Higher Pension Deadline: EPFO ಹೆಚ್ಚುವರಿ ಪಿಂಚಣಿಗೆ ಅರ್ಜಿ ಸಲ್ಲಿಸುವ ಬಗ್ಗೆ ಮಹತ್ವದ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದಿನಾಂಕವನ್ನು ವಿಸ್ತರಿಸದಿದ್ದರೂ ಸಹ, ಅರ್ಜಿದಾರರು ಪೋರ್ಟಲ್ ದೋಷಗಳು, ಬಾಕಿ ಇರುವ ಸ್ಪಷ್ಟೀಕರಣಗಳು ಇತ್ಯಾದಿಗಳ ಆಧಾರದ ಮೇಲೆ ವಿಸ್ತರಣೆಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

  • Share this:

ಹೆಚ್ಚುವರಿ ಸಂಬಳದ ಪಿಂಚಣಿಗಾಗಿ (Pension) ಅರ್ಜಿ ಸಲ್ಲಿಸಲು ಮೇ 3 ಅಂತಿಮ ಗಡುವಾಗಿತ್ತು. ಹಿಂದಿನ ಗಡುವು ಮಾರ್ಚ್ 3, 2023 ಆಗಿದ್ದು ನಂತರ ಅದನ್ನು ಮೇ 3, 2023 ಕ್ಕೆ ವಿಸ್ತರಿಸಲಾಗಿತ್ತು. ಅದಾಗ್ಯೂ ಹಿಂದಿನ ಕೊಡುಗೆಗಳನ್ನು ಸರಿಹೊಂದಿಸಲು ನಿಧಿಗಳ ಮರುಹಂಚಿಕೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಯಿಂದ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ ಹಾಗಾಗಿ ತಜ್ಞರು ಮತ್ತೊಮ್ಮೆ ಪಿಂಚಣಿಯ ಗಡುವನ್ನು ಇನ್ನಷ್ಟು ವಿಸ್ತರಿಸಬೇಕೆಂದು ಸಲಹೆ ನೀಡಿದ್ದಾರೆ.


ನ್ಯಾಯಾಲಯವನ್ನು ಸಂಪರ್ಕಿಸಬಹುದು


ದಿನಾಂಕವನ್ನು ವಿಸ್ತರಿಸದಿದ್ದರೂ ಸಹ, ಅರ್ಜಿದಾರರು ಪೋರ್ಟಲ್ ದೋಷಗಳು, ಬಾಕಿ ಇರುವ ಸ್ಪಷ್ಟೀಕರಣಗಳು ಇತ್ಯಾದಿಗಳ ಆಧಾರದ ಮೇಲೆ ವಿಸ್ತರಣೆಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯ ಅರ್ಜಿದಾರರು ತಮ್ಮ ಅಪ್ಲಿಕೇಶನ್‌ಗಳನ್ನು ಸಲ್ಲಿಸಲು ತೊಂದರೆಗಳನ್ನು ಎದುರಿಸಿದ್ದು ನಿರ್ದಿಷ್ಟ ದೋಷಗಳು ಇದಕ್ಕೆ ಕಾರಣವಾಗಿವೆ.


ಅದಲ್ಲದೆ ಇಪಿಎಫ್‌ಒ ಇನ್ನೂ ಕೆಲವು ಬಾಕಿ ಇರುವ ಸಮಸ್ಯೆಗಳ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡಿಲ್ಲ, ಇದರಿಂದಾಗಿ ಕೆಲವು ಅರ್ಜಿದಾರರು ಯೋಜನೆಯನ್ನು ಆಯ್ಕೆ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಪಿಂಚಣಿದಾರರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನಾಂಕವನ್ನು ವಿಸ್ತರಿಸುವುದೆಂದೇ ಮುಂದಿರುವ ದಾರಿ ಎಂದು ಸಿಂಘಾನಿಯಾ ಏಂಡ್ ಕೊ ಸಂಸ್ಥೆಯ ಪಾಲುದಾರರಾಗಿರುವ ಅಪೇಕ್ಷಾ ಲೋಧಾ ತಿಳಿಸಿದ್ದಾರೆ.


1.16% ಕೊಡುಗೆಯನ್ನು ಅಮಾನ್ಯವೆಂದು ಘೋಷಿಸಿದ ಸುಪ್ರೀಂ ಕೋರ್ಟ್


ದಿನಾಂಕವನ್ನು ವಿಸ್ತರಿಸದೇ ಇದ್ದರೂ ಕೂಡ ಅರ್ಜಿದಾರರು, ನ್ಯಾಯಾಲಯವನ್ನು ಸಂಪರ್ಕಿಸುವ ವಿಧಾನವನ್ನು ಬಳಸಿಕೊಂಡರೂ ಇಲ್ಲಿ ಆಶ್ಚರ್ಯಪಡಬೇಕಾಗಿಲ್ಲ ಎಂದು ಲೋಧಾ ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿ: ಎಷ್ಟು ಸಂಬಳಕ್ಕೆ ಎಷ್ಟು ಸಾಲ ಸಿಗುತ್ತೆ? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ!


2014 ರಲ್ಲಿ 15,000 ರೂ.ಗಳ ವೇತನದ ಹೆಚ್ಚಿನ ಇಪಿಎಸ್ ಕೊಡುಗೆಯನ್ನು ಆರಿಸಿಕೊಂಡ ಉದ್ಯೋಗಿಗಳು ರೂ 15,000 ಮೇಲ್ಪಟ್ಟ ಪೆನ್ಶನ್ ಸ್ಕೀಮ್‌ಗೆ ಮೂಲ ವೇತನದ 1.16 ಪ್ರತಿಶತವನ್ನು ಪಿಂಚಣಿ ಯೋಜನೆಗೆ ಪಾವತಿಸುವ ಅಧಿಸೂಚನೆಯನ್ನು ಇಪಿಎಫ್‌ಒ ಬಿಡುಗಡೆ ಮಾಡಿತು.


ಸುಪ್ರೀಂ ಕೋರ್ಟ್ 1.16 ಪ್ರತಿಶತವನ್ನು ಅಮಾನ್ಯವೆಂದು ಘೋಷಿಸಿತು ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯಿದೆಯ ನಿಬಂಧನೆಗಳನ್ನು ತಿದ್ದುಪಡಿ ಮಾಡಿದ ಯೋಜನೆಯಡಿಯಲ್ಲಿ ಸದಸ್ಯರು ತಮ್ಮ ವೇತನದ ಶೇಕಡಾ 1.16 ರ ದರದಲ್ಲಿ ತಿಂಗಳಿಗೆ 15,000 ರೂ.ಗಳನ್ನು ಹೆಚ್ಚುವರಿ ಕೊಡುಗೆಯಾಗಿ ವಂತಿಗೆ ನೀಡುವ ಅವಶ್ಯಕತೆಯನ್ನು ಗಮನಿಸಿತು.


ಇಪಿಎಫ್‌ಒ ಇನ್ನೂ ಸ್ಪಷ್ಟೀಕರಣ ನೀಡಿಲ್ಲ


15,000 ರೂಪಾಯಿ ವೇತನ ಹೊಂದಿರುವ ಉದ್ಯೋಗಿಗಳು ಒದಗಿಸುವ ಮೂಲ ವೇತನದಿಂದ 1.16 ರಷ್ಟು ಕೊಡುಗೆಯ ಬಗ್ಗೆ ಇಪಿಎಫ್‌ಒ ಇನ್ನೂ ಸ್ಪಷ್ಟೀಕರಣವನ್ನು ನೀಡಿಲ್ಲ.


ಸಾಂಕೇತಿಕ ಚಿತ್ರ


ಇದಲ್ಲದೆ, ಸ್ಕೀಮ್‌ನಲ್ಲಿ ಹೊಂದಾಣಿಕೆಗಳನ್ನು ಮಾಡಲು ಅಪೆಕ್ಸ್ ಕೋರ್ಟ್ ಈಗಾಗಲೇ ಇಪಿಎಫ್‌ಒಗೆ 6 ತಿಂಗಳ ಕಾಲಾವಕಾಶವನ್ನು ಒದಗಿಸಿದೆ ಹೀಗಾಗಿ ಇಪಿಎಫ್‌ಒ ಹೆಚ್ಚುವರಿ ಕೊಡುಗೆಯನ್ನು ಕಾಯಿದೆಯ ವ್ಯಾಪ್ತಿಯಲ್ಲಿ ಇತರ ಕೆಲವು ಕಾನೂನುಬದ್ಧ ಮೂಲಗಳಿಂದ ರಚಿಸಬಹುದು, ಇದರಲ್ಲಿ ಉದ್ಯೋಗದಾತರ ಕೊಡುಗೆಯ ದರವನ್ನು ಹೆಚ್ಚಿಸಬಹುದು ಎಂದು TAS ಕಾನೂನಿನ ಅಸೋಸಿಯೇಟ್ ಕಂಜನಿ ಶರ್ಮಾ ತಿಳಿಸಿದ್ದಾರೆ.


ಹೊಸ ಆಯ್ಕೆಗಳನ್ನು ಸಲ್ಲಿಸಬಹುದು; ಸುಪ್ರೀಂ ಕೋರ್ಟ್ ಸಲಹೆ


ಇಲ್ಲಿಯವರೆಗೆ ಇಪಿಎಫ್‌ಒ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಹೆಚ್ಚಿನ ಸ್ಪಷ್ಟತೆಯನ್ನು ಸಕ್ರಿಯಗೊಳಿಸಲು ಗಡುವನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿದೆ ಎಂದು ಶರ್ಮಾ ತಿಳಿಸಿದ್ದಾರೆ.




ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ನೌಕರರು ಈಗ ನಾಲ್ಕು ತಿಂಗಳ ಅವಧಿಯಲ್ಲಿ ಹೊಸ ಆಯ್ಕೆಗಳನ್ನು ಸಲ್ಲಿಸಬಹುದು ಎಂದು ನವೆಂಬರ್ 2022 ರ ಆದೇಶದ ಮೂಲಕ ಸುಪ್ರೀಂ ಕೋರ್ಟ್ ತೀರ್ಪು ನೀಡಿತು ನಂತರ ಅದನ್ನು ಮೇ 3, 2023 ವರೆಗೆ ವಿಸ್ತರಿಸಲಾಯಿತು.


ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಹಣ ವರ್ಗಾವಣೆ


ಅರ್ಹ ಉದ್ಯೋಗಿಗಳು ಅರ್ಜಿಯನ್ನು ಸಲ್ಲಿಸಲು ಪಿಎಫ್ ಕಮಿಷನರ್ ಫಾರ್ಮ್ಯಾಟ್ ಅನ್ನು ನಿರ್ದಿಷ್ಟಪಡಿಸಬೇಕು. ಇದಲ್ಲದೆ, ಹೆಚ್ಚಿನ ಪಿಂಚಣಿಗಾಗಿ ವಿನಂತಿಯನ್ನು ಸಲ್ಲಿಸಲು, ಮೀಸಲಾದ ಆನ್‌ಲೈನ್ ವಿಂಡೋ ಅಗತ್ಯವಿದೆ. ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಹಣವನ್ನು ವರ್ಗಾಯಿಸಲು ಉದ್ಯೋಗಿಯು ಒಪ್ಪಂದ ದಾಖಲೆಗಳ ಸಂಗ್ರಹ ಹಾಗೂ ಸಲ್ಲಿಕೆಯನ್ನು ಮಾಡಬೇಕಾಗುತ್ತದೆ ಎಂದು ಎಸ್‌ಕೆವಿ ಕಾನೂನು ಕಚೇರಿಗಳ ವಕೀಲ ಅಶುತೋಷ್ ಕೆ. ಶ್ರೀವಾಸ್ತವ ತಿಳಿಸಿದ್ದಾರೆ.

First published: