India Post Fact Check: ಅಂಚೆ ಇಲಾಖೆ 170ನೇ ವಾರ್ಷಿಕೋತ್ಸವಕ್ಕೆ ಲಕ್ಕಿ ಡ್ರಾ ಆಯೋಜಿಸಿದೆಯೇ?
ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್ಗಳು ನಿಮ್ಮ ವಾಟ್ಸಾಪ್ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್ಗಳಲ್ಲಿ ಹರಿದಾಡುತ್ತಿರಬಹುದು. ಇದು ನಿಜವೇ?
ಅಂತರ್ಜಾಲ ಬಳಕೆಯ ಟ್ರೆಂಡ್ ಹೆಚ್ಚಾದಂತೆ ಆನ್ಲೈನ್ ವಂಚನೆಯೂ (Fraud Alert) ಹೆಚ್ಚುತ್ತಿದೆ. ಜೊತೆಗೆ ಸರ್ಕಾರದ ಹೆಸರಲ್ಲಿ, ಸರ್ಕಾರಿ ಯೋಜನಗಳ ಹೆಸರಲ್ಲಿ ಬೇಕಾಬಿಟ್ಟಿ ವಂಚನೆಗಳು ನಡೆಯುತ್ತಿವೆ. ಆನ್ಲೈನ್ ವಂಚಕರು ಇದೀಗ ಭಾರತೀಯ ಅಂಚೆ ಇಲಾಖೆಯ (India Post) ಹೆಸರಿನಲ್ಲಿ ವಂಚನೆಯ ಜಾಲವನ್ನು ಹರಡಿದ್ದಾರೆ. ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ (Lucky Draw)ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್ಗಳು ನಿಮ್ಮ ವಾಟ್ಸಾಪ್ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್ಗಳಲ್ಲಿ (Viral Message) ಹರಿದಾಡುತ್ತಿರಬಹುದು. ಅಥವಾ ಫೇಸ್ಬುಕ್, ಟೆಲಿಗ್ರಾಮ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಮಗೂ ಬಂದಿರಬಹುದು. ಹಾಗಾದರೆ ಇದು ನಿಜವೇ? ನಿಜಕ್ಕೂ ಭಾರತೀಯ ಅಂಚೆ ಲಕ್ಕಿ ಡ್ರಾ (Indian Post Lucky Draw Fact Check) ಆಯೋಜಿಸಿದೆಯೇ? ಇಲ್ಲಿದೆ ಫ್ಯಾಕ್ಟ್ ಚೆಕ್.
ತನ್ನ ಹೆಸರನ್ನು ಬಳಸಿಕೊಂಡು ವಂಚನೆ ನಡೆಯುತ್ತಿದೆ. ಹೀಗಾಗಿ ಸಾರ್ವಜನಿಕರು ಯಾರೂ ವಂಚನೆಗೆ ಒಳಗಾಗಬಾರದು ಎಂಬ ದೃಷ್ಟಿಯಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನಕಲಿ ವೆಬ್ಸೈಟ್ ಮತ್ತು ಯುಆರ್ಎಲ್ ಬಗ್ಗೆ ಇಂಡಿಯಾ ಪೋಸ್ಟ್ ಸಲಹೆಯನ್ನು ನೀಡಿದೆ.
ಯಾವುದೇ ಲಕ್ಕಿ ಡ್ರಾ ನಡೆಸಿಲ್ಲ ಇದರಲ್ಲಿ ಭಾರತೀ ಅಂಚೆ ಇಲಾಖೆಯು ತನ್ನ ಪರವಾಗಿ ಯಾವುದೇ ರೀತಿಯ ಲಕ್ಕಿ ಡ್ರಾ, ಬೋನಸ್ ಅಥವಾ ಬಹುಮಾನ ಆಧಾರಿತ ಸಮೀಕ್ಷೆಯನ್ನು ಪ್ರಾರಂಭಿಸಲಾಗಿಲ್ಲ ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ. ಅವರು ಅಂತಹ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಇದರೊಂದಿಗೆ ಆನ್ಲೈನ್ ವಂಚನೆಯಿಂದ ದೂರವಿರುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಏನಿದೆ ವಂಚನೆ ಎಸಗುವ ಲಿಂಕ್/ಮೆಸೆಜ್ನಲ್ಲಿ? ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಲಿಂಕ್ ಅನ್ನು ಹಂಚಿಕೊಳ್ಳುವ ಮೂಲಕ, ಲಕ್ಕಿ ಡ್ರಾವನ್ನು ಇಂಡಿಯಾ ಪೋಸ್ಟ್ ಪ್ರಾರಂಭಿಸಿದೆ ಎಂಬ ಮೆಸೆಜ್ಗಳು ವಾಟ್ಸ್ಆ್ಯಪ್, ಫೇಸ್ಬುಕ್ ಮುಂತಾದ ಕಡೆ ವೈರಲ್ ಆಗುತ್ತಿದೆ. ಮೆಸೆಜ್ ಕ್ಲಿಕ್ ಮಾಡಿದರೆ ಇದರಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಬಹುಮಾನವನ್ನು ಸುಲಭವಾಗಿ ಗೆಲ್ಲಬಹುದು ಎಂದು ಆಸೆ ತೋರಿಸಿ ವಂಚನೆ ಎಸಗಲಾಗುತ್ತಿದೆ.
ಎಚ್ಚರಿಕೆ ಅತ್ಯಗತ್ಯ ಈ ನಿಟ್ಟಿನಲ್ಲಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿದ್ದು, ಆನ್ಲೈನ್ ವಂಚನೆಯನ್ನು ತಪ್ಪಿಸಿ, ಯಾವುದೇ ಕಾರಣಕ್ಕೂ ನಕಲಿ ಮೆಸೆಜ್ಗಳಿಂದ ಮೋಸಕ್ಕೆ ಒಳಗಾಗಬೇಡಿ ಎಂದು ಜನರಿಗೆ ಸಲಹೆ ನೀಡಿದೆ. ಇದರೊಂದಿಗೆ ನಕಲಿ ವೆಬ್ಸೈಟ್ಗೆ ಬಲಿಯಾಗುವುದನ್ನು ತಪ್ಪಿಸುವಂತೆಯೂ ಕೇಳಲಾಗಿದೆ.
ಟ್ವೀಟ್ ಹೀಗಿದೆ
.@IndiaPostOffice warns public against fraudulent URLs/Websites claiming to provide subsidies/prizes through certain surveys, quizzes
— PIB_INDIA Ministry of Communications (@pib_comm) April 23, 2022
Multiple fake websites like 'https://t.co/enD9FVZYad' claims to be running @indiapost_dop 170th anniversary lucky draw. India Post/Department of Posts has nothing to do with such scamming activity. Beware of such fraudulent activities.
PIB, ವೆಬ್ಸೈಟ್ನ URL ಮತ್ತು ಲಿಂಕ್ ಅನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳುವ ಮೂಲಕ ಅದರ ಮೇಲೆ ಕ್ಲಿಕ್ ಮಾಡಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಮೂಲಕ ಸರಕಾರದ ಸಹಾಯಧನದ ಲಾಭ ಪಡೆಯುವ ನೆಪ ನೀಡಲಾಗುತ್ತಿದೆ. ಭಾರತೀ ಅಂಚೆ ಇಲಾಖೆಯ ತಿಳಿಸಿರುವಂತೆ ಯಾರಿಗಾದರೂ ಈ ರೀತಿಯ ಸಂದೇಶ, ಲಿಂಕ್, ವೀಡಿಯೊ ಸಂದೇಶ ಬಂದರೆ ಅದನ್ನು ನಿರ್ಲಕ್ಷಿಸಬೇಕು.
A #FAKE lucky draw in the name of @IndiaPostOffice is viral on social media and is offering a chance to win ₹6,000 after seeking one's personal details#PIBFactCheck