ಬೆಂಗಳೂರಿನಲ್ಲಿ IKEA ಮಳಿಗೆ! ಯಾವಾಗ ಶುರುವಾಗುತ್ತೆ? ಏನೆಲ್ಲ ಸಿಗುತ್ತೆ?

ಬೆಂಗಳೂರು ಮಳಿಗೆಯಲ್ಲಿ 800-1000 ನೇರ ಕೆಲಸಗಾರರು ಮತ್ತು 1,500 ಮಂದಿ ಪರೋಕ್ಷ ಸೇವೆಗಳನ್ನು ನೀಡಲಿದ್ದೇವೆ ಎಂದು IKEA ಕಂಪನಿ ತಿಳಿಸಿದೆ. ಹಾಗಾದರೆ ಈ ಮಳಿಗೆಯಲ್ಲಿ ಏನು ಸಿಗುತ್ತೆ?

IKEA ಮಳಿಗೆ (ಸಾಂಕೇತಿಕ ಚಿತ್ರ)

IKEA ಮಳಿಗೆ (ಸಾಂಕೇತಿಕ ಚಿತ್ರ)

 • Share this:
  ಬೆಂಗಳೂರು: ಸ್ವೀಡಿಷ್ ಪೀಠೋಪಕರಣಗಳು ಮತ್ತು ಹೋಮ್‌ವೇರ್ ಕಂಪನಿಯಾದ IKEA, ಜೂನ್ 2022 ರಲ್ಲಿ ಬೆಂಗಳೂರಿನಲ್ಲಿ ತನ್ನ ಪ್ರಮುಖ ಮಳಿಗೆಯನ್ನು ತೆರೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (CM Basavaraj Bommai In Davos) ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ (World Economic Forum Summit, Davos)  ಬೆಂಗಳೂರಿನಲ್ಲಿ IKEA ಮಳಿಗೆ ಆರಂಭದ ಕುರಿತು ಖಚಿತಪಡಿಸಿದ್ದಾರೆ. ಬೆಂಗಳೂರಿನ ನಾಗಸಂದ್ರದಲ್ಲಿ IKEA ಮಳಿಗೆ (IKEA  Store In Bengaluru) ಸ್ಥಾಪಿಸಲಾಗುವುದು. ಬೆಂಗಳೂರು ಮಳಿಗೆಯಲ್ಲಿ 800-1000 ನೇರ ಕೆಲಸಗಾರರು ಮತ್ತು 1,500 ಮಂದಿ ಪರೋಕ್ಷ ಸೇವೆಗಳನ್ನು ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ. 

  ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಐಕೆಇಎ ಗ್ರೂಪ್ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಜೆಸ್ಪರ್ ಬ್ರೋಡಿನ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದರು. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ಸಂಸ್ಥೆಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  800-1000 ನೇರ ಉದ್ಯೋಗ
  ಅಧಿಕೃತ ಹೇಳಿಕೆಯ ಪ್ರಕಾರ ಉದ್ಘಾಟನೆಗೆ ಐಕೆಇಎ ಗ್ರೂಪ್ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಸ್ಪರ್ ಬ್ರೋಡಿನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ. ಬೆಂಗಳೂರಿನ ಮಳಿಗೆಯಲ್ಲಿ 800-1000 ನೇರ ಕೆಲಸಗಾರರು ಮತ್ತು 1,500 ಮಂದಿಯನ್ನು ಪರೋಕ್ಷವಾಗಿ ಜೋಡಣೆ ಮತ್ತು ವಿತರಣೆಯಂತಹ ಇತರ ಸೇವೆಗಳನ್ನು ಒದಗಿಸುವುದಾಗಿ IKEA ಈ ಹಿಂದೆ ಹೇಳಿತ್ತು.

  ರಾಜ್ಯದ ಕುಶಲಕರ್ಮಿಗಳ ಸಹಯೋಗ
  1,200 ಸ್ಥಳೀಯ ಕುಶಲಕರ್ಮಿಗಳ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಒಂಬತ್ತು ಗೃಹೋಪಯೋಗಿ ಪೂರೈಕೆದಾರರೊಂದಿಗೆ IKEA ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ತನ್ನ ಸ್ಥಳೀಯ ಹೆಜ್ಜೆಗುರುತನ್ನು ಹೆಚ್ಚಿಸುತ್ತದೆ ಎಂದು ಕಂಪನಿಯು ತನ್ನ ಹಿಂದಿನ ಹೇಳಿಕೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: Ola Scooter Broke: ಓಡಿಸುವಾಗಲೇ ಮುರಿದ ಓಲಾ ಸ್ಕೂಟರ್ ಸಸ್ಪೆನ್ಷನ್! ಬೇರೆ ಸ್ಕೂಟರ್ ಕೊಡುತ್ತಾ ಕಂಪನಿ?

  ಐಕೆಇಎಗೆ ಕರ್ನಾಟಕವು ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ. ಬೆಂಗಳೂರು ಭಾರತದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು IKEA ಈಮುನ್ನವೇ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

  ಇನ್ನೂ ಎಲ್ಲೆಲ್ಲಿ ಇದೆ?
  ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರಉವ IKEA ಸ್ಟೋರ್ ಮುಂಬೈ ಮತ್ತು ಹೈದರಾಬಾದ್ ನಂತರ ಭಾರತದಲ್ಲಿ ಮೂರನೇ ಪ್ರಮುಖ ಮಳಿಗೆಯಾಗಿದೆ. IKEA ಪ್ರಸ್ತುತ ಹೈದರಾಬಾದ್, ಮುಂಬೈ, ಪುಣೆ, ಅಹಮದಾಬಾದ್, ಸೂರತ್ ಮತ್ತು ವಡೋದರದಲ್ಲಿ ಆನ್‌ಲೈನ್ ಮೂಲಕ ವಸ್ತುಗಳ ಸರಬರಾಜು ವ್ಯವಸ್ಥೆಯನ್ನು ಹೊಂದಿದೆ.

  ಏನೆಲ್ಲ ಸಿಗುತ್ತೆ?
  IKEA ಎಂಬುದು ಸ್ವೀಡನ್‌ನಲ್ಲಿ ಸ್ಥಾಪನೆಯಾದ ಬಹುರಾಷ್ಟ್ರೀಯ ಕಂಪನಿಯಾಗಿದೆ.  ಇದು ಪೀಠೋಪಕರಣಗಳು, ಅಡುಗೆ ಸಾಮಾನುಗಳು ಮತ್ತು ಮನೆಯ ಬಿಡಿಭಾಗಗಳನ್ನು ಮಾರಾಟ ಮಾಡುತ್ತದೆ. IKEA ವಿಶ್ವದ ಅತಿದೊಡ್ಡ ಪೀಠೋಪಕರಣ ಕಂಪನಿಯಾಗಿದ್ದು, ವಿಶ್ವದಾದ್ಯಂತ 400 ಮಳಿಗೆಗಳನ್ನು ಹೊಂದಿದೆ. ಲಕ್ಷಾಂತರ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತದೆ.

  ಬೆಂಗಳೂರಿನ ನಿವಾಸಿಗಳಿಗೆ ಸೌಲಭ್ಯ
  IKEA ಮಳಿಗೆಯ ಮೂಲಕ ನಾವು ಉತ್ತಮವಾಗಿ ವಿನ್ಯಾಸಗೊಳಿಸಿದ, ಕ್ರಿಯಾತ್ಮಕವಾಗಿ ಮನೆಯನ್ನು ಸಜ್ಜುಗೊಳಿಸುವ ಸೌಲಭ್ಯಗಳನ್ನು ಎಲ್ಲಾ ಬೆಂಗಳೂರಿನ ನಿವಾಸಿಗಳಿಗೆ ಉತ್ತಮ ದೈನಂದಿನ ಜೀವನಕ್ಕೆ ಕೊಡುಗೆ ನೀಡುತ್ತೇವೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ, ಕೌಶಲ್ಯ ಮತ್ತು ಸಾಮರ್ಥ್ಯ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲಿದ್ದೇವೆ.

  ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್​ ಮೂಲಕ ಮಾರ್ಚ್​ ತಿಂಗಳಲ್ಲೇ 68,327 ಕೋಟಿ ಖರ್ಚು ಮಾಡಿದ ಭಾರತೀಯರು!

  ಭಾರತ ಮತ್ತು ಜಾಗತಿಕ ಬೇಡಿಕೆಗಳನ್ನು ಪೂರೈಸಲು ಸ್ಥಳೀಯ ಸಂಪನ್ಮೂಲಗಳನ್ನು ಬೆಳೆಸಲಿದ್ದೇವೆ. ಭಾರತದ ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ವಲಯವನ್ನು ಬೆಳೆಸಲು IKEA ಯ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿ ರಾಜ್ಯದ ಅಭಿವೃದ್ಧಿಗೆ ಧನಾತ್ಮಕ ಕೊಡುಗೆ ನೀಡುತ್ತೇವೆ ಎಂದು ಕಂಪನಿಯ ವಕ್ತಾರರಲ್ಲಿ ಒಬ್ಬರಾದ ಬೆಟ್ಜೆಲ್ ಈಮುನ್ನ ಹೇಳಿದ್ದರು.
  Published by:guruganesh bhat
  First published: