• Home
  • »
  • News
  • »
  • business
  • »
  • Hydroponics Startup: ಸಾವಿರಾರು ರೈತರಿಗೆ ಸಹಾಯವಾದ ಐಐಎಂ, ಪದವೀಧರನ ‘ಸಿಟಿ ಗ್ರೀನ್ಸ್’ ಸ್ಟಾರ್ಟ್‌ಅಪ್!

Hydroponics Startup: ಸಾವಿರಾರು ರೈತರಿಗೆ ಸಹಾಯವಾದ ಐಐಎಂ, ಪದವೀಧರನ ‘ಸಿಟಿ ಗ್ರೀನ್ಸ್’ ಸ್ಟಾರ್ಟ್‌ಅಪ್!

ಕೋಲ್ಕತಾದ ಐಐಎಂ ಪದವೀಧರರಾದ ಗೌರವ್ ನಾರಂಗ್

ಕೋಲ್ಕತಾದ ಐಐಎಂ ಪದವೀಧರರಾದ ಗೌರವ್ ನಾರಂಗ್

ಕೋಲ್ಕತಾದ ಐಐಎಂ ಪದವೀಧರರಾದ ಗೌರವ್ ನಾರಂಗ್ ಅವರು ಈ ಹೈಡ್ರೋಪೋನಿಕ್ಸ್ ಬಳಸಿ ವ್ಯವಸಾಯ ಮಾಡಲು ರೈತರಿಗೆ ತರಬೇತಿ ನೀಡುವ ಒಂದು ‘ಸಿಟಿ ಗ್ರೀನ್ಸ್’ ಎಂಬ ಸ್ವಂತ ಸ್ಟಾರ್ಟ್‌ಅಪ್ ಅನ್ನು ಶುರು ಮಾಡಿ, ಇಂದು ಸಾವಿರಾರು ರೈತರು ತಾವು ಮೊದಲು ಗಳಿಸುತ್ತಿದ್ದ ಹಣಕ್ಕಿಂತಲೂ ಹೆಚ್ಚು ಹಣವನ್ನು ಸಂಪಾದಿಸಲು ಸಹಾಯ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಇತ್ತೀಚೆಗೆ ಚೆನ್ನಾಗಿ ಓದಿಕೊಂಡವರು ಹೊಸ ಹೊಸ ವಿನೂತನವಾದ ವಿಧಾನಗಳೊಂದಿಗೆ ಕೃಷಿಕರಿಗೆ (Farmers) ಸಹಾಯ ಮಾಡುವ ನಿಟ್ಟಿನಲ್ಲಿ ಒಂದು ರೀತಿಯ ಸ್ಟಾರ್ಟ್‌ಅಪ್ ಗಳನ್ನು (Startup) ಶುರು ಮಾಡುತ್ತಿದ್ದು, ಅದರಿಂದ ತುಂಬಾನೇ ಯಶಸ್ಸು (Success) ಸಹ ಕಾಣುತ್ತಿದ್ದಾರೆ ಮತ್ತು ಚೆನ್ನಾಗಿ ಹಣ ಸಹ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಇವರ ಈ ಹೊಸ ಮಾದರಿಯ ಸ್ಟಾರ್ಟ್‌ಅಪ್ ಗಳು ಬೇರೆ ಬೇರೆ ರೈತರಿಗೂ ಸಹ ತುಂಬಾನೇ ಸಹಾಯವಾಗುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಈಗ ನಾವು ಹೇಳಲು ಹೊರಟಿರುವ ಕಥೆಯು ಸಹ ಇಂತಹದೇ. ಇಲ್ಲೊಬ್ಬ ಕೋಲ್ಕತಾದ ಐಐಎಂ ಪದವೀಧರರಾದ ಗೌರವ್ ನಾರಂಗ್ ಅವರು ಈ ಹೈಡ್ರೋಪೋನಿಕ್ಸ್ ಬಳಸಿ ವ್ಯವಸಾಯ ಮಾಡಲು ರೈತರಿಗೆ ತರಬೇತಿ ನೀಡುವ ಒಂದು ‘ಸಿಟಿ ಗ್ರೀನ್ಸ್’ ಎಂಬ ಸ್ವಂತ ಸ್ಟಾರ್ಟ್‌ಅಪ್ ಅನ್ನು ಶುರು ಮಾಡಿದ್ದಾರೆ.


ಇಂದು ಸಾವಿರಾರು ರೈತರು ತಾವು ಮೊದಲು ಗಳಿಸುತ್ತಿದ್ದ ಹಣಕ್ಕಿಂತಲೂ ಹೆಚ್ಚು ಹಣವನ್ನು ಸಂಪಾದಿಸಲು ಸಹಾಯ ಮಾಡಿದ್ದಾರೆ.


ಮುಂಬೈ ರೈತನಿಗಾದ ಅನುಭವ ಎಂತದ್ದು ನೋಡಿ..
ತನ್ನ ಪನ್ವೇಲ್ ಫಾರ್ಮ್ ನಲ್ಲಿ ಮುಂಬೈನ ರೈತ ಶಿವ ರಾಮಕೃಷ್ಣನ್ ಅವರು ಈ ಹೈಡ್ರೋಪೋನಿಕ್ಸ್ ಬಳಸಿ ಚೆರ್ರಿ ಟೊಮೆಟೊಗಳನ್ನು ಬೆಳೆಯಲು ಪ್ರಯತ್ನಿಸಿದ್ದರಂತೆ, ಆದರೆ ಅವರು ಮೊದಲ ದಿನದಿಂದ ತೊಂದರೆಗಳನ್ನು ಎದುರಿಸಿದರಂತೆ ಎಂದು ಹೇಳುತ್ತಾರೆ. ಉತ್ಪಾದನೆಯು ಎಂದಿಗೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಮತ್ತು ಆರು ತಿಂಗಳಲ್ಲಿ, ಫಾರ್ಮ್ ಅನ್ನು ಮುಚ್ಚಬೇಕಾಯಿತು ಎಂದು ಅವರು ಹೇಳುತ್ತಾರೆ.


ಹೈಡ್ರೋಪೋನಿಕ್ಸ್ ಅನ್ನು ಬಳಸುವಲ್ಲಿ ಈ ನಿರಾಶಾದಾಯಕ ಪರಿಶ್ರಮದ ನಂತರ, ಕೋಯಂಬತ್ತೂರಿನಲ್ಲಿ ಸಿಟಿ ಗ್ರೀನ್ಸ್ ಎಂಬ ಉದ್ಯಮವು ನಡೆಸುತ್ತಿರುವ ಮೂರು ದಿನಗಳ ತರಬೇತಿ ಕಾರ್ಯಕ್ರಮದ ಬಗ್ಗೆ ಇವರಿಗೆ ತಿಳಿಯಿತು. 2019 ರಲ್ಲಿ ರಾಮಕೃಷ್ಣನ್ ಅವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಲ್ಲಿಗೆ ಹೋದರು ಮತ್ತು ಅಂತಿಮವಾಗಿ ಅದನ್ನು ಎಷ್ಟು ಇಷ್ಟಪಟ್ಟರು ಅಂತ ಹೇಳಿದರೆ ಅವರು ತಮ್ಮ ಕೃಷಿ ಅಭ್ಯಾಸವನ್ನು ಕೋಯಂಬತ್ತೂರಿನಲ್ಲಿಯೇ ಪ್ರಾರಂಭಿಸಲು ನಿರ್ಧರಿಸಿದರು. "ಹೈಡ್ರೋಪೋನಿಕ್ಸ್ ಒಂದು ವಿಜ್ಞಾನ ಎಂದು ನಾನು ಅರಿತುಕೊಂಡೆ ಮತ್ತು ನೀವು ಅದನ್ನು ಸರಿಯಾಗಿ ಮಾಡಿದರೆ ಅದು ಚೆನ್ನಾಗಿ ಕೆಲಸ ಮಾಡುತ್ತದೆ" ಎಂದು ಅವರು ಹೇಳುತ್ತಾರೆ.
ಆದಾಗ್ಯೂ, ರೈತನ ಜೀವನಕ್ಕೆ ಇದು ದಾರಿ ಆಯಿತು ಮತ್ತು 2021 ರಲ್ಲಿ ಅವರು ಅಂತಿಮವಾಗಿ ಸಿಟಿ ಗ್ರೀನ್ಸ್ ಸಹಾಯದಿಂದ ತಮ್ಮ ಜಮೀನಿನಲ್ಲಿ ಹೈಡ್ರೋಪೋನಿಕ್ ಕ್ರಮಗಳನ್ನು ಸಂಯೋಜಿಸುವ ಮೂಲಕ ಕೃಷಿಯನ್ನು ಪ್ರಾರಂಭಿಸಿದರು. ಅವರು ಗಮನಿಸಿದ ಫಲಿತಾಂಶಗಳು ಅಸಾಧಾರಣವಾಗಿದ್ದವು. "ಕಾಲು ಎಕರೆ ಜಮೀನಿನ ಸುಗ್ಗಿಯು ಬಯಲು ಹೊಲಗಳಿಗಿಂತ ಹೆಚ್ಚಾಗಿತ್ತು. ಸಾಂಪ್ರದಾಯಿಕ ಹೈಡ್ರೋಪೋನಿಕ್ಸ್ ಸಸ್ಯವಾದ ಲೆಟ್ಯೂಸ್ ಬದಲಿಗೆ ಸಿಟಿ ಗ್ರೀನ್ಸ್ ತಜ್ಞರ ಸಲಹೆಯಂತೆ ನಾನು ಇಲ್ಲಿ ಭಾರತೀಯ ಸೊಪ್ಪನ್ನು ಬೆಳೆಯಲು ಪ್ರಾರಂಭಿಸಿದೆ" ಎಂದು ಹೇಳಿದರು. ಗೌರವ್ ನಾರಂಗ್ ಅವರು ಸಹ-ಸ್ಥಾಪಿಸಿದ ಸಿಟಿ ಗ್ರೀನ್ಸ್ ಸಹಾಯ ಮಾಡಿದ 5,000 ರೈತರಲ್ಲಿ ರಾಮಕೃಷ್ಣನ್ ಒಬ್ಬರಾಗಿದ್ದರು.


ಉತ್ತಮ ಆಹಾರಕ್ಕಾಗಿ ಒಂದು ಮಿಷನ್
ಐಐಎಂನ ಹಳೆಯ ವಿದ್ಯಾರ್ಥಿ ನಾರಂಗ್ ಅವರು ಮುಂದೊಂದು ದಿನ ಭಾರತೀಯ ಮನೆಗಳಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಉದ್ಯಮವನ್ನು ಸ್ಥಾಪಿಸುತ್ತಾರೆ ಎಂದು ಯಾರು ಊಹಿಸಿರಲಿಲ್ಲ. ಇದಕ್ಕೂ ಮೊದಲು, ಅವರು ಫಾರ್ಮಾ ವಲಯದಲ್ಲಿ ಕೆಲಸ ಮಾಡುತ್ತಿದ್ದರು, ಅದರಲ್ಲಿ ಅವರು ಔಷಧಿಗಳ ಪೂರೈಕೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. "ಕ್ಯಾನ್ಸರ್, ಆಟೋ-ಇಮ್ಯೂನ್ ಕಾಯಿಲೆಗಳು, ಮಧುಮೇಹ ಮುಂತಾದ ದೀರ್ಘಕಾಲೀನ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಾವು ವಿಶೇಷ ಔಷಧ ಮತ್ತು ಆರೈಕೆ ಸೇವೆಗಳನ್ನು ಒದಗಿಸುತ್ತೇವೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ:  Positive Thinking: ಫೈರ್ ಆದವನನ್ನು ಒಂದೇ ದಿನಕ್ಕೆ ವಾಪಸ್‌ ಕರೆಸಿಕೊಂಡ ಕಂಪನಿ! ಕಾರಣ ಇಷ್ಟೇ


ನಗರಗಳಲ್ಲಿನ ಜನರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಅವುಗಳು ಉಂಟು ಮಾಡುವ ರೋಗಗಳ ನಡುವಿನ ಸಂಬಂಧವು ಸಿಟಿ ಗ್ರೀನ್ಸ್ ಗೆ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಲು ಸಾಕಷ್ಟು ಪೂರ್ವನಿದರ್ಶನವಾಗಿತ್ತು. "ಉತ್ಪಾದನೆಯ ಬದಿಯಲ್ಲಿ ಉತ್ತಮ ಗುಣಮಟ್ಟದ ತರಕಾರಿಗಳ ಕೊರತೆ ಇದೆ ಮತ್ತು ಸಾಂಪ್ರದಾಯಿಕ ರೀತಿಯಲ್ಲಿ ಉತ್ಪನ್ನಗಳನ್ನು ಬೆಳೆಯುವ ಕಾರಣದಿಂದಾಗಿ ಕಡಿಮೆ ಕೃಷಿ ಇಳುವರಿ ಇದೆ ಎಂದು ನಾವು ಅರಿತುಕೊಂಡೆವು" ಎಂದು ನಾರಂಗ್ ಹೇಳುತ್ತಾರೆ. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ, ನಾರಂಗ್ ಅವರು ಒಂದು ಉದ್ಯಮವನ್ನು ಸ್ಥಾಪಿಸಲು ನಿರ್ಧರಿಸಿದರು, ಅದರಲ್ಲಿ ಅವರು ವಿವಿಧ ಹೊಲಗಳಿಂದ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ ಮತ್ತು ನಂತರ ಅದನ್ನು ಮಾರಾಟ ಮಾಡುತ್ತಾರೆ. ಆದರೆ ಪ್ರಾರಂಭದಲ್ಲಿ ಅದು ಅಷ್ಟೊಂದು ಸರಳವಾಗಿರಲಿಲ್ಲ.


"ನಾನು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಕುಳಿತಾಗ, 'ಸಾವಯವ' ಎಂದರೆ ಯಾವಾಗಲೂ 'ಕೀಟನಾಶಕಗಳಿಂದ ಮುಕ್ತ' ಎಂದರ್ಥವಲ್ಲ ಎಂದು ನಾನು ಅರಿತುಕೊಂಡೆ. ಸಮಸ್ಯೆ ದೊಡ್ಡ ಪ್ರಮಾಣದಲ್ಲಿರುವುದರಿಂದ ಅವ್ಯವಸ್ಥೆಗೆ ಸುವ್ಯವಸ್ಥೆಯನ್ನು ತರಲು ಪ್ರಯತ್ನಿಸುವುದು ಒಂದು ಪರಿಹಾರವಾಗಿರಲಿಲ್ಲ" ಎಂದು ಅವರು ಹೇಳುತ್ತಾರೆ. ಸುಗ್ಗಿಯ ಸಮಯದಲ್ಲಿ ಪಾಶ್ಚಿಮಾತ್ಯ ದೇಶಗಳು ಹೇಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಯಶಸ್ವಿಯಾದವು ಎಂಬುದರ ಬಗ್ಗೆ ಅವರು ಓದಲು ಪ್ರಾರಂಭಿಸಿದಾಗ ಹೈಡ್ರೋಪೋನಿಕ್ಸ್ ನ ಕಲ್ಪನೆಯಲ್ಲಿ ಎಡವಿದ್ದು ಕಂಡು ಬಂದಿತು.


"ಹೈಡ್ರೋಪೋನಿಕ್ಸ್ ವಿಧಾನ ಒಂದು ಒಳ್ಳೆಯ ಆಯ್ಕೆಯಾಗಿದ್ದರೂ, ಭಾರತದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ರೈತರು ವಿಫಲವಾಗಿದ್ದಾರೆ ಅಂತ ನಾನು ಅರ್ಥಮಾಡಿಕೊಂಡೆ. ಜನಸಾಮಾನ್ಯರಿಗೆ ತಾಜಾ, ಸುರಕ್ಷಿತ ಮತ್ತು ಆರೋಗ್ಯಕರ ಆಹಾರದ ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಖಾತ್ರಿಪಡಿಸುವ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನದ ಮೂಲಕ ಇದನ್ನು ಮಾಡುವ ಉದ್ಯಮವನ್ನು ಪ್ರಾರಂಭಿಸುವುದನ್ನು ನಾನು ಸವಾಲಾಗಿ ತೆಗೆದುಕೊಂಡಿದ್ದೇನೆ, ಅದನ್ನು ನಾವು ವಿಶ್ವದಾದ್ಯಂತದ ರೈತರೊಂದಿಗೆ ಹಂಚಿಕೊಳ್ಳುತ್ತೇವೆ" ಎಂದು ಅವರು ಹೇಳುತ್ತಾರೆ.


2017 ರಲ್ಲಿ ಕೆಲಸ ತೊರೆದು ಸಿಟಿ ಗ್ರೀನ್ಸ್ ಶುರು ಮಾಡಿದ ನಾರಂಗ್
ಈ ಸಿದ್ಧಾಂತವನ್ನು ಮುಂದಕ್ಕೆ ತೆಗೆದುಕೊಂಡು, 2017 ರಲ್ಲಿ, ನಾರಂಗ್ ಫಾರ್ಮಾ ವಲಯವನ್ನು ತೊರೆದು ತನ್ನ ಪತ್ನಿ ಶ್ವೇತಾ ಅವರೊಂದಿಗೆ ಸಿಟಿ ಗ್ರೀನ್ಸ್ ಅನ್ನು ಪ್ರಾರಂಭಿಸಿದರು. 2020 ರಲ್ಲಿ ಕೋಲ್ಕತಾದ ಇನ್ನೊಬ್ಬ ಐಐಎಂ ಹಳೆಯ ವಿದ್ಯಾರ್ಥಿ ರಾಹುಲ್ ಇಂದೋರ್ಕರ್ ಸಹ-ಸಂಸ್ಥಾಪಕರಾಗಿ ಇವರ ಜೊತೆ ಸೇರಿಕೊಂಡರು.


ಸಿಟಿ ಗ್ರೀನ್ಸ್ ಹೇಗೆ ಕೆಲಸ ಮಾಡುತ್ತದೆ?
ಒಮ್ಮೆ ಒಬ್ಬ ರೈತನು ಹೈಡ್ರೋಪೋನಿಕ್ಸ್ ಬಳಸಿ ಕೃಷಿ ಮಾಡಲು ಬಯಸುತ್ತೇನೆ ಎಂದು ಅವರನ್ನು ಸಂಪರ್ಕಿಸಿದ ನಂತರ, ಸಿಟಿ ಗ್ರೀನ್ಸ್ ನ ತಂಡವು ಮೊದಲು, ಗಮನದಲ್ಲಿ ಬೆಳೆಯನ್ನು ಅರ್ಥಮಾಡಿಕೊಳ್ಳುತ್ತದೆ. "ನಂತರ ನಾವು ಸಂಶೋಧನೆ ನಡೆಸುತ್ತೇವೆ ಮತ್ತು ಬೆಳೆಗೆ ಮಾರುಕಟ್ಟೆ ಇದೆಯೇ ಮತ್ತು ಕಾರ್ಯಸಾಧ್ಯವಾಗಿದೆಯೇ ಎಂದು ನೋಡಲು ನಮ್ಮ ಹಿಂದಿನ ಜ್ಞಾನವನ್ನು ಬಳಸುತ್ತೇವೆ. ಅನೇಕ ಜನರು ಹೈಡ್ರೋಪೋನಿಕ್ಸ್ ಕೇವಲ ಎಲೆ ಸೊಪ್ಪುಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಭಾವನೆಯಲ್ಲಿದ್ದಾರೆ, ಆದರೆ ಇದು ನಿಜವಲ್ಲ", ಎಂದು ನಾರಂಗ್ ಹೇಳುತ್ತಾರೆ.


ಇದನ್ನೂ ಓದಿ:  Business Idea: ಸಾಲದ ಸುಳಿಯಲ್ಲಿ ಸಿಲುಕಿದ್ದವನ ಕೈ ಹಿಡಿದಿದ್ದು ತುಳಸಿ! ಇಂದು ವರ್ಷಕ್ಕೆ 10 ಲಕ್ಷ ಆದಾಯ


ಒಮ್ಮೆ ಬೆಳೆಯನ್ನು ನಿರ್ಧರಿಸಿದ ನಂತರ, ಸ್ಥಳವನ್ನು ಸಿಟಿ ಗ್ರೀನ್ಸ್ ತಜ್ಞರು ಮೌಲ್ಯಮಾಪನ ಮಾಡುತ್ತಾರೆ ಮತ್ತು ನಂತರ ಹವಾಮಾನ ಮಾದರಿಗಳನ್ನು ಮ್ಯಾಪ್ ಮಾಡಲಾಗುತ್ತದೆ. "ಫಾರ್ಮ್ಹೌಸ್ ಹವಾಮಾನವನ್ನು ನಿಯಂತ್ರಿಸಬೇಕೇ ಅಥವಾ ಸ್ವಾಭಾವಿಕವಾಗಿ ಗಾಳಿಯಾಡಬೇಕೇ ಎಂದು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ" ಎಂದು ಹೇಳುತ್ತಾರೆ. ಯೋಜನಾ ಹಂತವು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಇದನ್ನು ಅನುಸರಿಸಿ, ತಂಡವು ಪಾಲಿಹೌಸ್ ಅನ್ನು ಸ್ಥಾಪಿಸುತ್ತದೆ ಅಥವಾ ಫಾರ್ಮ್ ನಲ್ಲಿ ಹೈಡ್ರೋಪೋನಿಕ್ಸ್ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ ಮತ್ತು ಕಾರ್ಯಕ್ಷಮತೆಯನ್ನು ನಿರ್ಣಯಿಸಲು ವಾರಗಳಾದ್ಯಂತ ವಿವಿಧ ಸಮಯಗಳಲ್ಲಿ ರೈತನನ್ನು ಭೇಟಿ ಮಾಡುವುದನ್ನು ಮುಂದುವರಿಸುತ್ತದೆ.


"ಈ ವಾರಗಳಲ್ಲಿ, ತಂತ್ರಜ್ಞಾನವನ್ನು ಪರಿಶೀಲಿಸಲು ಡ್ರೈ ರನ್ ಅನ್ನು ನಡೆಸಲಾಗುತ್ತದೆ, ಮತ್ತು ನಂತರ ನಮ್ಮ ಕೃಷಿ ವಿಜ್ಞಾನಿಗಳು ತರಕಾರಿ ಸಸಿಗಳನ್ನು ಕಸಿ ಮಾಡಲು ಸಹಾಯ ಮಾಡಲು ರೈತರನ್ನು ಭೇಟಿ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ. ತಮ್ಮ ಆಟೋಮೇಷನ್ ಅನ್ನು ಫಾರ್ಮ್ ಗೆ ಸಂಯೋಜಿಸುವ ಮೂಲಕ, ರೈತರು ಮಾನವ ದೋಷಗಳನ್ನು ತೆಗೆದು ಹಾಕಲಾಗುತ್ತದೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು.


ಈ ಫಾರ್ಮ್ ಗಳ ದಕ್ಷತೆಯನ್ನು ಹೆಚ್ಚಿಸುವುದು ಹೇಗೆ?
ಸಿಟಿ ಗ್ರೀನ್ಸ್ ಅಹಮದಾಬಾದ್ ನಲ್ಲಿ ನಾಲ್ಕು ಫಾರ್ಮ್ ಗಳನ್ನು ಹೊಂದಿದೆ, ಅವುಗಳಲ್ಲಿ ಮೂರು ಹೈಡ್ರೋಫೋನಿಕ್ ಮತ್ತು ಒಂದು ಒಳಾಂಗಣ ಮತ್ತು ಮತ್ತೊಂದು ಬೆಂಗಳೂರಿನಲ್ಲಿ ಹೈಡ್ರೋಫೋನಿಕ್ ಫಾರ್ಮ್ ಆಗಿದೆ. "ನಾವು ಇಲ್ಲಿ ಬೆಳೆಯುವ ಆಹಾರವನ್ನು ಬಿಗ್ ಬಾಸ್ಕೆಟ್ ನಂತಹ ಕಂಪನಿಗಳಿಗೆ ನೀಡುತ್ತೇವೆ. ಮಿಲ್ಕ್ ಬಾಸ್ಕೆಟ್, ಗಬ್ಬರ್ ಫಾರ್ಮ್ ಗಳು ಮತ್ತು ರಿಟೇಲ್ ಸ್ಟೋರ್ ಗಳು, ಇತ್ಯಾದಿಗಳ ಮೂಲಕ ಆಹಾರವನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ" ಎಂದು ಅವರು ಹೇಳುತ್ತಾರೆ.
ಅವರ ವಾಣಿಜ್ಯೀಕರಿಸಿದ ಐಒಟಿ ತಂತ್ರಜ್ಞಾನ ಸೂಟ್ ಅನ್ನು ಭಾರತದಾದ್ಯಂತ 20ಕ್ಕೂ ಹೆಚ್ಚು ಫಾರ್ಮ್ ಗಳಲ್ಲಿ ಬಳಸಲಾಗುತ್ತಿದೆ, ಮತ್ತು ಉತ್ತರಾಖಂಡದಲ್ಲಿ 2021 ರಲ್ಲಿ ಪ್ರಾರಂಭವಾದ ಅವರ ಫಾರ್ಮ್ ಏರೋಪೋನಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ವೈದ್ಯಕೀಯ ಗಾಂಜಾವನ್ನು ಬೆಳೆಸಲು ಭಾರತದಲ್ಲಿ ಮೊದಲ ಸಂಪೂರ್ಣ ಸ್ವಯಂಚಾಲಿತ ಫಾರ್ಮ್ ಆಗಿದೆ.


ಇದರೊಂದಿಗೆ, ತಂಡವು ಭಾರತದಾದ್ಯಂತದ ರೈತರಿಗಾಗಿ ಹಲವಾರು ಒಳಾಂಗಣ ಮತ್ತು ಪಾಲಿಹೌಸ್ ಹೈಡ್ರೋಫೋನಿಕ್ ಫಾರ್ಮ್ ಗಳನ್ನು ಸಹ ಸ್ಥಾಪಿಸಿದೆ. ಇವುಗಳಲ್ಲಿ ಅಲ್ಮೋರಾ, ಹರಿದ್ವಾರ, ದೆಹಲಿ, ಅಹ್ಮದಾಬಾದ್, ಬರೋಡಾ, ಸೇಲಂ, ಕೋಯಂಬತ್ತೂರು, ಹೈದರಾಬಾದ್ ಮತ್ತು ಇನ್ನೂ ಹೆಚ್ಚಿನ ನಗರಗಳು ಸೇರಿವೆ. "ಕಳೆದ ಕೆಲವು ವರ್ಷಗಳಲ್ಲಿ ನಾವು 25ಕ್ಕೂ ಹೆಚ್ಚು ಫಾರ್ಮ್ ಗಳನ್ನು ಸ್ಥಾಪಿಸಿದ್ದೇವೆ" ಎಂದು ನಾರಂಗ್ ಹೇಳುತ್ತಾರೆ.


ಭಾರತದಲ್ಲಿರುವ ಪ್ರತಿಯೊಂದು ಫಾರ್ಮ್ ಅನ್ನು ಸ್ಮಾರ್ಟ್ ಫಾರ್ಮ್ ಮಾಡುವುದು ಗುರಿಯಂತೆ!
ಭಾರತದ ಪ್ರತಿಯೊಂದು ಫಾರ್ಮ್ ಅನ್ನು 'ಸ್ಮಾರ್ಟ್' ಮಾಡುವುದು ಅವರ ಗುರಿಯಾಗಿದ್ದರೂ, ಸಿಟಿ ಗ್ರೀನ್ಸ್ ತಮ್ಮ ಕೊಡುಗೆಗಳ ಮೂಲಕ, ಪ್ರತಿಯೊಬ್ಬರೂ ಪ್ರಯೋಜನ ಪಡೆಯುತ್ತಾರೆ ಎಂದು ಖಚಿತಪಡಿಸಿದೆ. "ಹವ್ಯಾಸಿ ಬೆಳೆಗಾರರಿಗೆ ನಾವು ಕಿಟ್ ಗಳು, ಪೋಷಕಾಂಶಗಳು ಮತ್ತು ಇತರ ಮಾಹಿತಿಗಳನ್ನು ಸಹ ನಾವು ಒದಗಿಸುತ್ತೇವೆ" ಎಂದು ರಾಹುಲ್ ಹೇಳುತ್ತಾರೆ, ಈ ಕಿಟ್ ಗಳನ್ನು ಅವರು ಅಭಿವೃದ್ಧಿಪಡಿಸುತ್ತಾರೆ ಮತ್ತು ತಯಾರಿಸುತ್ತಾರೆ.


ಅವರು ಹೈಡ್ರೋಪೋನಿಕ್ ಮತ್ತು ಒಳಾಂಗಣ ಲಂಬವಾದ ಫಾರ್ಮ್ ಗಳ ಸ್ಥಾಪನೆಯಲ್ಲಿ ವಾಣಿಜ್ಯ ಬೆಳೆಗಾರರಿಗೆ ಸಹಾಯ ಮಾಡುತ್ತಾರೆ ಎಂದು ಅವರು ಹೇಳುತ್ತಾರೆ, ಇದರಲ್ಲಿ ಪರಿಕಲ್ಪನೆ, ವಿನ್ಯಾಸ, ಸೆಟ್-ಅಪ್, ಕೃಷಿ ವಿಜ್ಞಾನ ಮತ್ತು ರೈತರಿಗೆ ಮಾರಾಟದ ಬೆಂಬಲವು ಸಹ ನೀಡಲಾಗುತ್ತದೆ ಎಂದು ಹೇಳುತ್ತಾರೆ.


ಇದನ್ನೂ ಓದಿ:  Business Idea: ಹೂವಿನ ವ್ಯಾಪಾರವನ್ನು ಹೀಗೆ ಆರಂಭಿಸಿ, ಕೈ ತುಂಬಾ ದುಡ್ಡು ಮಾಡಿ!


"ಇಂದು, ಜನರು ಆರೋಗ್ಯಕರವಾದ ಹೈಡ್ರೋಪೋನಿಕ್ ಆಹಾರದ ಬೆಲೆಗಳು ಮತ್ತು ಸ್ವೀಕಾರದ ಬಗ್ಗೆ ಹೆಚ್ಚು ತಿಳಿದಿದ್ದಾರೆ, ಇದು ಸಾಕಷ್ಟು ಉತ್ತಮವಾಗಿದೆ. ಇದು ಸಿಟಿ ಗ್ರೀನ್ಸ್ ಗೆ ಮತ್ತು ಆರಂಭಿಕ ಪ್ರವರ್ತಕರಾದ ಮತ್ತು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಇತರ ರೈತರಿಗೆ ಉತ್ತಮ ಲಾಭದಾಯಕತೆ ಮತ್ತು ಆದಾಯವನ್ನು ಖಚಿತಪಡಿಸುತ್ತದೆ" ಎಂದು ನಾರಂಗ್ ಹೇಳುತ್ತಾರೆ. ಅವರ ಕೆಲಸಕ್ಕಾಗಿ, ಸಿಟಿ ಗ್ರೀನ್ಸ್ ಅವರ ಕೆಲಸವನ್ನು ಮೆಚ್ಚಿಕೊಂಡು ಸರ್ಕಾರದಿಂದ 65 ಲಕ್ಷ ರೂಪಾಯಿಗಳ ಅನುದಾನವನ್ನು ಸಹ ಇವರಿಗೆ ನೀಡಲಾಯಿತು. ಕಳೆದ ವರ್ಷ ಈ ಉದ್ಯಮವು 8 ಕೋಟಿ ರೂಪಾಯಿಗಳ ವಹಿವಾಟು ಕಂಡಿತು.

Published by:Ashwini Prabhu
First published: