IKEA Bengaluru: ಜೂನ್​ 22ಕ್ಕೆ ಐಕಿಯ ಸ್ಟೋರ್​ ಗ್ರ್ಯಾಂಡ್ ಓಪನ್​- ಅಬ್ಬಬ್ಬಾ, ಒಂದೇ ಸೂರಿನಡಿ 7 ಸಾವಿರಕ್ಕೂ ಹೆಚ್ಚು ಪ್ರಾಡಕ್ಟ್ಸ್​!

ಮೇ 31ರಂದು ಈ ಐಕಿಯ ಮಳಿಗೆ ಓಪನ್ ಆಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆ ಈ ಮಳಿಗೆ ಪ್ರಾರಂಭವಾಗಿಲ್ಲ. ಐಕಿಯ ಹೊಸ ಓಪನಿಂಗ್​ ಡೇಟ್​ ಅನೌನ್ಸ್​ ಮಾಡಿದೆ.

ಐಕಿಯ ಮಳಿಗೆ

ಐಕಿಯ ಮಳಿಗೆ

  • Share this:
ಹೆಚ್ಚುತ್ತಿರುವ ಸ್ಪರ್ಧಾತ್ಮಕತೆಯ ನಡುವೆಯೇ 2018 ರಲ್ಲಿ ಭಾರತಕ್ಕೆ ಕಾಲಿಟ್ಟ ಸ್ವೀಡಿಷ್ (Swedish) ಪೀಠೋಪಕರಣಗಳ ದೈತ್ಯ ಐಕಿಯ (Ikea) ಕಂಪನಿ ದೇಶದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ ಎಂದು ತಿಳಿದುಬಂದಿದ್ದು, ಹಲವು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. 2018 ರಲ್ಲಿ ಭಾರತ (India) ದಲ್ಲಿ ಪ್ರಾರಂಭವಾದ ಸ್ವೀಡಿಷ್ ಪೀಠೋಪಕರಣ (Furniture's) ಗಳ ದೈತ್ಯ ಸಂಸ್ಥೆ Ikea ದೇಶದ ಎರಡು ನಗರಗಳಲ್ಲಿ ದೊಡ್ಡ ಸ್ವರೂಪದ ಮಳಿಗೆಗಳನ್ನು ನಿರ್ವಹಿಸುತ್ತದೆ ಮತ್ತು ಅಹಮದಾಬಾದ್ ಸೇರಿದಂತೆ 7 ನಗರಗಳಲ್ಲಿ ಆನ್‌ಲೈನ್ ಶಾಪಿಂಗ್ (Online Shopping) ನೀಡುತ್ತಿದೆ. ಇದೀಗ ಬೆಂಗಳೂರಿ (Bengaluru) ನಲ್ಲಿ ತನ್ನ ಮಳಿಗೆ ತೆರೆಯಲು ಐಕಿಯಾ ಸಜ್ಜಾಗಿ  ನಿಂತಿದೆ. ಮೇ 31ರಂದು ಈ ಐಕಿಯ ಮಳಿಗೆ ಓಪನ್ ಆಗಬೇಕಿತ್ತು. ಕಾರಣಾಂತರಗಳಿಂದ ನಿನ್ನೆ ಈ ಮಳಿಗೆ ಪ್ರಾರಂಭವಾಗಿಲ್ಲ. ಐಕಿಯ ಹೊಸ ಓಪನಿಂಗ್​ ಡೇಟ್​ ಅನೌನ್ಸ್​ ಮಾಡಿದೆ.

ಜೂನ್​ 22ರಿಂದ ಆರಂಭವಾಗಲಿದೆ ಐಕಿಯಾ ಮಳಿಗೆ

​ಗೃಹಬಳಕೆಯ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯ’ ನಗರದಲ್ಲಿ ತನ್ನ ಮಳಿಗೆಯನ್ನು ಜೂನ್‌ 22ರಂದು ಆರಂಭಿಸಲಿದೆ. ಈ ಮಳಿಗೆಯು ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡು ಇದೆ ಎಂದು ಪ್ರಕಟಣೆ ತಿಳಿಸಿದೆ. ಆ್ಯಂಜೆ ಹೀಮ್ ಅವರು ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (CM Basavaraj Bommai In Davos) ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ (World Economic Forum Summit, Davos)  ಬೆಂಗಳೂರಿನಲ್ಲಿ IKEA ಮಳಿಗೆ ಆರಂಭದ ಕುರಿತು ಖಚಿತಪಡಿಸಿದ್ದಾರೆ.

12 ಲಕ್ಷ ವಿಸ್ತೀರ್ಣದಲ್ಲಿದೆ ಈ ಐಕಿಯಾ ಮಳಿಗೆ!

12.2 ಎಕರೆ ವಿಸ್ತೀರ್ಣದಲ್ಲಿ, 4.60 ಲಕ್ಷ ಚದರ ಅಡಿಯ ಮಳಿಗೆಯು ಏಳು ಸಾವಿರಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ. ಸಾಮಾನ್ಯವಾಗಿ ಇಕಿಯಾ ಬೃಹತ್ ಶೋರೂಂಗಳನ್ನೇ ಸ್ಥಾಪಿಸುತ್ತದೆ. ಹೀಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಶೋರೂಂ ಪ್ರಾರಂಭಿಸಲಿದೆ. ಮಳಿಗೆ ಯಾವಾಗ ಓಪನ್​ ಆಗುತ್ತೆ ಅಂತ ಬೆಂಗಳೂರಿಗರು ಕಾಯುತ್ತಿದ್ದಾರೆ. ಬೆಂಗಳೂರು ಮಳಿಗೆಯಲ್ಲಿ 800-1000 ನೇರ ಕೆಲಸಗಾರರು ಮತ್ತು 1,500 ಮಂದಿ ಪರೋಕ್ಷ ಸೇವೆಗಳನ್ನು ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: ಇದು ಸ್ವೀಡಿಷ್ ಪೀಠೋಪಕರಣದ ಮಳಿಗೆ.. ಭಾರತದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣವೇನು ಗೊತ್ತಾ?

7000  ಸಾವಿರಕ್ಕೂ ಅಧಿಕ  ಮಾದರಿಯ ಫರ್ನೀಚರ್​​ಗಳು!

ಇಲ್ಲಿ 7000 ಕ್ಕೂ ಅಧಿಕ ವಿವಿಧ ಮಾದರಿಯ ಫರ್ನೀಚರ್‌ಗಳು ಸಿಗಲಿವೆ. ಉತ್ತಮ ಗುಣಮಟ್ಟ ಹಾಗೂ ಕೈಗೆಟುಕುವ ದರ, ಹಾಗೂ ವಿವಿಧ ವಿನ್ಯಾಸಗಳಲ್ಲಿ ಫರ್ನೀಚರ್‌ಗಳು ಲಭ್ಯ ಇದೆ ಎಂದು ಇಕಿಯಾ ತನ್ನ ಪತ್ರಿಕಾ ಬಿಡುಗಡೆಯಲ್ಲಿ ಹೇಳಿದೆ. ಅಧಿಕೃತ ಹೇಳಿಕೆಯ ಪ್ರಕಾರ ಉದ್ಘಾಟನೆಗೆ ಐಕೆಇಎ ಗ್ರೂಪ್ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಸ್ಪರ್ ಬ್ರೋಡಿನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ. ಬೆಂಗಳೂರಿನ ಮಳಿಗೆಯಲ್ಲಿ 800-1000 ನೇರ ಕೆಲಸಗಾರರು ಮತ್ತು 1,500 ಮಂದಿಯನ್ನು ಪರೋಕ್ಷವಾಗಿ ಜೋಡಣೆ ಮತ್ತು ವಿತರಣೆಯಂತಹ ಇತರ ಸೇವೆಗಳನ್ನು ಒದಗಿಸುವುದಾಗಿ IKEA ಈ ಹಿಂದೆ ಹೇಳಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ IKEA ಮಳಿಗೆ! ಯಾವಾಗ ಶುರುವಾಗುತ್ತೆ? ಏನೆಲ್ಲ ಸಿಗುತ್ತೆ?

ಏನೆಲ್ಲ ಸಿಗುತ್ತೆ?


IKEA ಎಂಬುದು ಸ್ವೀಡನ್‌ನಲ್ಲಿ ಸ್ಥಾಪನೆಯಾದ ಬಹುರಾಷ್ಟ್ರೀಯ ಕಂಪನಿಯಾಗಿದೆ.  ಇದು ಪೀಠೋಪಕರಣಗಳು, ಅಡುಗೆ ಸಾಮಾನುಗಳು ಮತ್ತು ಮನೆಯ ಬಿಡಿಭಾಗಗಳನ್ನು ಮಾರಾಟ ಮಾಡುತ್ತದೆ. IKEA ವಿಶ್ವದ ಅತಿದೊಡ್ಡ ಪೀಠೋಪಕರಣ ಕಂಪನಿಯಾಗಿದ್ದು, ವಿಶ್ವದಾದ್ಯಂತ 400 ಮಳಿಗೆಗಳನ್ನು ಹೊಂದಿದೆ. ಲಕ್ಷಾಂತರ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತದೆ.
Published by:Vasudeva M
First published: