• Home
 • »
 • News
 • »
 • business
 • »
 • Layoffs 2022: ನಿಮ್ಮ ಕಂಪನಿಯಲ್ಲಿಯೂ ‘ಲೇ-ಆಫ್’ ಶುರುವಾಗಬಹುದೇ ಎಂದು ಈ ರೀತಿ ತಿಳಿಯಿರಿ

Layoffs 2022: ನಿಮ್ಮ ಕಂಪನಿಯಲ್ಲಿಯೂ ‘ಲೇ-ಆಫ್’ ಶುರುವಾಗಬಹುದೇ ಎಂದು ಈ ರೀತಿ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮಗೆ ಕಂಪನಿಯು ನೀಡಿದ ಸವಲತ್ತುಗಳು ಒಂದರ ನಂತರ ಇನ್ನೊಂದು ಕಣ್ಮರೆಯಾಗಲು ಪ್ರಾರಂಭಿಸಿದಾಗ ನೀವು ಸ್ವಲ್ಪ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲಿ ಹಣವನ್ನು ಉಳಿಸಲು ಅಥವಾ ಕಡಿತಗೊಳಿಸಲು ಕಂಪನಿ ನೋಡುತ್ತಿದೆ ಅಂತ ಅರ್ಥವಾಗುತ್ತದೆ.

 • Share this:

  ಈಗಂತೂ ದೊಡ್ಡ ದೊಡ್ಡ ಐಟಿ ಕಂಪನಿಗಳು (IT Companies) ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ (Layoffs 2022) ಮಾಡಿರುವ ಸುದ್ದಿಗಳೇ ಹರಿದಾಡುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಉದ್ಯೋಗ ಕಡಿತಗಳಿಗೆ (Job Cut) ಅನೇಕ ರೀತಿಯ ಕಾರಣಗಳಿವೆ ಅಂತ ಕಂಪನಿಗಳು ಹೇಳುತ್ತಿವೆ. ಒಟ್ಟಿನಲ್ಲಿ ಇದರಿಂದ ತೊಂದರೆಯಾಗುವುದು ಮಾತ್ರ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅಂತ ಹೇಳಬಹುದು. ಆದ್ದರಿಂದ, ನಿಮ್ಮ ಕೆಲಸವು ಅಪಾಯದಲ್ಲಿದೆಯೇ ಎಂದು ನೀವು ಹೇಗೆ ಮೊದಲೇ ತಿಳಿದುಕೊಳ್ಳಬಹುದು? ಆ ಪಿಂಕ್ ಸ್ಲಿಪ್ ನಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಹೆಸರು ಇರಬಹುದು ಮತ್ತು ನಿಮ್ಮ ವೃತ್ತಿಜೀವನವನ್ನು ಮುಂದುವರಿಸಲು ನೀವು ಬೇರೆ ಯಾವ ಕಂಪನಿಯಲ್ಲಿ ಕೆಲಸ ಹುಡುಕಿಕೊಂಡು ಹೋದರೆ ಒಳ್ಳೆಯದು ಎಂಬ ಸುಳಿವನ್ನು ಕೆಲವು ಅಂಶಗಳು ನೀಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  • ‘ಲೇ-ಆಫ್’ ನಿಮ್ಮ ಕಂಪನಿಗೂ ಕಾಲಿಡುವ ಸಾಧ್ಯತೆಯನ್ನು ತೋರಿಸುವ ಸೂಕ್ಷ್ಮ ಚಿಹ್ನೆಗಳು


  1. ಒಳ್ಳೆಯ ಪ್ರಾಜೆಕ್ಟ್ ಗಳನ್ನು ಬೇರೆ ವ್ಯಕ್ತಿಗೆ ಕೊಡುವುದು


  ಒಂದು ವೇಳೆ ನಿಮಗೆ ನೀಡುವ ಕೆಲಸಗಳನ್ನು ಕಂಪನಿಯವರು ಬೇರೆಯವರಿಗೆ ನೀಡುತ್ತಿದ್ದರೆ, ಅಲ್ಲಿಗೆ ನೀವು ಸ್ವಲ್ಪ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ವಿಶೇಷವಾಗಿ ಈ ರೀತಿಯಾಗಿ ಒಂದಕ್ಕಿಂತ ಹೆಚ್ಚು ಬಾರಿ ಸಂಭವಿಸಿದರಂತೂ ಈ ಲೇ-ಆಫ್ ಪ್ರಕ್ರಿಯೆ ನಿಮ್ಮಲ್ಲಿಯೂ ಶುರುವಾಗುತ್ತದೆ ಅಂತ ತಿಳಿದುಕೊಳ್ಳಿರಿ. ಭವಿಷ್ಯದ ಯಾವ ಪ್ರಾಜೆಕ್ಟ್ ಗಳನ್ನು ನಿಮಗೆ ಕೊಡಬಹುದು ಅಂತ ನಿಮ್ಮ ಮ್ಯಾನೇಜರ್ ಗೆ ಕೇಳಿ. ಆಗ ಅವರು ಅಸ್ಪಷ್ಟವಾಗಿ ಉತ್ತರಿಸಿದರೆ ಅದು ನಿಮ್ಮ ಕೆಲಸ ಕಳೆದುಕೊಳ್ಳುವ ಸುಳಿವು ಆಗಿರುತ್ತದೆ.


  top 10 largest tech layoffs that big tech companies underwent in 2022
  ಸಾಂದರ್ಭಿಕ ಚಿತ್ರ


  2. ಅನವಶ್ಯಕ ಬಜೆಟ್ ಗಳನ್ನು ಕಡಿಮೆ ಮಾಡುತ್ತಿರುವುದು


  ನಿಮಗೆ ಕಂಪನಿಯು ನೀಡಿದ ಸವಲತ್ತುಗಳು ಒಂದರ ನಂತರ ಇನ್ನೊಂದು ಎಂಬಂತೆ ಕಣ್ಮರೆಯಾಗಲು ಪ್ರಾರಂಭಿಸಿದಾಗ ನೀವು ಸ್ವಲ್ಪ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲಿ ಹಣವನ್ನು ಉಳಿಸಲು ಅಥವಾ ಕಡಿತಗೊಳಿಸಲು ಕಂಪನಿ ನೋಡುತ್ತಿದೆ ಅಂತ ಅರ್ಥವಾಗುತ್ತದೆ.


  3. ಹೊಸ ಉತ್ಪನ್ನಗಳು ಅಥವಾ ವಿಸ್ತರಣೆಗಳನ್ನು ಮುಂದೂಡುತ್ತಿರುವುದು


  ಕಂಪನಿಯು ಒಳ್ಳೆಯ ಸಮಯದಲ್ಲಿ ಉದ್ಯೋಗಿಗೆ ಎಲ್ಲಾ ಸವಲತ್ತುಗಳನ್ನು ನೀಡುತ್ತಿರುತ್ತದೆ, ಏಕೆಂದರೆ ಅದರ ಉತ್ಪನ್ನಗಳು ಮತ್ತು ವ್ಯವಹಾರಗಳು ಬೆಳವಣಿಗೆಗಾಗಿ ಉಪಕ್ರಮಗಳಲ್ಲಿ ಮುಳುಗಿರುತ್ತವೆ. ದುರ್ಬಲ ಸಮಯಗಳಲ್ಲಿ, ಅವರು ಭವಿಷ್ಯವನ್ನು ನೋಡುವ ಬದಲು, ಈಗ ಆದಾಯವನ್ನು ತರುವ ಗ್ಯಾರಂಟಿಯ ಮೇಲೆ ಕೇಂದ್ರೀಕರಿಸುವ ಮೂಲಕ ಮೂಲಭೂತ ಅಂಶಗಳಿಗೆ ಹಿಂತಿರುಗುತ್ತಾರೆ.


  • ‘ಲೇ-ಆಫ್’ ಸಾಧ್ಯತೆಯನ್ನು ತೋರಿಸುವ ಗಂಭೀರ ಚಿಹ್ನೆಗಳು


  1. ಕಂಪನಿಯಲ್ಲಿನ ಬಹುತೇಕ ಪ್ರಕ್ರಿಯೆಗಳನ್ನು ಬಿಗಿಗೊಳಿಸುವುದು


  ಕಂಪನಿಯು ಎಲ್ಲಾ ಹಣಕಾಸು ವಿನಿಮಯಗಳನ್ನು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದಾಗ ಮತ್ತು ಉನ್ನತ ಅಧಿಕಾರಿಗಳಿಂದ ಅನುಮೋದನೆಗಳನ್ನು ಅಗತ್ಯವಿರುವಾಗ ಇದು ಎಂದಿಗೂ ಉತ್ತಮ ಸಂಕೇತವಲ್ಲ. ಉದಾಹರಣೆಗೆ ವೆಚ್ಚದ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ, ಖರೀದಿ ಆದೇಶಗಳನ್ನು ಪಡೆಯಲು ಹೊಸ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗುತ್ತಿದೆ ಮತ್ತು ಈ ಹಿಂದೆ ಪ್ರಶ್ನಾತೀತ ವೆಚ್ಚಗಳಿಗೆ ಸಣ್ಣ ಹಣವನ್ನು ಟ್ಯಾಪ್ ಮಾಡಲು ಅನುಮೋದನೆಗಳನ್ನು ಜಾರಿಗೆ ತರಲಾಗುತ್ತಿದೆ.


  top 10 largest tech layoffs that big tech companies underwent in 2022
  ಸಾಂದರ್ಭಿಕ ಚಿತ್ರ


  2. ಬೇರೆ ಕಂಪನಿಯೊಂದಿಗೆ ವಿಲೀನವಾಗುವುದು


  ಈ ಘಟನೆಯು ಇಡೀ ಕಂಪನಿಗೆ ಒಂದು ಸ್ಮಾರ್ಟ್ ನಡೆಯಾಗಿರಬಹುದು, ಆದರೆ ಇದು ಯಾವಾಗಲೂ ಅದರ ಉದ್ಯೋಗಿಗಳಿಗೆ ಉತ್ತಮ ಸಂಕೇತವಲ್ಲ. ಅದರರ್ಥ ಭವಿಷ್ಯದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಹುದು ಅಂತ ಸುಳಿವು ನೀಡುತ್ತದೆ.


  3. ನಿಮಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡುತ್ತಿಲ್ಲ


  ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬೇಕು ಅಂತ ನಿರ್ಧರಿಸಿದಾಗ ತಂಡದ ಸಭೆಗಳಿಗೆ ಆಹ್ವಾನಿಸಲಾಗುವುದಿಲ್ಲ ಅಥವಾ ಕೆಲಸವನ್ನು ನೀಡುವ ಒಂದು ಪ್ರಕ್ರಿಯೆಯಿಂದ ತೆಗೆದುಹಾಕಲಾಗುತ್ತದೆ. ನಿಮ್ಮನ್ನು ಏಕೆ ಆಹ್ವಾನಿಸುತ್ತಿಲ್ಲ ಎಂದು ನೀವು ಕೇಳಿ ನೋಡಿ ಮತ್ತು ಅದರಲ್ಲಿ ಭಾಗವಹಿಸುವ ನಿಮ್ಮ ಆಸಕ್ತಿಯನ್ನು ಅವರ ಮುಂದೆ ವ್ಯಕ್ತಪಡಿಸಿ.


  4. ಕಾರ್ಯನಿರ್ವಾಹಕರು ಸಾಮಾನ್ಯಕ್ಕಿಂತ ಹೆಚ್ಚು ಒತ್ತಡಗೊಳಗಾಗಿರುತ್ತಾರೆ


  ಕಾರ್ಯನಿರ್ವಾಹಕರು ನುಣುಚಿಕೊಳ್ಳುತ್ತಿದ್ದರೆ ಅಥವಾ ಭವಿಷ್ಯದಲ್ಲಿ ಬರುವ ಪ್ರಾಜೆಕ್ಟ್ ಗಳ ಬಗ್ಗೆ ಏನೂ ಹೇಳದೇ ಹೋದರೆ, ಅದು ಅನುಮಾನಾಸ್ಪದವಾಗಿರುತ್ತದೆ. ಇಷ್ಟೊಂದು ಅನಿಶ್ಚಿತತೆಯ ಬಗ್ಗೆ ಸುಳಿವು ನೀಡುವುದೇ ಅಧಿಕಾರಿಗಳ ಮೌನ ಎಂದು ಹೇಳಬಹುದು. ಉದಾಹರಣೆಗೆ ಇಲಾಖೆಯ ಮುಖ್ಯಸ್ಥರು ಅಥವಾ ಹಿರಿಯ ಅಧಿಕಾರಿಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಖಾಸಗಿ ಕರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.
  • ‘ಲೇ-ಆಫ್’ ನ ಬಗ್ಗೆ ಎಚ್ಚರಿಕೆ ನೀಡುವ ಅಂಶಗಳು


  1. ನಿಮ್ಮ ಕಂಪನಿಯು ಲಾಭ ಗಳಿಸದೇ ಇರುವುದು


  ನಿಮ್ಮ ಕಂಪನಿಯ ಆದಾಯದಲ್ಲಿ ಅಲ್ಪಾವಧಿಯ ಕುಸಿತದಿಂದ ವಿಚಲಿತರಾಗಬೇಡಿ. ಇದು ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರಗಳ ಜೊತೆಯಲ್ಲೂ ಸಹ ಕೆಲವೊಮ್ಮೆ ಸಂಭವಿಸುತ್ತದೆ. ಆದಾಗ್ಯೂ, ನಿಮ್ಮ ಕಂಪನಿಯು ಸತತವಾಗಿ ಹಲವಾರು ತ್ರೈಮಾಸಿಕಗಳಲ್ಲಿ ತನ್ನ ಲಾಭದಾಯಕತೆಯ ಗುರಿಗಳನ್ನು ಸಾಧಿಸದಿದ್ದರೆ, ನಿಮ್ಮ ರೆಸ್ಯೂಮ್ ಅನ್ನು ಬೇರೆ ಕಂಪನಿಗಳಿಗೆ ಕಳಿಸುವುದು ಉತ್ತಮ.


  2. ಅಗತ್ಯ ಬಜೆಟ್ ಗಳನ್ನು ಕಡಿತಗೊಳಿಸುವುದು


  ಕಂಪನಿಯು ಅಗತ್ಯವಾದ ಮಾರ್ಕೆಟಿಂಗ್ ಬಜೆಟ್ ಅನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದರೆ, ಭೌತಿಕ ಕಚೇರಿಗಳನ್ನು ಕಡಿಮೆಗೊಳಿಸಲಾಗಿದೆ ಮತ್ತು ಸಣ್ಣ, ಕಡಿಮೆ ವೆಚ್ಚದ ಪ್ರಕ್ರಿಯೆಗಳನ್ನು ಶುರು ಮಾಡಿದ್ದಾರೆ ಅಂತ ಅರ್ಥ. ಅಂತಹ ತೀವ್ರವಾದ ಬಜೆಟ್ ಕಡಿತಗಳು ನಿಮ್ಮ ಲೇ-ಆಫ್ ಬಗ್ಗೆ ಸುಳಿವು ನೀಡಬಹುದು.


  it is only the beginning employee layoffs will only get worse stg asp
  ಸಾಂಕೇತಿಕ ಚಿತ್ರ


  3. ಯಾರನ್ನೂ ನೇಮಕಾತಿ ಮಾಡಿಕೊಳ್ಳದೆ ಇರುವುದು


  ಉದ್ಯೋಗ ನಿಯೋಜನೆಗಳು ಕಂಪನಿಯ ಪೋರ್ಟಲ್ ನಲ್ಲಿ ಕಣ್ಮರೆ ಆದರೆ, ಅದರರ್ಥ ಕಂಪನಿಯ ಬೆಳವಣಿಗೆಯನ್ನು ತಡೆ ಹಿಡಿಯಲಾಗುತ್ತಿದೆ ಎಂದರ್ಥ.


  4. ಎಕ್ಸಿಕ್ಯೂಟೀವ್ ಗಳು ಮಾಹಿತಿ ಬಗ್ಗೆ ಗೌಪ್ಯವಾಗಿರುತ್ತಾರೆ


  ಹಿರಿಯ ವ್ಯವಸ್ಥಾಪಕರು ಸಾಮಾನ್ಯವಾಗಿ ತಮ್ಮ ಕೆಳಗಿನ ಉದ್ಯೋಗಿಗಳಿಗೆ ಅವಶ್ಯಕವಲ್ಲದ ಮಾಹಿತಿಯ ಬಗ್ಗೆ ಗೌಪ್ಯವಾಗಿರುತ್ತಾರೆ. ಗಮನಾರ್ಹ ಸಂಖ್ಯೆಯ ಉನ್ನತ ಅಧಿಕಾರಿಗಳಿಗೆ ಈ ಲೇ-ಆಫ್ ಗಳ ಬಗ್ಗೆ ತಿಳಿದಿರುತ್ತದೆ.


  5. ಪುನರ್ರಚನೆಯ ಮಾತು ಕೇಳಿ ಬರುವುದು


  ಸರಳವಾಗಿ ಹೇಳುವುದಾದರೆ, ಇದು ಉದ್ಯೋಗ ಕಡಿತಕ್ಕೆ ದೊಡ್ಡ ಸುಳಿವು ಆಗಿರುತ್ತದೆ ಎಂದು ಹೇಳಬಹುದು.


  Layoffs 2022: ಈ ವರ್ಷ ಯಾವೆಲ್ಲಾ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ, ಇಲ್ಲಿದೆ ಮಾಹಿತಿ
  ಸಾಂದರ್ಭಿಕ ಚಿತ್ರ


  6. ಈಗಾಗಲೇ ಒಂದು ಸುತ್ತಿನ ಲೇ-ಆಫ್ ಶುರುವಾಗಿರುತ್ತದೆ


  ಈಗಾಗಲೇ ಕಂಪನಿಯಲ್ಲಿ ಒಂದು ಸುತ್ತಿನ ಉದ್ಯೋಗ ಕಡಿತವು ಶುರುವಾಗಿದ್ದರೆ, ಇದು ಹಾಗೆಯೇ ಮುಂದುವರೆಯಬಹುದು ಅಂತ ಅಂದಾಜಿಸಬಹುದು. ಈ ಲೇ-ಆಫ್ ನ ಪ್ರಕ್ರಿಯೆಯಲ್ಲಿ ಒಂದಕ್ಕಿಂತ ಹೆಚ್ಚು ಸುತ್ತುಗಳು ಇರುತ್ತವೆ. ನೀವು ಕೆಲಸದಿಂದ ತೆಗೆದು ಹಾಕುವಿಕೆಯ ಒಂದು ಅಲೆಯಿಂದ ಬದುಕುಳಿದಿದ್ದೀರಿ ಎಂದ ಮಾತ್ರಕ್ಕೆ ನೀವು ಸುರಕ್ಷಿತವಾಗಿದ್ದೀರಿ ಎಂದು ಅರ್ಥವಲ್ಲ. ನೀವು ತುಂಬಾನೇ ಜಾಗರೂಕರಾಗಿರಬೇಕು.


  7. ನೀವು ಮಾಡುವ ಕೆಲಸದ ಬಗ್ಗೆ ನಿಮ್ಮ ಬಾಸ್ ಪ್ರಶ್ನೆಗಳನ್ನು ಕೇಳಬಹುದು


  ನೀವು ಮಾಡುವ ಕೆಲಸದ ಬಗ್ಗೆ ನಿಮ್ಮ ಬಾಸ್ ಅಥವಾ ಎಚ್ ಆರ್ ನಿಮ್ಮ ಕೆಲಸದ ವಿವರಣೆಯನ್ನು ಬರೆಯಲು ನಿಮ್ಮನ್ನು ಕೇಳಬಹುದು. ಅದು ನಿಮ್ಮ ಕೆಲಸವನ್ನು ಕಳೆದುಕೊಳ್ಳುತ್ತೀರಿ ಎಂಬ ಸಂಕೇತವು ಸಹ ಆಗಿರುತ್ತದೆ.


  8. ನೀವು ಫೈಲ್ ಗಳು ಅಥವಾ ಇ-ಮೇಲ್ ಅನ್ನು ಬಳಸಲು ಬಾರದೇ ಇರುವುದು


  ಕಂಪನಿಯಲ್ಲಿ ನಿಮಗೆ ಸಂಬಂಧಪಟ್ಟ ಫೈಲ್ ಗಳನ್ನು ಮತ್ತು ಇ-ಮೇಲ್ ಗಳನ್ನು ಬಳಸಲು ಬಾರದೇ ಇರುವುದು ಸಹ ನಿಮ್ಮ ಕೆಲಸಕ್ಕೆ ತೊಂದರೆ ಇದೆ ಎನ್ನುವ ಸುಳಿವು ನೀಡುತ್ತದೆ.


  ಒಟ್ಟಿನಲ್ಲಿ ಹೇಳುವುದಾದರೆ ಈ ಲೇ-ಆಫ್ ಗಳ ಸುಳಿವು ಸಿಕ್ಕ ಕೂಡಲೇ ನಿಮ್ಮ ಸ್ವಂತ ವೃತ್ತಿಜೀವನದ ಬಗ್ಗೆ ಗಮನ ಹರಿಸಿ. ಉದ್ಯೋಗ ಕಳೆದುಕೊಳ್ಳುವ ಮುಂಚೆಯೇ ನಿಮ್ಮ ಮುಂದಿರುವ ಆಯ್ಕೆಗಳನ್ನು ನೋಡಿಕೊಳ್ಳಿರಿ. ಕೆಲಸದಿಂದ ತೆಗೆದು ಹಾಕುವುದು ಜೀವನದ ಒಂದು ಭಾಗವಾಗಿದೆ. ಸ್ವಲ್ಪ ದೂರದೃಷ್ಟಿ ಬೆಳೆಸಿಕೊಂಡರೆ ಇದರಿಂದ ಪಾರಾಗಬಹುದು.

  Published by:Kavya V
  First published: