ಎಲೆಕ್ಟ್ರಿಕ್ ವಾಹನಗಳ ಪ್ರೋತ್ಸಾಹದೊಂದಿಗೆ ಸಾರಿಗೆ ಕ್ರಾಂತಿಯ ಅಂಚಿನಲ್ಲಿದೆ ಭಾರತ

ವಿಶ್ವದ ಜನಸಂಖ್ಯೆಯ ಆರನೇ ಒಂದಕ್ಕಿಂತ ಹೆಚ್ಚು ಮಂದಿಗಾಗಿ ಭವಿಷ್ಯದ ಸಾರಿಗೆಯನ್ನು ರೂಪಿಸುತ್ತಿದೆ ಭಾರತ.

ವಿಶ್ವದ ಜನಸಂಖ್ಯೆಯ ಆರನೇ ಒಂದಕ್ಕಿಂತ ಹೆಚ್ಚು ಮಂದಿಗಾಗಿ ಭವಿಷ್ಯದ ಸಾರಿಗೆಯನ್ನು ರೂಪಿಸುತ್ತಿದೆ ಭಾರತ.

ವಿಶ್ವದ ಜನಸಂಖ್ಯೆಯ ಆರನೇ ಒಂದಕ್ಕಿಂತ ಹೆಚ್ಚು ಮಂದಿಗಾಗಿ ಭವಿಷ್ಯದ ಸಾರಿಗೆಯನ್ನು ರೂಪಿಸುತ್ತಿದೆ ಭಾರತ.

 • Share this:

  ಜಾಗತಿಕ ಬದ್ಧತೆಯನ್ನು ಈಡೇರಿಸುವ ಸಲುವಾಗಿ ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ತೈಲ ಆಮದು ಮತ್ತು ವಾಯು ಮಾಲಿನ್ಯದ ಅಡ್ಡ ಪರಿಣಾಮಗಳನ್ನು ನಿಭಾಯಿಸಲು ಸರ್ಕಾರ ದೇಶವನ್ನು ಎಲೆಕ್ಟ್ರಿಕ್ ವಾಹನಗಳತ್ತ (EVs) ಪರಿವರ್ತನೆಗೊಳಿಸುವತ್ತ ದೃಷ್ಟಿ ನೆಟ್ಟಿರುವುದರಿಂದ ಭಾರತವು ಸಾರಿಗೆ ಕ್ರಾಂತಿಯ ಅಂಚಿನಲ್ಲಿದೆ. 2015ರ ಪ್ಯಾರಿಸ್ ಒಪ್ಪಂದದ ಭಾಗವಾಗಿ, 2030 ರ ವೇಳೆಗೆ ತನ್ನ ಒಟ್ಟು ದೇಶೀ ಉತ್ಪನ್ನದ ಹೊರಸೂಸುವಿಕೆ ತೀವ್ರತೆಯನ್ನು (ಪ್ರತಿ ಯುನಿಟ್ GDP ಗೆ GHG ಹೊರಸೂಸುವಿಕೆಗಳು) 2005ರ ಮಟ್ಟದಿಂದ 33% - 35% ರಷ್ಟು ತಗ್ಗಿಸಲು ಭಾರತ ಬದ್ಧವಾಗಿದೆ. EV ಅಳವಡಿಕೆಯು ಈ ಕಥೆಯಲ್ಲಿ ದೊಡ್ಡ ಪಾತ್ರವಹಿಸುತ್ತದೆ.


  ಭಾರತೀಯ EV ಮಾರುಕಟ್ಟೆಯು ಸ್ಫೋಟಕ ಪ್ರಗತಿಗೆ ಸಿದ್ಧವಾಗಿದ್ದು 2021 ಮತ್ತು 2030 ರ ಮಧ್ಯೆ 49% ಕಾಂಪೌಂಡೆಡ್ ಆನುವಲ್ ಗ್ರೋತ್ ರೇಟ್ (CAGR) ನ ಅಂದಾಜು ಮಾಡಲಾಗಿದೆ ಮತ್ತು ವಾರ್ಷಿಕ ಮಾರಾಟವು 2030ರ ವೇಳೆಗೆ 17 ಮಿಲಿಯನ್ ಯುನಿಟ್‌ಗಳನ್ನು ದಾಟುವ ನಿರೀಕ್ಷೆಯಿದೆ. ಈ ಮಹತ್ವಾಕಾಂಕ್ಷಿ ಗುರಿಗಳು ಮೇಲ್ನೋಟಕ್ಕೆ ಕಾಣುವಷ್ಟು ಭಯಭೀತಗೊಳಿಸುವುದಿಲ್ಲ: ಬ್ಯಾಟರಿ ವೆಚ್ಚಗಳು ಇಳಿಯುತ್ತಿವೆ ಮತ್ತು ಅನುಕೂಲಕರ ಆರ್ಥಿಕತೆಗಳು ಗ್ರಾಹಕರಿಗೆ EV ಗಳನ್ನು ಹೆಚ್ಚೆಚ್ಚು ಆಕರ್ಷಕ ಆಯ್ಕೆಯನ್ನಾಗಿಸುತ್ತಿವೆ. EV ಗಳು ನಿರ್ವಹಣೆಗೂ ತುಂಬಾ ಸುಲಭ – ಡೀಸೆಲ್ ಅಥವಾ ಪೆಟ್ರೋಲ್ ವಾಹನದ ರೀತಿಯಲ್ಲಿ ಸಂಕೀರ್ಣ ಒಳಭಾಗಗಳನ್ನು ಹೊಂದಿಲ್ಲದ ಕಾರಣದಿಂದ 50% ಅಗ್ಗ. ವಾಸ್ತವದಲ್ಲಿ, ಐದು ವರ್ಷಗಳ ಒಟ್ಟಾರೆ ಮಾಲೀಕತ್ವ ವೆಚ್ಚ (TCO), ಉತ್ತಮವಲ್ಲದಿದ್ದರೂ, ಯಾವುದೇ ಇತರೆ ವಾಹನಗಳೊಂದಿಗೆ ತುಲನಾತ್ಮಕವಾಗಿದೆ.


  ಎಲ್ಲದಕ್ಕಿಂತ ಹೆಚ್ಚಾಗಿ, ಒಂದು ಕಾಲದಲ್ಲಿ ಮುಖ್ಯವಾದ ಕಳವಳದ ಸಂಗತಿಯಾಗಿದ್ದ ರೇಂಜ್ ಆತಂಕವು ಭಾರತದಲ್ಲಿ ಚಾರ್ಜಿಂಗ್ ಸ್ಟೇಶನ್‌ಗಳ ಸಂಖ್ಯೆ ಭಾರೀ ವೇಗದಲ್ಲಿ ಬೆಳೆಯತೊಡಗಿದಂತೆ ಇದೀಗ ಮರೆಯಾಗಿದೆ. ತ್ವರಿತ ಗತಿಯನ್ನು ನಿಗದಿಗೊಳಿಸಿದೆ ಸರ್ಕಾರ: ಒಟ್ಟಾರೆ ಚಾರ್ಜಿಂಗ್ ಸ್ಟೇಶನ್‌ಗಳು FY22 ನಲ್ಲಿ ವರ್ಷದಿಂದ ವರ್ಷಕ್ಕೆ 285% ನಷ್ಟು ಏರಿಕೆಯಾಗಿವೆ ಮತ್ತು FY26 ರ ವೇಳೆಗೆ 4 ಲಕ್ಷ ಚಾರ್ಜಿಂಗ್ ಸ್ಟೇಶನ್‌ಗಳನ್ನು ತಲುಪುವ ಗುರಿ ಇದೆ. ಅಳವಡಿಕೆಯು ಹೆಚ್ಚಿದಂತೆ, ಅನುಕೂಲಕರ ಪುನರಾವರ್ತನೆಯಂತೆ ಸಾಗುವ ನಿರೀಕ್ಷೆಯಿದೆ, ಅದರಿಂದಾಗಿ EV ಮೂಲಸೌಕರ್ಯ ನಿರ್ಮಾಣವಾಗುತ್ತದೆ, ಇದು EV ಅಳವಡಿಕೆಯನ್ನು ಉತ್ತೇಜಿಸುತ್ತದೆ, ಇದರಿಂದ ಮೂಲಸೌಕರ್ಯ ಹೆಚ್ಚುವಂತೆ ಮಾಡುತ್ತದೆ !


  ಜುಲೈ 31, 2021 ರ ವೇಳೆಗೆ, ಭಾರತದಲ್ಲಿ 380 EV ಉತ್ಪಾದಕರಿದ್ದರು, EV ಗಳ ಅಳವಡಿಕೆ ಹೆಚ್ಚಾದಂತೆ ಈ ಸಂಖ್ಯೆ ಬೆಳೆಯುತ್ತಲೇ ಹೋಗುವ ನಿರೀಕ್ಷೆಯಿದೆ. FAME ಸ್ಕೀಂನ ಹಂತ-II ಅನ್ನು ಕೂಡಾ ಸರ್ಕಾರ ಅನುಮೋದಿಸಿದೆ. 2019 ರ ಏಪ್ರಿಲ್‌ನಿಂದ ಪ್ರಾರಂಭಿಸಿ 3 ವರ್ಷಗಳ ಅವಧಿಗೆ ವಿನಿಯೋಗಿಸಲು ರೂ.10,000 ಕೋಟಿ ರೂ. ಬಜೆಟ್ ಅನುದಾನವನ್ನೂ ಸರ್ಕಾರ ನೀಡಿದೆ. ಆಸಕ್ತಿಕರ ಸಂಗತಿ ಎಂದರೆ, 86% ರಷ್ಟು ಹಣವನ್ನು ಪ್ರೋತ್ಸಾಹಧನಕ್ಕಾಗಿ ಹಂಚಿಕೆ ಮಾಡಲಾಯಿತು. 7000 ಇ-ಬಸ್‌ಗಳು, 5 ಲಕ್ಷ ಇ-3 ಚಕ್ರ ವಾಹನಗಳು, 55000 ಇ-4 ಚಕ್ರ ಪ್ರಯಾಣಿಕ ಕಾರುಗಳು (ಸ್ಟ್ರಾಂಗ್ ಹೈಬ್ರಿಡ್ ಸಹಿತ) ಮತ್ತು 10 ಲಕ್ಷ ಇ-2 ಚಕ್ರ ವಾಹನಗಳಿಗೆ ಬೆಂಬಲ ನೀಡುವ ಮೂಲಕ ಬೇಡಿಕೆಗೆ ಉತ್ತೇಜಿಸಲಾಯಿತು.


  ವಾಹನ ಮಾಲೀಕತ್ವ ಒಂದೆಡೆಯಾದರೆ, ಭಾರತದಲ್ಲಿನ ಇ- ಸಾರಿಗೆ ಉದ್ಯಮಗಳು ಗ್ರಾಹಕರಿಗೆ ಮೌಲ್ಯಯುತ ಸೇವೆಗಳನ್ನು ಒದಗಿಸಲು EV ಗಳನ್ನು ಬಳಸುವ ಉದ್ಯಮ ಮಾಡೆಲ್‌ಗಳತ್ತ  ಗಮನ ಹರಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳಂತಹ ಸೂಕ್ಷ್ಮ ಸಾರಿಗೆ ಸೇವೆಗಳು ಈಗ ನಗರ ಪ್ರದೇಶಗಳಲ್ಲಿನ ಸಣ್ಣ ಟ್ರಿಪ್‌ಗಳಿಗೆ ಜನಪ್ರಿಯ ಸಾರಿಗೆ ವಿಧಾನವಾಗುತ್ತಿವೆ. ಇವುಗಳು ಪೆಟ್ರೋಲ್ ವಾಹನಗಳಿಗಿಂತ ಹೆಚ್ಚು ಸುಸ್ಥಿರವಷ್ಟೇ ಅಲ್ಲ, ಜತೆಗೆ ಇಂಧನ ಮತ್ತು ನಿರ್ವಹಣಾ ವೆಚ್ಚಗಳಲ್ಲಿ ಇದು ತುಂಬಾ ಮಿತವ್ಯಯಿಯಾಗಿದೆ.


  EV ಗಳು ಅಗಾಧ ವ್ಯತ್ಯಾಸವನ್ನು ತರಬಲ್ಲ ಇನ್ನೊಂದು ಕ್ಷೇತ್ರವೆಂದರೆ, ಅದುವೇ ರೈಡ್ ಸೌಕರ್ಯ ಕಲ್ಪಿಸುವ ಉದ್ಯಮ. ಎಲೆಕ್ಟ್ರಿಕ್ ಕ್ಯಾಬ್‌ಗಳ ಅಳವಡಿಕೆಯು ಕಾರ್ಬನ್ ಹೊರಸೂಸುವಿಕೆಯನ್ನು ತಗ್ಗಿಸುವತ್ತ ಮತ್ತು ಇಂಧನ ವೆಚ್ಚಗಳನ್ನು ಇಳಿಸುವತ್ತ ತಾರ್ಕಿಕ ಹೆಜ್ಜೆಯಾಗಿದೆ. EV ಗಳು ಹೆಚ್ಚು ಪರಿಸರಸ್ನೇಹಿತ ವಿಧದ ಸಾರಿಗೆಯನ್ನು ಒದಗಿಸುವುದರಿಂದ ಹಾಗೂ ಮಾಲೀಕತ್ವದ ವೆಚ್ಚವನ್ನು ತಗ್ಗಿಸುವುದರಿಂದ ಕಾರು ಹಂಚಿಕೊಳ್ಳುವ ಸೇವೆಗಳಲ್ಲಿ ಇವುಗಳ ಬಳಕೆಯಿಂದ ಪ್ರಯೋಜನವಾಗಲಿದೆ. ಕಾರು ಚಂದಾದಾರಿಕೆ ಸೇವೆಗಳು, ಗ್ರಾಹಕರಿಗೆ ಮಾಸಿಕ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತವೆ, ಇದು ಕೂಡಾ ಸುಸ್ಥಿರ ಮತ್ತು ಮಿತವ್ಯಯಿ ಪರ್ಯಾಯವನ್ನು ಒದಗಿಸಲು EV ಗಳ ಲಾಭ ತೆಗೆದುಕೊಳ್ಳಬಹುದು. ಅಂತಿಮವಾಗಿ, E-ರೋಮಿಂಗ್ ಸೇವೆಗಳು ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಜಂಜಾಟ ರಹಿತ ಸಾರಿಗೆಯನ್ನು ಕಲ್ಪಿಸುತ್ತವೆ ಹಾಗೂ ಪರಿಸರಸ್ನೇಹಿತ ರೀತಿಯಲ್ಲಿ ದೇಶವನ್ನು ಅನ್ವೇಷಿಸಲು ಅವರಿಗೆ ಅವಕಾಶ ನೀಡುತ್ತದೆ.


  EV ಗಳಲ್ಲಿ ಆಸಕ್ತಿ ಹೆಚ್ಚುತ್ತಿರುವಂತೆಯೇ, ಆಕರ್ಷಕ ಪ್ರೋತ್ಸಾಹಧನಗಳೊಂದಿಗೆ. EV ಗಳನ್ನು ಖರೀದಿಸುವುದು ಬಳಕೆದಾರರಿಗೆ ಸುಲಭವಾಗುವಂತೆ GOI ಮಾಡುತ್ತಿದೆ. ಇದು ಅನೇಕ ರೂಪಗಳನ್ನು ಹೊಂದಿದೆ: ಪ್ರೋತ್ಸಾಹಧನಗಳ ಖರೀದಿಯು ಹೆಚ್ಚಾಗಿ EV ಗಳ ವೆಚ್ಚದಲ್ಲಿ ನೇರ ರಿಯಾಯ್ತಿಗಳನ್ನು ಒಳಗೊಂಡಿದೆ, ಕೂಪನ್‌ಗಳು ಹಣಕಾಸಿನ ಪ್ರೋತ್ಸಾಹಧನಗಳನ್ನು ಒದಗಿಸುತ್ತವೆ, ಅದನ್ನು ನಂತರ ನಗದೀಕರಿಸಿಕೊಳ್ಳಬಹುದು. ಬಡ್ಡಿ ರಿಯಾಯ್ತಿಗಳು ಬಡ್ಡಿ ದರದ ಮೇಲಿನ ರಿಯಾಯ್ತಿಯ ರೂಪದಲ್ಲಿದ್ದು,ಇದು ಸಾಲಗಳನ್ನು ಅಗ್ಗವಾಗಿಸುತ್ತದೆ. ರಸ್ತೆ ತೆರಿಗೆ ವಿನಾಯ್ತಿಯು ನೋಂದಣಿಯ ವೇಳೆಯ ಇನ್ನೊಂದು ದುಬಾರಿ ಸಂಗತಿಯನ್ನು ತೊಡೆದುಹಾಕುತ್ತದೆ.


  GOI ಕೇವಲ ಆದಾಯ ತೆರಿಗೆ ಪ್ರಯೋಜನಗಳನ್ನಷ್ಟೇ ಒದಗಿಸುವುದಿಲ್ಲ, ಜತೆಗೆ ಸ್ಕ್ರಾಪಿಂಗ್ ಪ್ರೋತ್ಸಾಹಧನವನ್ನೂ ನೀಡುತ್ತಿದೆ! ಈ ಪ್ರೋತ್ಸಾಹಧನಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾಲೀಕರಿಗೆ ನೀಡಲಾಗುತ್ತದೆ, ಇದರಿಂದಾಗಿ ಅವರ ಹಳೆಯ ವಾಹನಗಳನ್ನು ತ್ಯಜಿಸುವುದು, ಪಳೆಯುಳಿಕೆ ಇಂಧನ ಸುಡುವ ವಾಹನಗಳಿಂದ ಪರಿಸರಕ್ಕೆ ಪೂರಕವಾದ ಹೊಸ EV ಗೆ ಬದಲಾಯಿಸುವ, ಜೇಬು ಸ್ನೇಹಿ ವಾಹನ ಖರೀದಿಸುವಂತೆ ಮಾಡುವ ಕಾರ್ಯ ಸುಲಭವಾಗಲಿದೆ. ವಾಸ್ತವದಲ್ಲಿ ಭಾರತದಲ್ಲಿ EV ಖರೀದಿಗೆ ಯಾವತ್ತೂ ಇಷ್ಟು ಉತ್ತಮ ಸಮಯ ಇರಲಿಲ್ಲ, ಬಡ್ಡಿರಹಿತ ಸಾಲಗಳು ಮತ್ತು ಸಬ್ಸಿಡಿಗಳು ಮತ್ತು ವಿಶೇಷ ಪ್ರೋತ್ಸಾಹಧನಗಳು ಇಂದು ಗ್ರಾಹಕರಿಗೆ ಲಭ್ಯ ಇವೆ.


  ಆದಾಗ್ಯೂ, ಯಾವುದನ್ನಾದರೂ ಹೊಸತರ ಅಳವಡಿಕೆಯಲ್ಲಿ ಗ್ರಾಹಕರ ನಂಬಿಕೆಯು ಮುಖ್ಯವಾಗಿದೆ. ಗ್ರಾಹಕರ ವಿಶ್ವಾಸವನ್ನು ಪಡೆಯುವ ನಿಟ್ಟಿನಲ್ಲಿ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS), ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ (CEA) ಮತ್ತು ಆಟೊಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ARAI) ಮೂಲಕ NITI ಆಯೋಗವು ಪ್ರಮಾಣಿತಗಳ ಚೌಕಟ್ಟನ್ನು ರಚಿಸಿದೆ . BIS ಪ್ರಮಾಣಿತಗಳು EV ಗಳು ಮತ್ತು ಅವುಗಳ ಕಾಂಪೋನೆಂಟ್‌ಗಳ ವ್ಯಾಪಾರದಲ್ಲಿನ ಪರಸ್ಪರ ಕಾರ್ಯಸಾಧ್ಯತೆಗಳನ್ನು ಗುರುತಿಸುವುದು ಹಾಗೂ ಅಡ್ಡಿಗಳನ್ನು ತಗ್ಗಿಸುವುದನ್ನು ಖಾತ್ರಿಗೊಳಿಸುತ್ತದೆ, ಇದೇ ವೇಳೆ CEA ಪ್ರಮಾಣಿತಗಳು ಪವರ್ ಗ್ರಿಡ್ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. ಮತ್ತೊಂದೆಡೆ ARAI ವಾಹನಗಳು ಮತ್ತು ದರ ಕಾಂಪೊನೆಂಟ್‌ಗಳಿಗೆ ಪ್ರಮಾಣಿತಗಳನ್ನು ಅಭಿವೃದ್ಧಿಪಡಿಸುತ್ತದೆ.


  ಇದರೊಂದಿಗೆ, EV ಗಳ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಇಂಧನ ಸಚಿವಾಲಯ ಪರಿಷ್ಕೃತ ಸಮಗ್ರ ಮಾರ್ಗಸೂಚಿಗಳು ಮತ್ತು ಪ್ರಮಾಣಿತಗಳನ್ನು ಬಿಡುಗಡೆಗೊಳಿಸಿದೆ. ಈ ಮಾರ್ಗಸೂಚಿಗಳು ಚಾರ್ಜಿಂಗ್ ಮೂಲಸೌಕರ್ಯದ ಎಲ್ಲಾ ಅಂಶಗಳನ್ನು ಒಳಗೊಂಡಿವೆ: ಮನೆ ಮಾಲೀಕರು ತಮ್ಮ ಮನೆ, ಕಚೇರಿಗಳಲ್ಲೇ ತಮ್ಮ EV ಗಳನ್ನು ಚಾರ್ಜ್ ಮಾಡಬಹುದ, ಕನೆಕ್ಷನ್‌ಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ, ಸಾರ್ವಜನಿಕ EV ಚಾರ್ಜಿಂಗ್ ಸ್ಟೇಶನ್‌ಗಳಿಗೆ ವಿತರಣೆಗೆ ಟ್ಯಾರಿಫ್‌ಗಳು. ಇದಕ್ಕಿಂತ ಹೆಚ್ಚಾಗಿ, ಈ ಮಾರ್ಗಸೂಚಿಗಳು ಈ ಸ್ಟೇಶನ್‌ಗಳ ಸ್ಥಾನ ಸಾಂದ್ರತೆಯನ್ನು ಕೂಡಾ ಕಡ್ಡಾಯಗೊಳಿಸಿದೆ: 3 Km X 3 Km ನ ಪ್ರತಿ ಗ್ರಿಡ್‌ಗೆ ಕನಿಷ್ಠ ಒಂದು EV ಚಾರ್ಜಿಂಗ್ ಸ್ಟೇಶನ್ ಮತ್ತು ಹೆದ್ದಾರಿಗಳು /ರಸ್ತೆಗಳ ಪಕ್ಕ ಎರಡೂ ಬದಿಯಲ್ಲಿ ಪ್ರತಿ 25 Km ಗೊಂದು EV ಚಾರ್ಜಿಂಗ್ ಸ್ಟೇಶನ್ ಇರಬೇಕು.


  ಈ ಸ್ವರೂಪದ ಕಾರ್ಯಕ್ರಮಗಳು ಯಶಸ್ವಿಯಾಗಲು ಮತ್ತು EV ಕ್ರಾಂತಿಯು ಸಫಲಗೊಳ್ಳಲು, ಗುಣಮಟ್ಟದ ಬಲಿಷ್ಠ ಬೆನ್ನೆಲುಬು ಅತ್ಯಗತ್ಯ. ಭಾರತದಲ್ಲಿ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI), ದೊಂದಿಗೆ ಇದು ಸಾಧ್ಯವಾಗಿದೆ, ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಸರ್ಟಿಫಿಕೇಶನ್ ಬಾಡೀಸ್(NABCB) ಅಡಿಯಲ್ಲಿ ಅಕ್ರೆಡಿಟೇಶನ್‌ಗಳ ಮೂಲಕ ಭಾರತದ ಅಂತಿಮ ಉತ್ಪನ್ನಗಳ ಗುಣಮಟ್ಟ ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ 1997ರಿಂದ ಬುನಾದಿಯಾಗಿ ಕಾರ್ಯನಿರ್ವಹಿಸುತ್ತಿದೆ.


  EV ಉದ್ಯಮವು ವಿಸ್ತಾರವಾದಂತೆ, ಕೌಶಲ್ಯಯುತ ಕಾರ್ಯಪಡೆಗಳಿಗೆ ಬೇಡಿಕೆಯೂ ಹೆಚ್ಚಲಿದೆ ಮತ್ತು QCI ಯು ನ್ಯಾಶನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಎಜುಕೇಶನ್ ಆಂಡ್ ಟ್ರೈನಿಂಗ್ (NABET),   ಟ್ರೈನಿಂಗ್ ಆಂಡ್ ಕೆಪಾಸಿಟಿ ಬಿಲ್ಡಿಂಗ್ ಡಿವಿಶನ್ (TCB), ಆನ್‌ಲೈನ್ ಪೋರ್ಟಲ್ ಆಗಿರುವ eಇಕ್ವೆಸ್ಟ್ ನೊಂದಿಗೆ ತರಬೇತಿ ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳ ಮೂಲಕ ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲಿದೆ.


  ಭಾರತೀಯ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿದೆ, ಆದರೆ ಈ ಪ್ರಗತಿಯು ಹೆಚ್ಚಿದ ಹೊರಸೂಸುವಿಕೆಯ ಅಪಾಯವನ್ನೂ ತರುತ್ತಿದೆ. ದುರದೃಷ್ಟವಶಾತ್, ಭಾರತವು ಏರುಪೇರಾದ ಹವಾಮಾನ ಬದಲಾವಣೆಯ ಪರಿಣಾಮಗಳನ್ನೂ ಎದುರಿಸುತ್ತಿದೆ, ಅಂದರೆ ಇತರೆ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಭಿನ್ನ ಪರಿಸ್ಥಿತಿಯಲ್ಲಿದ್ದೇವೆ. ನಾವು ಪರಿಸರದ ಹಿತಾಸಕ್ತಿಯನ್ನು ಬದಿಗೊತ್ತಿ ನಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ. ಇವೆರಡರ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ.


  ಆರ್ಥಿಕ ಮತ್ತು ಪಾರಿಸರಿಕ ಗುರಿಗಳೆರಡನ್ನೂ ಸಾಧಿಸಲು ಸ್ವತಂತ್ರ EV ಉತ್ಪಾದನೆ ಮತ್ತು ಅಳವಡಿಕೆಯೇ ಮುಖ್ಯವಾಗಿದೆ. ಸರ್ಕಾರದ ಪ್ರೋತ್ಸಾಹದ ಮಾರ್ಗದೊಂದಿಗೆ QCI ನ ಗುಣಮಟ್ಟ, ಸುರಕ್ಷತೆ ಮತ್ತು ಸಮಗ್ರತೆಯ ಸ್ಟಾಂಡರ್ಡ್ ಬೆಸೆದುಕೊಂಡಿದ್ದು, ಭಾರತೀಯ EV ವ್ಯವಸ್ಥೆಯನ್ನು ಧನಾತ್ಮಕ ಬದಲಾವಣೆಯತ್ತ ಪ್ರಬಲ ಶಕ್ತಿಯನ್ನಾಗಿಸಿದೆ. ಇದು ನೈಜ ಗುಣವತ್ತಾ ಸೇ ಆತ್ಮನಿರ್ಭರತಾದ ಕಾರ್ಯವಾಗಿದೆ.

  First published: