Highest Denominations: ದೇಶದಲ್ಲಿ ಚಲಾವಣೆಯಲ್ಲಿತ್ತು 5-10 ಸಾವಿರ ಮುಖಬೆಲೆಯ ನೋಟುಗಳು!

5-10 ಸಾವಿರ ಮುಖಬೆಲೆಯ ನೋಟುಗಳು

5-10 ಸಾವಿರ ಮುಖಬೆಲೆಯ ನೋಟುಗಳು

ಇದೀಗ 2000 ರೂಪಾಯಿ ನೋಟುಗಳನ್ನು ರದ್ದು (Rs 2000 Note Ban) ಮಾಡುವುದಾಗಿ ಆರ್‌ಬಿಐ (RBI) ಇತ್ತೀಚೆಗೆ ಪ್ರಕಟಿಸಿದೆ. 2023, ಸೆಪ್ಟೆಂಬರ್ 30 ಈ ನೋಟುಗಳನ್ನು ಹಿಂದಿರುಗಿಸಲು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ.

  • Share this:

ಸರಿಯಾಗಿ ಆರೂವರೆ ವರ್ಷಗಳ ಹಿಂದೆ ಮೋದಿ ಸರ್ಕಾರ (Modi Government) ದೇಶದಲ್ಲಿ ಚಲಾವಣೆಯಲ್ಲಿದ್ದ 500 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ (Note Ban)​ ಮಾಡಿತ್ತು. ಬ್ಲ್ಯಾಕ್​ ಮನಿ (Balck Money) ತಗ್ಗಿಸಲು ನೋಟು ಅಮಾನ್ಯೀಕರವನ್ನು ಘೋಷಿಸಿತ್ತು. 2000 ರೂಪಾಯಿ ನೋಟುಗಳನ್ನು ಪರಿಚಯ ಮಾಡಿತ್ತು. ಇದರ ಜೊತೆ ಹೊಸ ರೂಪದಲ್ಲಿ 200 ರೂಪಾಯಿ, 500 ರೂಪಾಯಿ ನೋಟುಗಳನ್ನು ಪರಿಚಯಿಸಿತ್ತು. ಇದೀಗ 2000 ರೂಪಾಯಿ ನೋಟುಗಳನ್ನು ರದ್ದು (Rs 2000 Note Ban) ಮಾಡುವುದಾಗಿ ಆರ್‌ಬಿಐ (RBI) ಇತ್ತೀಚೆಗೆ ಪ್ರಕಟಿಸಿದೆ. 2023, ಸೆಪ್ಟೆಂಬರ್ 30 ಈ ನೋಟುಗಳನ್ನು ಹಿಂದಿರುಗಿಸಲು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ.


ನಮ್ಮ ದೇಶದಲ್ಲಿತ್ತು 5, 10 ಸಾವಿರ ಮುಖಬೆಲೆಯ ನೋಟು!


ಈ ತಲೆಮಾರಿನ ಜನರೆಲ್ಲರೂ ಭಾರತದಲ್ಲಿ ಇದುವರೆಗೆ ಮುದ್ರಿಸಿದ ಅತಿ ಹೆಚ್ಚು ಮುಖಬೆಲೆಯ ನೋಟು ಅಂದ್ರೆ ಅದು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಅಂತ ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಇದಕ್ಕಿಂತ ಹೆಚ್ಚು ಮೌಲ್ಯದ ಎರಡು ನೋಟುಗಳನ್ನು ಆರ್​ಬಿಐ ಮುದ್ರಿಸಿತ್ತು. 5000 ಹಾಗೂ 1000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿತ್ತು.


ಆಗಲೂ ಇತ್ತು ಬ್ಲಾಕ್​ ಮನಿ ಕಾಟ!


ಕಪ್ಪು ಹಣದ ಸಂಗ್ರಹವನ್ನು ನಾಶಪಡಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಅವುಗಳನ್ನು ಈ ಹಿಂದೆ ರದ್ದುಗೊಳಿಸಿತ್ತು.


ಈ ನೋಟುಗಳು ಮೊದಲ ಮುದ್ರಣಗೊಂಡಿದ್ದು ಯಾವಾಗ?


ವಸಾಹತುಶಾಹಿ ಕಾಲದಲ್ಲಿ, RBI 1938 ರಲ್ಲಿ ರೂ.10,000 ನೋಟನ್ನು ಪರಿಚಯಿಸಿತು. ಆದರೆ ಜನವರಿ 1946 ರಲ್ಲಿ ಅದನ್ನು ಅಪನಗದೀಕರಣ ಮಾಡಲಾಯಿತು. ಅಂದರೆ 1946ರ ನಂತರ ಅದು ಅಮಾನ್ಯವಾಗಿತ್ತು. ಮತ್ತೆ 1978 ರಲ್ಲಿ ಅದನ್ನು ಶಾಶ್ವತವಾಗಿ ರದ್ದು ಮಾಡಲಾಯ್ತು.


ಇದನ್ನೂ ಓದಿ: Rs 2000 Note Exchange ಮಾಡಿಸೋಕೆ ರೆಡಿನಾ? ಇದು SBI ಬ್ಯಾಂಕ್​ ಬಿಗ್​ ಅಪ್​ಡೇಟ್​!


ಈ ನೋಟುಗಳನ್ನು ರದ್ದು ಮಾಡಿದ್ದು ಯಾಕೆ?


ವ್ಯಾಪಾರಿಗಳ ಲಾಭದಾಯಕ ಚಟುವಟಿಕೆಗಳಿಂದಾಗಿ ಬ್ರಿಟಿಷ್ ಸರ್ಕಾರ ಈ ನೋಟು ರದ್ದುಗೊಳಿಸಿದೆ ಎಂದು ನಂಬಲಾಗಿದೆ. 1947 ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ, ಹೊಸ 5,000 ಮತ್ತು 10,000 ರೂಪಾಯಿ ನೋಟುಗಳನ್ನು ಚಲಾವಣೆಗೆ ಪರಿಚಯಿಸಲಾಯಿತು. ಸ್ವಾತಂತ್ರ್ಯದ ಏಳು ವರ್ಷಗಳ ನಂತರ 1954 ರಲ್ಲಿ ಅವುಗಳನ್ನು ಮುದ್ರಿಸಲಾಯಿತು.


ಮೊರಾರ್ಜಿ ದೇಸಾಯಿ ಸರ್ಕಾರದಿಂದ ನೋಟು ರದ್ದು!


ನಂತರ ಸುಮಾರು 24 ವರ್ಷಗಳ ಕಾಲ ಅಂದರೆ 1978 ರವರೆಗೆ 1,000, 5,000 ಮತ್ತು 10,000 ರೂಪಾಯಿ ನೋಟುಗಳು ಸೇರಿದಂತೆ ದೊಡ್ಡ ಮುಖಬೆಲೆಯ ಕರೆನ್ಸಿ ನೋಟುಗಳು ಭಾರತದಲ್ಲಿ ಚಲಾವಣೆಯಾಗುತ್ತಲೇ ಇದ್ದವು. ಆದರೆ 1978 ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ಈ ನೋಟುಗಳನ್ನು ರದ್ದುಗೊಳಿಸಿತು.


ನೋಟು ಅಮಾನ್ಯೀಕರಣದ ಘೋಷಣೆಯನ್ನು ಆಲ್ ಇಂಡಿಯಾ ರೇಡಿಯೋದಲ್ಲಿ ಮಾಡಿತ್ತು. ಆಗ ದೊಡ್ಡ ನೋಟುಗಳ ಬಳಕೆ ಅಷ್ಟಾಗಿ ಇಲ್ಲದ ಕಾರಣ ರದ್ದತಿ ಘೋಷಣೆಯ ಪರಿಣಾಮ ಸೀಮಿತವಾಗಿತ್ತು. ರಿಸರ್ವ್ ಬ್ಯಾಂಕ್ ಲೆಕ್ಕಾಚಾರದ ಪ್ರಕಾರ, ಮಾರ್ಚ್ 31, 1976 ರಂತೆ ಚಲಾವಣೆಯಲ್ಲಿರುವ ಒಟ್ಟು ನಗದು 7,144 ಕೋಟಿ ರೂಪಾಯಿ.




ಈ ಮೊತ್ತದಲ್ಲಿ ರೂ.87.91 ಕೋಟಿ ಮೌಲ್ಯದ 1,000 ನೋಟುಗಳು (ಒಟ್ಟು ಕರೆನ್ಸಿಯ ಸುಮಾರು 1.2%), ರೂ.22.90 ಕೋಟಿ ಮೌಲ್ಯದ 5,000 ನೋಟುಗಳು ಮತ್ತು ರೂ.10,000 ಮೌಲ್ಯದ 1,260 ನೋಟುಗಳು ಚಲಾವಣೆಯಲ್ಲಿತ್ತು. ಇವುಗಳ ಒಟ್ಟು ಮೌಲ್ಯ 1.26 ಕೋಟಿ. ಹಾಗೆ ನೋಡಿದರೆ ಈ ಮೂರು ದೊಡ್ಡ ನೋಟುಗಳು ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ ಶೇ.2ಕ್ಕಿಂತ ಕಡಿಮೆ.


ಹಳೆ ನೋಟು ತರುವಂತೆ ಸಲಹೆ ನೀಡಲಾಗಿತ್ತು!


2016 ರಲ್ಲಿ ನೋಟು ಅಮಾನ್ಯೀಕರಣದ ನಂತರ, ಮಾಜಿ ಗವರ್ನರ್ ರಘುರಾಮ್ ರಾಜನ್ ನೇತೃತ್ವದ ಆರ್‌ಬಿಐ 5,000 ಮತ್ತು 10,000 ರೂಪಾಯಿ ನೋಟುಗಳನ್ನು ಮತ್ತೆ ತರಲು ಸಲಹೆ ನೀಡಿತು. ಆದರೆ, ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಸರ್ಕಾರ 2,000 ರೂಪಾಯಿ ನೋಟುಗಳನ್ನು ಪರಿಚಯಿಸಲು ನಿರ್ಧರಿಸಿತು. ಅಮಾನ್ಯಗೊಂಡ ನೋಟುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಈ 2000 ನೋಟುಗಳನ್ನು ಪರಿಚಯಿಸಿದೆ.

First published: