GDP Growth: ಜಿಡಿಪಿಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಭಾರತ! ಡ್ರ್ಯಾಗನ್ ರಾಷ್ಟ್ರಕ್ಕೆ ಶುರುವಾಯ್ತು ಭಯ

ಚೀನಾ ದೇಶದ ಆರ್ಥಿಕತೆಯು ಈಗ ಮಂದಗತಿಯಲ್ಲಿ ಸಾಗುತ್ತಿರುವ ಸಮಯದಲ್ಲಿಯೇ ಭಾರತದ ಆರ್ಥಿಕತೆಯು ಉನ್ನತ ಮಟ್ಟವನ್ನು ತಲುಪುತ್ತಿದೆ. ಹೌದು ಭಾರತದ ಈ ವರ್ಷದ ಪ್ರಸಕ್ತ ಆರ್ಥಿಕತೆಯು ಉತ್ತಮ ಗಳಿಕೆಯನ್ನು ಕಂಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

  • Share this:
ಜಾಗತಿಕವಾಗಿ ಅನೇಕ ದೇಶಗಳು ಆರ್ಥಿಕತೆಯನ್ನು (Economy) ಸಮದೂಗಿಸುವಲ್ಲಿ ಹೆಣಗಾಡುತ್ತಿರುವ ಸಂದರ್ಭದಲ್ಲಿ ಭಾರತವು ಆರ್ಥಿಕತೆಯಲ್ಲಿ (Indian Economy)  ಉತ್ತಮ ಬೆಳವಣಿಗೆಯನ್ನು ಕಂಡಿದೆ. ಹಾಗೆಯೇ ಚೀನಾದ ಆರ್ಥಿಕತೆಯುಯು ಈಗ ಮಂದಗತಿಯಲ್ಲಿ ಸಾಗುತ್ತಿರುವ ಸಮಯದಲ್ಲಿಯೇ ಭಾರತದ ಆರ್ಥಿಕತೆಯು ಉನ್ನತ ಮಟ್ಟವನ್ನು ತಲುಪುತ್ತಿದೆ. ಹೌದು ಭಾರತದ ಈ ವರ್ಷದ ಪ್ರಸಕ್ತ ಆರ್ಥಿಕತೆಯು ಉತ್ತಮ ಗಳಿಕೆಯನ್ನು ಕಂಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ. ದೇಶದ ಒಟ್ಟು ದೇಶೀಯ ಉತ್ಪನ್ನ (Gross domestic product) (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌ -ಜೂನ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ.

ಚೀನಾದ ಜಿಡಿಪಿ ದರ ಹೇಗಿದೆ
ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ. ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗವು ದೇಶವನ್ನು ಕಾಡಿದ ನಂತರ ನರೇಂದ್ರ ಮೋದಿ ಸರ್ಕಾರವು ಘೋಷಿಸಿದ ಹಣಕಾಸಿನ ಮತ್ತು ವಿತ್ತೀಯ ಕ್ರಮಗಳ ಎಚ್ಚರಿಕೆಯಿಂದ ಮಾಪನಾಂಕಗಳನ್ನು ನಿರ್ಣಯಿಸಿದ ಪ್ರಮಾಣಗಳಿಗೆ ಈ ಕ್ರೆಡಿಟ್ ಸೇರುತ್ತದೆ. ಜಿಡಿಪಿ ಪ್ರಗತಿ ಕುರಿತು ದೇಶಕ್ಕೆ ಇದು ಗುಡ್‌ನ್ಯೂಸ್‌ ಎಂದರೂ ತಪ್ಪಾಗಲಾರದು.

ಭಾರತದ ಜಿಡಿಪಿ ದರ
2021ರ ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 20.1% ರಷ್ಟು ಏರಿಕೆಯಾಗಿತ್ತು. 2020ರಲ್ಲಿ ಕೋವಿಡ್‌-19 ನಿಂದಾಗಿ ಜಿಡಿಪಿ ಇಳಿಕೆ ಕಂಡಿತ್ತು. ಆದರೆ, ಈ ವರ್ಷ ದೇಶದ ಜಿಡಿಪಿ ಗಣನೀಯವಾಗಿ ಏರಿಕೆ ಕಂಡಿದೆ. ಭಾರತದ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ರಾಷ್ಟ್ರೀಯ ಉತ್ಪನ್ನವು ಶೇ 13.5ರ ಪ್ರಗತಿ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂಕಿ-ಅಂಶ ಬಿಡುಗಡೆ ಮಾಡಿದೆ.

ಆರ್ಥಿಕತೆ ಪ್ರಗತಿ ಹೆಚ್ಚಳಕ್ಕೆ ತಜ್ಞರು ಹೇಳುವುದೇನು?
ಜಿಡಿಪಿ ಪ್ರಗತಿ ಕಂಡ ಬೆನ್ನಲ್ಲೆ ಅನೇಕ ಆರ್ಥಿಕ ತಜ್ಞರು ಇದರ ಕುರಿತು “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಸುಲಭ ಸಾಲ, ಬಂಡವಾಳ ವೆಚ್ಚಗಳಿಗೆ ವರ್ಧಿತ ಸಾರ್ವಜನಿಕ ನಿಧಿ ಮತ್ತು ಖಾಸಗಿ ಹೂಡಿಕೆಗಳನ್ನು ಉತ್ತೇಜಿಸುವ ಮೂಲಕ ಬಡವರನ್ನು ರಕ್ಷಿಸಲು ಮೋದಿ ಸರ್ಕಾರದ ಗಮನದಿಂದಾಗಿ ಭಾರತವು ಆರ್ಥಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ” ಎಂದು ಸರ್ಕಾರಿ ಅಧಿಕಾರಿಗಳು ಮತ್ತು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Business Idea: 10 ಸಾವಿರದಿಂದ ಈ ಬ್ಯುಸಿನೆಸ್​ ಆರಂಭಿಸಿ, ನಿಮ್ಮ ಬದುಕನ್ನೇ ಬದಲಾಯಿಸಬಹುದು!

"ಮುಂದಿನ 2023 ನೇ ವರ್ಷದ ಸಾಲಿನ ಆರ್ಥಿಕ ವರ್ಷದಲ್ಲಿ ಮೋದಿ ಸರ್ಕಾರದ ಬಂಡವಾಳ ವೆಚ್ಚವು ₹ 1.75 ಲಕ್ಷ ಕೋಟಿಗಳಷ್ಟಿದೆ. ಇದು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಆಡಳಿತ ನಡೆಸುತ್ತಿದ್ದ 2013-14 ರ ಸಮಯದಲ್ಲಿ ಸಂಪೂರ್ಣ ಹಣಕಾಸು ವರ್ಷದಲ್ಲಿ ಇರುತ್ತಿದ್ದ ಬಂಡವಾಳ ವೆಚ್ಚಕ್ಕೆ ಇದು ಸಮವಾಗಿದೆ" ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಆರ್ಥಿಕ ತಜ್ಞರು ಏನಂತಾರೆ
“ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಾರ್ಷಿಕ ದರವಾದ ಖಾಸಗಿ ಅಂತಿಮ ಬಳಕೆಯ ವೆಚ್ಚವು ₹22 ಲಕ್ಷ ಕೋಟಿಯಷ್ಟಿದೆ. ಇದು 2019-20 ರಲ್ಲಿನ ಸಾಂಕ್ರಾಮಿಕ ಪೂರ್ವ ಮಟ್ಟಗಳಾದ ₹20 ಲಕ್ಷ ಕೋಟಿಗೆ ಹೋಲಿಸಿದರೆ 10% ರಷ್ಟು ಹೆಚ್ಚಳವನ್ನು ಕಂಡಿದೆ. ಇದು ನಿರಂತರವಾಗಿ ಹೆಚ್ಚಳದ ಪ್ರಗತಿಯನ್ನು ಸೂಚಿಸುತ್ತದೆ” ಎಂದು ಅಧಿಕಾರಿಗಳು ಮತ್ತು ಆರ್ಥಿಕ ತಜ್ಞರು ಹೇಳುತ್ತಾರೆ.

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶ
“ಭಾರತದಲ್ಲಿ 2021-22ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 32.46 ಲಕ್ಷ ಕೋಟಿ ರೂಪಾಯಿ ಇದ್ದ ಆರ್ಥಿಕ ಬೆಳವಣಿಗೆಯು 2022-23ರ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 36.85 ಲಕ್ಷ ಕೋಟಿಗೆ ತಲುಪುವುದಾಗಿ ಅಂದಾಜಿಸಲಾಗಿದೆ. ಒಟ್ಟು 3.83% ರಷ್ಟು ಜಿಡಿಪಿ ದರ ಹೆಚ್ಚಾಗಿದೆ. 2021-22ರಲ್ಲಿ ಶೇಕಡ 20.1ರಷ್ಟು ಜಿಡಿಪಿ ದಾಖಲಾಗಿತ್ತು.

ಇದನ್ನೂ ಓದಿ:  Singapore Visa: ವಿದೇಶಿ ಪ್ರತಿಭೆಗಳನ್ನು ಆಕರ್ಷಿಸಲು ವೀಸಾ ನಿಯಮಗಳನ್ನೇ ಬದಲಾಯಿಸಿದ ಸಿಂಗಾಪುರ್!

ಉಕ್ರೇನ್‌ ಮೇಲೆ ರಷ್ಯಾ ದಾಳಿ, ಕೃಷಿ ಇಳುವರಿ ಕೊರತೆ ಇತ್ಯಾದಿಗಳಿಂದ ಹಣದುಬ್ಬರ ಹೆಚ್ಚಳದಿಂದ ಗ್ರಾಹಕರ ಮೇಲೆ ಪರಿಣಾಮವಾಗಿದೆ. ಹೀಗಿದ್ದರೂ, ಜಿಡಿಪಿ ದರ ಸದ್ಯ ಗಮನಾರ್ಹ ಪ್ರಗತಿ ದಾಖಲಿಸಿದ್ದು, ಹೊಸ ಆಶಾವಾದ ಮೂಡಿಸಿದೆ. ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಹಣದುಬ್ಬರದ ಕಡಿಮೆ ಪ್ರಭಾವದೊಂದಿಗೆ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಿದೆ, ಇದು ಸರ್ಕಾರದ ವಿವೇಕಯುತ ಆರ್ಥಿಕ ನೀತಿಯ ಫಲಿತಾಂಶವಾಗಿದೆ” ಎಂದು ಪರಿಣಿತರ ಮಾತಾಗಿದೆ.
Published by:Ashwini Prabhu
First published: