Cement Price Hike: ಒಂದು ತಿಂಗಳಲ್ಲಿ 55 ರೂ. ಏರಿಕೆ ಆಗಲಿದೆ ಸಿಮೆಂಟ್ ಬೆಲೆ

ಇಂಡಿಯಾ ಸಿಮೆಂಟ್ಸ್ ಏಳು ಸ್ಥಾವರಗಳಿಂದ 14 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಸಿಮೆಂಟ್ ಉತ್ಪಾದಕವಾಗಿದೆ. ಮೇ 27 ರಂದು ಬೆಂಚ್‌ ಮಾರ್ಕ್ ಸೆನ್ಸೆಕ್ಸ್ 1.2 ಶೇಕಡಾವನ್ನು ಗಳಿಸಿದಾಗ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 4 ಶೇಕಡಾ ಕುಸಿದು 162.65 ರೂ.ಗೆ ತಲುಪಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂಡಿಯಾ ಸಿಮೆಂಟ್ ಲಿಮಿಟೆಡ್ (India Cement Ltd) ಮುಂದಿನ ತಿಂಗಳು ಸಿಮೆಂಟ್ ಬೆಲೆ ಏರಿಕೆ (Cement Price Hike) ಮಾಡಲು ನಿರ್ಧರಿಸಿದೆ. ಒಟ್ಟು ಮೂರು ಹಂತಗಳಲ್ಲಿ ಬೆಲೆ ಏರಿಸಲು ಕಂಪನಿ ನಿರ್ಧರಿಸಿದೆ. ಇದರ ಜೊತೆಗೆ ಆರ್ಥಿಕ ವರ್ಷ 2022ರ ನಾಲ್ಕನೇ ತ್ರೈಮಾಸಿಕದ ನಷ್ಟವನ್ನು (Loss) ಸರಿದೂಗಿಸಲು ಭೂಮಿಯನ್ನು ಮಾರಾಟ ಮಾಡುತ್ತಿದೆ. ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಇಂಡಿಯಾ ಸಿಮೆಂಟ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎನ್.ಶ್ರೀನಿವಾಸನ್ (N Srinivasan), ಒಂದು ಚೀಲದ ಸಿಮೆಂಟ್ ಬೆಲೆ 55 ರೂ. ಹೆಚ್ಚಿಸಲಾಗುದು. ಜೂನ್ 1ರಂದು 20 ರೂ. ಜೂನ್ 15ರಂದು 15 ರೂ. ಮತ್ತು ಜೂನ್ 20 ರೂ. ಏರಿಕೆ ಆಗಲಿದೆ.

ಈ ಬೆಲೆ ಏರಿಕೆ ಏರುತ್ತಿರುವ ವೆಚ್ಚ ಭರಿಸಲು ನಮಗೆ ಸಹಾಯ ಮಾಡಲಿದೆ. ಭವಿಷ್ಯದಲ್ಲಿ ನಮ್ಮ ಲಾಭ-ನಷ್ಟದ ಖಾತೆ (Profit Loss Account) ಉತ್ತಮವಾಗಿ ಕಾಣಲು ಸಹಾಯವಾಗಲಿದೆ ಎಂದು ಶ್ರೀನಿವಾಸನ್ ಹೇಳುತ್ತಾರೆ.

ಸಿಮೆಂಟ್ ಬೇಡಿಕೆ ಹೆಚ್ಚಾಗಲಿದೆ

ಈ ವರ್ಷದ ಬಜೆಟ್ ನಲ್ಲಿ ಮೂಲ ಸೌಕರ್ಯಕ್ಕಾಗಿ 26.7 ಡಾಲರ್ ಬಿಲಿಯನ್ ರಸ್ತೆ ಮತ್ತು 18.8 ಶತಕೋಟಿ ಡಾಲರ್ ಮೊತ್ತದ ರೈಲ್ವೇ ಕಾಮಗಾರಿಗಳು ನಡೆಯಲಿದೆ. ಇದರ ಜೊತೆಗೆ ಮನೆಗಳ ನಿರ್ಮಾಣ ಕಾರ್ಯಗಳು ಸಹ ಹೆಚ್ಚಾಗಿವೆ. ಈ ಎಲ್ಲ ಕಾರಣಗಳಿಂದ ಸಿಮೆಂಟ್ ಬೇಡಿಕೆ ಹೆಚ್ಚಾಗಲಿದೆ ಎಂದು ಇಂಡಿಯಾ ಬ್ರಾಂಡ್ ಇಕ್ವಿಟಿ ಫೌಂಡೇಶನ್ ಹೇಳಿದೆ.

ಚೀಲಕ್ಕೆ 360 ರಿಂದ 400 ರೂ ಏರಿಕೆ

ಇಂಡಿಯಾ ಸಿಮೆಂಟ್ಸ್ ಮಾರ್ಚ್‌ ಗೆ ಕೊನೆಗೊಂಡ ಮೂರು ತಿಂಗಳಲ್ಲಿ 23.7 ಕೋಟಿ ರೂಪಾಯಿ ನಷ್ಟವನ್ನು ವರದಿ ಮಾಡಿದೆ. ಹಿಂದಿನ ವರ್ಷದ ಲಾಭ 71.6 ಕೋಟಿ ರೂಪಾಯಿಯಾಗಿತ್ತು. ಕಾರ್ಯಾಚರಣೆಗಳ ಆದಾಯ ರೂ.1,449.62 ಕೋಟಿಯಿಂದ ರೂ.1,391.99 ಕೋಟಿಗೆ ಇಳಿದಿದೆ. ಸಿಮೆಂಟ್ ಸರಾಸರಿ ಬೆಲೆ ಒಂದು ಚೀಲಕ್ಕೆ 360 ರಿಂದ 400 ರೂ. ಏರಿಕೆಯಾಗಲಿದೆ. ಬೇರೆ ಕಂಪನಿಗಳು ಬೆಲೆ ಏರಿಕೆ ಮಾಡುತ್ತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಅವರ ವ್ಯವಹಾರದ ಬಗ್ಗೆ ನಾವು ಹೇಳಿಕೆ ನೀಡಲು ಆಗಲ್ಲ ಎಂದರು.

ಇದನ್ನೂ ಓದಿ:  Donkey Milk Business: ಕತ್ತೆ ಹಾಲಿನಿಂದ ಕೋಟ್ಯಾಧಿಪತಿ ಆದ ಯುವಕ! ಕತ್ತೆ ಎಂದು ಮೂದಲಿಸುವ ಮುನ್ನ ಎಚ್ಚರ

14 ಮಿಲಿಯನ್ ಟನ್ ಸಾಮರ್ಥ್ಯ

ಇಂಡಿಯಾ ಸಿಮೆಂಟ್ಸ್ ಏಳು ಸ್ಥಾವರಗಳಿಂದ 14 ಮಿಲಿಯನ್ ಟನ್ ಸಾಮರ್ಥ್ಯದೊಂದಿಗೆ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಸಿಮೆಂಟ್ ಉತ್ಪಾದಕವಾಗಿದೆ. ಮೇ 27 ರಂದು ಬೆಂಚ್‌ ಮಾರ್ಕ್ ಸೆನ್ಸೆಕ್ಸ್ 1.2 ಶೇಕಡಾವನ್ನು ಗಳಿಸಿದಾಗ ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 4 ಶೇಕಡಾ ಕುಸಿದು 162.65 ರೂ.ಗೆ ತಲುಪಿವೆ.

ಸಿಮೆಂಟ್ ಬೆಲೆ ಇಳಿಕೆಗೆ ಕ್ರಮ ಅಂದಿದ್ರು ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman), ದೇಶದಲ್ಲಿ ಸಿಮೆಂಟ್ ಲಭ್ಯತೆಯನ್ನು ಸುಧಾರಿಸಲು ಮತ್ತು ಉತ್ತಮ ಸಾಗಣೆ ವ್ಯವಸ್ಥೆಯ ಮೂಲಕ ಸಿಮೆಂಟ್ ಬೆಲೆಯನ್ನು (Cement Price) ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸೀತಾರಾಮನ್ ತಮ್ಮ ಘೋಷಣೆಯಲ್ಲಿ ಮಾಹಿತಿ ನೀಡಿದ್ದರು.

ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕ ಇಳಿಕೆ:

ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ ₹ 8 ಮತ್ತು ಡೀಸೆಲ್‌ಗೆ  ₹ 6 ರಷ್ಟು ಕಡಿಮೆ ಮಾಡುತ್ತಿದ್ದೇವೆ. ಇದರಿಂದ ಪೆಟ್ರೋಲ್ ದರ ಲೀಟರ್‌ಗೆ ₹9.5 ಮತ್ತು ಡೀಸೆಲ್‌ಗೆ ₹7 ಇಳಿಕೆ ಆಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:  Home Loans: ಹೊಸ ಮನೆ ಖರೀದಿ ಮಾಡುವವರಿಗೆ ಶಾಕ್ ನೀಡಲಿದೆಯೇ ರಿಸರ್ವ್ ಬ್ಯಾಂಕ್?

ಸಿಲೆಂಡರ್‌ಗೆ 200 ರೂಪಾಯಿ ಸಬ್ಸಿಡಿ:

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸುಮಾರು 9 ಕೋಟಿ ಫಲಾನುಭವಿಗಳಿಗೆ ಪ್ರತಿ ಸಿಲೆಂಡರ್‌ಗೆ 200 ರೂಪಾಯಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್‌ಗೆ ₹ 200 ಸಬ್ಸಿಡಿ ನೀಡುತ್ತೇವೆ. ಇದು ನಮ್ಮ ದೇಶದ ಪ್ರತಿ ಮನೆಯ ತಾಯಂದಿರಿಗೆ, ಸಹೋದರಿಯರಿಗೆ ಸಹಾಯ ಮಾಡುತ್ತದೆ ಎಂದು ಘೋಷಣೆ ಮಾಡಿದ್ದಾರೆ.
Published by:Mahmadrafik K
First published: