ಭಾರತವು 2021-22ರ ಆರ್ಥಿಕ ವರ್ಷದಲ್ಲಿ $83.57 ಶತಕೋಟಿಯಷ್ಟು ವಾರ್ಷಿಕ ವಿದೇಶಿ ನೇರ ಹೂಡಿಕೆ (FDI) ಒಳಹರಿವನ್ನು ದಾಖಲಿಸಿದೆ. ಈಮೂಲಕ ಕಳೆದ ವರ್ಷದ ವಿದೇಶಿ ನೇರ ಬಂಡವಾಳ ಹೂಡಿಕೆಯ (Foreign Direct Investment) $1.60 ಶತಕೋಟಿಯನ್ನು ಹಿಂದಿಕ್ಕಿದೆ. ಅದರಲ್ಲೂ 2020-21ರ ಹಣಕಾಸು ವರ್ಷದಲ್ಲಿ, ದೇಶದಲ್ಲಿ ಒಟ್ಟು ಎಫ್‌ಡಿಐ ಒಳಹರಿವು $81.97 ಬಿಲಿಯನ್‌ನಷ್ಟಿದೆ. 2021-22 ರ ಆರ್ಥಿಕ ವರ್ಷದ ಅವಧಿಯಲ್ಲಿ ಎಫ್‌ಡಿಐ ಇಕ್ವಿಟಿ ಒಳಹರಿವು ಪಡೆದ ರಾಜ್ಯಗಳಲ್ಲಿ ಕರ್ನಾಟಕದ್ದೇ ಸಿಂಹಪಾಲಾಗಿದೆ. ಕರ್ನಾಟಕಕ್ಕೆ ಶೇ. 53ರಷ್ಟು ಎಫ್‌ಡಿಐ ಇಕ್ವಿಟಿ ಒಳಹರಿವನ್ನು ಕರ್ನಾಟಕ (Karnataka Foreign Direct Investment) ದಾಖಲಿಸಿದೆ. ಈಮೂಲಕ ಇಡೀ ದೇಶದಲ್ಲೇ ನಂಬರ್ 1 ಪಟ್ಟಕ್ಕೆ ಪಾತ್ರವಾಗಿದೆ. ನಂತರದ ಸ್ಥಾನಗಳಲ್ಲಿ ದೆಹಲಿ (ಶೇ. 17) ಮತ್ತು ಮಹಾರಾಷ್ಟ್ರ (ಶೇ. 17) ರಾಜ್ಯಗಳಿವೆ ಎಂದು ಸಚಿವಾಲಯ ತಿಳಿಸಿದೆ.
ಕರ್ನಾಟಕದ ಬಹುಪಾಲು ಇಕ್ವಿಟಿ ಒಳಹರಿವು ಕಂಡ ವಲಯಗಳನ್ನು ನೋಡುವುದಾದರೆ ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್, ಒಟ್ಟು ಎಫ್‌ಡಿಐ ಈಕ್ವಿಟಿ ಒಳಹರಿವಿನ ಶೇಕಡಾ 35 ರಷ್ಟು ಪಾಲನ್ನು ಹೊಂದಿದೆ. ಆಟೋಮೊಬೈಲ್ ಉದ್ಯಮದಲ್ಲಿ ಇದು 20 ಶೇಕಡಾ ಮತ್ತು ಶೈಕ್ಷಣಿಕ ವಲಯದಲ್ಲಿ 12 ಶೇಕಡಾ ಪಾಲನ್ನು ಹೊಂದಿದೆ.
ಯಾವ ದೇಶ ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದೆ?
ಭಾರತದಲ್ಲಿ ಎಫ್‌ಡಿಐ ಇಕ್ವಿಟಿ ಒಳಹರಿವಿನ ಅಗ್ರ ಹೂಡಿಕೆದಾರ ರಾಷ್ಟ್ರಗಳ ವಿಷಯದಲ್ಲಿ, 2021-22ರ ಆರ್ಥಿಕ ವರ್ಷದಲ್ಲಿ ಸಿಂಗಾಪುರ ಶೇಕಡಾ 27 ರಷ್ಟು ಹೂಡಿಕೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಮುಂದಿನ ಹಂತದಲ್ಲಿ ಅಮೆರಿಕಾ ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ್ದು (18 ಶೇಕಡಾ) ಮಾರಿಷಸ್ ಶೇಕಡಾ 16ರಷ್ಟು ಹೂಡಿಕೆಯ ಪ್ರಮಾಣದ ಮೂಲಕ ಮೂರನೇ ಸ್ಥಾನದಲ್ಲಿದೆ.
ಕೊವಿಡ್-ಉಕ್ರೇನ್ ಯುದ್ದ ಇದ್ದರೂ ದಾಖಲೆ!
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಮತ್ತು COVID-19 ಸಾಂಕ್ರಾಮಿಕದ ಹೊರತಾಗಿಯೂ FY22 ರಲ್ಲಿ FDI ಒಳಹರಿವು ಹೆಚ್ಚಾಗಿದೆ ಎಂದು ಅಧಿಕೃತವಾಗಿ ಅಂಕಿ ಅಂಶ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Karnataka Fuel Tax: ಕರ್ನಾಟಕವೂ ಪೆಟ್ರೋಲ್, ಡೀಸೆಲ್ ತೆರಿಗೆ ಕಡಿಮೆ ಮಾಡಲಿದೆಯೇ? ಸಿಎಂ ಮಾತಿನ ಅರ್ಥವೇನು?
ಆರ್ಥಿಕ ವರ್ಷ 2015ರಲ್ಲಿ ಭಾರತದ ವಿದೇಶಿ ನೇರ ಹೂಡಿಕೆಯ ಒಳಹರಿವು $45.15 ಶತಕೋಟಿ ಇತ್ತು ಎಂದು ಸಚಿವಾಲಯ ತಿಳಿಸಿದೆ. ಭಾರತವು ಉತ್ಪಾದನಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಆದ್ಯತೆಯ ದೇಶವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ