• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Verified Account: ಇನ್ಮುಂದೆ ಹಣ ಪಾವತಿಸಿದ್ರೆ ಫೇಸ್​ಬುಕ್​​, ಇನ್​ಸ್ಟಾಗ್ರಾಮ್​ನಲ್ಲೂ ಬ್ಲೂ ಟಿಕ್​ ಪಡೆಯಬಹುದು! ಇಲ್ಲಿದೆ ಕಂಪ್ಲೀಟ್​ ಮಾಹಿತಿ

Verified Account: ಇನ್ಮುಂದೆ ಹಣ ಪಾವತಿಸಿದ್ರೆ ಫೇಸ್​ಬುಕ್​​, ಇನ್​ಸ್ಟಾಗ್ರಾಮ್​ನಲ್ಲೂ ಬ್ಲೂ ಟಿಕ್​ ಪಡೆಯಬಹುದು! ಇಲ್ಲಿದೆ ಕಂಪ್ಲೀಟ್​ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಟ್ವಿಟರ್‌ ಹಣ ಪಾವತಿಸಿ ಬ್ಲೂ ಟಿಕ್ ಪಡೆಯುವ ಕ್ರಮವನ್ನು ಜಾರಿಗೆ ತಂದ ನಂತರ ಇದೇ ನೀತಿಯನ್ನು ಮೆಟಾ ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ತರುತ್ತಿದೆ. ಈ ಬಗ್ಗೆ ಪೋಷಕ ಕಂಪನಿ ಮೆಟಾ ಘೋಷಣೆಯನ್ನು ಹೊರಡಿಸಿದೆ.

  • Trending Desk
  • 4-MIN READ
  • Last Updated :
  • Share this:

    ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ಟ್ವಿಟರ್‌ (Twitter) ಅನುಸರಿಸಿದ ಒಂದು ವಿರೋಧದ ಕ್ರಮವನ್ನು ಈಗ ಮೆಟಾ ಮಾಲಿಕತ್ವದ ಇನ್‌ಸ್ಟಾಗ್ರಾಮ್ (Instagram) ಮತ್ತು ಫೇಸ್‌ಬುಕ್ (Facebook) ಅನುಸರಿಸಲು ಸಿದ್ಧವಾಗಿದೆ. ಹೌದು ಟ್ವಿಟರ್‌ ಹಣ ಪಾವತಿಸಿ ಬ್ಲೂ ಟಿಕ್ (Blue tick) ಪಡೆಯುವ ಕ್ರಮವನ್ನು ಜಾರಿಗೆ ತಂದ ನಂತರ ಇದೇ ನೀತಿಯನ್ನು ಮೆಟಾ ತನ್ನ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ತರುತ್ತಿದೆ. ಈ ಬಗ್ಗೆ ಪೋಷಕ ಕಂಪನಿ ಮೆಟಾ ಘೋಷಣೆಯನ್ನು ಹೊರಡಿಸಿದೆ.


    ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ 'ಬ್ಲೂಟಿಕ್' ಬೇಕು ಅಂದ್ರೆ ಪಾವತಿಸಿ


    ಈ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಘೋಷಣೆ ಮಾಡಿದ್ದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ವೆರಿಫೈಡ್ ಖಾತೆಗಳಿಗೆ ಮಾಸಿಕ ಚಂದಾದಾರಿಕೆ ಶುಲ್ಕ ವಿಧಿಸುವುದಾಗಿ ತಿಳಿಸಿದ್ದಾರೆ. ಇದೀಗ ಪ್ರಾಯೋಗಿಕ ಹಂತವಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈ ಯೋಜನೆಯನ್ನು ಆರಂಭಿಸಿದೆ. ಇತರೆ ಬೇರೆ ದೇಶಗಳಲ್ಲಿ ಯಾವಾಗ ಜಾರಿಗೆ ಬರುತ್ತದೆಯೋ ಇನ್ನೂ ತಿಳಿದಿಲ್ಲ.


    ಆದರೆ ಈ ಬಗ್ಗೆ ಪ್ರತಿಕ್ರಿಸಿದ ಮೆಟಾ ಸಿಇಒ ಶೀಘ್ರದಲ್ಲೇ ಎಲ್ಲಾ ದೇಶಗಳ ಬಳಕೆದಾರರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ಬಿಡುವಿನ ವೇಳೆಯಲ್ಲಿ ಆರಂಭವಾದ ಸಣ್ಣ ಉದ್ಯಮದಿಂದ ವರ್ಷಕ್ಕೆ ಕೋಟಿ ಕೋಟಿ ಆದಾಯ!


    ಎಷ್ಟಿರಲಿದೆ ಸೇವೆಯ ಬೆಲೆ?


    ಇನ್ನು ಮೆಟಾ ತರುತ್ತಿರುವ ಈ ಚಂದಾದಾರಿಕೆ ಸೇವೆಯ ಬೆಲೆ ಎಷ್ಟು ಎಂಬ ಬಗ್ಗೆ ಕಂಪನಿಯು ಬಹಿರಂಗ ಪಡಿಸಿದೆ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಖಾತೆ ದೃಢೀಕರಣ ತಿಂಗಳಿಗೆ $11.99 ರಿಂದ ಪಾವತಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.


    ಸಾಂಕೇತಿಕ ಚಿತ್ರ


    ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ, ಯಾರಾದರೂ ತಿಂಗಳಿಗೆ 900 ರೂ. ಪಾವತಿಸಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ 'ಬ್ಲೂ ಟಿಕ್' ಪಡೆಯಬಹುದಾಗಿದೆ. ವೆಬ್‌ ಬಳಕೆದಾರರಿಗೆ ಮಾಸಿಕ $11.99 ಆದರೆ ಇನ್ನೂ ಐಫೋನ್‌ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಈ ವೆಚ್ಚ $14.99 (1,241 ರೂಪಾಯಿ) ಪಾವತಿಸಬೇಕು.


    ಹೊಸ ರೂಲ್ಸ್‌ ಹಳೆಯ ವೆರಿಫೈಯ್ಡ್‌ ಖಾತೆಗೆ ಅನ್ವಯಿಸಲ್ಲ


    ಮೆಟಾದ ಹೊಸ ನೀತಿ ಬಗ್ಗೆ ತಿಳಿಸಿರುವ ಮಾರ್ಕ್ ಜುಕರ್‌ಬರ್ಗ್‌ “ಈ ಹೊಸ ಕ್ರಮವು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಸುರಕ್ಷತೆ ಮತ್ತು ದೃಢೀಕರಣವನ್ನು ಹೆಚ್ಚಿಸುತ್ತದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಂದಾದಾರಿಕೆಯು, ಪಾವತಿಸುವ ಬಳಕೆದಾರರಿಗೆ ನೀಲಿ ಟಿಕ್‌ ಮಾರ್ಕ್, ಅವರ ಪೋಸ್ಟ್‌ಗಳ ಹೆಚ್ಚಿನ ಗೋಚರತೆ, ರಕ್ಷಣೆ ಮತ್ತು ಗ್ರಾಹಕ ಸೇವೆಗೆ ಸುಲಭ ಪ್ರವೇಶವನ್ನು ನೀಡುತ್ತದೆ ಎಂದು ಪೋಸ್ಟ್‌ ತಿಳಿಸಿದೆ.




    ಅಷ್ಟೇ ಅಲ್ಲ ಈ ಬದಲಾವಣೆಯು ಹಿಂದೆ ಪರಿಶೀಲಿಸಿದ ಖಾತೆಗಳ ಅಥವಾ ಈಗಾಗ್ಲೇ ಬ್ಲೂ ಟಿಕ್‌ ಹೊಂದಿರುವ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕಂಪನಿಯು ಬಿಬಿಸಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದೆ. ಗಣ್ಯ ವ್ಯಕ್ತಿಗಳು ಅಲ್ಲದಿದ್ದರೂ ಸಂಪಾದನೆಯ ದೃಷ್ಟಿ ಅಥವಾ ಉದ್ದೇಶ ಹೊಂದಿರುವ ಬಳಕೆದಾರರಿಗೆ ಈ ಯೋಜನೆ ತಂದಿರುವುದಾಗಿ ಸಂಸ್ಥೆ ತಿಳಿಸಿದೆ. ಹಾಗಾಗಿ, ಯಾರೂ ಬೇಕಾದರೂ ಈಗ ಹಣ ಕೊಟ್ಟು 'ಬ್ಲೂಟಿಕ್' ಪಡೆಯಬಹುದು.


    ಕೆಲ ತಿಂಗಳ ಹಿಂದೆ ಟ್ವಿಟರ್​ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ ಪಡೆಯಲು ಪಾವತಿ ಮಾಡಬೇಕು ಎಂದು ಹೇಳಿತ್ತು. ಟ್ವಿಟರ್​ನ ಮಾಲೀಕ ಎಲೋನ್ ಮಸ್ಕ್ ಬಳಕೆದಾರರೇ ಸ್ವತಃ ಶುಲ್ಕ ಪಾವತಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ತಿಳಿಸಿ ಈ ಹೊಸ ಕ್ರಮವನ್ನು ಘೋಷಣೆ ಮಾಡಿದ್ದರು.


    ಟ್ವಿಟರ್‌ನ ಈ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಲೂ ಟಿಕ್‌ ಪಡೆಯುವುದು ಪ್ರತಿಷ್ಠೆಯ ಸಂಕೇತವಾಗಿರುವುದಿಂದ ಬಳಕೆದಾರರು ಪಾವತಿ ಮಾಡಿ ಸಹ ಇದನ್ನು ಪಡೆದುಕೊಳ್ಳಲು ತಯಾರಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಈ ರೀತಿಯ ಕ್ರಮಕ್ಕೆ ಮುಂದಾಗಿದೆ ಎನ್ನಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು