• Home
  • »
  • News
  • »
  • business
  • »
  • ITR Filing: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಹೊಸ ಫೀಚರ್; ಐಟಿಆರ್ ಫೈಲ್ ಮಾಡುವಾಗ ಬಳಸಿ

ITR Filing: ಆದಾಯ ತೆರಿಗೆ ಪೋರ್ಟಲ್​ನಲ್ಲಿ ಹೊಸ ಫೀಚರ್; ಐಟಿಆರ್ ಫೈಲ್ ಮಾಡುವಾಗ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಹೊಸ ವೈಶಿಷ್ಟ್ಯದೊಂದಿಗೆ, ಏಜೆಂಟರು ತೆರಿಗೆದಾರರ ಬ್ರೌಸರ್ ಪರದೆಯನ್ನು ವೀಕ್ಷಿಸಬಹುದು ಮತ್ತು ಸುರಕ್ಷಿತವಾಗಿ ಸಹ-ನ್ಯಾವಿಗೇಟ್ ಮಾಡಬಹುದು ಮತ್ತು ನೈಜ ಸಮಯದಲ್ಲಿ ಬೆಂಬಲವನ್ನು ನೀಡಲು ಸಂವಾದಾತ್ಮಕವಾಗಿ ಮಾರ್ಗದರ್ಶನ ನೀಡಬಹುದು.

  • Share this:

ಈಗಾಗಲೇ ‘ಬೇಗನೆ ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ (ITR Filing) ಮಾಡಿ’ ಅಂತ ಅನೇಕ ಸುದ್ದಿಗಳನ್ನು ನೋಡುತ್ತಿದ್ದೇವೆ ಮತ್ತು ಇದಕ್ಕೆ ಅಂತಿಮ ಗಡುವು ಅಂತ ಡಿಸೆಂಬರ್ 31 ಅಂತ ನೀಡಿರುವುದು ಸಹ ಬಹುತೇಕ ತೆರಿಗೆದಾರರಿಗೆ (Tax Payers) ತಿಳಿದ ವಿಚಾರವಾಗಿದೆ. ಆದರೆ ಎಷ್ಟೋ ಜನ ಹೊಸ ತೆರಿಗೆದಾರರಿಗೆ (New Tax Payers) ಇದನ್ನು ಹೇಗೆ ಫೈಲ್ ಮಾಡುವುದು ಅಂತ ಅಷ್ಟಾಗಿ ಗೊತ್ತಿರುವುದಿಲ್ಲ. ಹೀಗೆ ನಿಮಗೆ ಈ ವಿಷಯದ ಬಗ್ಗೆ ಗೊತ್ತಿರದೆ ಇದ್ದರೆ, ತುಂಬಾ ಚಿಂತಿಸುವ ಅಗತ್ಯವಿಲ್ಲ. ಇಲ್ಲೊಂದು ಹೊಸ ವಿಚಾರ ನಿಮಗೆ ತಿಳಿಸುತ್ತೇವೆ ನೋಡಿ, ಅದೇನೆಂದರೆ ಐಟಿಆರ್ ಸಲ್ಲಿಸುವಾಗ ಬಳಕೆದಾರರಿಗೆ ಸಹಾಯವಾಗಲೆಂದು ಕೊ-ಬ್ರೌಸಿಂಗ್ (CO-Browsing) ಎಂದರೆ ಸಹ-ಬ್ರೌಸಿಂಗ್ ಮಾಡುವ ವೈಶಿಷ್ಟ್ಯತೆಯನ್ನು ಆದಾಯ ತೆರಿಗೆ ಇಲಾಖೆ ಸಕ್ರಿಯಗೊಳಿಸಿದೆ.


ಈ ಹೊಸ ವೈಶಿಷ್ಟ್ಯದೊಂದಿಗೆ, ಏಜೆಂಟರು ತೆರಿಗೆದಾರರ ಬ್ರೌಸರ್ ಪರದೆಯನ್ನು ವೀಕ್ಷಿಸಬಹುದು ಮತ್ತು ಸುರಕ್ಷಿತವಾಗಿ ಸಹ-ನ್ಯಾವಿಗೇಟ್ ಮಾಡಬಹುದು ಮತ್ತು ನೈಜ ಸಮಯದಲ್ಲಿ ಬೆಂಬಲವನ್ನು ನೀಡಲು ಸಂವಾದಾತ್ಮಕವಾಗಿ ಮಾರ್ಗದರ್ಶನ ನೀಡಬಹುದು.


ಕೊ-ಬ್ರೌಸಿಂಗ್ ಫೀಚರ್ ತೆರಿಗೆದಾರರಿಗೆ ಹೇಗೆ ಸಹಾಯವಾಗುತ್ತದೆ?


ಕೊ-ಬ್ರೌಸಿಂಗ್ ಹೆಲ್ಪ್ ಡೆಸ್ಕ್ ಏಜೆಂಟರು ಒಂದು ಬಟನ್ ಕ್ಲಿಕ್ ಮಾಡಿದಾಗ, ತೆರಿಗೆದಾರರ ಬ್ರೌಸರ್ ನೊಂದಿಗೆ ನೈಜ ಸಮಯದಲ್ಲಿ ಸಹಕರಿಸಲು ಅನುವು ಮಾಡಿಕೊಡುತ್ತದೆ.


ಕೊ-ಬ್ರೌಸಿಂಗ್ ಸೆಷನ್ ಸಮಯದಲ್ಲಿ:


*ಹೆಲ್ಪ್ ಡೆಸ್ಕ್ ಏಜೆಂಟ್ ತೆರಿಗೆದಾರರ ಬ್ರೌಸರ್ ಪರದೆಯ ನಿಖರವಾದ ದೃಶ್ಯ ಪ್ರಾತಿನಿಧ್ಯವನ್ನು ಪಡೆಯುತ್ತಾನೆ.


*ಏಜೆಂಟರು ಪರದೆಯಲ್ಲಿ ಕಾಣಿಸುವ ತೆರಿಗೆದಾರರ ಮಾಹಿತಿಯ ಬಗ್ಗೆ ಟಿಪ್ಪಣಿ ಮಾಡಬಹುದು, ಐಟಿಆರ್ ಫಾರ್ಮ್ ಗಳು, ಇತರ ಶಾಸನಬದ್ಧ ನಮೂನೆಗಳನ್ನು ಭರ್ತಿ ಮಾಡಲು ಸಹಾಯ ಮಾಡಬಹುದು, ಸೆಟ್ಟಿಂಗ್ ಗಳನ್ನು ಬದಲಾಯಿಸಬಹುದು, ವಹಿವಾಟುಗಳನ್ನು ಪೂರ್ಣಗೊಳಿಸಬಹುದು, ತೆರಿಗೆ ಪಾವತಿದಾರರಿಗೆ ಸಹಾಯ ಮತ್ತು ಉಲ್ಲೇಖ ಸಾಮಗ್ರಿಗಳನ್ನು ಹುಡುಕಬಹುದು ಮತ್ತು ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬಹುದು.


*ಏಜೆಂಟರು ತೆರಿಗೆದಾರರಿಗೆ ನ್ಯಾವಿಗೇಟ್ ಮಾಡಲು, ಸ್ಕ್ರಾಲ್ ಮಾಡಲು, ಪಠ್ಯವನ್ನು ಟೈಪ್ ಮಾಡಲು ಮತ್ತು ನೈಜ ಸಮಯದಲ್ಲಿ ಅದೇ ಬ್ರೌಸರ್ ಟ್ಯಾಬ್ ನಲ್ಲಿ ಆಸಕ್ತಿಕರವಾದ ವಿಷಯಗಳನ್ನ ಹೈಲೈಟ್ ಮಾಡಲು ಸಹಾಯ ಮಾಡಬಹುದು.


*ಕೊ-ಬ್ರೌಸಿಂಗ್ ಬಳಸುವುದು ತುಂಬಾನೇ ಸರಳವಾಗಿದೆ. ಗ್ರಾಹಕರ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಲೈವ್ ಚಾಟ್, ಫೋನ್ ನೊಂದಿಗೆ ಇದನ್ನು ಸುಲಭವಾಗಿ ಸಂಯೋಜಿಸಬಹುದು.


ಈ ಹೊಸ ಫೀಚರ್ ಹೇಗೆ ಕೆಲಸ ಮಾಡುತ್ತದೆ?


ತೆರಿಗೆದಾರನು ಸೆಷನ್ ಅನ್ನು ಪ್ರಾರಂಭಿಸಿದಾಗ, ಬ್ರೌಸರ್, ಕೊ-ಬ್ರೌಸರ್ ಪ್ರಾಕ್ಸಿಗೆ ವಿನಂತಿಯನ್ನು ಕಳುಹಿಸುತ್ತದೆ. ನಂತರ ವಿನಂತಿಯನ್ನು ಮೂಲ ವಿನಂತಿಯು corbrowse.incometax.gov.in ಬಂದಂತೆ ಕಾಣುವ ರೀತಿಯಲ್ಲಿ ಮಾರ್ಪಡಿಸಲಾಗುತ್ತದೆ.


ಈ ವಿನಂತಿಯನ್ನು ನಂತರ ಬಳಕೆದಾರನು ಕೊ-ಬ್ರೌಸ್ ಮಾಡಲು ಬಯಸುವ ಮೂಲ ಸೈಟ್ ಗೆ ಕಳುಹಿಸಲಾಗುತ್ತದೆ. ವೆಬ್‌ಸೈಟ್ ಕೊ-ಬ್ರೌಸರ್ ಪ್ರಾಕ್ಸಿಗೆ ಪ್ರತಿಕ್ರಿಯೆಯನ್ನು ಹಿಂದಕ್ಕೆ ಕಳುಹಿಸುತ್ತದೆ.


ಕೊ-ಬ್ರೌಸರ್ ಪ್ರಾಕ್ಸಿ ನಂತರ ಡೇಟಾವನ್ನು ಮಾರ್ಪಡಿಸುತ್ತದೆ, ಇದರಿಂದ ಅದನ್ನು ಮೂಲ ಪುಟದ ಮೇಲೆ ನಿಂತಿರುವ ಇಫ್ರೇಮ್ ಗೆ ಲೋಡ್ ಮಾಡಬಹುದು. ಬಳಕೆದಾರ ಮತ್ತು ಏಜೆಂಟ್ ಇಬ್ಬರೂ ಈಗ ಆ ವೆಬ್‌ಸೈಟ್ ನಲ್ಲಿ ಸಂವಹನ ನಡೆಸುತ್ತಾರೆ. ಏಕೆಂದರೆ ಅದು ಇ-ಫ್ರೇಮ್ ಒಳಗೆ ಲೋಡ್ ಆಗಿರುತ್ತದೆ.


Income tax portal new co-browsing feature stg mrq
ಸಾಂದರ್ಭಿಕ ಚಿತ್ರ


ಈ ಹಂತದಿಂದ, ಬಳಕೆದಾರರ ಬ್ರೌಸರ್ ಮತ್ತು ಪ್ರಾಕ್ಸಿ ನಡುವೆ ಮಾತ್ರ ಸಂವಹನವಿದೆ, ಮತ್ತು ವಿನಂತಿಗಳನ್ನು ಇನ್ನು ಮುಂದೆ ನಿರಂತರವಾಗಿ ಮೂಲ ವೆಬ್‌ಸೈಟ್ ಗೆ ಕಳುಹಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.


ಕೊ-ಬ್ರೌಸಿಂಗ್ ಮಾಡುತ್ತಿರುವ ಏಜೆಂಟ್ ತೆರಿಗೆದಾರರ ಇತರ ಡೇಟಾವನ್ನು ವೀಕ್ಷಿಸಬಹುದೇ?


ಕೋ-ಬ್ರೌಸಿಂಗ್ ಮಾಡುತ್ತಿರುವ ಏಜೆಂಟ್ ತೆರಿಗೆದಾರರ ಡೆಸ್ಕ್‌ಟಾಪ್ ಅಥವಾ ಕಂಪ್ಯೂಟರ್ ನಲ್ಲಿರುವ ಇತರ ಯಾವುದೇ ಡೇಟಾವನ್ನು ನೋಡಲು ಏಜೆಂಟ್ ಗೆ ಅನುಮತಿಸುವುದಿಲ್ಲ.


ಅಲ್ಲದೆ, ಏಜೆಂಟರು ಕೊ-ಬ್ರೌಸಿಂಗ್ ಸೆಷನ್ ಅನ್ನು ಪ್ರಾರಂಭಿಸುವ ಮೊದಲು ತೆರಿಗೆದಾರರು ಅವರ ವಿನಂತಿಯನ್ನು ಅನುಮೋದಿಸಬೇಕು. ತೆರಿಗೆದಾರರು ಬಯಸಿದರೆ ಯಾವುದೇ ಸಮಯದಲ್ಲೂ ಕೊ-ಬ್ರೌಸಿಂಗ್ ಸೆಷನ್ ಅನ್ನು ಕೊನೆಗೊಳಿಸಬಹುದು.


ಹೆಲ್ಪ್ ಡೆಸ್ಕ್ ಏಜೆಂಟ್ ಕೊ-ಬ್ರೌಸಿಂಗ್ ಸೆಷನ್ ಅನ್ನು ಹೇಗೆ ಪ್ರಾರಂಭಿಸುವುದು?


*ಹೆಲ್ಪ್ ಡೆಸ್ಕ್ ಏಜೆಂಟ್ ಕರೆಯನ್ನು ಸ್ವೀಕರಿಸುತ್ತಾರೆ ಮತ್ತು ಅವರ ಮುಂದೆ CRM ಪಾಪ್ ಅಪ್ ಬರುತ್ತದೆ.


*ಏಜೆಂಟರು ತೆರಿಗೆದಾರರೊಂದಿಗೆ ಮಾತನಾಡುತ್ತಾರೆ ಮತ್ತು ಆದಾಯ ತೆರಿಗೆ ಪೋರ್ಟಲ್ ನಲ್ಲಿ ಕೊ-ಬ್ರೌಸ್ ಬಟನ್ ಅನ್ನು ಎಲ್ಲಿ ನೋಡಬಹುದು ಅಂತ ತೆರಿಗೆದಾರರಿಗೆ ಮಾರ್ಗದರ್ಶನ ನೀಡುತ್ತಾರೆ.


*ತೆರಿಗೆದಾರರು ಪಿನ್ ಅನ್ನು ಜನರೇಟ್ ಮಾಡಿ ಅದನ್ನು ಏಜೆಂಟ್ ನೊಂದಿಗೆ ಹಂಚಿಕೊಳ್ಳಿರಿ.


*CRM ನಲ್ಲಿ CB ಬಟನ್ ಅನ್ನು ಏಜೆಂಟ್ ಕ್ಲಿಕ್ ಮಾಡಿದಾಗ, ಅವರಿಗೆ ಕೊ-ಬ್ರೌಸ್ ಮಾಡುವ URL ಸಿಗುತ್ತದೆ.


*ಏಜೆಂಟ್ ಗೆ ಕಾಣಿಸಿದ ಪರದೆಯಲ್ಲಿ ತೆರಿಗೆದಾರರು ಹಂಚಿಕೊಂಡ ಪಿನ್ ಅನ್ನು ನಮೂದಿಸಿದಾಗ ಏಜೆಂಟ್ ಅವರು ‘ಸ್ಟಾರ್ಟ್ ಸೆಷನ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.


*ಸ್ಟಾರ್ಟ್ ಸೆಷನ್ ಬಟನ್ ಮೇಲೆ ಏಜೆಂಟ್ ಕ್ಲಿಕ್ ಮಾಡಿದ ನಂತರ ಕೊ-ಬ್ರೌಸ್ ಸೆಷನ್ ಪ್ರಾರಂಭವಾಗುತ್ತದೆ ಮತ್ತು ಏಜೆಂಟ್ ತೆರಿಗೆದಾರರಿಗೆ ಮಾರ್ಗದರ್ಶನ ಮಾಡಬಹುದು.


Income tax portal new co-browsing feature stg mrq
ಸಾಂದರ್ಭಿಕ ಚಿತ್ರ


*ತೆರಿಗೆದಾರರು ಐಟಿಆರ್ ಫೈಲ್ ಮಾಡುವಾಗ ಎದುರಿಸುವ ಸಮಸ್ಯೆಗಳಿಗೆ ಉತ್ತರಗಳನ್ನು ಪಡೆದ ನಂತರ, ಅವರು ಯಾವಾಗ ಬೇಕಾದರೂ ಸ್ಟಾಪ್ ಬಟನ್ ಅನ್ನು ಕ್ಲಿಕ್ ಮಾಡಬಹುದು. ಸೆಷನ್ ಮುಗಿದ ನಂತರ, ಏಜೆಂಟ್ ಗೆ ತೆರಿಗೆದಾರರ ಬ್ರೌಸರ್ ಕಾಣಿಸುವುದಿಲ್ಲ.


ಇದನ್ನೂ ಓದಿ:  PF Account: ನಿಮ್ಮ ಪಿಎಫ್​ ಅಕೌಂಟ್​ ಮೇಲೆ ಹ್ಯಾಕರ್ಸ್​ ಕಣ್ಣು, ಅವ್ರಿಂದ ಹೀಗೆ ಹುಷಾರಾಗಿರಿ!


ಕೊ-ಬ್ರೌಸಿಂಗ್ ಈ ಸ್ಕ್ರೀನ್ ಶೇರಿಂಗ್ ಗಿಂತಲೂ ಹೇಗೆ ಭಿನ್ನವಾಗಿದೆ?


ಕೊ-ಬ್ರೌಸಿಂಗ್ ಎಂಬುದು ಹೆಚ್ಚು ಅನುಕೂಲಕರವಾಗಿದೆ, ಏಕೆಂದರೆ ಇದಕ್ಕೆ ಯಾರೂ ಯಾವುದೇ ಸಾಫ್ಟ್‌ವೇರ್ ಅನ್ನು ಡೌನ್ಲೋಡ್ ಮಾಡುವ ಅಗತ್ಯವಿಲ್ಲ. ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಏಜೆಂಟರು ತೆರಿಗೆದಾರರ ಬ್ರೌಸರ್ ಗಳಿಗೆ ತ್ವರಿತವಾಗಿ ಸಂಪರ್ಕಿಸಬಹುದು.


ಸ್ಕ್ರೀನ್ ಶೇರಿಂಗ್ ನಲ್ಲಿ ಏಜೆಂಟ್ ಮತ್ತು ತೆರಿಗೆದಾರರು ತಮ್ಮ ಸ್ಕ್ರೀನ್ ಗಳನ್ನು ಹಂಚಿಕೊಳ್ಳುವ ಮೊದಲು ಜೂಮ್ ಅಥವಾ ಗೂಗಲ್ ಮೀಟ್ ನಂತಹ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.


ಕೊ-ಬ್ರೌಸಿಂಗ್ ನಲ್ಲಿ ತೆರಿಗೆದಾರರಿಗೆ ಹೆಚ್ಚು ಖಾಸಗಿ ಮತ್ತು ಸುರಕ್ಷಿತ ಅನುಭವವನ್ನು ಒದಗಿಸುತ್ತದೆ, ಏಕೆಂದರೆ ಏಜೆಂಟ್ ತೆರಿಗೆದಾರರ ಬ್ರೌಸರ್ ನ ಸಕ್ರಿಯ ವಿಂಡೋವನ್ನು ಮಾತ್ರ ವೀಕ್ಷಿಸಬಹುದು ಮತ್ತು ಬೇರೆ ಏನನ್ನೂ ನೋಡಲಾಗುವುದಿಲ್ಲ.


ತ್ವರಿತವಾಗಿ ಸಮಸ್ಯೆ ಪರಿಹಾರ


ಅದೇ ಸ್ಕ್ರೀನ್ ಶೇರಿಂಗ್ ನಲ್ಲಿ ಏಜೆಂಟ್ ಗಳು ತೆರಿಗೆದಾರರ ಸಂಪೂರ್ಣ ಡೆಸ್ಕ್‌ಟಾಪ್ ಅನ್ನು ಮತ್ತು ಅದರಲ್ಲಿ ಬರುವ ಅಧಿಸೂಚನೆಗಳನ್ನು ಸಹ ನೋಡಬಹುದು.


ಕೊ-ಬ್ರೌಸ್ ನಲ್ಲಿ ಏಜೆಂಟ್, ತೆರಿಗೆದಾರರ ಬ್ರೌಸರ್ ನಲ್ಲಿ ನಿರ್ದಿಷ್ಟ ಕ್ರಿಯೆಗಳನ್ನು ಕಾರ್ಯಗತಗೊಳಿಸಬಹುದು ಎಂದರೆ ಹೈಲೈಟ್, ಟಿಪ್ಪಣಿ ಮಾಡುವುದು, ಕ್ಲಿಕ್ ಮಾಡುವುದು, ಫಾರ್ಮ್ ಗಳನ್ನು ಭರ್ತಿ ಮಾಡುವುದು, ತೆರಿಗೆದಾರರಿಗೆ ಯಾವುದಾದರೂ ಪ್ರಶ್ನೆಗಳು ಎದುರಾದರೆ ಅದನ್ನು ತ್ವರಿತವಾಗಿ ಪರಿಹರಿಸುವ ಮೂಲಕ ಸಹಾಯ ಮಾಡುವುದು ಒಳಗೊಂಡಿರುತ್ತದೆ.


ಇದನ್ನೂ ಓದಿ:  EPFO Retirement Savings Scheme: ಇಪಿಎಫ್​ಒ ಖಾತೆದಾರರೇ ಗಮನಿಸಿ, ಮಹತ್ವದ ನಿರ್ಧಾರದತ್ತ ಸರ್ಕಾರದ ನಡೆ


ಏಜೆಂಟರು ತೆರಿಗೆದಾರರ ಪರದೆಯ ಮೇಲೆ ಯಾವುದೇ ಕ್ರಿಯೆಗಳನ್ನು ಮಾಡುವಂತಿಲ್ಲ ಮತ್ತು ಸ್ಕ್ರೀನ್ ಶೇರಿಂಗ್ ಸೆಷನ್ ನಲ್ಲಿ ಕೇವಲ ಮೌಖಿಕ ಸೂಚನೆಗಳನ್ನು ಮಾತ್ರ ಒದಗಿಸಬಹುದು.


ಗೌಪ್ಯ ಡೇಟಾ ಮರೆ ಮಾಡೋದು


ಹೆಚ್ಚಿನ ಕೊ-ಬ್ರೌಸಿಂಗ್ ಸಾಫ್ಟ್‌ವೇರ್ ಗಳು ಡೇಟಾ ಮಾಸ್ಕಿಂಗ್ ಎಂಬ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಕೊ-ಬ್ರೌಸಿಂಗ್ ಸೆಷನ್ ಸಮಯದಲ್ಲಿ ತೆರಿಗೆದಾರರ ಗೌಪ್ಯ ಡೇಟಾವನ್ನು ಮರೆ ಮಾಡುತ್ತದೆ.


ಸ್ಕ್ರೀನ್ ಹಂಚಿಕೆಯು ಡೇಟಾ ಮಾಸ್ಕಿಂಗ್ ಅನ್ನು ಒದಗಿಸುವುದಿಲ್ಲ, ತೆರಿಗೆದಾರರ ಸ್ಕ್ರೀನ್ ನಲ್ಲಿರುವುದೆಲ್ಲವನ್ನು ಏಜೆಂಟರು ನೋಡಲು ಅನುವು ಮಾಡಿಕೊಡುತ್ತದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು