ಭಾರತದ ಅಡಿಕೆ ಉತ್ಪಾದನೆ ಎಷ್ಟು? UAE, ಸಿಂಗಾಪೂರದಿಂದಲೂ ಭಾರತಕ್ಕೆ ಅಡಿಕೆ ಆಮದು!

ಯುಎಇ, ಸಿಂಗಾಪುರ್ ಅಥವಾ ನೇಪಾಳದಲ್ಲಿ ಭಾರತದಂತೆ ಅಷ್ಟೇನೂ ಅಡಿಕೆಯನ್ನು ಬೆಳೆಯುವುದಿಲ್ಲ!

ಅಡಿಕೆ

ಅಡಿಕೆ

  • Share this:
ಕರ್ನಾಟಕವೂ ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಅಡಕೆ ಬೆಳೆಯಲಾಗುತ್ತದೆ. ನಮ್ಮ ಕರ್ನಾಟಕದ (Karnataka Farmers)ಹಲವು ಕೃಷಿಕರಿಗೆ ನಮ್ಮಲ್ಲಿಯೇ ಅತ್ಯಧಿಕ ಅಡಕೆ ಬೆಳೆಯಲಾಗುತ್ತದೆ ಎಂಬ ಭಾವನೆಯೂ ಇದೆ. ಆದರೆ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ (UAE)Si ಮತ್ತು ಸಿಂಗಾಪುರದಿಂದಲೂ (Singapore) ಅಡಕೆಯನ್ನು (Areca nut Import)  ಆಮದು ಮಾಡಿಕೊಳ್ಳುತ್ತದೆ ಎಂದು ತಿಳಿದಿರೆ ನಿಮಗೆ ಆಶ್ಚರ್ಯವಾಗಬಹುದು.  ಅಡಿಕೆ ಉದ್ಯಮದ ಮಧ್ಯಸ್ಥಗಾರರು ದೇಶವು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಎಂದು ಪ್ರತಿಪಾದಿಸುತ್ತಾ ಅಡಿಕೆ ಆಮದಿನ (Areca nut Import) ಮೇಲೆ ಕಟ್ಟುನಿಟ್ಟಾದ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೂ ಭಾರತವು ಪ್ರತಿವರ್ಷ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ.

ಲೋಕಸಭೆಯಲ್ಲಿ ಕೇಂದ್ರ ಸರ್ಕಾರವು (Union Government) ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಂದ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿದೆ.

ದೇಶದಲ್ಲಿ ಅಡಿಕೆ ಉತ್ಪಾದನೆ ಎಷ್ಟಿದೆ?
2020-21ರಲ್ಲಿ ದೇಶದ ಅಡಿಕೆ ಉತ್ಪಾದನೆಯು ಸುಮಾರು 15.63 ಲಕ್ಷ ಟನ್‌ಗಳಷ್ಟಿತ್ತು ಎಂದು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಲಿಖಿತ ಪ್ರತಿಕ್ರಿಯೆಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾಹಿತಿ
2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತವು 23,988 ಟನ್ ಅಡಿಕೆಯನ್ನು 508.59 ಕೋಟಿ ರೂ.ಗೆ ಖರೀದಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾಹಿತಿ ನೀಡಿದ್ದಾರೆ. 2021-22 ನೇ ಆರ್ಥಿಕ ವರ್ಷದ ಮೊದಲ ಹತ್ತು ತಿಂಗಳಲ್ಲಿ ಭಾರತದ ಅಡಿಕೆ ಆಮದು ಒಟ್ಟು ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ 17,890 ಟನ್‌ಗಳು.

ಇಷ್ಟು ಪ್ರಮಾಣದ ಅಡಿಕೆಯಿಂದ 468.12 ಕೋಟಿ ರೂ ವಹಿವಾಟು ನಡೆದಿದೆ. ಅಡಿಕೆಯ ಈ ವಹಿವಾಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸಿಂಗಾಪುರದಿಂದ ಮಾಡಿಕೊಳ್ಳಲಾದ ಅಡಿಕೆ ಆಮದುಗಳು ಸಹ ಸೇರಿವೆ.

ಯುಎಇ, ಸಿಂಗಾಪೂರದಿಂದ ಎಷ್ಟು?
ಈಎರಡು ಆರ್ಥಿಕ ವರ್ಷಗಳ ಅವಧಿಯಲ್ಲಿ ಭಾರತವು ಯುಎಇಯಿಂದ ಅನುಕ್ರಮವಾಗಿ 612 ಟನ್ ಅಡಿಕೆಯನ್ನು 12.28 ಕೋಟಿ ರೂ.ಗೆ ಮತ್ತು 93 ಟನ್ ಅಡಿಕೆಯನ್ನು 2.45 ಕೋಟಿ ರೂ. ಗೆ ಆಮದು ಮಾಡಿಕೊಂಡಿದೆ.

ಭಾರತ ಅಡಿಕೆಯನ್ನು ವಿವಿಧ ದೇಶಗಳಿಂದ ಆಮದು ಮಾಡಿಕೊಂಡ ಅಂಕಿಅಂಶಗಳು ಹೀಗಿವೆ
ಏಪ್ರಿಲ್-ಜನವರಿ 2021-22 ರ ಅವಧಿಯಲ್ಲಿ ಭಾರತವು ಶ್ರೀಲಂಕಾದಿಂದ 9,076 ಟನ್ ಮೌಲ್ಯದ 283.53 ಕೋಟಿಯ ಅಡಿಕೆಯನ್ನು ಆಮದು ಮಾಡಿಕೊಂಡಿದೆ. ಇಂಡೋನೇಷ್ಯಾದಿಂದ 4,885 ಟನ್​ಗಳ  84.21 ಕೋಟಿಯ ಅಡಿಕೆ, ಮ್ಯಾನ್ಮಾರ್ ದೇಶದಿಂದ 2,882 ಟನ್​ಗಳ 76.75 ಕೋಟಿ ಬೆಲೆಬಾಳು ಅಡಿಕೆ, ಮಲೇಷ್ಯಾದಿಂದ 222 ಟನ್​ ಅಡಿಕೆಯನ್ನು 5.83 ಕೋಟಿಗೆ ಖರೀದಿ ಮಾಡಿದೆ. ಮತ್ತು ನೇಪಾಳದಿಂದಲೂ 120 ಟನ್​ ಅಡಿಕೆಯನ್ನು 3.07 ಕೋಟಿ ಹಣಕ್ಕೆ ಆಮದು ಮಾಡಿಕೊಂಡಿದೆ.

ಇದನ್ನೂ ಓದಿ: Kisan Drones: ಕರ್ನಾಟಕದ ಕೃಷಿಕರೂ ಡ್ರೋನ್ ಬಳಸಿ! ಬೆಲೆ, ಖರೀದಿ, ಸರ್ಕಾರಿ ಸೌಲಭ್ಯ ಹೇಗೆ ತಿಳಿದುಕೊಳ್ಳಿ

ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ (ಕ್ಯಾಂಪ್ಕೊ) ಲಿಮಿಟೆಡ್‌ನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಇನ್ನೊಂದು ಅಚ್ಚರಿಯ ವಿಚಾರವನ್ನು ತಿಳಿಸುತ್ತಾರೆ.  ಯುಎಇ, ಸಿಂಗಾಪುರ್ ಅಥವಾ ನೇಪಾಳದಲ್ಲಿ ಅಡಿಕೆಯನ್ನು ಬೆಳೆಯುವುದಿಲ್ಲ!

ಅಡಿಕೆ ಬೆಳೆಯದಿದ್ದರೂ ಹೇಗೆ ಆಮದು?
ಆದರೂ ಈ ದೇಶಗಳಿಂದ ಅಡಿಕೆ ಬೆಳೆಯುವ ಭಾರತಕ್ಕೆ ಅಡಿಕೆ ಆಮದಾಗುತ್ತದೆ! ಈ ದೇಶಗಳು ಅಡಿಕೆಯನ್ನು ಅಕ್ರಮವಾಗಿ ಸಾಗಿಸಿಕೊಂಡು ಭಾರತಕ್ಕೆ ಆಮದು ಮಾಡುತ್ತಿರುವ ಕುರಿತು ವಿಶ್ಲೇಷಣೆ ಮಾಡಬೇಕಿದೆ ಎಂದು ಅವರು ಹೇಳುತ್ತಾರೆ.

ಅಗ್ಗದ ಆಮದು ಸರಕುಗಳು ದೇಶೀಯ ಮಾರುಕಟ್ಟೆಯಲ್ಲಿ ಭಾರತೀಯ ಅಡಿಕೆಗೆ ಬೇಡಿಕೆಯನ್ನು ಕಡಿಮೆ ಮಾಡುತ್ತವೆ. ದೇಶೀಯ ಮಾರುಕಟ್ಟೆಗೆ ಹಾನಿ ಮಾಡುವ ಅಕ್ರಮ ಆಮದುಗಳ ಬೆದರಿಕೆ ಯಾವಾಗಲೂ ಇರುತ್ತದೆ. ಇತರ ರಾಷ್ಟ್ರಗಳಿಂದ ಅಕ್ರಮವಾಗಿ ಅಡಿಕೆ ಆಮದು ಮಾಡಿಕೊಳ್ಳುವುದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಣಿತರು ಹೇಳುತ್ತಾರೆ.

ಇದನ್ನೂ ಓದಿ: PM Kusum Scheme: ಕೃಷಿಕರೇ, ಸರ್ಕಾರಕ್ಕೇ ವಿದ್ಯುತ್ ಮಾರಾಟ ಮಾಡಿ! ಉಚಿತವಾಗಿ ನೀರು ಹಾಯಿಸಿ

ದೇಶೀಯ ಬೇಡಿಕೆಯನ್ನು ಪೂರೈಸಲು ದೇಶದ ಪ್ರಸ್ತುತ ಪೂರೈಕೆ ಅಡಿಕೆ ಸಾಕಾಗುತ್ತದೆ. ಅಡಿಕೆ ಆಮದು ದೇಶೀಯ ಅಡಿಕೆ ವಲಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ಪ್ರತಿಪಾದಿಸಿದರು, ಇದು ಈಗಾಗಲೇ ಉತ್ಪಾದನೆಯಲ್ಲಿ "ಆತ್ಮನಿರ್ಭರ್" ಆಗುತ್ತಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಅವರು ಪ್ರತಿಪಾದಿಸುತ್ತಾರೆ.
Published by:guruganesh bhat
First published: