ಕೃಷಿ ಆದಾಯದ ಮೇಲೂ Tax! ಶ್ರೀಮಂತ ರೈತರ ಮೇಲೆ ತೆರಿಗೆ ಇಲಾಖೆಯ ಹದ್ದಿನ ಕಣ್ಣು

1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ರ ಅಡಿಯಲ್ಲಿ ಕೃಷಿ ಆದಾಯವು ತೆರಿಗೆಯಿಂದ ಮುಕ್ತವಾಗಿದೆ. ಶಾಸನದ ಅಡಿಯಲ್ಲಿ, ಕೃಷಿ ಆದಾಯವು ಕೃಷಿ ಭೂಮಿಯ ಬಾಡಿಗೆ, ಆದಾಯ ಅಥವಾ ವರ್ಗಾವಣೆಯಿಂದ ಬರುವ ಯಾವುದೇ ಆದಾಯವನ್ನು ಮತ್ತು ಕೃಷಿ ಆದಾಯವನ್ನು ಒಳಗೊಂಡಿರುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಅತಿ ಶ್ರೀಮಂತ ರೈತರು (Super Rich Farmers) ತೆರಿಗೆ ಅಧಿಕಾರಿಗಳಿಂದ ಕಟ್ಟುನಿಟ್ಟಾದ ಪರಿಶೀಲನೆಯನ್ನು ಎದುರಿಸಲಿದ್ದಾರೆ ಎಂದು ವರದಿಯಾಗಿದೆ.  ಕಾನೂನಿನಡಿಯಲ್ಲಿ ತೆರಿಗೆ ಮುಕ್ತವಾಗಿರುವ ಕೃಷಿ ಆದಾಯದ (Agriculture Income)  ಮೇಲೆ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದೆ ಎಂದು ಹೇಳಲಾಗಿದೆ. ಹಣಕಾಸು ಸಚಿವಾಲಯ ಸದ್ಯ ಕೃಷಿ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು (Tax Free) ನೀಡುತ್ತಿದೆ.  ಇತರ ಮೂಲಗಳಿಂದ ಆದಾಯ (Income) ಗಳಿಸಿ ಅದನ್ನು ಕೃಷಿ ಆದಾಯ ತೆರಿಗೆ ವಿನಾಯಿತಿ ಪಡೆಯುತ್ತಿರುವವ ಮೇಲೆ ಹಣಕಾಸು ಇಲಾಖೆ ಗಮನಹರಿಸಿದೆ ಎನ್ನಲಾಗಿದೆ.  ದೇಶದ ಅತಿ ಶ್ರೀಮಂತ ರೈತರ ಆದಾಯದ ಮೇಲೆ ತೆರಿಗೆ ವಿಧಿಸಿದರೂ ಹಣಕಾಸು ಇಲಾಖೆಗೆ 50 ಸಾವಿರ ಕೋಟಿಯಷ್ಟು ಬೃಹತ್ ಮೊತ್ತ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಸಂಸದೀಯ ಸಮಿತಿಯ ಪ್ರಕಾರ ಅಧಿಕಾರಿಗಳು ಸಾಕಷ್ಟು ಮೌಲ್ಯಮಾಪನ ಮಾಡದೇ ಮತ್ತು ದಾಖಲೆಗಳ ಪರಿಶೀಲನೆ ಇಲ್ಲದೆ ಸುಮಾರು 22.5 ಪ್ರತಿಶತ ಪ್ರಕರಣಗಳಲ್ಲಿ ತೆರಿಗೆ-ಮುಕ್ತ ಹಕ್ಕುಗಳನ್ನು ಅನುಮತಿ ನೀಡಿದ್ದಾರೆ. ಹೀಗೆ ಅನುಮತಿ ನೀಡಿರುವುದು ತೆರಿಗೆ ವಂಚನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರಕ್ಕೆ ಸಂಸದೀಯ ಸಮಿತಿಯು ತಿಳಿಸಿದೆ.

ಕೃಷಿ ಆದಾಯಕ್ಕೆ ಸಂಬಂಧಿಸಿದ ಮೌಲ್ಯಮಾಪನ ವರದಿ
ಮಂಗಳವಾರ ಸಂಸದೀಯ ಸಮಿತಿಯು ‘ಕೃಷಿ ಆದಾಯಕ್ಕೆ ಸಂಬಂಧಿಸಿದ ಮೌಲ್ಯಮಾಪನ’ ಎಂಬ 49ನೇ ವರದಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದ ಆಡಿಟರ್ ಮತ್ತು ಕಂಟ್ರೋಲರ್ ಜನರಲ್ ಅವರ ವರದಿಯನ್ನು ಆಧರಿಸಿದೆ.

ಸಂಪೂರ್ಣ ಪರಿಶೀಲನೆಗಳನ್ನು ಅಳವಡಿಸಿಕೊಳ್ಳುವುದರಿಂದ ಕೃಷಿ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು ತಪ್ಪಿಸುವುದು ಹೆಚ್ಚು ಕಷ್ಟಕರವಾಗಲಿದೆ ಎಂದು ಹೇಳಳಾಗಿದೆ.

ಛತ್ತೀಸ್​ಗಢದಲ್ಲಿ ತೆರಿಗೆ ವಿನಾಯಿತಿ ವಂಚನೆ
ಸಂಸದೀಯ ಸಮಿತಿ ಒದಗಿಸಿರುವ ಒಂದು ಉದಾಹರಣೆಯಲ್ಲಿ, ಛತ್ತೀಸ್‌ಗಢದಲ್ಲಿ ಕೃಷಿ ಭೂಮಿ ಮಾರಾಟದಿಂದ ಪಡೆದ ರೂ.1.09 ಕೋಟಿ ಹಣಕ್ಕೆ ಕೃಷಿ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯಲಾಗಿದೆ. ಈ ವಂಚನೆಯಿಂದ ಹಣಕಾಸು ಇಲಾಖೆ ಹೊಸ ಕ್ರಮ ಕೈಗೊಳ್ಳಲು ಆಸಕ್ತಿ ತೋರಿಸಿದೆ ಎನ್ನಲಾಗಿದೆ.

ಸಂಸದೀಯ ಸಮಿತಿ ಒದಗಿಸಿದ ಉದಾಹರಣೆಯಲ್ಲಿ ಮೌಲ್ಯಮಾಪನ ದಾಖಲೆಗಳಲ್ಲಿ ತೆರಿಗೆ ಮನ್ನಾವನ್ನು ಬೆಂಬಲಿಸುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿಲ್ಲ ಅಥವಾ ಉಲ್ಲಂಘನೆಗಳನ್ನು ಸೂಚಿಸುವ "ಮೌಲ್ಯಮಾಪನ ಆದೇಶದಲ್ಲಿ ತಿಳಿಸಲಾಗಿಲ್ಲ" ಎಂದು ಸಂಸದೀಯ ಸಮಿತಿಯು ಹೇಳಿದೆ.

ಇದನ್ನೂ ಓದಿ: Fake Pan Card: ನಿಮ್ಮ ಕೈಲಿರೋದು ಫೇಕ್ ಪ್ಯಾನ್ ಕಾರ್ಡ್ ಆಗಿರಬಹುದು ಹುಷಾರ್! ನಿಮ್ಮ ಮೊಬೈಲಲ್ಲೇ ಹೀಗೆ ಚೆಕ್ ಮಾಡಿ

1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10(1) ರ ಅಡಿಯಲ್ಲಿ ಕೃಷಿ ಆದಾಯವು ತೆರಿಗೆಯಿಂದ ಮುಕ್ತವಾಗಿದೆ. ಶಾಸನದ ಅಡಿಯಲ್ಲಿ, ಕೃಷಿ ಆದಾಯವು ಕೃಷಿ ಭೂಮಿಯ ಬಾಡಿಗೆ, ಆದಾಯ ಅಥವಾ ವರ್ಗಾವಣೆಯಿಂದ ಬರುವ ಯಾವುದೇ ಆದಾಯವನ್ನು ಮತ್ತು ಕೃಷಿ ಆದಾಯವನ್ನು ಒಳಗೊಂಡಿರುತ್ತದೆ.

ಮಾನವಶಕ್ತಿಯ ಕೊರತೆ!
50 ಸಾವಿರ ಕೋಟಿ ಆದಾಯ ತೆರಿಗೆ ಇಲಾಖೆಯು ಕಮಿಷನರೇಟ್‌ಗಳೆಂದು ಕರೆಯಲ್ಪಡುವ ತನ್ನ ಎಲ್ಲಾ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ವಂಚನೆಯ ಪ್ರಕರಣಗಳನ್ನು ತನಿಖೆ ಮಾಡಲು ಮಾನವಶಕ್ತಿಯ ಕೊರತೆಯಿದೆ ಎಂದು ಹೇಳಿದೆ.

ಇದನ್ನು ಪರಿಹರಿಸಲು, ಸಂಸದೀಯ ಸಮಿತಿಯ ಪ್ರಕಾರ, ಕೃಷಿ ಆದಾಯವು ಹತ್ತು ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭಗಳಲ್ಲಿ ತೆರಿಗೆ ಮುಕ್ತ ಹಕ್ಕುಗಳನ್ನು ನೇರವಾಗಿ ಪರಿಶೀಲಿಸಲು ಹಣಕಾಸು ಸಚಿವಾಲಯವು ತನ್ನ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ:  Salary Offer: ದೇಹದ ತೂಕ ಇಳಿಸಿದ್ರೆ ಉದ್ಯೋಗಿಗಳಿಗೆ ಸಿಗುತ್ತೆ ಬೋನಸ್! ಯಾವ ಕಂಪನಿ ಇದು?

ಕೃಷಿ ತೆರಿಗೆಯ ಸಲಹೆಯು ಕೇವಲ ರಾಜಕಾರಣಿಗಳನ್ನು ಹೆದರಿಸುತ್ತದೆ. ಬಹುಪಾಲು ರೈತರು ಬಡವರಾಗಿದ್ದು ಅವರನ್ನು ಕೃಷಿ ಆದಾಯ ತೆರಿಗೆಯಿಂದ ಹೊರಗಿಡಬೇಕು. ಅಂತಹ ರೈತರಿಗೆ ಕೃಷಿ ತೆರಿಗೆ ವಿನಾಯಿತಿಯನ್ನು ಈಗ ಲಭ್ಯವಿರುವಂತೆಯೇ ಒದಗಿಸಬೇಕು. ಆದರೆ ದೊಡ್ಡ ರೈತರಿಗೆ ತೆರಿಗೆ ವಿಧಿಸದಿರಲು ಯಾವುದೇ ಕಾರಣವಿಲ್ಲ ಎಂದು ಮಾಜಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ನವಲ್ ಕಿಶೋರ್ ಶರ್ಮಾ ಹೇಳಿದ್ದಾರೆ.
Published by:guruganesh bhat
First published: