• Home
 • »
 • News
 • »
 • business
 • »
 • Business Idea: ಮನೆಯಲ್ಲಿಯೇ ಕುಳಿತು ತಿಂಗಳಿಗೆ 70 ಸಾವಿರ ಗಳಿಸಬೇಕಾ? ಹಾಗಿದ್ರೆ ಈ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಿ

Business Idea: ಮನೆಯಲ್ಲಿಯೇ ಕುಳಿತು ತಿಂಗಳಿಗೆ 70 ಸಾವಿರ ಗಳಿಸಬೇಕಾ? ಹಾಗಿದ್ರೆ ಈ ಬ್ಯುಸಿನೆಸ್‌ ಸ್ಟಾರ್ಟ್‌ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Business Idea: ಬ್ಯುಸಿನೆಸ್‌ ಮಾಡೋದು ಯಾವತ್ತು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ. ಅದ್ಕೆ ಸಾಕಷ್ಟು ಸಮಯ ಮತ್ತು ಶ್ರಮದ ಅಗತ್ಯ ಇದ್ದೆ ಇರುತ್ತೆ. ಆದ್ರೆ ನೀವು ತಿಂಗಳಿಗೆ 60,000 ರಿಂದ 70,000 ರೂಪಾಯಿಗಳವರೆಗೆ ಗಳಿಸಬಹುದು.

 • Share this:

ಇಂದಿನ ಯುವಜನತೆ ಬ್ಯುಸಿನೆಸ್‌ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಏಕೆಂದರೆ ಬ್ಯುಸಿನೆಸ್‌ (Business) ಅಲ್ಲಿ ಅವರಿಗೆ ಅವರೇ ಬಾಸ್‌ ಮತ್ತು ಹಣದ (Money) ಹರಿವು ಕೂಡ ಚೆನ್ನಾಗಿರುತ್ತೆ. ತಿಂಗಳ ಸಂಬಳಕ್ಕೆ (Salary) ಕಾಯ್ತಾ ಕೂರೋ ಅಗತ್ಯವಿಲ್ಲ ಅಂತ ಆ ಬ್ಯುಸಿನೆಸ್‌ ಮಾಡಬೇಕು, ಈ ಬ್ಯುಸಿನೆಸ್‌ ಮಾಡಬೇಕು ಅಂತಾನೇ ನೋಡುತ್ತಾರೆ. ನೀವು ಅದೇ ರೀತಿ ಆಲೋಚಿಸುತ್ತಿದ್ದರೆ ಇಂದು ನಾವು ನಿಮಗೆ ಒಂದು ಒಳ್ಳೆ ಬ್ಯುಸಿನೆಸ್‌ ಐಡಿಯಾ ಹೇಳ್ತಿವಿ ನೋಡಿ. ಇದರಿಂದ ಮನೆಯಿಂದಲೇ ನೀವು ಉತ್ತಮ ಸಂಪಾಧನೆ ಮಾಡಬಹುದು.


ಇದ್ಕೆ ನೀವು ಇನ್ವೆಸ್ಟ್‌ ಮಾಡಬೇಕಿರೋದು ಸ್ವಲ್ಪ ಜಾಗ ಮತ್ತು 24 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ. ಏನಪ್ಪ ಇವರು ದುಡ್ಡೆ ಇನ್ವೆಸ್ಟ್‌ ಮಾಡೋದು ಹೇಳ್ತಿದಾರೆ ಅಂದುಕೊಳ್ಳುತ್ತಿದ್ದೀರಾ? ದುಡ್ಡಿಲ್ಲದೇ ಯಾವ ಕೆಲಸ ಆಗುತ್ತೆ ಹೇಳಿ, ಇದಕ್ಕೂ ದುಡ್ಡು ಇನ್ವೆಸ್ಟ್‌ ಮಾಡಬೇಕು. ಅದಕ್ಕೆ ತಕ್ಕ ಹಾಗೆ ಲಾಭ ಕೂಡ ಬೇಗ ಬರುತ್ತೆ. ದುಡ್ಡಿನ ಬಗ್ಗೆ ಯಾವ್ದೆ ಚಿಂತೆ ಮಾಡೋ ಅಗತ್ಯ ಇಲ್ಲ. ಹಾಗಿದ್ರೆ ಯಾವ್ದು ಇದು ಹೊಸ ಬ್ಯುಸಿನೆಸ್‌ ಐಡಿಯಾ ಅಂತ ಕೇಳ್ತಿದಿರಾ, ಇಲ್ಲಿದೆ ನೋಡಿ ಹೊಸ ಐಡಿಯಾ.


ಎಸ್‌ಬಿಐ ಬ್ಯುಸಿನೆಸ್‌ ಪ್ಲಾನ್‌:


ಬ್ಯುಸಿನೆಸ್‌ ಮಾಡೋದು ಯಾವತ್ತು ಅಷ್ಟು ಸುಲಭದ ಕೆಲಸ ಅಲ್ಲವೇ ಅಲ್ಲ. ಅದ್ಕೆ ಸಾಕಷ್ಟು ಸಮಯ ಮತ್ತು ಶ್ರಮದ ಅಗತ್ಯ ಇದ್ದೆ ಇರುತ್ತೆ. ಆದ್ರೆ ನೀವು ತಿಂಗಳಿಗೆ 60,000 ರಿಂದ 70,000 ರೂಪಾಯಿಗಳವರೆಗೆ ಗಳಿಸಬಹುದು. ಅದಕ್ಕೆ ನೀವು ಮಾಡಬೇಕಿರೋದು ಇಷ್ಟೆ, ಒಂದೇ ಒಂದು ಸಲ ಸುಮಾರು 5 ಲಕ್ಷ ರೂಪಾಯಿಗಳ ಮರುಪಾವತಿಸಬಹುದಾದ ಹಣವನ್ನು ಇನ್ವೆಸ್ಟ್‌ ಮಾಡಬೇಕಾಗುತ್ತದೆ.


ಇದನ್ನೂ ಓದಿ: Voter ID Aadhaar Link: ನಿಮ್ಮ ವೋಟರ್ ಐಡಿಗೆ ಆಧಾರ್ ಸಂಖ್ಯೆಯನ್ನು ಹೀಗೆ ಲಿಂಕ್ ಮಾಡಿ!


ಇದಕ್ಕೆ ತಯಾರಾಗಿದ್ರೆ ನಿಮ್ಗೆ ಇದು ಬೆಸ್ಟ್‌ ಬ್ಯುಸಿನೆಸ್‌ ಎಂದೇ ಹೇಳಬಹುದು. ಈ ರೀತಿಯ ಬ್ಯುಸಿನೆಸ್‌ ಬಗ್ಗೆ ಯೋಚ್ನೆ ಮಾಡ್ತಿದ್ದರೆ, ನೀವು SBI ATM ಫ್ರಾಂಚೈಸ್ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಬ್ಯಾಂಕುಗಳಿಂದ ಎಟಿಎಂಗಳ ಸ್ಥಾಪನೆಯ ಜವಾಬ್ದಾರಿಗಳನ್ನು ಕೆಲವು ಸಂಸ್ಥೆಗಳಿಗೆ ವಹಿಸಲಾಗಿದೆ. ಆ ಸಂಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಎಟಿಎಂಗಳನ್ನು ಸ್ಥಾಪಿಸುತ್ತವೆ. ಈ ಎಟಿಎಂಗಳನ್ನು ಸ್ಥಾಪಿಸಲು ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು.


SBI ATM ಸ್ಥಾಪನಾ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು:


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು, ಭಾರತದಲ್ಲಿ ಎಟಿಎಂ ಸ್ಥಾಪಿಸುವ ಒಪ್ಪಂದವನ್ನು ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳೊಂದಿಗೆ ಮಾಡಿಕೊಂಡಿರುತ್ತದೆ. ಆದ್ದರಿಂದ, ನೀವು SBI ನ ATM ಫ್ರ್ಯಾಂಚೈಸ್ ಅನ್ನು ತೆಗೆದುಕೊಳ್ಳಲು ಬಯಸಿದರೆ, ನೀವು ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.


ಈ ಫ್ರಾಂಚೈಸಿಯನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ಆದರೆ ATM ಫ್ರಾಂಚೈಸ್ ತೆಗೆದುಕೊಳ್ಳುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.


ಎಟಿಎಂ ಫ್ರಾಂಚೈಸಿಗೆ ಇವುಗಳು ಕಡ್ಡಾಯ!:


ಎಟಿಎಂ ಕ್ಯಾಬಿನ್‌ ಸ್ಥಾಪಿಸಲು 50 ರಿಂದ 80 ಚದರ ಅಡಿ ಜಾಗದ ಅಗತ್ಯವಿದೆ. ಇತರ ಎಟಿಎಂಗಳಿಂದ ಅದರ ಅಂತರವು ಕನಿಷ್ಠ 100 ಮೀಟರ್ ಆಗಿರಬೇಕು ಮತ್ತು ಸ್ಥಳವು ಜನರಿಗೆ ಸುಲಭವಾಗಿ ಕಾಣುವ ಪ್ರದೇಶದಲ್ಲಿ ಇರತಕ್ಕದ್ದು.


24 ಗಂಟೆ ವಿದ್ಯುತ್ ಪೂರೈಕೆಯಾಗಬೇಕು. ಕನಿಷ್ಠ 1 KW ವಿದ್ಯುತ್ ಸಂಪರ್ಕ ಕಡ್ಡಾಯವಾಗಿದೆ. ಎಟಿಎಂ ಕ್ಯಾಬಿನ್‌ಗೆ ಕಾಂಕ್ರೀಟ್ ಛಾವಣಿ ಅತ್ಯಗತ್ಯ. ವಿ-ಸ್ಯಾಟ್ ಸ್ಥಾಪಿಸಲು ಸೊಸೈಟಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕು.


ಇದನ್ನೂ ಓದಿ: Electric Vehicles: ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಸಿಹಿಸುದ್ದಿ! ಕೇಂದ್ರದಿಂದ ಹೊಸ ನಿಯಮ


ATM ಫ್ರ್ಯಾಂಚೈಸ್‌ಗೆ ಅಗತ್ಯವಿರುವ ದಾಖಲೆಗಳು:


 • ID ಪುರಾವೆ -ಆಧಾರ್ ಕಾರ್ಡ್,PAN ಕಾರ್ಡ್, ಮತದಾರರ ಚೀಟಿ

 • ವಿಳಾಸ ಪುರಾವೆ - ರೇಷನ್ ಕಾರ್ಡ್, ವಿದ್ಯುತ್ ಬಿಲ್

 • ಬ್ಯಾಂಕ್ ಖಾತೆ, ಪಾಸ್‌ಬುಕ್

 • ಫೋಟೋಗ್ರಾಫ್, ಇ-ಮೇಲ್ ಐಡಿ, ಫೋನ್ ಸಂಖ್ಯೆ

 • ಇತರ ದಾಖಲೆಗಳು

 • ಜಿಎಸ್​ಟಿ ಸಂಖ್ಯೆ

 • ಹಣಕಾಸಿನ ದಾಖಲೆಗಳು


ಎಟಿಎಂ ಫ್ರಾಂಚೈಸಿಯಿಂದ ಬರುವ ಆದಾಯವೆಷ್ಟು?:


SBI ATM ಫ್ರಾಂಚೈಸಿಗೆ ಅನುಮೋದನೆ ಪಡೆದಾಗ ರೂ.2,00,000 ಭದ್ರತಾ ಠೇವಣಿ ಪಾವತಿಸಿ ATM ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. ಈ ಭದ್ರತಾ ಠೇವಣಿ ಮರುಪಾವತಿಸಬಹುದಾಗಿದೆ. ಇದಲ್ಲದೇ ರೂ.3,00,000 ಬಂಡವಾಳದ ಅಗತ್ಯವಿದೆ. ಒಟ್ಟು ಹೂಡಿಕೆ ರೂ.5,00,000 ಆಗಿರುತ್ತದೆ.


ATM ಅನ್ನು ಸ್ಥಾಪಿಸಿದಾಗ ಮತ್ತು ಜನರು ಆ ATM ನಿಂದ ವಹಿವಾಟು ಮಾಡಲು ಪ್ರಾರಂಭಿಸಿದಾಗ, ನೀವು ಪ್ರತಿ ನಗದು ವಹಿವಾಟಿಗೆ ರೂ. 8 ಮತ್ತು ಬ್ಯಾಲೆನ್ಸ್ ಚೆಕ್ ಮತ್ತು ಫಂಡ್ ವರ್ಗಾವಣೆಯಂತಹ ನಗದುರಹಿತ ವಹಿವಾಟಿಗೆ ರೂ.2 ಪಡೆಯುತ್ತೀರಿ.

Published by:shrikrishna bhat
First published: