ಭಾರತದಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಐಟಿ ಇಲಾಖೆ (IT Department) ಹೊಸದಾಗಿ ಒಂದು ನಿಯಮವನ್ನು ಜಾರಿಗೆ ತಂದಿದೆ. ಈಗಾಗ್ಲೇ ಈ ನಿಯಮವನ್ನು ಜಾರಿ ಮಾಡಿ ನಾಲ್ಕೈದು ತಿಂಗಳಾಗಿದೆ. ಆದರೂ ಸಹ ಕೆಲವರಿಗೆ ಈ ಹೊಸ ನಿಯಮದ ಬಗ್ಗೆ ಗೊತ್ತಿಲ್ಲ. ಹೀಗಾಗಿ ಅದರ ಬಗ್ಗೆ ಮತ್ತೊಮ್ಮೆ ಕಣ್ಣಾಡಿಸಿ ಬರೋಣ ಬನ್ನಿ. ಮೊದಲೆಲ್ಲಾ ತೆರಿಗೆದಾರರು ರಿಟರ್ನ್ (IT Returns) ಅನ್ನು ಪರಿಶೀಲಿಸಲು ಮತ್ತು ಆದಾಯದ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 120 ದಿನಗಳನ್ನು ಹೊಂದಿದ್ದರು. ಆದರೆ ಇದೀಗ ಆ ಬಹುದಿನಗಳನ್ನು ಕಡಿತ ಗೊಳಿಸಿದ್ದು, ಕೇವಲ 30 ದಿನಗಳಿಗೆ ಇಳಿಕೆ ಮಾಡಿದೆ.
ಹೌದು, ಮೊದಲು ಆನ್ಲೈನ್ನಲ್ಲಿ ಒಬ್ಬರು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಿದ ನಂತರ, ತೆರಿಗೆದಾರರು ರಿಟರ್ನ್ ಅನ್ನು ಪರಿಶೀಲಿಸಲು ಮತ್ತು ಆದಾಯದ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 120 ದಿನಗಳ ಸಮಯವನ್ನು ಪಡೆಯುತ್ತಿದ್ದರು. ಆದರೆ ಪ್ರಸ್ತುತ ಆದಾಯ ತೆರಿಗೆ ಇಲಾಖೆಯು ಜುಲೈ 31, 2022ರ ನಂತರ ಆನ್ಲೈನ್ನಲ್ಲಿ ಸಲ್ಲಿಸಿದ ಐಟಿಆರ್ಗಳಿಗೆ ಸಮಯ ಮಿತಿಯನ್ನು ಕೇವಲ 30 ದಿನಗಳಿಗೆ ಇಳಿಸಿದ್ದು, ಅವಧಿ ಮುಕ್ತಾಯ ಮುನ್ನ ತೆರಿಗೆದಾರರು ಇದಕ್ಕೆ ಸಂಬಂಧಿಸಿದಂತೆ ಕೆಲಗಳನ್ನು ಮಾಡಿಕೊಳ್ಳಬಹುದು.
ಆಗಸ್ಟ್ 1ರಿಂದ ಜಾರಿಗೆ ಬಂದಿದೆ ನಿಯಮ
ಆಗಸ್ಟ್ 1ರಿಂದ ಈ ಹೊಸ ನೀತಿ ಜಾರಿಗೆ ಬಂದಿದ್ದು, 30 ದಿನಗಳಲ್ಲಿ ಆದಾಯ ತೆರಿಗೆ ಮರುಪಾವತಿಯನ್ನು ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.
ಐಟಿ ಇಲಾಖೆ ಅಧಿಸೂಚನೆಯಲ್ಲಿ ಏನು ಹೇಳಿದೆ?
"ಈ ಅಧಿಸೂಚನೆಯ ದಿನಾಂಕದಂದು ಅಥವಾ ನಂತರದ ದಿನಾಂಕದಂದು ಯಾವುದೇ ಎಲೆಕ್ಟ್ರಾನಿಕ್ ರಿಟರ್ನ್ ಡೇಟಾಗೆ ಸಂಬಂಧಿಸಿದಂತೆ, ಇ-ಪರಿಶೀಲನೆ ಅಥವಾ ITR-V ಸಲ್ಲಿಕೆಗೆ ಸಮಯ-ಮಿತಿಯು ದಿನಾಂಕದಿಂದ 30 ದಿನಗಳು ಎಂದು ನಿರ್ಧರಿಸಲಾಗಿದೆ. ರಿಟರ್ನ್ನ ಡೇಟಾವನ್ನು ಆನ್ ಲೈನ್ ಮೂಲಕ ರವಾನಿಸುವುದು ಅಥವಾ ಅಪ್ಲೋಡ್ ಮಾಡುವುದು," ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಇಲ್ಲಿಯವರೆಗೆ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಿದ ನಂತರ ITR ಅನ್ನು ಇ-ಪರಿಶೀಲಿಸಲು ಅಥವಾ ITR-V ಅನ್ನು ಪೋಸ್ಟ್ ಮೂಲಕ ಕಳುಹಿಸುವ ಸಮಯಾವಧಿಯು ITR ಅನ್ನು ಅಪ್ಲೋಡ್ ಮಾಡಿದ ದಿನಾಂಕದಿಂದ 120 ದಿನಗಳಾಗಿತ್ತು.
"ದೀರ್ಘಕಾಲದಿಂದ ಕಡಿಮೆ ಅವಧಿಗೆ ಮೊದಲ ಬಾರಿಗೆ ಇಳಿಕೆ ಮಾಡಲಾಗಿದೆ"
“ಜುಲೈ 31, 2022ರ ಮೊದಲು ಸಲ್ಲಿಸಿದ ಎಲ್ಲಾ ರಿಟರ್ನ್ಸ್ಗಳಿಗೆ, ಇ-ಪರಿಶೀಲನೆಯ ಸಮಯದ ಮಿತಿಯು ಫೈಲಿಂಗ್ ದಿನಾಂಕದಿಂದ 120 ದಿನಗಳು ಆಗಿತ್ತು. ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ ರಿಟರ್ನ್ (ITR) ನ ಇ-ಪರಿಶೀಲನೆಯ ಸಮಯ ಮಿತಿಯನ್ನು ಆಗಸ್ಟ್ 1 ರಿಂದ ಜಾರಿಗೆ ಬರುವಂತೆ 120 ದಿನಗಳಿಂದ 30 ದಿನಗಳವರೆಗೆ ಕಡಿಮೆ ಮಾಡಲಾಗಿದೆ ಎಂದು ಘೋಷಿಸಿದೆ. ಇ-ಪರಿಶೀಲನೆಯ ಸಮಯದ ಮಿತಿಯನ್ನು ದೀರ್ಘಕಾಲದಿಂದ ಕಡಿಮೆ ಅವಧಿಗೆ ಮೊದಲ ಬಾರಿಗೆ ಕಡಿಮೆ ಮಾಡಲಾಗಿದೆ” ಎಂದು ಕ್ಲಿಯರ್ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಪ್ರಕ್ರಿಯೆ ಬಗ್ಗೆ ತಿಳಿಸಿದ್ದಾರೆ.
ಗಡುವು ಮಿಸ್ ಆದರೆ ದಂಡ
"ಆದಾಯ ತೆರಿಗೆ ಇಲಾಖೆಯು ಜುಲೈ 29ರಂದು ಅಧಿಸೂಚನೆ ಹೊರಡಿಸಿದ್ದು, ಕಾಲಮಿತಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಮರುಪಾವತಿ(ITR)ಯ ಇ-ಪರಿಶೀಲನೆಯು ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
ಇದನ್ನೂ ಓದಿ: Research: ಪತಿ-ಪತ್ನಿಯರಿಬ್ಬರೂ ಹಣಕಾಸು ಯೋಜನೆಯಲ್ಲಿ ತೊಡಗಿಸಿಕೊಂಡರೆ ಸಂಸಾರ ಸುಖಸಾಗರ!
ಅದನ್ನು ನಿಗದಿತ ಸಮಯದೊಳಗೆ ಮಾಡದಿದ್ದರೆ, ಐಟಿಆರ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ತೆರಿಗೆದಾರರು ಮರು-ಫೈಲ್ ಮಾಡಬೇಕಾಗಬಹುದು. ಇ-ಪರಿಶೀಲನೆಯನ್ನು ಸಮಯೋಚಿತವಾಗಿ ಪೂರ್ಣಗೊಳಿಸಿದ ತೆರಿಗೆದಾರರು ಸಕಾಲಿಕ ಆಧಾರದ ಮೇಲೆ ಮರುಪಾವತಿಯನ್ನು ಸ್ವೀಕರಿಸುತ್ತಾರೆ. ಆದಾಗ್ಯೂ, ತೆರಿಗೆದಾರರು ಗಡುವನ್ನು ತಪ್ಪಿಸಿಕೊಂಡರೆ, ಅವರು ಹೆಚ್ಚುವರಿ ತೆರಿಗೆ ಮತ್ತು ದಂಡವನ್ನು ಭರಿಸಬೇಕಾಗುತ್ತದೆ, ”ಎಂದು ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: Money Mantra: ಈ ರಾಶಿಯವರಿಗಿಂದು ಆಫೀಸ್ನಲ್ಲಿ ಕಾದಿದೆ ಗುಡ್ ನ್ಯೂಸ್, ಬೇಡ ಬೇಡ ಅಂದ್ರೂ ಪ್ರಮೋಷನ್ ಸಿಗುತ್ತಂತೆ!
ಸಕಾಲಿಕ ಪರಿಶೀಲನೆಯು ಆದಾಯ ತೆರಿಗೆ ಇಲಾಖೆಯಿಂದ ವರ್ಷದ ಎಲ್ಲಾ ರಿಟರ್ನ್ಸ್ಗಳ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಅಷ್ಟೇ ಅಲ್ಲ, ರಿಟರ್ನ್ ಫೈಲಿಂಗ್ನಲ್ಲಿ ಸಹಾಯ ಮಾಡುವ ತೆರಿಗೆ ತಜ್ಞರು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳು ರಿಟರ್ನ್ ಫೈಲಿಂಗ್ ಪೂರ್ಣಗೊಂಡ ನಂತರ ಇತರ ಅನುಸರಣೆ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಹೆಚ್ಚಿನ ಸಮಯವನ್ನು ಹೊಂದಿರುತ್ತಾರೆ. ಒಟ್ಟಾರೆಯಾಗಿ, ಇದು ಸಂಪೂರ್ಣ ಪ್ರಯೋಜನಕಾರಿಯಾಗಿದೆ ಎಂದು ಹೊಸ ನಿಯಮವನ್ನು ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ