ಹೊಸ ತೆರಿಗೆ ಪದ್ಧತಿಯನ್ನು (New Tax Slabs) ಆಯ್ಕೆ ಮಾಡಿಕೊಳ್ಳುವ ತೆರಿಗೆದಾರರಿಗೆ ಕೇಂದ್ರ ಸರಕಾರ (Central Government) ಕನಿಷ್ಟ ಪರಿಹಾರವನ್ನು ಘೋಷಿಸಿದೆ. ಈ ಕನಿಷ್ಟ ಪರಿಹಾರವು ನಿಮ್ಮ ಆದಾಯ ತೆರಿಗೆಯನ್ನು ನಿಮ್ಮ ಒಟ್ಟು ಆದಾಯ ಹಾಗೂ ನಿಮ್ಮ ವಿನಾಯಿತಿ ಮಿತಿಯ (Exception Limit) ನಡುವೆ 40% ಪಾವತಿಸಲು ನಿರ್ಬಂಧಿಸುತ್ತದೆ. ಇದೀಗ ತೆರಿಗೆ ರಹಿತ ಮಿತಿಯಾದ ರೂ 7 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆದಾಯ (Income) ಗಳಿಸುವ ವ್ಯಕ್ತಿಗಳು ವಿಭಿನ್ನ ಆದಾಯದ ಮೇಲೆ ಮಾತ್ರ ತೆರಿಗೆಯನ್ನು ಪಾವತಿಸುತ್ತಾರೆ. ಶುಕ್ರವಾರ ಲೋಕಸಭೆಯಲ್ಲಿ ಅಂಗೀಕರಿಸಲಾದ ಹಣಕಾಸು ಮಸೂದೆ 2023 ರಲ್ಲಿ ಸರ್ಕಾರವು ಈ ತಿದ್ದುಪಡಿಯನ್ನು ಪರಿಚಯಿಸಿದೆ.
ಹೊಸ ತಿದ್ದುಪಡಿ ಹೇಗೆ ಅನ್ವಯವಾಗುತ್ತದೆ?
ನಿಬಂಧನೆ ಹೇಗೆ ಅನ್ವಯವಾಗುತ್ತದೆ ಎಂದರೆ ಹೊಸ ತೆರಿಗೆ ಪದ್ಧತಿಯ ಅನುಸಾರವಾಗಿ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ತೆರಿಗೆದಾರರು 7 ಲಕ್ಷ ವಾರ್ಷಿಕ ಆದಾಯವನ್ನು ಹೊಂದಿದ್ದರೆ ಅವರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ತೆರಿಗೆದಾರರು 7,00,100 ರೂ ಆದಾಯ ಹೊಂದಿದ್ದರೆ ಮಾತ್ರ ತೆರಿಗೆಯಾಗಿ ರೂ 25,010 ಅನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ರೂ 100 ಎಂಬ ಹೆಚ್ಚುವರಿ ಆದಾಯ ಇಲ್ಲಿ ರೂ 25,010 ತೆರಿಗೆ ಪಾವತಿಗೆ ಕಾರಣವಾಗಿದೆ.
ಆದಾಯ ರೂ 7 ಲಕ್ಷವನ್ನು ಮೀರಬಾರದು
ಇದೀಗ ತಿದ್ದುಪಡಿಯ ಅನುಸಾರ ತೆರಿಗೆದಾರ ಪಾವತಿಸುವ ತೆರಿಗೆಯು ರೂ 7 ಲಕ್ಷವನ್ನು ಮಿರಿದ ಆದಾಯಕ್ಕಿಂತ ( ರೂ 100) ಹೆಚ್ಚಿರಬಾರದು ಎಂದು ಸಚಿವಾಲಯ ತಿಳಿಸಿದೆ. 2023 ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದ್ದರು.
ಇದನ್ನೂ ಓದಿ: ಆ ದಿನಾಂಕದೊಳಗೆ ಐಟಿಆರ್ ಸಲ್ಲಿಸದಿದ್ದರೆ ದಂಡ, ತೆರಿಗೆ ಪಾವತಿದಾರರೇ ಅಲರ್ಟ್!
ಈ ಕ್ರಮವು, ಸಂಬಳದ ವರ್ಗದ ತೆರಿಗೆದಾರರನ್ನು ಹೂಡಿಕೆ ವಿನಾಯಿತಿಗಳಿಲ್ಲದೆ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ತೆರಿಗೆ ಹೇಗೆ ಅನ್ವಯವಾಗುತ್ತದೆ?
2023 ರ ಬಜೆಟ್‌ನಲ್ಲಿನ ಘೋಷಣೆಯ ಪ್ರಕಾರ, ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ, ರೂ 3 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. 3-6 ಲಕ್ಷದ ನಡುವಿನ ಆದಾಯಕ್ಕೆ 5 ಪ್ರತಿಶತ ತೆರಿಗೆ ವಿಧಿಸಲಾಗುತ್ತದೆ; ಅಂತೆಯೇ 6 ರಿಂದ 9 ಲಕ್ಷದ ಆದಾಯಕ್ಕೆ 10% ತೆರಿಗೆ, 9-12 ಲಕ್ಷ ಆದಾಯಕ್ಕೆ 15% ತೆರಿಗೆ, ರೂ 12-15 ಲಕ್ಷ ಆದಾಯಕ್ಕೆ 20% ತೆರಿಗೆ ಹಾಗೂ 15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತದೆ ಎಂಬುದು ವರದಿಯಾಗಿದೆ.
ಈ ಪರಿಹಾರದಿಂದ ಯಾರಿಗೆ ಪ್ರಯೋಜನವಿದೆ?
ಈಗ ಸರ್ಕಾರವು 2023 ರ ಹಣಕಾಸು ಮಸೂದೆಗೆ ತಿದ್ದುಪಡಿಗಳನ್ನು ತಂದಿದೆ, ಇದು ವಾರ್ಷಿಕ 7 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಆದಾಯ ಹೊಂದಿರುವ ತೆರಿಗೆದಾರರಿಗೆ ಮಾರ್ಜಿನಲ್ ರಿಲೀಫ್ ಅಂದರೆ ಕನಿಷ್ಟ ಪರಿಹಾರವನ್ನು ಘೋಷಿಸಿದೆ. ರೂ 7,27,777 ಆದಾಯ ಹೊಂದಿರುವ ವೈಯಕ್ತಿಕ ತೆರಿಗೆದಾರರು ಈ ಪರಿಹಾರದಿಂದ ಪ್ರಯೋಜನ ಪಡೆಯುತ್ತಾರೆ ಎಂಬುದು ತೆರಿಗೆ ತಜ್ಞರ ಅಭಿಪ್ರಾಯವಾಗಿದೆ. ಆದಾಗ್ಯೂ, ಕನಿಷ್ಠ ಪರಿಹಾರಕ್ಕೆ ಅರ್ಹವಾಗಿರುವ ಆದಾಯದ ಮಿತಿಯನ್ನು ಸರಕಾರ ಇನ್ನೂ ಸೂಚಿಸಿಲ್ಲ.
ವೈಯಕ್ತಿಕ ತೆರಿಗೆದಾರರಿಗೆ ಏನಾದರೂ ಲಾಭವಿದೆಯೇ?
ಹಾಗಾಗಿ ರೂ 7,27,700 ವರೆಗಿನ ಆದಾಯ ಹೊಂದಿರುವ ವ್ಯಕ್ತಿಯು ಈ ಕನಿಷ್ಠ ಪರಿಹಾರದಿಂದ ಪ್ರಯೋಜನ ಪಡೆಯಬಹುದು ಎಂದು ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿ ಪಾಲುದಾರ ಸಂದೀಪ್ ಜುಂಜುನ್‌ವಾಲಾ ತಿಳಿಸಿದ್ದಾರೆ. ಅಲ್ಲದೆ ವೈಯಕ್ತಿಕ ತೆರಿಗೆದಾರರಿಗೆ ಕನಿಷ್ಠ ಪರಿಹಾರ ಇದರಿಂದ ದೊರೆಯಲಿದೆ ಎಂದು ಸಂದೀಪ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ