• Home
  • »
  • News
  • »
  • business
  • »
  • Liquid Detergents: ಭಾರತದಲ್ಲಿ ಹ್ಯಾಂಡವಾಶ್‌ಗಳ ಮಾರಾಟದಲ್ಲಿ ಭಾರಿ ಕುಸಿತ, ಇದರ ಲಾಭ ಪಡೆದ ಲಿಕ್ವಿಡ್‌ ಡಿಟರ್ಜೆಂಟ್‌ಗಳು!

Liquid Detergents: ಭಾರತದಲ್ಲಿ ಹ್ಯಾಂಡವಾಶ್‌ಗಳ ಮಾರಾಟದಲ್ಲಿ ಭಾರಿ ಕುಸಿತ, ಇದರ ಲಾಭ ಪಡೆದ ಲಿಕ್ವಿಡ್‌ ಡಿಟರ್ಜೆಂಟ್‌ಗಳು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಲಿಕ್ವಿಡ್‌ ಉತ್ಪನ್ನವಾದ ಹ್ಯಾಂಡ್‌ವಾಶ್‌ಗಳ ಬಳಕೆ ಕ್ರಮೇಣವಾಗಿ ಕಡಿಮೆಯಾಗತೊಡಗಿದೆ. ಮತ್ತೊಂದು ಕಡೆ ಲಿಕ್ವಿಡ್‌ ಡಿಟರ್ಜೆಂಟ್‌ಗಳು ಹೆಚ್ಚಿನ ಬೇಡಿಕೆಯನ್ನು ಗಳಿಸುತ್ತಿವೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಾಂತಾರ್‌ನ ಮಾಹಿತಿಯ ಪ್ರಕಾರ, “ಡಿಟರ್ಜೆಂಟ್ ಲಿಕ್ವಿಡ್‌ಗಳು ಜುಲೈ 2021 ರಲ್ಲಿ MAT (ವಾರ್ಷಿಕ ಒಟ್ಟು ಆಧಾರದ ಮೇಲೆ ಇರುವ ) 15.9 % ರಷ್ಟು ಹೆಚ್ಚಳವನ್ನು ಕಂಡುಕೊಂಡಿದ್ದು ಜುಲೈ 2022 ರಲ್ಲಿ 19.8% ರಷ್ಟಕ್ಕೆ ಏರಿದೆ” ಎಂದು ಸಂಶೋಧನೆಗಳು ತಿಳಿಸಿವೆ.

ಮುಂದೆ ಓದಿ ...
  • Share this:

ಸಾಂಕ್ರಾಮಿಕ ರೋಗ ಕೋವಿಡ್‌ನ (COVID) ಸಮಯದಲ್ಲಿ ಅತ್ಯಂತ ಜನಪ್ರಿಯವಾದ ವಸ್ತುವೆಂದರೆ ಲಿಕ್ವಿಡ್‌ ಉತ್ಪನ್ನವಾದ ಹ್ಯಾಂಡ್‌ವಾಶ್‌ಗಳು (Handwash) ಆಗಿವೆ. ಆದರೆ ಈಗ ಇವುಗಳ ಬಳಕೆ ಕ್ರಮೇಣವಾಗಿ ಕಡಿಮೆಯಾಗತೊಡಗಿದೆ. ಆದರೆ ಮತ್ತೊಂದು ಕಡೆ ಲಿಕ್ವಿಡ್‌ ಡಿಟರ್ಜೆಂಟ್‌ಗಳು (Liquid detergent) ಹೆಚ್ಚಿನ ಬೇಡಿಕೆಯನ್ನು ಗಳಿಸುತ್ತಿವೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕಾಂತಾರ್‌ನ ಮಾಹಿತಿಯ ಪ್ರಕಾರ, “ಡಿಟರ್ಜೆಂಟ್ ಲಿಕ್ವಿಡ್‌ಗಳು ಜುಲೈ 2021 ರಲ್ಲಿ MAT (ವಾರ್ಷಿಕ ಒಟ್ಟು ಆಧಾರದ ಮೇಲೆ ಇರುವ ) 15.9 % ರಷ್ಟು ಹೆಚ್ಚಳವನ್ನು ಕಂಡುಕೊಂಡಿದ್ದು ಜುಲೈ 2022 ರಲ್ಲಿ 19.8% ರಷ್ಟಕ್ಕೆ ಏರಿದೆ” ಎಂದು ಸಂಶೋಧನೆಗಳು (Research) ತಿಳಿಸಿವೆ.


ಲಿಕ್ವಿಡ್‌ ಡಿಟರ್ಜೆಂಟ್‌ ಬ್ರಾಂಡ್‌ಗಳು
ಹಿಂದೂಸ್ತಾನ್ ಯೂನಿಲಿವರ್ (HUL) ಮತ್ತು ಪ್ರಾಕ್ಟರ್ & ಗ್ಯಾಂಬಲ್‌ನಂತಹ ಕಂಪನಿಗಳು ಕ್ರಮವಾಗಿ ತಮ್ಮ ಬ್ರ್ಯಾಂಡ್‌ಗಳ ಜನಪ್ರಿಯ ಡಿಟರ್ಜೆಂಟ್ ಬ್ರಾಂಡ್‌ಗಳಾದ ಸರ್ಫ್ ಎಕ್ಸೆಲ್ ಮತ್ತು ಏರಿಯಲ್ ಅಡಿಯಲ್ಲಿ ಲಿಕ್ವಿಡ್‌ ಡಿಟರ್ಜೆಂಟ್‌ಗಳನ್ನು ನೀಡುತ್ತವೆ. P&G ಯ ಟೈಡ್ ಮತ್ತು ಗೋದ್ರೇಜ್ ಗ್ರಾಹಕ ಉತ್ಪನ್ನಗಳ Genteel ಈ ವರ್ಗದಲ್ಲಿರುವ ಇತರ ಬ್ರ್ಯಾಂಡ್‌ಗಳಾಗಿವೆ.


ಎಚ್‌ಯುಎಲ್‌ನ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ, ಹಣಕಾಸು ಮತ್ತು ಐಟಿ ವಿಭಾಗದ ರಿತೇಶ್ ತಿವಾರಿ ಅವರು ಜುಲೈನಲ್ಲಿ ಗಳಿಕೆಯ ನಂತರದ ಹೂಡಿಕೆದಾರರ ಕರೆಯನ್ನು ಉದ್ದೇಶಿಸಿ ಮಾತನಾಡುತ್ತಾ “ಲಿಕ್ವಿಡ್ ಡಿಟರ್ಜೆಂಟ್‌ಗಳು ಹೋಮ್ ಕೇರ್ ವಿಭಾಗದಲ್ಲಿ ಬೆಳವಣಿಗೆ ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಪ್ರಮುಖವಾದ ಕೊಡುಗೆಯನ್ನು ನೀಡುತ್ತಿವೆ” ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ:Bengaluru: ಬೆಂಗಳೂರಿನ ಟೀ ಶಾಪ್​ನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಪೇಮೆಂಟ್! 


ಒಟ್ಟಾರೆಯಾಗಿ, ಕಾಂತಾರ್ ಸಂಶೋಧನೆಯ ಪ್ರಕಾರ, “ಲಿಕ್ವಿಡ್ ಡಿಟರ್ಜೆಂಟ್‌ಗಳು MAT ಆಧಾರದ ಮೇಲೆ ಜುಲೈ 2021 ರಿಂದ ಜುಲೈ 2022 ರಲ್ಲಿ 40% ರಷ್ಟು ಬೆಳವಣಿಗೆಯನ್ನು ಸಾಧಿಸಿವೆ. ಡಿಟರ್ಜೆಂಟ್ ಲಿಕ್ವಿಡ್‌ಗಳಿಂದ 3% ರಷ್ಟಕ್ಕೆ ಹೋಲಿಸಿದರೆ 97% ರಷ್ಟು ಮಾರಾಟದ ಪರಿಮಾಣವನ್ನು ಹೊಂದಿರುವ ಡಿಟರ್ಜೆಂಟ್ ಪೌಡರ್‌ಗಳ ಹಿಂದೆ ಈ ವರ್ಗವೂ ಇದೆ ಎಂಬ ಅಂಶವನ್ನು ಗಮನಿಸಬೇಕು.


ಕಾಂತಾರ್ ಸಂಶೋಧನೆಯ ಪ್ರಕಾರ, ಇತರ ಲಿಕ್ವಿಡ್‌ ಎಫ್‌ಎಂಸಿಜಿ ಉತ್ಪನ್ನ ವರ್ಗಗಳಾದ ಲಿಕ್ವಿಡ್ ಡಿಶ್ ವಾಶ್ ಮತ್ತು ಫೇಸ್ ವಾಶ್ ಕೂಡ ದೇಶದಲ್ಲಿ ಬೆಳವಣಿಗೆಯನ್ನು ಕಂಡಿವೆ. MAT ಜುಲೈ 2021 ಮತ್ತು MAT ಜುಲೈ 2022 ರ ನಡುವೆ, ಫೇಸ್ ವಾಶ್ 12% ರಷ್ಟು ಹೆಚ್ಚು ಕುಟುಂಬಗಳು ಬಳಕೆ ಮಾಡಿದರೆ, ಡಿಶ್ ವಾಶ್ ಲಿಕ್ವಿಡ್‌ಗಳನ್ನು 6% ರಷ್ಟು ಹೆಚ್ಚು ಕುಟುಂಬಗಳು ಇದನ್ನು ಬಳಕೆ ಮಾಡುತ್ತಿವೆ.


ತನ್ನ ಮೌಲ್ಯ ಕಳೆದುಕೊಳ್ಳುತ್ತಿರುವ ಹ್ಯಾಂಡ್‌ ವಾಶ್‌
ಇದರ ಮಧ್ಯೆ ಜುಲೈ 2021 ರಿಂದ ಜುಲೈ 2022 ರ ನಡುವೆ ಹ್ಯಾಂಡ್‌ವಾಶ್ ಹೆಚ್ಚಿನ ಬೇಡಿಕೆಯಲ್ಲಿತ್ತು. ಆದರೆ ಅದರ ಬಳಕೆಯಲ್ಲಿ ಈಗ 24% ರಷ್ಟು ಕುಸಿತ ಉಂಟಾಗಿರುವುದನ್ನು ಗಮನಿಸಲಾಗಿದೆ.


ಕೋವಿಡ್‌-19 ಪ್ರಕರಣಗಳು ಕಡಿಮೆಯಾಗುತ್ತಲೇ ಭಾರತದಲ್ಲಿ ಹ್ಯಾಂಡ್‌ವಾಶ್ ಉತ್ಪನ್ನಗಳ ಮಾರಾಟವು ಸಹ ಕುಸಿಯುತ್ತಿದೆ. ಹ್ಯಾಂಡ್‌ವಾಶ್‌ಗಳನ್ನು ಬಳಸುವ ಗ್ರಾಹಕರ ಆಧಾರದ ಮೇಲೆ ಜನವರಿ 2021 ರಲ್ಲಿ ಅದರ ಒಟ್ಟು ಅಂದಾಜು ಮಾರುಕಟ್ಟೆಯ 35.3% ರಷ್ಟಕ್ಕೆ ಏರಿತು. ಆದರೆ 2022 ರ ಜನವರಿಯಲ್ಲಿ 23.7% ರಷ್ಟಕ್ಕೆ ಇಳಿದಿದೆ ಎಂದು ಕಾಂತಾರ್‌ ಸಂಶೋಧನೆಯಲ್ಲಿ ತಿಳಿದು ಬಂದಿದೆ.


ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರುವ ಹ್ಯಾಂಡ್‌ವಾಶ್‌ ಕಂಪನಿಗಳು
ರೆಕ್ಕಿಟ್ (ಡೆಟಾಲ್), ಐಟಿಸಿ (ಸಾವ್ಲಾನ್), ಎಚ್‌ಯುಎಲ್ (ಲೈಫ್‌ಬಾಯ್), ಮತ್ತು ಗೋದ್ರೇಜ್ ಗ್ರಾಹಕ ಉತ್ಪನ್ನಗಳು (ಗೋಡ್ರೆಜ್ ಪ್ರೊಟೆಕ್ಟ್ ಮಿಸ್ಟರ್ ಮ್ಯಾಜಿಕ್) ನಂತಹ ಹ್ಯಾಂಡ್‌ವಾಶ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಕಂಪನಿಗಳು ಈಗ ನವೀನ ಉತ್ಪನ್ನಗಳನ್ನು ಪ್ರಾರಂಭಿಸುವ ಮೂಲಕ ಮಾರಾಟದ ಕುಸಿತವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ ಕೈ ತೊಳೆಯಲು ಪುಡಿ. ಈ ಉತ್ಪನ್ನವು ಪುಡಿ ರೂಪದಲ್ಲಿ ಸ್ಯಾಚೆಟ್‌ಗಳಲ್ಲಿ ಬರುತ್ತದೆ ಮತ್ತು ಇದರ ಬೆಲೆ 10 ರೂ.ಗಳಷ್ಟು ಕಡಿಮೆಯಾಗಿದೆ. ಹೀಗೆ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ.


ಇದನ್ನೂ ಓದಿ:  Vatsal Nahata: ಛಲ ಬಿಡದ ಪರಿಶ್ರಮ, ಕೊನೆಗೂ ಗೆದ್ದ ತ್ರಿವಿಕ್ರಮ! ವರ್ಲ್ಡ್ ಬ್ಯಾಂಕ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಈತ ಯಾರು ಗೊತ್ತಾ?


GCPL ಕಂಪನಿಯು ಜುಲೈನಲ್ಲಿ ತನ್ನ ಬ್ರಾಂಡ್ ಗೋದ್ರೆಜ್ ಮ್ಯಾಜಿಕ್ ಬಾಡಿವಾಶ್ ಅಡಿಯಲ್ಲಿ ಬಾಡಿ ವಾಶ್‌ಗಾಗಿ ಇದೇ ರೀತಿಯ ಉತ್ಪನ್ನವನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಈ ಉತ್ಪನ್ನವು ದೇಶದಲ್ಲಿ ಬಾಡಿ ವಾಶ್‌ನ ಮಾರಾಟವನ್ನು ಹೆಚ್ಚಿಸಲು ಕಂಪನಿಯ ಹೊಸ ಪ್ರಯತ್ನವಾಗಿದೆ ಎಂದು ಜಿಸಿಪಿಎಲ್‌ನ ಎಂಡಿ ಮತ್ತು ಸಿಇಒ ಸುಧೀರ್ ಸೀತಾಪತಿ ಉತ್ಪನ್ನದ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.

Published by:Ashwini Prabhu
First published: