ಕೇಂದ್ರ ಬಜೆಟ್ 2023ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ನೂತನ ತೆರಿಗೆ ಸ್ಲ್ಯಾಬ್‌ಗಳನ್ನು ವಿವರಿಸಿದ್ದು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷರೂ ಗೆ ಹೆಚ್ಚಳ ಮಾಡಿದ್ದಾರೆ. ತೆರಿಗೆ (Tax) ಉಳಿಸುವ ಸಾಧನಗಳಲ್ಲಿ ಹೆಚ್ಚು ಹೂಡಿಕೆ ಮಾಡುವವರಿಗೆ ಬಜೆಟ್ 2023ರ ನಂತರದ ಯಾವ ಯೋಜನೆಯು ಉಪಯುಕ್ತ ಎಂಬ ಪ್ರಶ್ನೆ ಈಗ ಮೂಡಿದೆ. ಹಾಗಾದರೆ ಹೊಸ ತೆರಿಗೆ (New Tax) ವ್ಯವಸ್ಥೆಯಲ್ಲಿ ಎಲ್ಲೆಲ್ಲಿ ಎಷ್ಟು ತೆರಿಗೆ ಉಳಿತಾಯವಾಗುತ್ತದೆ ಎಂಬುವುದನ್ನು ನೋಡೋಣ.
ಹೊಸ ತೆರಿಗೆ ಪದ್ಧತಿ ಏನು?
ಈಗ ಎಲ್ಲರಿಗೂ ತಿಳಿದಿರುವಂತೆ ಹೊಸ ತೆರಿಗೆ ಘೊಷಣೆ ಒಬ್ಬರು ಹೊಸ ಅಥವಾ ಹಳೆಯ ಆದಾಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳಬೇಕೇ ಎಂದು ನಿರ್ಧರಿಸಲು ಸುಲಭವಾಗುತ್ತದೆ.
ಹೊಸ ಆದಾಯ ತೆರಿಗೆ ಯೋಜನೆಯಲ್ಲಿ ವಾರ್ಷಿಕ 7.5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿ ಯಾವುದೇ ತೆರಿಗೆ ಪಾವತಿಸುವ ನಿಯಮ ಇರುವುದಿಲ್ಲ. ಅಂದರೆ ವಾರ್ಷಿಕ ಆದಾಯ ರೂ.7 ಲಕ್ಷಕ್ಕಿಂತ ಕಡಿಮೆ ಇದ್ದರೆ ರಿಯಾಯಿತಿ ಸಿಗುತ್ತದೆ ಹಾಗಾಗಿ ತೆರಿಗೆ ಕಟ್ಟುವ ಅಗತ್ಯವಿಲ್ಲ.
ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಅನ್ವಯ
15.5 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಆದಾಯವನ್ನು ವೇತನದಿಂದ ಪಡೆಯುವವರಿಗೆ ₹ 52,500 ಸ್ಟಾಂಡರ್ಡ್ ಡಿಡಕ್ಷನ್ ಸೌಲಭ್ಯ ಸಿಗಲಿದೆ. ಈ ಸ್ಟ್ಯಾಂಡರ್ಡ್ ಡಿಡಕ್ಷನ್ ಈಗ ಹೊಸ ಆದಾಯ ತೆರಿಗೆ ಆಡಳಿತದಲ್ಲಿ ಜನರಿಗೆ ಅನ್ವಯಿಸುತ್ತದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಈ ಹಿಂದೆ ಹಳೆಯ ಆದಾಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡವರಿಗೆ ಮಾತ್ರ ಲಭ್ಯವಿತ್ತು. ಸರಳವಾಗಿ ಹೇಳುವುದಾದರೆ ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡವರಿಗೆ ಲಭ್ಯವಿರುವ ರೂ.50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೂ ಅನ್ವಯಿಸುತ್ತದೆ.
ಹೊಸ ಆದಾಯ ತೆರಿಗೆ ದರಗಳು
ಪರಿಷ್ಕರಿಸಿದ ರಿಯಾಯಿತಿ ತೆರಿಗೆ ಪದ್ಧತಿಯ ಅಡಿಯಲ್ಲಿ, 3 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ 3 ರಿಂದ 6 ಲಕ್ಷದವರಿಗೆ ಶೇ.5 ರಷ್ಟು ತೆರಿಗೆ, 6 ರಿಂದ 9 ಲಕ್ಷದವರಿಗೆ ಶೇ.10 ರಷ್ಟು ತೆರಿಗೆ, 9 ರಿಂದ 12 ಲಕ್ಷದವರಿಗೆ ಶೇ.15 ರಷ್ಟು ತೆರಿಗೆ, 12 ರಿಂದ 15 ಲಕ್ಷದವರಿಗೆ ಶೇ. 20 ರಷ್ಟು ತೆರಿಗೆ, 15 ಲಕ್ಷದಿಂದ ಮೇಲ್ಪಟ್ಟ ಮೊತ್ತಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಆದಾಯ 9 ಲಕ್ಷ ಇದ್ದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಎಷ್ಟು ಹಣ ಉಳಿಸಬಹುದು?
ಉದಾಹರಣೆಗೆ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ, ವರ್ಷಕ್ಕೆ 9 ಲಕ್ಷ ರೂಪಾಯಿ ಆದಾಯ ಗಳಿಸುವವರು ಶೇಕಡಾ 5 ರಷ್ಟು ತೆರಿಗೆ ಅಂದರೆ 45,000 ರೂ ಕಟ್ಟಬೇಕಾಗುತ್ತದೆ.
ಈ ಹಿಂದೆ ಇದೇ ತೆರಿಗೆ 60,000 ರೂ. ಗಳಾಗಿತ್ತು. ಹೀಗಾಗಿ ಹೊಸ ತೆರಿಗೆ ಪದ್ಧತಿಯಲ್ಲಿ ನೀವು 15,000 ಉಳಿಸಬಹುದಾಗಿದೆ. ವರ್ಷಕ್ಕೆ 15 ಲಕ್ಷದವರೆಗೆ ಆದಾಯ ಹೊಂದಿರುವವರು 10 ಶೇಕಡಾ ತೆರಿಗೆಯನ್ನು ವಿಧಿಸುತ್ತಾರೆ ಮತ್ತು 1.5 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ.
ಹಿಂದೆ ಇದೇ ತೆರಿಗೆ 1.87 ಲಕ್ಷ ರೂ ಆಗಿತ್ತು. ಆದರೆ ಈಗ ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆದಾರರು 20% ಉಳಿಸಬಹುದಾಗಿದೆ. ಆದ್ದರಿಂದ, ತೆರಿಗೆ ಉಳಿಸುವ ಹೂಡಿಕೆಗಳ ಮೇಲೆ ಒಲವು ತೋರದವರಿಗೆ, ಹೊಸ ಆಡಳಿತಕ್ಕೆ ಬದಲಾಯಿಸುವುದು ಸೂಕ್ತ ಕ್ರಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Railways Subsidy: ರೈಲು ಪ್ರಯಾಣಿಕರಿಗೊಂದು ಭಾರಿ ಸಂತಸದ ಸುದ್ದಿ!
ಹೊಸ ತೆರಿಗೆ ಪದ್ಧತಿಯಲ್ಲಿ 15 ಲಕ್ಷ ರೂ.ಗಳ ವಾರ್ಷಿಕ ಆದಾಯದ ಮೇಲೆ ಒಬ್ಬ ವ್ಯಕ್ತಿಯು ತೆರಿಗೆಯಲ್ಲಿ ಗರಿಷ್ಠ 1.12 ಲಕ್ಷ ರೂಗಳನ್ನು ಉಳಿಸಬಹುದು ಒಬ್ಬ ವ್ಯಕ್ತಿಯು ತೆರಿಗೆ-ಉಳಿತಾಯ ಸಾಧನಗಳಲ್ಲಿ ಭಾರೀ ಹೂಡಿಕೆಯನ್ನು ಮಾಡಿದ್ದರೆ, ಹಳೆಯ ಆದಾಯ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವುದು ಇನ್ನೂ ಸೂಕ್ತ ಎಂದು ತಜ್ಞರು ಒಮ್ಮತ ಅಭಿಪ್ರಾಯ ಪಟ್ಟಿದ್ದಾರೆ.
ಗೃಹ ಸಾಲ ಪಾವತಿಸಿದ ಬಡ್ಡಿಯ ಮೇಲೆ 2 ಲಕ್ಷ ಸೇವ್
ಇನ್ನೂ ಸೆಕ್ಷನ್ 24 ಬಿ ಅಡಿಯಲ್ಲಿ ಗೃಹ ಸಾಲಕ್ಕೆ ಪಾವತಿಸಿದ ಬಡ್ಡಿಯ ಮೇಲೆ ತೆರಿಗೆದಾರರು 2 ಲಕ್ಷ ರೂಪಾಯಿಗಳನ್ನು ಉಳಿಸಬಹುದು. ಹಾಗೆಯೇ ಮ್ಯೂಚುವಲ್ ಫಂಡ್‌ಗಳು ಮತ್ತು ಈಕ್ವಿಟಿ-ಲಿಂಕ್ಡ್ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯ ವಿರುದ್ಧ 1.5 ಲಕ್ಷ ರೂಪಾಯಿಗಳ ಕಡಿತವನ್ನು ಪಡೆಯಬಹುದಾಗಿದೆ.
ಆರೋಗ್ಯ ವಿಮೆಯಲ್ಲಿ 50,000 ರೂ ಉಳಿತಾಯ
80 ಡಿ ಅಡಿಯಲ್ಲಿ ಹೊಸ ಬಜೆಟ್‌ನಲ್ಲಿ 50,000 ರೂ.ಗಳನ್ನು ಆರೋಗ್ಯ ವಿಮೆಯಲ್ಲಿ ಉಳಿಸಬಹುದು. ಹೆಚ್ಚುವರಿಯಾಗಿ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆಯಿಂದ 50,000 ರೂಪಾಯಿಗಳನ್ನು ಉಳಿಸಬಹುದು.
ಈ ಉಳಿತಾಯವು 80CCD ಅಡಿಯಲ್ಲಿ ಬರುತ್ತದೆ. ಅಲ್ಲದೆ, 50,000 ರೂಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇದೆ. ಎಲ್ಲಾ ತೆರಿಗೆ-ಉಳಿತಾಯ ಸಾಧನಗಳನ್ನು ಬಳಸುವ ಮೂಲಕ ಒಬ್ಬ ವ್ಯಕ್ತಿಯು ರೂ 3.74 ಲಕ್ಷದವರೆಗೆ ಉಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ