜೊತೆ $2 ಬಿಲಿಯನ್ ಮೌಲ್ಯದ ಉದ್ಯಮ ಆರಂಭ

    ಅರಬ್ ನಾಡಿನ ಗುಂಪಿನಲ್ಲಿ 22 ದೇಶಗಳಿವೆ. ಈ ದೇಶಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳಲ್ಲಿ ಬ್ರೆಜಿಲ್ ಪಾಲು ಶೇ. 8.15 ಇದೆ. ಆದರೆ, ಭಾರತದ ಪಾಲು ಶೇ. 8.25ಕ್ಕೆ ಏರಿದೆ. 15 ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಬ್ರೆಜಿಲ್ ದೇಶವನ್ನು ಈ ವ್ಯವಹಾರದಲ್ಲಿ ಹಿಂದಿಕ್ಕಿದಂತಾಗಿದೆ.

    ಅರಬ್ ಲೀಗ್ ದೇಶಗಳಿಗೆ ಬ್ರೆಜಿಲ್ ರಫ್ತು ಮಾಡುವ ಕೃಷಿ ಉತ್ಪನ್ನಗಳ ಮೌಲ್ಯ 8 ಬಿಲಿಯನ್ ಡಾಲರ್​ಗೂ ಹೆಚ್ಚು. ಕಳೆದ ವರ್ಷ ಈ ಮೊತ್ತ ವೃದ್ಧಿಯಾಗಿದ್ದು ಶೇ. 1.4 ಮಾತ್ರ. ಆದರೆ, ಕೋವಿಡ್ ಸಾಂಕ್ರಾಮಿಕ ಸ್ಥಿತಿ ಸುಧಾರಿಸಿದ ಬಳಿಕ, ಅಂದರೆ ಈ ವರ್ಷದ ಜನವರಿಯಿಂದ ಅಕ್ಟೋಬರ್​ವರೆಗೆ ವ್ಯವಹಾರ ಉತ್ತಮಕೊಂಡಿದೆ. ಶೇ. 5.5ರಷ್ಟು ರಫ್ತು ಪ್ರಮಾಣ ಹೆಚ್ಚಾಗಿದೆ ಎಂದು ಅರಬ್-ಬ್ರೆಜಿಲ್ ಚೇಂಬರ್ ಆಫ್ ಕಾಮರ್ಸ್ ಹೇಳಿಕೆ ನೀಡಿದೆ.

    ಇದನ್ನೂ ಓದಿ: ಭಾರತದಲ್ಲಿ ಅಸಮಾನತೆ ಬಹಳ ಹೆಚ್ಚು, ಬರಿಗೈಲಿದೆ ಅರ್ಧ ಜನಸಂಖ್ಯೆ: ಡಬ್ಲ್ಯೂಐಎಲ್ ವರದಿ

    ಇನ್ನು, ಚೀನಾ ಕೂಡ ಕೋವಿಡ್ ಸಾಂಕ್ರಾಮಿಕ ಸ್ಥಿತಿಯಲ್ಲಿ ಕೃಷಿ ಉತ್ಪನ್ನಗಳ ಆಮದು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬ್ರೆಜಿಲ್ ಜೊತೆ ವ್ಯವಹಾರ ಕುದುರಿಸಿಕೊಂಡಿತು. ಇದರಿಂದ ಸೌದಿ ಅರೇಬಿಯಾ ಮೊದಲಾದ ದೇಶಗಳು ಬೇರೆ ದೇಶಗಳ ಮೂಲಕ ಆಹಾರ ಉತ್ಪನ್ನಗಳನ್ನ ಆಮದು ಮಾಡಿಕೊಳ್ಳತೊಡಗಿವು. ಜೊತೆಗೆ, ದೇಶೀಯ ಆಹಾರ ಉತ್ಪಾದನೆಗೆ ಹೆಚ್ಚು ಪುಷ್ಟಿ ಕೊಟ್ಟವೆನ್ನಲಾಗಿದೆ.

    ಇದು ಮಹತ್ವದ ತಿರುವು. ಸೌದಿಯರು ಈಗಲೂ ದೊಡ್ಡ ಖರೀದಿದಾರರೇ. ಆದರೆ, ಹಾಗೆಯೇ ಅವರು ಆಹಾರದ ಮರು-ರಫ್ತು ಕೂಡ ಮಾಡುತ್ತಾರೆ ಎಂದು ಅರಬ್ ಬ್ರೆಜಿಲ್ ಚೇಂಬರ್ ಆಫ್ ಕಾಮರ್ಸ್ ಹೇಳಿದೆ.
    Published by:Vijayasarthy SN
    First published: