IT Returns: 2021 ಮುಗಿಯುವುದರೊಳಗೆ ಕಡ್ಡಾಯವಾಗಿ ಈ ಕೆಲಸ ಮಾಡಿ ಮುಗಿಸಿ..!

Demat and trading account: ಪ್ರಸ್ತುತ ಆಧಾರ್ ಕಾರ್ಡ್ ಲಿಂಕ್ ಎಲ್ಲಾದಕ್ಕೂ ಕಡ್ಡಾಯವಾಗಿದೆ. ಬ್ಯಾಂಕ್ ನಿಂದ ಹಿಡಿದು ಕಾರ್ಡ್ ವರೆಗೂ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ. ಹೀಗಾಗಿಯೇ ಕೇಂದ್ರ ಸರ್ಕಾರ ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಆಧಾರ್ ಕಾರ್ಡ್ ನಲ್ಲಿ ಮಾಡಲು ಸೂಚನೆ ನೀಡಿತ್ತು.. ಹೀಗಾಗಿ ಡಿಸೆಂಬರ್ 31ರವರೆಗೆ ನಿಮ್ಮ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿ ನಾಮಿನಿ ಹೆಸರನ್ನು ನೊಂದಾವಣೆ ಮಾಡಲು ಕಡೆಯ ದಿನವಾಗಿದೆ

ಸಾಂದಾರ್ಭಿಕ ಚಿತ್ರ

ಸಾಂದಾರ್ಭಿಕ ಚಿತ್ರ

 • Share this:
  ವರ್ಷ(year) ಆರಂಭವಾಗಲು(Start) ಕೆಲವೇ ಕೆಲವು ದಿನ ಬಾಕಿ ಇದೆ.. ಈ ಹೊಸವರ್ಷದಲ್ಲಿ ಮಾಡಬೇಕಾದ ಕೆಲಸಗಳು(Work ಸಹ ಸಾಕಷ್ಟು ಇವೆ.. ವರ್ಷಾಂತ್ಯದಲ್ಲಿ ಹೊಸವರ್ಷ(New Year) ಪ್ರಾರಂಭ ಮಾಡಲು ಕೆಲವೊಂದಷ್ಟು ಕೆಲಸಗಳನ್ನು ಕಡ್ಡಾಯವಾಗಿ ಮಾಡಲೇಬೇಕು. ಅದರಲ್ಲೂ ಸರ್ಕಾರ(Government) ಜಾರಿಗೆ ತಂದಿರುವ ಹಲವು ನಿಯಮಗಳನ್ನು(Rules) ಈ ವರ್ಷ ಮುಗಿಯುವುದರೊಳಗೆ ಮಾಡದೇ ಇದ್ದರೆ ಅದು ಹೊಸ ವರ್ಷದಲ್ಲಿ ನಿಮಗೆ ಸಂಕಷ್ಟ ತಂದುಬಿಡಬಹುದು. ಹೀಗಾಗಿಯೇ 2021 ಮುಗಿದು 2022 ಆರಂಭವಾಗುವ ವೇಳೆಗೆ ನೀವು ಈ ಕೆಲಸಗಳನ್ನು ಮಾಡಿ ಮುಗಿಸುವುದು ಉತ್ತಮ.

  1)ಐಟಿ ರಿಟರ್ನ್ಸ್: ಕೊರೊನಾ ಮಹಾಮಾರಿ ಇಂದ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಕೊಂಚ ನೆಮ್ಮದಿ ನೀಡಲು ಕೇಂದ್ರ ಸರ್ಕಾರ 2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಜೊತೆಗೆ ಜನರಿಗೆ ಮತ್ತಷ್ಟು ಹೆಚ್ಚು ಗಡುವು ನೀಡಲು ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ತಾಂತ್ರಿಕ ತೊಂದರೆಗಳದ ಕಾರಣ ಇನ್ನೊಮ್ಮೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಬಾಗಿ 2 ಬಾರಿ ಅವಧಿ ವಿಸ್ತರಣೆಯ ಬಳಿಕ ಕೊನೆಯದಾಗಿ ಡಿಸೆಂಬರ್ 31 2021 ರೊಳಗೆ 2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಕಲಿಸಬೇಕು ಎಂದು ಆದೇಶ ಮಾಡಿತ್ತು.. ಹೀಗಾಗಿ ನೀವು ಡಿಸೆಂಬರ್ 31ರೊಳಗೆ ಐಟಿ ರಿಟರ್ನ್ಸ್ ಮಾಡದೇ ಇದ್ದರೆ, ನೀವು ಐಟಿ ರಿಟರ್ನ್ಸ್ ಮಾಡಲು ಕಡ್ಡಾಯವಾಗಿ ದಂಡ ಪಾವತಿ ಮಾಡಲು ಬೇಕಾಗುವುದು.

  ಇದನ್ನೂ ಓದಿ: ಹವಾಮಾನ ಇಲಾಖೆ ಘೋಷಿಸುವ ರೆಡ್, ಗ್ರೀನ್, ಯೆಲ್ಲೋ ಅಲರ್ಟ್​ಗಳ ಅರ್ಥವೇನು?

  2)ಪಿಎಫ್ ಖಾತೆಗೆ ಆಧಾರ್‌ ಲಿಂಕ್: ಪ್ರಸ್ತುತ ಆಧಾರ್ ಕಾರ್ಡ್ ಲಿಂಕ್ ಎಲ್ಲಾದಕ್ಕೂ ಕಡ್ಡಾಯವಾಗಿದೆ. ಬ್ಯಾಂಕ್ ನಿಂದ ಹಿಡಿದು ಕಾರ್ಡ್ ವರೆಗೂ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ. ಹೀಗಾಗಿಯೇ ಕೇಂದ್ರ ಸರ್ಕಾರ ಉದ್ಯೋಗಿಗಳ ಭವಿಷ್ಯನಿಧಿ ಖಾತೆಗೆ ಆಧಾರ್ ಕಾರ್ಡ್ ನಲ್ಲಿ ಮಾಡಲು ಸೂಚನೆ ನೀಡಿತ್ತು.. ಹೀಗಾಗಿ ಡಿಸೆಂಬರ್ 31ರವರೆಗೆ ನಿಮ್ಮ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿ ನಾಮಿನಿ ಹೆಸರನ್ನು ನೊಂದಾವಣೆ ಮಾಡಲು ಕಡೆಯ ದಿನವಾಗಿದೆ. ಒಂದು ವೇಳೆ ಇಪಿಎಫ್ ಖಾತೆಯನ್ನು ಆಧಾರ ನೊಂದಿಗೆ ಲಿಂಕ್ ಮಾಡದೇ ಇದ್ದರೆ ಖಾತೆದಾರರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು.

  3)ಪಿಂಚಣಿಗಾಗಿ ಜೀವನ ಪ್ರಮಾಣ: ಹಣಕಾಸು ವಿಷಯಕ್ಕೆ ಸಂಬಂಧಪಟ್ಟಂತೆ 2021ರ ಡಿಸೆಂಬರ್ 31ರೊಳಗೆ ಹಲವು ಮಹತ್ವದ ಕೆಲಸಗಳನ್ನು ಮಾಡಲು ಆದೇಶ ನೀಡಿರುವ ಕೇಂದ್ರ ಸರಕಾರ ಪಿಂಚಣಿ ಪಡೆಯುವವರು ಕೂಡ ತಮ್ಮ ಪಿಂಚಣಿ ಪಡೆಯಲು ಜೀವನ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದೆ. ಸರ್ಕಾರಿ ಸೇವೆಯಿಂದ ನಿವೃತ್ತರಾದ ಪಿಂಚಣಿದಾರರು ಪ್ರತಿವರ್ಷ ನವೆಂಬರ್ 30ರ ಮೊದಲು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಿತ್ತು.ಆದರೆ ಈ ವರ್ಷ ಕೊನೆಯ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.ಹೀಗಾಗಿ ಕೊನೆಯ ದಿನಾಂಕದೊಳಗೆ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ, ಪಿಂಚಣಿ ನಿಲ್ಲಿಸಬಹುದು.

  ಇದನ್ನೂ ಓದಿ: ಜನವರಿ 3 ರಿಂದ 15ರಿಂದ 18ವರ್ಷದ ಮಕ್ಕಳಿಗೆ ಲಸಿಕೆ; ಪ್ರಧಾನಿ ಮೋದಿ ಘೋಷಣೆ

  4)ಡಿಮ್ಯಾಟ್-ಟ್ರೇಡಿಂಗ್ ಖಾತೆಗಾಗಿ KYC ಮಾಡಿ: ಪ್ರಸ್ತುತ ಹೆಚ್ಚು ಜನರು ಟ್ರೇಡಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಡಿ ಮ್ಯಾಟ್ ಟ್ರೇಡಿಂಗ್ ಅಕೌಂಟ್ ಮೂಲಕ ಹೆಚ್ಚು ವಹಿವಾಟು ನಡೆಸುತ್ತಿರುವುದರಿಂದ
  ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗಳ KYC ನಡೆಸಲು SEBI ಕೊನೆಯ ದಿನಾಂಕವನ್ನು 30 ಸೆಪ್ಟೆಂಬರ್‌ನಿಂದ 31 ಡಿಸೆಂಬರ್ 2021 ರವರೆಗೆ ವಿಸ್ತರಿಸಿದೆ. ಅದರಂತೆ KYC ಅಡಿಯಲ್ಲಿ, ಹೆಸರು, ವಿಳಾಸ, ಪ್ಯಾನ್ ಕಾರ್ಡ್ ಸಂಖ್ಯೆ, ಪ್ರಸ್ತುತ ಮೊಬೈಲ್ ಸಂಖ್ಯೆ, ವಯಸ್ಸು, ಸರಿಯಾದ ಇಮೇಲ್ ಐಡಿ ಮುಂತಾದ ಮಾಹಿತಿಯನ್ನು ನವೀಕರಿಸಬೇಕು. KYC ಮಾಡಲು ವಿಫಲವಾದರೆ ಖಾತೆ ಮುಚ್ಚುವಿಕೆಗೆ ಕಾರಣವಾಗಬಹುದು.
  Published by:ranjumbkgowda1 ranjumbkgowda1
  First published: