ಭಾರತದಲ್ಲಿ ಅಸಮಾನತೆ ಬಹಳ ಹೆಚ್ಚು, ಬರಿಗೈಲಿದೆ ಅರ್ಧ ಜನಸಂಖ್ಯೆ: ಡಬ್ಲ್ಯೂಐಎಲ್ ವರದಿ

World Inequality Lab Report- ಪ್ರತೀ ನೂರು ಜನರಲ್ಲಿ ಒಬ್ಬನ ಬಳಿ ಅತಿಹೆಚ್ಚು ಸಂಪತ್ತು; 50 ಮಂದಿ ಬಳಿ ಶೇ. 13ರಷ್ಟು ಸಂಪತ್ತೂ ಇಲ್ಲ. ಸರಾಸರಿ ಆದಾಯದಲ್ಲಿ ಮೇಲಿನ ಸ್ತರದ ಶೇ. 1ರಷ್ಟು ಜನರು ಬಹುಪಾಲು ಆದಾಯ ಗಳಿಸುತ್ತಾರೆ. ಕೆಳಗಿನ ಶೇ. 50ರಷ್ಟು ಜನರ ಆದಾಯ ನಗಣ್ಯ ಎಂದು ವರದಿಯೊಂದು ಹೇಳಿದೆ.

ಭಾರತದ ಬಡವರ್ಗದ ಜನರು

ಭಾರತದ ಬಡವರ್ಗದ ಜನರು

 • News18
 • Last Updated :
 • Share this:
  ಬೆಂಗಳೂರು: ಭಾರತ ಬಡ ಮತ್ತು ಬಹಳ ಅಸಮಾನತೆ ಇರುವ ದೇಶ. ಇಲ್ಲಿನ ಶೇ. 1ರಷ್ಟು ಸಿರಿವಂತರು ಕೆಳಗಿನ ಶೇ. 50 ಜನರಿಗಿಂತ ಹೆಚ್ಚು ಆದಾಯವನ್ನ ಹೊಂದಿದ್ದಾರೆ. ದೇಶದ ಸಂಪತ್ತಿನಲ್ಲಿ ಈ ಬಡ ಜನರ ಪಾಲು ಬಹುತೇಕ ಶೂನ್ಯ ಇದೆ. ವರ್ಲ್ಸ್ ಇನೀಕ್ವಾಲಿಟಿ ಲ್ಯಾಬ್ (World Inequality Lab) ಪ್ರಕಟಿಸಿರುವ ವರದಿಯಲ್ಲಿ ಈ ಅಂಶಗಳು ಹೈಲೈಟ್ ಆಗಿವೆ. ಫ್ರಾನ್ಸ್ ದೇಶದ ಥಾಮಸ್ ಪಿಕೆಟ್ಟಿ ಮೊದಲಾದ ಹಿರಿಯ ಅರ್ಥಶಾಸ್ತ್ರಜ್ಞರು ಸೇರಿ ಬರೆದಿರುವ ವರದಿ ಇದಾಗಿದೆ.

  2021ರ ವರ್ಷದಲ್ಲಿ ಅಗ್ರಸ್ಥಾನದಲ್ಲಿರುವ ಶೇ. 1 ಭಾಗದ ಜನರು ದೇಶದ ಒಟ್ಟು ಆದಾಯದಲ್ಲಿ ಶೇ. 20ಕ್ಕಿಂತ ಹೆಚ್ಚು ಆದಾಯವನ್ನ ಗಳಿಸುತ್ತಿದ್ದಾರೆ. ಕೆಳಗಿನ ಅರ್ಧ ಭಾಗದ ಜನರು ಗಳಿಸುತ್ತಿರುವುದು ಶೇ. 13 ಆದಾಯ ಮಾತ್ರ. ಭಾರತದ ವಯಸ್ಕ ಜನಸಂಖ್ಯೆಯ ಸರಾಸರಿ ರಾಷ್ಟ್ರೀಯ ಆದಾಯ ಎರಡು ಲಕ್ಷ ರೂ (2,04,200 ರೂ) ಇದೆ. ಇದರಲ್ಲಿ ಮೇಲಿನ ಸ್ತರದ ಶೇ. 1ರಷ್ಟು ಜನರು ಸರಾಸರಿಯಾಗಿ 11.66 ಲಕ್ಷ ಆದಾಯ ಗಳಿಸುತ್ತಾರೆ. ಅದೇ ಕೆಳಗಿನ ಶೇ. 50ರಷ್ಟು ಜನರು ಸರಾಸರಿಯಾಗಿ ಗಳಿಸುವ ಆದಾಯ ಬರೇ 53,610 ರೂಪಾಯಿ ಎಂದು ಈ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  ವರದಿಯಲ್ಲಿ ಕೆಲ ಕುತೂಹಲಕಾರಿ ಅಂಶಗಳನ್ನ ಗಮನಿಸುವುದಾದರೆ, ದೇಶದ ಜನಸಂಖ್ಯೆಯ ಮೇಲಿನ ಸ್ತರದ ಶೇಕಡಾ ಒಂದರಷ್ಟು ಜನರ ಬಳಿ ರಾಷ್ಟ್ರೀಯ ಆದಾಯದಲ್ಲಿ ಶೇ. 22ರಷ್ಟು ಪಾಲು ಇದೆ. ಶೇ. 10 ಜನಸಂಖ್ಯೆಯ ಬಳಿ ಶೇ. 57 ಆದಾಯ ಇದೆ. ಕೆಳಗಿನ ಸ್ತರದ ಶೇ. 50ರಷ್ಟು ಜನರ ಬಳಿ ಇರುವ ಆದಾಯ ಶೇ. 13 ಮಾತ್ರ ಎಂಬುದು ಪ್ರಸ್ತಾಪಿಸಲಾಗಿದೆ. ಭಾರತ  ಪ್ರಬಲ ಸಿರಿವಂತರಿರುವ ಬಹಳ ಬಡ ಮತ್ತು ಅಸಮಾನತೆಯ ದೇಶವಾಗಿದೆ ಎಂದು ವರ್ಲ್ಡ್ ಇನ್​ಈಕ್ವಾಲಿಟಿ ಲ್ಯಾಬ್​ನ ವರದಿಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ.

  ಸಂಪತ್ತಿನ ಅಸಮಾನ ಹಂಚಿಕೆ:

  ಭಾರತದಲ್ಲಿ ಎಲ್ಲಾ ಕುಟುಂಬಗಳು ಹೊಂದಿರುವ ಒಟ್ಟಾರೆ ಸಂಪತ್ತನ್ನ ಗಣಿಸಿದಾಗ ಸರಾಸರಿ ಸಂಪತ್ತು ಹೆಚ್ಚೂಕಡಿಮೆ 10 ಲಕ್ಷ ರೂ (9,83,010 ರೂ) ಆಗುತ್ತದೆ. ಇದರಲ್ಲಿ ಕೆಳಗಿನ ಸ್ತರದ ಶೇ. 50ರಷ್ಟು ವರ್ಗದವರ ಬಳಿ ಇರುವ ಸರಾಸರಿ ಸಂಪತ್ತು ಕೇವಲ 66,280 ಮಾತ್ರ ಎಂದು ಈ ವರದಿ ಹೇಳಿದೆ. ಅಂದರೆ, 10 ಲಕ್ಷ ಇರುವ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಅರ್ಧಜನಸಂಖ್ಯೆ ಬಳಿ ಶೇ. 7 ಸಂಪತ್ತು ಕೂಡ ಇಲ್ಲ.

  ಇದನ್ನೂ ಓದಿ: EPFO Credits : EPFO ಬಳಕೆದಾರರಿಗೆ ಗುಡ್ ನ್ಯೂಸ್; EPFO ವಿಮೆ ಯೋಜನೆಯಡಿ ಸಿಗಲಿದೆ 7ಲಕ್ಷ

  ಲಿಂಗ ಅಸಮಾನತೆಯೂ ಹೆಚ್ಚು:

  ಭಾರತದಲ್ಲಿ ಲಿಂಗ ಸಂಬಂಧಿ ಅಸಮಾನತೆಯೂ ಹೆಚ್ಚು ಮಟ್ಟದಲ್ಲಿ ಇದೆ. ಒಟ್ಟಾರೆ ಕಾರ್ಮಿಕರ ಆದಾಯದಲ್ಲಿ ಮಹಿಳಾ ಆದಾಯ ಪ್ರಮಾಣ ಶೇ. 18ರಷ್ಟು ಮಾತ್ರ ಇದೆ. ಅಂದರೆ ಕೂಲಿಯ ಬಹುಪಾಲು ಆದಾಯ ಪುರುಷ ಕಾರ್ಮಿಕರಿಗೆ ಸಂದಾಯ ಆಗುತ್ತದೆ. ಚೀನಾ ಹೊರತುಪಡಿಸಿ ಇಡೀ ಏಷ್ಯಾದಲ್ಲಿ ಮಹಿಳಾ ಕಾರ್ಮಿಕರು ಗಳಿಸುತ್ತಿರುವ ಸರಾಸರಿ ಆದಾಯ ಶೇ. 21ರಷ್ಟಿದೆ. ಭಾರತದಲ್ಲಿ ಇದೂ ಇನ್ನೂ ಕಡಿಮೆ ಇದೆ. ಮಧ್ಯಪ್ರಾಚ್ಯ ದೇಶಗಳಿಗಿಂತ ಮಾತ್ರ ಭಾರತ ಈ ವಿಚಾರದಲ್ಲಿ ತುಸು ಸಮಾಧಾನಕರ ಸ್ಥಿತಿಯಲ್ಲಿದೆ.

  ಕಾರ್ಬನ್ ಎಮಿಷನ್:

  ಹವಾಮಾನ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಬನ್ ಎಮಿಷನ್ ಅಥವಾ ಇಂಗಾಲ ಹೊರಸೂಸುವಿಕೆ ವಿಚಾರದಲ್ಲಿ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತ ತುಸು ಸಮಾಧಾನಕರ ಸ್ಥಿತಿಯಲ್ಲಿದೆ. ಆದರೆ, ಇಲ್ಲಿ ಮೇಲಿನ ಶೇ. 10ರಷ್ಟು ಜನರು ಶೇ. 90ರಷ್ಟು ಕಾರ್ಬನ್ ಎಮಿಷನ್​ಗೆ ಕಾರಣರಾಗಿದ್ಧಾರೆ. ಕೆಳಗಿನ ಶೇ. 50ರಷ್ಟು ಜನರಿಂದ ಆಗುವ ಇಂಗಾಲ ಹೊರಸೂಸುವಿಕೆ ಪ್ರಮಾಣ ಶೇ. 10 ಮಾತ್ರ ಎನ್ನಲಾಗಿದೆ.
  Published by:Vijayasarthy SN
  First published: