Business News: 447 ಬಿಲಿಯನ್ ಡಾಲರ್ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಚೀನಾಗೆ ಭಾರತವೇ ಎದುರಾಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ಲೂಮ್‌ಬರ್ಗ್ ಪ್ರಕಾರ, ಭಾರತದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಒನ್‌ವೆಬ್ ಲಿಮಿಟೆಡ್​ ಆಗಿ ರಾಷ್ಟ್ರದ ಪೂರ್ವ ಕರಾವಳಿಯ ದ್ವೀಪವೊಂದರಿಂದ ಕಳೆದ ತಿಂಗಳು ಮೂರು ಡಜನ್ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದೆ.

  • Share this:
  • published by :

ಭಾರತ (India) ಬಾಹ್ಯಾಕಾಶ ಆರ್ಥಿಕತೆಯಂತಹ ಹೆಚ್ಚು ಲಾಭಕರ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದೆ. ಇದುವರೆಗೆ ಎಲೋನ್ ಮಸ್ಕ್ (Elon Musk) ಸ್ಪೇಸ್‌ ಎಕ್ಸ್ ಅಂತೆಯೇ ಚೀನಾ ಹಾಗೂ ರಷ್ಯಾ ದೇಶಗಳು ಉಪಗ್ರಹ ಉಡಾವಣೆಗಳ ಮುಖ್ಯ ಪೂರೈಕೆದಾರರಾಗಿದ್ದರು. ಯುಕೆ ಉಪಗ್ರಹ ಕಂಪನಿ ಒನ್‌ವೆಬ್ ಲಿಮಿಟೆಡ್‌ನಂತಹ ಸಂಸ್ಥೆಗಳು ಇದೀಗ ಭಾರತದೊಂದಿಗೆ ವ್ಯವಹಾರ ನಡೆಸಲು ಮುಂದಾಗಿವೆ. ಯುಕೆ ಉಪಗ್ರಹ ಸಂಸ್ಥೆಗೆ ಮೂರು ಡಜನ್ ಸಂವಹನ ಉಪಗ್ರಹಗಳ ಉಡಾವಣೆ ಮಾಡಿದ ಭಾರತದ ನ್ಯೂಸ್ಪೇಸ್.  ಬ್ಲೂಮ್‌ಬರ್ಗ್ ಪ್ರಕಾರ, ಭಾರತದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್, ಒನ್‌ವೆಬ್ ಲಿಮಿಟೆಡ್ಗಾಗಿ ರಾಷ್ಟ್ರದ ಪೂರ್ವ ಕರಾವಳಿಯ ದ್ವೀಪವೊಂದರಿಂದ ಕಳೆದ ತಿಂಗಳು ಮೂರು ಡಜನ್ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಕ್ರಮವು ಯುಕೆ ಉಪಗ್ರಹ ಸಂಸ್ಥೆಗೆ ಆಕಾಶದಲ್ಲಿ ಜಾಗತಿಕ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ನೆಟ್‌ವರ್ಕ್ ಅನ್ನು ರಚಿಸುವುದಕ್ಕೆ ಸಹಾಯ ಮಾಡಿದೆ.


ಬಾಹ್ಯಾಕಾಶ ಆರ್ಥಿಕತೆ ಎಂದರೇನು?


ಬಾಹ್ಯಾಕಾಶ ಆರ್ಥಿಕತೆ ಎಂದರೆ ಪೂರ್ಣ ಶ್ರೇಣಿಯ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಬಳಕೆ ಎಂದು ವ್ಯಾಖ್ಯಾನಿಸಲಾಗಿದೆ, ಅದು ಬಾಹ್ಯಾಕಾಶವನ್ನು ಅನ್ವೇಷಿಸುವ, ಸಂಶೋಧಿಸುವ, ಅರ್ಥಮಾಡಿಕೊಳ್ಳುವ, ನಿರ್ವಹಿಸುವ ಮತ್ತು ಬಳಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಾನವರಿಗೆ ಮೌಲ್ಯ ಮತ್ತು ಪ್ರಯೋಜನಗಳನ್ನು ಸೃಷ್ಟಿಸುತ್ತದೆ.


ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಹೊಸ ಸಾಧನೆ


ಇಲ್ಲಿಯವರೆಗೆ ಉಪಗ್ರಹ ಉಡಾವಣೆಗಾಗಿ ಜಾಗತಿಕ ಬಾಹ್ಯಾಕಾಶ ಬೇಡಿಕೆಯನ್ನು ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್, ಚೀನಾ ಮತ್ತು ರಷ್ಯಾ ಮೂಲಕ ಪೂರೈಸಲಾಗುತ್ತಿತ್ತು.


ಆದರೆ ಉಕ್ರೇನ್‌ನಲ್ಲಿನ ಯುದ್ಧ ಮತ್ತು ಯುಎಸ್ ಜೊತೆಗಿನ ಚೀನಾದ ಉದ್ವಿಗ್ನತೆಗಳಿಂದ ಉಪಗ್ರಹ ಉಡಾವಣೆ ಸಾಧ್ಯವಾಗುತ್ತಿಲ್ಲ. ಇದರ ನಡುವೆ ಭಾರತ ಯುಎಸ್, ಆಸ್ಟ್ರೇಲಿಯಾ ಮತ್ತು ಜಪಾನ್‌ನೊಂದಿಗೆ ಪ್ರಬಲ ಮೈತ್ರಿ ಮಾಡಿಕೊಂಡಿದೆ.


ಬಾಹ್ಯಾಕಾಶದಿಂದ ವಿತರಿಸಲಾದ ಹೆಚ್ಚಿನ ವೇಗದ ಇಂಟರ್ನೆಟ್‌ಗೆ ಬೇಡಿಕೆಯು ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡುವ ವ್ಯವಹಾರವನ್ನು ಹೊಸ ಪ್ರಗತಿಯೆಂಬುದಾಗಿ ಸೂಚಿಸಿದೆ.


2025 ರ ಹೊತ್ತಿಗೆ, ಅರ್ನ್ಸ್ಟ್ ಮತ್ತು ಯಂಗ್ ಅಂದಾಜಿನ ಪ್ರಕಾರ, ಬಾಹ್ಯಾಕಾಶ ಆರ್ಥಿಕತೆಯು $ 447 ಶತಕೋಟಿಯಿಂದ $ 600 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಏರ್​​ಟೆಲ್​ನಿಂದ ಹೊಸ ಅಗ್ಗದ ಪ್ಲ್ಯಾನ್​ ಬಿಡುಗಡೆ! ಇದರಿಂದ ವರ್ಷವಿಡೀ ರೀಚಾರ್ಜ್​ ಮಾಡ್ಬೇಕು ಅನ್ನೋ ಚಿಂತೆನೇ ಇರಲ್ಲ


ಕಳೆದ ವರ್ಷ ರಷ್ಯಾ ತನ್ನ 36 ಬಾಹ್ಯಾಕಾಶ ನೌಕೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ನಂತರ ಒನ್‌ವೆಬ್ ವ್ಯವಹಾರ ನಡೆಸಲು ಭಾರತದತ್ತ ಮುಖ ಮಾಡಿದೆ.


ಭಾರತಕ್ಕೆ ಒದಗಿರುವ ಸುವರ್ಣವಕಾಶ


ಇದೇ ಸಮಯದಲ್ಲಿ ಫ್ರಾನ್ಸ್‌ನ ಏರಿಯನ್ಸ್ಪೇಸ್ ತನ್ನ ಹೊಸ ರಾಕೆಟ್ ಅನ್ನು ಬಳಕೆಗೆ ಸಿದ್ಧಪಡಿಸುವಲ್ಲಿ ಸಮಸ್ಯೆಗಳನ್ನು ಎದುರಿಸಿದೆ. ಮತ್ತು ವರ್ಜಿನ್ ಆರ್ಬಿಟ್ ಹೋಲ್ಡಿಂಗ್ಸ್ ಇಂಕ್., ಬ್ರಿಟಿಷ್ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್‌ಗೆ ಸಂಬಂಧಿಸಿರುವ ಉಪಗ್ರಹ-ಉಡಾವಣಾ ಕಂಪನಿಯು ಜನವರಿಯಲ್ಲಿ ಉಡಾವಣೆ ವಿಫಲವಾದ ನಂತರ ಕಾರ್ಯಾಚರಣೆಗಳನ್ನು ನಿಲ್ಲಿಸುತ್ತಿದೆ ಎಂದು ತಿಳಿಸಿದೆ.


ಸ್ಪೇಸ್‌ಎಕ್ಸ್ ಈಗಾಗಲೇ ಹೆಚ್ಚಿನ ಒತ್ತಡವನ್ನು ಹೊಂದಿದ್ದರೆ ಅಂತೆಯೇ ದುಬಾರಿಯಾಗಿದ್ದರೆ ಉಪಗ್ರಹಗಳಿಗಾಗಿ ಬೇರೆ ದೇಶವನ್ನು ಅವಲಂಬಿಸಬೇಕು, ಇನ್ನು ಮುಂದೆ ಚೀನಾದೊಂದಿಗೆ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದು ಬಾಹ್ಯಾಕಾಶ ಸಂಶೋಧನೆ ಮತ್ತು ಸಲಹಾ ಸಂಸ್ಥೆಯಾದ ನಾರ್ದರ್ನ್ ಸ್ಕೈ ರಿಸರ್ಚ್‌ನ ಪ್ರಧಾನ ವಿಶ್ಲೇಷಕರಾದ ಡಲ್ಲಾಸ್ ಕಸಾಬೊಸ್ಕಿ ತಿಳಿಸಿದ್ದಾರೆ. ಈ ಸಮಯದಲ್ಲಿ ಭಾರತವೇ ಉತ್ತಮ ಆಯ್ಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.


ಭಾರತದ ರಾಕೆಟ್‌ಗಳು ಕಡಿಮೆ ವೆಚ್ಚದಾಯಕವಾಗಿವೆ


ಬೀಜಿಂಗ್ ಕೆಲವೊಂದು ತಂತ್ರಜ್ಞಾನವನ್ನು ಬಳಸುವ ಬಗೆಗೆ ಹೆಚ್ಚುತ್ತಿರುವ ಕಾಳಜಿಯ ಕಾರಣದಿಂದ ಚೀನಾದ ರಾಕೆಟ್‌ಗಳು ಅನೇಕ ಉಪಗ್ರಹ ನಿರ್ವಾಹಕರಿಗೆ ಉತ್ತಮ ಆಯ್ಕೆ ಎಂದೆನಿಸಿಲ್ಲ. ಆದರೆ ಭಾರತ ದೇಶದ ರಾಕೆಟ್‌ಗಳು ಇತರ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ವೆಚ್ಚದ್ದಾಗಿದೆ.


ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಭಾಗ


ಬಾಹ್ಯಾಕಾಶ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಮುಖ ಭಾಗವಾಗಿದೆ ಅಂತೆಯೇ ಈ ಯೋಜನೆಯನ್ನು ವಿಶ್ವದ ಐದನೇ ಅತಿದೊಡ್ಡ ತಾಂತ್ರಿಕ ಆವಿಷ್ಕಾರದ ಉನ್ನತ ತಾಣವಾಗಿ ಇರಿಸುವ ಗುರಿಯನ್ನು ಹೊಂದಿದೆ.


ಇದನ್ನೂ ಓದಿ: ಎಲಾನ್ ಮಸ್ಕ್ ಟ್ವಿಟರ್ ಲೋಗೋ ಚೇಂಜ್ ಮಾಡಿದ್ದು ನಿಜನಾ? ಬಳಕೆದಾರರನ್ನು ಏಪ್ರಿಲ್ ಫೂಲ್ ಮಾಡಿದ್ರಾ?


ಹೀಗಾಗಿ ಭಾರೀ ಬೇಡಿಕೆ ಇದೆ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಾಣಿಜ್ಯ ಅಂಗವಾಗಿ ರಚಿಸಲಾದ ನ್ಯೂಸ್ಪೇಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಿ. ರಾಧಾಕೃಷ್ಣನ್ ತಿಳಿಸಿದ್ದಾರೆ.


ಒನ್‌ವೆಬ್‌ನ ಮುಖ್ಯ ಕಾರ್ಯನಿರ್ವಾಹಕ ನೀಲ್ ಮಾಸ್ಟರ್ಸನ್ ತಿಳಿಸಿರುವಂತೆ ವಾಣಿಜ್ಯ ಉಡಾವಣೆಯ ಪ್ರಮುಖ ಪೂರೈಕೆದಾರನಾಗಲು ನ್ಯೂಸ್ಪೇಸ್ ನಿಜವಾದ ಅವಕಾಶ ಹೊಂದಿದೆ ಎಂದು ತಿಳಿಸಿದ್ದಾರೆ.


top videos    ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 17 ಶತಕೋಟಿ ರೂಪಾಯಿ ವಹಿವಾಟು ಹಾಗೂ ಶತಕೋಟಿ ರೂಪಾಯಿ ಲಾಭವನ್ನು ದಾಖಲಿಸಿದೆ ಎಂಬುದಾಗಿ ವರದಿಯಾಗಿದೆ. ನ್ಯೂಸ್ಪೇಸ್ 52 ಅಂತಾರಾಷ್ಟ್ರೀಯ ಗ್ರಾಹಕರಿಗೆ ಉಪಗ್ರಹ ಉಡಾವಣಾ ಸೇವೆಗಳನ್ನು ಒದಗಿಸಿದೆ.

    First published: