Military Spender: ವಿಶ್ವದಲ್ಲೇ ಅತಿ ಹೆಚ್ಚು ಸೇನಾ ವೆಚ್ಚ ಮಾಡುವ 3ನೇ ದೇಶ ಭಾರತ: ಮಿಲಿಟರಿ ಖರ್ಚು ಎಷ್ಟು ಗೊತ್ತಾ?

2021ರಲ್ಲಿ ಮಿಲಿಟರಿಗೆ ಖರ್ಚು ಮಾಡಿದ ಐದು ಅಗ್ರ ರಾಷ್ಟ್ರಗಳೆಂದರೆ, ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾ. ಜಾಗತಿಕ ಮಿಲಿಟರಿ ವೆಚ್ಚದ 62 ಪ್ರತಿಶತವನ್ನು ಈ ಐದು ದೇಶಗಳು ಖರ್ಚು ಮಾಡುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತ ( India) ದೇಶವು ಯುದ್ಧ ವಿಮಾನಗಳ ತಯಾರಿಕೆ, ರಕ್ಷಣಾ ಸಾಮಗ್ರಿಗಳ ಪೂರೈಕೆ ಒಳಗೊಂಡಂತೆ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಾಕಷ್ಟು ಹಣವನ್ನು ವಿನಿಯೋಗಿಸುತ್ತದೆ (Military Spender) . ವರದಿಯೊಂದರ ಪ್ರಕಾರ ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಸೇನಾ ಖರ್ಚು ಮಾಡುವ ದೇಶವಾಗಿದೆ. 2021ರಲ್ಲಿ ಜಾಗತಿಕ ರಕ್ಷಣಾ ವೆಚ್ಚವು ( Global Defence Expenditure) ಸಾರ್ವಕಾಲಿಕ ಗರಿಷ್ಠ $2.1 ಟ್ರಿಲಿಯನ್‌ಗೆ ತಲುಪಿದ್ದರಿಂದ ಭಾರತವು ಯುಎಸ್ ಮತ್ತು ಚೀನಾದ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಮಿಲಿಟರಿ ಖರ್ಚು ಮಾಡುವ ದೇಶವಾಗಿ ಹೊರಹೊಮ್ಮಿದೆ. ಇದು ಕರೋನ ವೈರಸ್ ಸಾಂಕ್ರಾಮಿಕದ ಹೊರತಾಗಿಯೂ ದಾಖಲೆಯ ಮಟ್ಟವನ್ನು ತಲುಪಿದೆ ಎಂದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಹೇಳಿದೆ.

  ಟಾಪ್​​ 5 ರಾಷ್ಟ್ರಗಳು 

  SIPRI ಪ್ರಕಟಿಸಿದ ಮಾಹಿತಿಯ ಪ್ರಕಾರ, 2021ರಲ್ಲಿ ಮಿಲಿಟರಿಗೆ ಖರ್ಚು ಮಾಡಿದ ಐದು ಅಗ್ರ ರಾಷ್ಟ್ರಗಳೆಂದರೆ, ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ಯುನೈಟೆಡ್ ಕಿಂಗ್‌ಡಮ್ ಮತ್ತು ರಷ್ಯಾ. ಜಾಗತಿಕ ಮಿಲಿಟರಿ ವೆಚ್ಚದ 62 ಪ್ರತಿಶತವನ್ನು ಈ ಐದು ದೇಶಗಳು ಖರ್ಚು ಮಾಡುತ್ತವೆ ಎಂದು ಎಸ್ಐಪಿಆರ್ಐ ತಿಳಿಸಿದೆ. ಸ್ಟಾಕ್‌ಹೋಮ್ ಮೂಲದ ಇನ್‌ಸ್ಟಿಟ್ಯೂಟ್ ಪ್ರಕಾರ, ಭಾರತದ ಮಿಲಿಟರಿ ಖರ್ಚು $76.6 ಶತಕೋಟಿ, ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಸ್ಥಾನದಲ್ಲಿದೆ. ಇದು 2020 ರಿಂದ 0.9% ಮತ್ತು 2012 ರಿಂದ 33% ರಷ್ಟು ಹೆಚ್ಚಾಗಿದೆ ಎಂದು SIPRI ತಿಳಿಸಿದೆ.

  ಇದನ್ನೂ ಓದಿ: PPF ನಿಯಮಗಳು: ನೀವು ಯಾವಾಗ ಹಣ ಹಿಂಪಡೆಯಬಹುದು? ಇಲ್ಲಿದೆ ವಿವರ

  "ಚೀನಾ ಮತ್ತು ಪಾಕಿಸ್ತಾನದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಗಡಿ ವಿವಾದಗಳ ನಡುವೆ ಸಾಂದರ್ಭಿಕವಾಗಿ ಸಶಸ್ತ್ರ ಘರ್ಷಣೆಗಳು ನಡೆಯುತ್ತಿರುತ್ತವೆ, ಈ ಹಿನ್ನಲೆಯಲ್ಲಿ ಭಾರತವು ತನ್ನ ರಕ್ಷಣಾ ವಿಭಾಗಕ್ಕೆ ಆದ್ಯತೆ ನೀಡುತ್ತಿದೆ. ಅದರ ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಪ್ರಯತ್ನಿಸಿದೆ" ಎಂದು ವರದಿ ಹೇಳಿದೆ.

  ಅತಿ ಹೆಚ್ಚು ಖರ್ಚು ಮಾಡುವ ದೇಶಗಳು 

  ಮತ್ತೊಂದೆಡೆ, ಯುಎಸ್ ಮತ್ತು ಚೀನಾ 2ನೇ ಸ್ಥಾನದಲ್ಲಿದ್ದು, ಅತಿ ಹೆಚ್ಚು ಖರ್ಚು ಮಾಡುವ ದೇಶಗಳಾಗಿವೆ. ಯುಎಸ್ ಮಿಲಿಟರಿ ವೆಚ್ಚವು 2021ರಲ್ಲಿ $801 ಶತಕೋಟಿಯನ್ನು ತಲುಪಿತು, 2021 ರಿಂದ 1.4% ರಷ್ಟು ಕುಸಿತವಾಗಿದೆ ಎಂದು ವರದಿ ತಿಳಿಸಿದೆ. 2012 ರಿಂದ 2021ರ ಅವಧಿಯಲ್ಲಿ, ಯುಎಸ್ ಮಿಲಿಟರಿ ಸಂಶೋಧನೆ ಮತ್ತು ಅಭಿವೃದ್ಧಿಗೆ 24% ರಷ್ಟು ಹಣವನ್ನು ಹೆಚ್ಚಿಸಿದೆ ಮತ್ತು ಶಸ್ತ್ರಾಸ್ತ್ರ ಖರೀದಿಯ ಮೇಲಿನ ವೆಚ್ಚವನ್ನು 6.4%ರಷ್ಟು ಕಡಿಮೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಎರಡನೇ ಸ್ಥಾನದಲ್ಲಿರುವ ಚೀನಾ ದೇಶವು $ 293 ಬಿಲಿಯನ್ ರಕ್ಷಣೆಗಾಗಿ ಖರ್ಚು ಮಾಡಿದೆ, 2020ಕ್ಕೆ ಹೋಲಿಸಿದರೆ 2012ರಲ್ಲಿ ಮಿಲಿಟರಿ ವೆಚ್ಚ 4.7% ಹೆಚ್ಚಾಗಿದೆ.

  ಯುಕೆ ಕಳೆದ ವರ್ಷ ರಕ್ಷಣೆಗಾಗಿ $ 68.4 ಶತಕೋಟಿ ಖರ್ಚು ಮಾಡಿದೆ, 2020 ರಿಂದ 3% ರಷ್ಟು ಹೆಚ್ಚಾಗಿದೆ. ಹಿರಿಯ ಸಂಶೋಧಕ ಡಾ ನ್ಯಾನ್ ಟಿಯಾನ್ ಅವರು SIPRIಗೆ ನೀಡಿದ ಹೇಳಿಕೆಯಲ್ಲಿ, "ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ಚೀನಾದ ಹೆಚ್ಚುತ್ತಿರುವ ಸಮರ್ಥನೆಯು ಆಸ್ಟ್ರೇಲಿಯಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಮಿಲಿಟರಿ ವೆಚ್ಚಕ್ಕೆ ಪ್ರಮುಖ ಕಾರಣವಾಗಿದೆ" ಎಂದಿದ್ದಾರೆ.

  ರಷ್ಯಾ, ಉಕ್ರೇನ್ ಎಷ್ಟೆಷ್ಟು ಖರ್ಚು ಮಾಡಿದೆ?

  ಅದೇ ರೀತಿ, ರಷ್ಯಾ ಸತತ ಮೂರನೇ ವರ್ಷವೂ ತನ್ನ ಮಿಲಿಟರಿ ವೆಚ್ಚದಲ್ಲಿ ಹೆಚ್ಚಳ ಕಂಡಿದೆ. 2016 ಮತ್ತು 2019ರ ನಡುವೆ ಮಿಲಿಟರಿ ವೆಚ್ಚದಲ್ಲಿ ಕುಸಿತದ ಹೊರತಾಗಿಯೂ, ಕ್ರೈಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಳ್ಳಲು ಪ್ರತಿಕ್ರಿಯೆಯಾಗಿ ಪಶ್ಚಿಮದಿಂದ ವಿಧಿಸಲಾದನಿರ್ಬಂಧಗಳಿಂದಾಗಿ, ಹೆಚ್ಚಿನ ತೈಲ ಮತ್ತು ಅನಿಲ ಆದಾಯವು ಮಾಸ್ಕೋಗೆ 2021ರಲ್ಲಿ ತನ್ನ ವೆಚ್ಚವನ್ನು ಹೆಚ್ಚಿಸಲು ಕಾರಣವಾಯಿತು ಎಂದು ವರದಿ ತಿಳಿಸಿದೆ. ಉಕ್ರೇನ್‌ನಲ್ಲಿ, ಮಿಲಿಟರಿ ವೆಚ್ಚವು 2021ರಲ್ಲಿ $ 5.9 ಶತಕೋಟಿಗೆ ಕುಸಿದಿದ್ದರೂ, ಅದು ಇನ್ನೂ ಅದರ GDP ಯ 3.2 ಶೇಕಡಾವನ್ನು ಹೊಂದಿದೆ.
  Published by:Kavya V
  First published: