ದೆಹಲಿ: ಭಾರತವು ಸಕ್ಕರೆ ಉತ್ಪಾದನೆಯನ್ನು 10 ಮಿಲಿಯನ್ ಟನ್ಗಳಿಗೆ ಮಿತಿಗೊಳಿಸಲು (India Sugar Export Curb) ನಿರ್ಧರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ (Sugar Price) ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿಗಷ್ಟೇ ಗೋಧಿ ರಫ್ತಿನ ಮೇಲೆ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಸಕ್ಕರೆ ರಫ್ತಿಗೆ ಮಿತಿ ವಿಧಿಸಿದೆ. ಆಲ್ ಇಂಡಿಯಾ ಶುಗರ್ ಟ್ರೇಡ್ ಅಸೋಸಿಯೇಷನ್ನ ಪ್ರಕಾರ, ಬ್ರೆಜಿಲ್ (Brazil Sugar) ನಂತರ ಭಾರತವು ಎರಡನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶಗಳಲ್ಲಿ ಭಾರತವೇ ಅಗ್ರ ಸ್ಥಾನದಲ್ಲಿದೆ. ಜೊತೆಗೆ ಸಕ್ಕರೆಯ ಎರಡನೇ ಅತಿ ದೊಡ್ಡ ರಫ್ತುದಾರ ದೇಶವೂ ಆಗಿದೆ ಭಾರತ.
ಈವರೆಗೆ ಎಷ್ಟು ರಫ್ತು ಮಾಡುತ್ತಿತ್ತು ಭಾರತ? ಮಾರ್ಚ್ನಲ್ಲಿ ಕೊನೆಗೊಂಡ 2021-22 ಹಣಕಾಸು ವರ್ಷದಲ್ಲಿ ಭಾರತವು ದಾಖಲೆಯ 7 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಿದೆ. ಅದು 2017-18ರಲ್ಲಿ ರಫ್ತು ಮಾಡಿದ ಸಕ್ಕರೆಗಿಂತ 620,000 ಟನ್ಗಳಿಗಿಂತ ಹೆಚ್ಚು ಸಕ್ಕರೆಯನ್ನು ಭಾರತ ರಫ್ತು ಮಾಡಿತ್ತು.
ಎಷ್ಟು ಉತ್ಪಾದನೆ ಆಗುತ್ತದೆ? ಸದ್ಯದ ಋತುವಿನಲ್ಲಿ ಭಾರತವು 30 ಮಿಲಿಯನ್ ಟನ್ಗಳಿಗಿಂತ ಹೆಚ್ಚು ಸಕ್ಕರೆ ಉತ್ಪಾದಿಸುವ ನಿರೀಕ್ಷೆಯಿದೆ. ಭಾರತದ ಆಂತರಿಕ ಸಕ್ಕರೆ ಬಳಕೆ ಸುಮಾರು 28 ಮಿಲಿಯನ್ ಟನ್ಗಳು ಎಂದು ಅಂದಾಜಿಸಲಾಗಿದೆ.
ಭಾರತವು ಸಕ್ಕರೆ ಆಮದನ್ನು ನಿರ್ಬಂಧಿಸುತ್ತದೆ ಸಕ್ಕರೆ ರಫ್ತು (ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆ) ಜೂನ್ 1, 2022 ರಿಂದ ನಿರ್ಬಂಧಿತ ರಫ್ತು ವರ್ಗದಲ್ಲಿ ಇರಿಸಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) ಮಂಗಳವಾರ, ಮೇ 24 ರಂದು ಅಧಿಸೂಚನೆಯಲ್ಲಿ ತಿಳಿಸಿದೆ.
ಕೇಂದ್ರ 2021-22 ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ದೇಶದಲ್ಲಿ ಸಕ್ಕರೆಯ ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜೂನ್ 1 ರಿಂದ ಜಾರಿಗೆ ಬರುವಂತೆ ಸಕ್ಕರೆ ರಫ್ತುಗಳನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
DGFT ಹೊರಡಿಸಿದ ಆದೇಶದ ಪ್ರಕಾರ ಜೂನ್ 1, 2022 ರಿಂದ 31 ಅಕ್ಟೋಬರ್, 2022 ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಈ ಎರಡರಲ್ಲಿ ಯಾವುದು ಮೊದಲು ಸಕ್ಕರೆ ನಿರ್ದೇಶನಾಲಯ, ಆಹಾರ ಇಲಾಖೆಯ ನಿರ್ದಿಷ್ಟ ಅನುಮತಿಯೊಂದಿಗೆ ಸಕ್ಕರೆ ರಫ್ತು ಮಾಡಲು ಅನುಮತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮವೇನು? 2017-18, 2018-19 ಮತ್ತು 2019-20 ರ ಋತುಗಳಲ್ಲಿ ಕೇವಲ 6.2 LMT, 38 LMT ಮತ್ತು 59.60 LMT ಸಕ್ಕರೆ ರಫ್ತು ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಆದರೂ 2020-21 ರ ಸಕ್ಕರೆ ಋತುವಿನಲ್ಲಿ 60 LMT ಗುರಿಯ ವಿರುದ್ಧ ಸುಮಾರು 70 LMT ರಫ್ತು ಮಾಡಲಾಗಿದೆ.
ಈ ಬಗ್ಗೆ ಸರ್ಕಾರ ತನ್ನ ಕಳವಳ ವ್ಯಕ್ತಪಡಿಸಿದೆ. ಸಕ್ಕರೆ ರಫ್ತು ನಿರ್ಬಂಧಿಸುವ ಕ್ರಮವು ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ಸಕ್ಕರೆ ರಫ್ತಿನಲ್ಲಿ ಅಭೂತಪೂರ್ವ ಬೆಳವಣಿಗೆ ಮತ್ತು ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಕಾಯ್ದುಕೊಳ್ಳುವ ಅಗತ್ಯತೆಯಿದೆ. ಸಕ್ಕರೆ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇಶದ ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಅಗತ್ಯವನ್ನು ಪರಿಗಣಿಸಿ ಭಾರತ ಸರ್ಕಾರವು ಸಕ್ಕರೆ ರಫ್ತು ನಿಯಂತ್ರಿಸಲು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ