• Home
  • »
  • News
  • »
  • business
  • »
  • India's GDP forecast: ಭಾರತದ FY23 ಜಿಡಿಪಿ ಮುನ್ಸೂಚನೆಯನ್ನು 6.8% ಕ್ಕೆ ಕಡಿತಗೊಳಿಸಿದ ಐಎಂಎಫ್‌!

India's GDP forecast: ಭಾರತದ FY23 ಜಿಡಿಪಿ ಮುನ್ಸೂಚನೆಯನ್ನು 6.8% ಕ್ಕೆ ಕಡಿತಗೊಳಿಸಿದ ಐಎಂಎಫ್‌!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ 2022-23 (FY23) ಹಣಕಾಸು ವರ್ಷದಲ್ಲಿ ಆಂತರಿಕ ಉತ್ಪನ್ನದ (GDP) ಬೆಳವಣಿಗೆಯ ಮುನ್ಸೂಚನೆಯನ್ನು 6.8% ಕ್ಕೆ ಕಡಿತಗೊಳಿಸಿದೆ. ಸಂಸ್ಥೆಯು ಜುಲೈನಲ್ಲಿ ಬೆಳವಣಿಗೆಯ ಮುನ್ಸೂಚನೆಯ ದರವಾಗಿ 7.4%ವನ್ನು ಪ್ರಸ್ತುತಿಗೊಳಿಸಿತ್ತು ಆದರೆ ಈ ಅಂಕಿಅಂಶಗಳಿಗೆ ಹೋಲಿಸಿದಾಗ ಪ್ರಸ್ತುತ ಮೌಲ್ಯವು ತೀರಾ ಕಡಿಮೆಯಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯಾಗಿ ಇತ್ತೀಚಿನ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯಲ್ಲಿ 2022-23 (FY23) ಹಣಕಾಸು ವರ್ಷದಲ್ಲಿ (Financial year) ಆಂತರಿಕ ಉತ್ಪನ್ನದ (GDP) ಬೆಳವಣಿಗೆಯ ಮುನ್ಸೂಚನೆಯನ್ನು 6.8% ಕ್ಕೆ ಕಡಿತಗೊಳಿಸಿದೆ. ಸಂಸ್ಥೆಯು ಜುಲೈನಲ್ಲಿ ಬೆಳವಣಿಗೆಯ ಮುನ್ಸೂಚನೆಯ ದರವಾಗಿ 7.4%ವನ್ನು ಪ್ರಸ್ತುತಿಗೊಳಿಸಿತ್ತು ಆದರೆ ಈ ಅಂಕಿಅಂಶಗಳಿಗೆ ಹೋಲಿಸಿದಾಗ ಪ್ರಸ್ತುತ ಮೌಲ್ಯವು ತೀರಾ ಕಡಿಮೆಯಾಗಿದೆ. 2022 ರಲ್ಲಿ ಭಾರತದ ಆರ್ಥಿಕತೆಯ (Indian Economy) ಭವಿಷ್ಯವು 6.8% ಬೆಳವಣಿಗೆಯಾಗಿದ್ದು ಜುಲೈನಿಂದ 0.6% ದಷ್ಟು ಇಳಿಮುಖವನ್ನು ಕಂಡಿದೆ ಹಾಗೂ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ದುರ್ಬಲ ಫಲಿತಾಂಶಕ್ಕೆ ಕಾರಣವಾಗಿದೆ ಎಂದು IMF ತಿಳಿಸಿದೆ. 2023 ರ ಮುಂದಿನ ವರ್ಷಕ್ಕಾಗಿ ಭಾರತವು (India) 6.1% ದಷ್ಟು ಬೆಳವಣಿಗೆಯನ್ನು ಕಾಣಬಹುದು ಎಂಬುದಾಗಿ ಊಹಿಸಲಾಗಿದೆ.


ಭಾರತದ ಉತ್ತಮ ಕಾರ್ಯನಿರ್ವಹಣೆ
ದಕ್ಷಿಣ ಏಷ್ಯಾದಲ್ಲಿರುವ ಇತರ ದೇಶಗಳಿಗೆ ಹೋಲಿಸಿದಾಗ ಭಾರತ ಉತ್ತಮವಾಗಿಯೇ ನಿರ್ವಹಣೆ ಮಾಡಿದೆ ಎಂದು ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾದ ಮುಖ್ಯ ಆರ್ಥಿಕ ತಜ್ಞ ಹನ್ಸಿ ಟಿಮ್ಮರ್ ತಿಳಿಸಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಸಿದಾಗ ಭಾರತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಹೆಚ್ಚಿನ ದಾಸ್ತಾನುಗಳಿದ್ದು ಅದರಲ್ಲೂ ವಿಶೇಷವಾಗಿ ಸೆಂಟ್ರಲ್ ಬ್ಯಾಂಕ್‌ನಲ್ಲಿ ಷೇರುಗಳಿವೆ ಇದು ಸಹಕಾರಿಯಾಗಲಿದೆ ಎಂಬುದು ಟಿಮ್ಮರ್‌ ಮಾತಾಗಿದೆ.


ಕೋವಿಡ್ ಸಮಯದಲ್ಲಿ ಭಾರತದ ಸ್ಪಂದನೆ ಶ್ಲಾಘನೀಯ
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಕ್ರಿಯಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಭಾರತದ ಸರಕಾರವನ್ನು ಟಿಮ್ಮರ್ ಹೊಗಳಿದ್ದಾರೆ. ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕ್ ಅಂದಾಜು ಕಲ್ಪನೆಗಳು ರಿಸರ್ವ್ ಬ್ಯಾಂಕ್ ಇಂಡಿಯಾದ ಆರ್ಥಿಕ ವರ್ಷ 23 ರ ಜಿಡಿಪಿ ಬೆಳವಣಿಗೆಯ ಮುನ್ಸೂಚನೆ 7.2% ಕ್ಕಿಂತ ಕಡಿಮೆಯೇ ಇದೆ.


ಇದನ್ನೂ ಓದಿ: Explained: ಜಾಗತಿಕ ಆರ್ಥಿಕತೆಯನ್ನು ಯುಎಸ್ ಡಾಲರ್ ಹೇಗೆ ನಿಯಂತ್ರಿಸುತ್ತದೆ? ಇಲ್ಲಿದೆ ವಿವರ


ವಿಶ್ವದ ಆರ್ಥಿಕತೆಗೆ ಕಂಟಕವಾಗಿರುವ ಸವಾಲುಗಳು
ಇದರೊಂದಿಗೆ, ವಿಶ್ವ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 7 ಕ್ಕಿಂತ ಕಡಿಮೆ ಬೆಳವಣಿಗೆಯನ್ನು ಕಾಣುವ ಇತರ ಏಜೆನ್ಸಿಗಳ ಊಹೆಯಂತೆಯೇ IMF ತನ್ನ ಹೇಳಿಕೆಯನ್ನು ತಿಳಿಸಿದೆ. ವಿಶ್ವ ಆರ್ಥಿಕತೆಯು ಮೂರು ಪ್ರಬಲ ಶಕ್ತಿಗಳಿಂದ ಉಂಟಾಗಿರುವ ಕ್ಲಿಷ್ಟಕರ ಸವಾಲುಗಳನ್ನು ಎದುರಿಸುತ್ತಿದೆ ಅದೆಂದರೆ ಉಕ್ರೇನ್ ರಷ್ಯಾ ನಿರಂತರ ಆಕ್ರಮಣಗಳು, ವಿಸ್ತಾರಗೊಳ್ಳುತ್ತಿರುವ ಹಣದುಬ್ಬರ ಒತ್ತಡ ಇದರಿಂದ ಉಂಟಾಗುತ್ತಿರುವ ವೆಚ್ಚದ ಬಿಕ್ಕಟ್ಟು ಹಾಗೂ ಚೀನಾದ ಅಭಿವೃದ್ಧಿ ಮಂದಗತಿ ಎಂದು IMF ಆರ್ಥಿಕ ಸಲಹೆಗಾರ ಪಿಯರೆ-ಒಲಿವಿಯರ್ ಪಟ್ಟಿಮಾಡಿದ್ದಾರೆ.


ಪ್ರಸ್ತುತ ಜಾಗತಿಕ ಆಘಾತಗಳಿಂದ ಸಾಂಕ್ರಾಮಿಕ ರೋಗದ ನಂತರ ನಿಧಾನವಾಗಿ ಪ್ರಗತಿಗೊಳ್ಳುತ್ತಿರುವ ಆರ್ಥಿಕತೆಯನ್ನು ಪುನಃ ಪಾತಾಳಕ್ಕೆ ಕುಸಿಯುವಂತೆ ಮಾಡುತ್ತದೆ ಹಾಗೂ ಎದುರಿಸಿದ್ದ ಸವಾಲುಗಳನ್ನು ಪುನಃ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿದೆ ಎಂದು ಪಿಯರೆ ಕಳವಳ ವ್ಯಕ್ತಪಡಿಸಿದ್ದಾರೆ.


ಕೆಟ್ಟ ಪರಿಸ್ಥಿತಿ ಇನ್ನಷ್ಟೇ ಬರಬೇಕಿದೆ
ಪ್ರಮುಖ ಆರ್ಥಿಕ ರಂಗಗಳಿಗೆ ಈ ರೀತಿಯಾಗಿ ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಎಚ್ಚರಿಕೆಯ ಕರೆಘಂಟೆಯನ್ನು ಬಾರಿಸಿದ್ದು ಮುಂದಿನ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಯು ನಿಧಾನವಾಗಲಿದೆ ಎಂದು ತಿಳಿಸಿದೆ. ಕೆಟ್ಟ ಪರಿಸ್ಥಿತಿ ಇನ್ನಷ್ಟೇ ಬಂದೊದಗಲಿದೆ ಹಾಗೂ ಹೆಚ್ಚಿನವರಿಗೆ 2023 ಎಂಬುದು ಆರ್ಥಿಕ ಕುಸಿತದ ಭಾವನೆಯನ್ನುಂಟು ಮಾಡಲಿದೆ ಎಂಬುದಾಗಿ ಪಿಯರೆ ಭವಿಷ್ಯ ನುಡಿದಿದ್ದಾರೆ.


ಇದನ್ನೂ ಓದಿ:  Pakistani Rupee: ಪಾಕಿಸ್ತಾನದ ರೂಪಾಯಿ ಈಗ ವಿಶ್ವದ ಅತ್ಯುತ್ತಮ ಕಾರ್ಯನಿರ್ವಹಿಸುವ ಕರೆನ್ಸಿಯಂತೆ


2021 ರಲ್ಲಿ 6% ದಷ್ಟಿದ್ದ ಜಾಗತಿಕ ಬೆಳವಣಿಗೆಯು 2022 ರಲ್ಲಿ 3.2% ಕ್ಕೆ ಇಳಿದಿದೆ ಹಾಗೂ 2023 ರಲ್ಲಿ 2.7%ವಾಗಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ಹೊರತುಪಡಿಸಿ 2001 ರಿಂದ ಇದು ಅತ್ಯಂತ ದುರ್ಬಲ ಜಾಗತಿಕ ಬೆಳವಣಿಗೆಯಾಗಿದೆ ಎಂದು ಪಿಯರೆ ತಿಳಿಸಿದ್ದಾರೆ.

Published by:Ashwini Prabhu
First published: