Money: ನಿಮ್ಮ ಬಳಿ ಇಷ್ಟು ಆಸ್ತಿ ಇದ್ದರೆ, ನೀವು ಕೂಡ ದೇಶದ ಶ್ರೀಮಂತರಲ್ಲಿ ಒಬ್ಬರು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಷ್ಟಕ್ಕೂ ಅಲ್ಟ್ರಾ ಹೈ ನೆಟ್ ವರ್ತ್ ಹೊಂದಿರುವ ವ್ಯಕ್ತಿಗಳ ಸಂಖ್ಯೆ 2022 ರಲ್ಲಿ ಜಾಗತಿಕವಾಗಿ 3.8% ಕುಸಿತ ಕಂಡಿದೆ. ಆದರೆ ಅದರ ಹಿಂದಿನ ವರ್ಷ ಅಂದರೆ 2021 ಇದೇ ಸಂಖ್ಯೆ 9.3% ಏರಿಕೆ ದಾಖಲಿಸಿತ್ತು.

  • Trending Desk
  • 4-MIN READ
  • Last Updated :
  • New Delhi, India
  • Share this:

ಸಂಪತ್ತು (Wealth) ಎಂಬುದು ವ್ಯಕ್ತಿಯ ಪ್ರತಿಷ್ಠೆಯ ಸೂಚಕವೂ ಹೌದು, ಅದರಂತೆ ಅದು ಅವರ ಮೌಲ್ಯವನ್ನು ಸಹ ವೃದ್ಧಿಸುತ್ತದೆ. ಸಾಮಾನ್ಯವಾಗಿ ಈ ಜಗತ್ತಿನಲ್ಲಿ (World) ಸಹಸ್ರಾರು ಜನ ಲಕ್ಷಾಧಿಪತಿಗಳಿದ್ದಾರೆ. ಜಗತ್ತಿನ ವಿವಿಧ ದೇಶಗಳಲ್ಲಿ ವಾಸಿಸುವ ಜನಸಂಖ್ಯೆಗನುಗುಣವಾಗಿ ಆಯಾ ದೇಶಗಳು (Countries) ತನ್ನಲ್ಲಿರುವ ಸಿರಿವಂತರ ಸಂಖ್ಯೆಗನುಗುಣವಾಗಿ ಇಂತಿಷ್ಟು ಜನರು ಆ ದೇಶದ ಜನಸಂಖ್ಯೆಯ ಅತಿ ಸಿರಿವಂತರ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಲೆಕ್ಕಾಚಾರ ಹೊಂದಿರುತ್ತವೆ ಹಾಗೂ ಇಂತಹ ಲೆಕ್ಕಾಚಾರಗಳನ್ನು ನಡೆಸುವ ಸಂಸ್ಥೆಗಳು ಸಹ ಚಾಲ್ತಿಯಲ್ಲಿವೆ.


ಉದಾಹರಣೆಗೆ ಹೇಳಬೇಕೆಂದರೆ, ನೈಟ್ ಫ್ರ್ಯಾಂಕ್ (Knight Frank)ರ ಸಂಪತ್ತು ಸಂರಚನೆಯ ಮಾದರಿ. ಈ ಸಂಸ್ಥೆಯು ಆಯಾ ದೇಶಗಳಲ್ಲಿರುವ ಅತಿ ಸಿರಿವಂತರ ಪಟ್ಟಿ ತಯಾರಿಸಿ ಆ ಪಟ್ಟಿಯಲ್ಲಿ ಸ್ಥಾನ ಪಡೆಯಲು ಒಬ್ಬ ವ್ಯಕ್ತಿ ಸರಾಸರಿ ಇಂತಿಷ್ಟು ಸಂಪತ್ತು ಹೊಂದಿರಬೇಕೆಂದು ತಿಳಿಸುತ್ತದೆ.


ಉದಾಹರಣೆಗೆ, ಮೊನಾಕೊ ದೇಶವನ್ನೇ ತೆಗೆದುಕೊಳ್ಳಿ. ಈ ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಅತಿ ಸಿರಿವಂತರು ವಾಸಿಸುತ್ತಿದ್ದಾರೆ. ಇಂತಹ ಅತಿ ಸಿರಿವಂತರ ಒಂದು ಪ್ರತಿಶತದ ಕ್ಲಬ್ಬಿನಲ್ಲಿ ಒಬ್ಬ ವ್ಯಕ್ತಿ ಹೊಸದಾಗಿ ಸೇರ್ಪಡೆಯಾಗಬೇಕೆಂದರೆ ಆ ವ್ಯಕ್ತಿ ಸರಾಸರಿ 12.4 ಮಿಲಿಯನ್ ಡಾಲರ್ ಗಳಷ್ಟು ನಿವ್ವಳ ಆಸ್ತಿ ಸಂಪತ್ತನ್ನು ಹೊಂದಿರಬೇಕು. ಆ ವ್ಯಕ್ತಿಯ ಬಳಿ ಅಷ್ಟು ಸಂಪತ್ತಿದ್ದಾಗ ಮಾತ್ರ ಆತ ಒಂದು ಪ್ರತಿಶತದಷ್ಟಿರುವ ಅತಿ ಸಿರಿವಂತರ ಕ್ಲಬ್ಬಿನಲ್ಲಿ ಪ್ರವೇಶ ಪಡೆಯುತ್ತಾನೆ.


ಅದರಂತೆ, ವರದಿಯ ಪ್ರಕಾರ, ಭಾರತದಲ್ಲಿರುವ ಮೊದಲ ಒಂದು ಪ್ರತಿಶತದಷ್ಟು ಅತಿ ಸಿರಿವಂತರ ಕ್ಲಬ್ಬಿನಲ್ಲಿ ಸೇರ್ಪಡೆಯಾಗಬೇಕೆಂದರೆ ಒಬ್ಬ ವ್ಯಕ್ತಿ ಸರಾಸರಿ ನಿವ್ವಳ ಆಸ್ತಿ ಸುಮಾರು 1.44 ಕೋಟಿ ರೂಪಾಯಿಗಳಷ್ಟು ಹೊಂದಿರಬೇಕು.


ಇದನ್ನೂ ಓದಿ: Jeera Price: ಒಂದೇ ಬಾರಿಗೆ ಏರಿಕೆಯಾದ ಜೀರಿಗೆ ಬೆಲೆ! ಜನಸಾಮಾನ್ಯರಿಗೆ ಮತ್ತೆ ಹೊಡೆತ


ನೈಟ್ ಫ್ರ್ಯಾಂಕ್ ಅವರು ಸಾಮಾನ್ಯವಾಗಿ ಈ ರೀತಿಯ ಸಮೀಕ್ಷಾ ವರದಿಗಳನ್ನು ಪ್ರಕಟಿಸುತ್ತಾರೆ ಹಾಗೂ ಅವರ ವರದಿಗಳನುಸಾರವಾಗಿ ಈ ನಿವ್ವಳ ಆಸ್ತಿ ಮೌಲ್ಯ ಹೊಂದುವಿಕೆ ಎಂಬುದು ದೇಶದಿಂದ ದೇಶಕ್ಕೆ ಅತಿ ಭಿನ್ನವಾಗಿರುತ್ತದೆ.


ಜಗತ್ತಿನ ಮತ್ತೊಂದು ಸಿರಿವಂತರ ರಾಷ್ಟ್ರವಾದ ಸ್ವಿಟ್ಜರ್ಲ್ಯಾಂಡನ್ನೆ ತೆಗೆದುಕೊಳ್ಳಿ. ಇಲ್ಲಿ ವ್ಯಕ್ತಿಯೊಬ್ಬ 6.6 ಮಿಲಿಯನ್ ಅಮೆರಿಕನ್ ಡಾಲರ್ ನಿವ್ವಳ ಆಸ್ತಿ ಹೊಂದಿದ್ದರೆ ಆ ವ್ಯಕ್ತಿ ಆ ದೇಶದ ಅಗ್ರ ಒಂದು ಪ್ರತಿಶತ ಅತಿ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾನೆ.


ಅದರಂತೆ ಏಷಿಯಾದಲ್ಲಿ ಗಮನಿಸಿದಾಗ ಸಿಂಗಾಪೂರ್ ಈ ವಿಷಯದಲ್ಲಿ 3.5 ಮಿಲಿಯನ್ ಡಾಲರ್ ನಷ್ಟು ಆಸ್ತಿ ಹೊಂದುವಿಕೆ ಒಂದು ಪ್ರತಿಶತದ ಪಟ್ಟಿಯಲ್ಲಿ ಪ್ರವೇಶಿಸಲು ಅರ್ಹತೆಯ ಮಾನದಂಡವಾಗಿಸಿದರೆ 3.4 ಮಿಲಿಯನ್ ಡಾಲರ್ ಆಸ್ತಿಯ ಮೂಲಕ ಹಾಂಗ್ ಕಾಂಗ್ ಅದರ ನಂತರದ ಸ್ಥಾನದಲ್ಲಿದೆ.


ಹಾಗಾಗಿ ಒಟ್ಟಾರೆಯಾಗಿ ನೈಟ್ ಫ್ರ್ಯಾಂಕ್ (Knight Frank) ಅವರ ವರದಿಗನುಗುಣವಾಗಿ ನೀವು ಭಾರತದ ಅಗ್ರ ಒಂದು ಪ್ರತಿಶತದಷ್ಟು ಸಿರಿವಂತರ ಪಟ್ಟಿಯಲ್ಲಿ ಒಬ್ಬರಾಗಿರಬೇಕೆಂದರೆ ನಿಮ್ಮ ಬಳಿ 1.44 ಕೋಟಿ ನಿವ್ವಳ ಆಸ್ತಿ ಇರಬೇಕೆಂದಾಗಿದೆ. ಇದಲ್ಲದೆ ಈ ಸಂಸ್ಥೆಯು ಇತರೆ ಕೆಲ ರೋಚಕ ದತ್ತಾಂಶಗಳನ್ನು ಸಹ ಪ್ರಕಟಿಸಿದ್ದು ಅವು ಈ ಕೆಳಗಿನಂತಿವೆ.


* 30 ಮಿಲಿಯನ್ ಡಾಲರ್ ಗಿಂತಲೂ ಅಧಿಕ ಸಂಪತ್ತು ಹೊಂದಿರುವ ಭಾರತದ ಅಲ್ಟ್ರಾ ಹೈ ನೆಟ್ ವರ್ತ್ ವ್ಯಕ್ತಿಗಳು (UHNWI), ಮುಂದಿನ ಐದು ವರ್ಷಗಳಲ್ಲಿ 58.4% ರಷ್ಟು ವೃದ್ಧಿಯಾಗಲಿದ್ದಾರೆ. ಅಂದರೆ ಇವರ ಸಂಖ್ಯೆ 2022 ರ ತನಕ 12,069 ಇದ್ದದ್ದು 2027ರ ವರೆಗೆ 19,119ರ ವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
* ಅದರಂತೆ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಿಲಿಯನೇರ್ ಗಳ ಸಂಖ್ಯೆಯಲ್ಲೂ ವೃದ್ಧಿಯಾಗಲಿದೆ. 2022 ರ ತನಕ 161 ಇದ್ದದ್ದು 2027ರ ವರೆಗೆ 195ರ ವರೆಗೆ ಏರಿಕೆಯಾಗಲಿದೆ.
* ಭಾರತದಲ್ಲಿ ಹೆಚ್ಚಿನ ನಿವ್ವಳ ಮೌಲ್ಯ (ಒಂದು ಮಿಲಿಯನ್ ಡಾಲರ್ ಗಿಂತಲೂ ಅಧಿಕ) ಹೊಂದಿರುವ ವ್ಯಕ್ತಿಗಳ ಸಂಖ್ಯೆ 2022 ರ ತನಕ 797,714 ಇದ್ದದ್ದು 2027ರ ವರೆಗೆ 1.65 ಮಿಲಿಯನ್ ವರೆಗೆ ಏರಿಕೆಯಾಗಲಿದೆ.


ಕಟು ಸತ್ಯ


ಅಷ್ಟಕ್ಕೂ ಅಲ್ಟ್ರಾ ಹೈ ನೆಟ್ ವರ್ತ್ ಹೊಂದಿರುವ ವ್ಯಕ್ತಿಗಳ ಸಂಖ್ಯೆ 2022 ರಲ್ಲಿ ಜಾಗತಿಕವಾಗಿ 3.8% ಕುಸಿತ ಕಂಡಿದೆ. ಆದರೆ ಅದರ ಹಿಂದಿನ ವರ್ಷ ಅಂದರೆ 2021 ಇದೇ ಸಂಖ್ಯೆ 9.3% ಏರಿಕೆ ದಾಖಲಿಸಿತ್ತು.




ಆದರೆ 2021ರ ನಂತರ ಉಂಟಾದ ಹಲವು ಆರ್ಥಿಕ ಏರಿಳಿತಗಳ ಪರಿಣಾಮದಿಂದಾಗಿ ಜಾಗತಿಕ ಮಟ್ಟದಲ್ಲಿ ಅಲ್ಟ್ರಾ ಹೈ ನೆಟ್ ವರ್ತ್ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಕುಸಿಯಿತು ಎಂದು ವಿಶ್ಲೇಷಿಸಲಾಗಿದೆ.


ಇನ್ನು ಭಾರತದಲ್ಲಿ ಗಮನಿಸುವುದಾದರೆ 2021ಕ್ಕೆ ಹೋಲಿಸಿದರೆ 2022 ರಲ್ಲಿ ಅಲ್ಟ್ರಾ ಹೈ ನೆಟ್ ವರ್ತ್ ಹೊಂದಿರುವ ವ್ಯಕ್ತಿಗಳ ಪ್ರಮಾಣದಲ್ಲಿ 7.5% ರಷ್ಟು ಕುಸಿತವನ್ನು ಗಮನಿಸಲಾಗಿದೆ. ಭಾರತದಲ್ಲಿ ಬಡ್ಡಿದರಗಳ ಏರುವಿಕೆ ಹೊರತುಪಡಿಸಿದರೆ ಅಮೇರಿಕಾದ ಡಾಲರ್ ವಿರುದ್ಧ ರುಪಾಯಿಯ ಕಳಪೆ ಪ್ರದರ್ಶನವು ಈ ಕುಸಿತಕ್ಕೆ ಕಾರಣವಾಗಿದೆ ಎನ್ನಬಹುದು.


ಆದಾಗ್ಯೂ ಇಲ್ಲಿ ಆಸಕ್ತಿಕರ ವಿಷಯವೆಂದರೆ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳ ಸಂಖ್ಯೆಯಲ್ಲಿ ಯಾವುದೇ ಕುಸಿತವಾಗಿಲ್ಲದೆ ಇರುವುದು. ಬದಲಾಗಿ ಇದಕ್ಕೆ ವಿಪರೀತ ಎಂಬಂತೆ 2022 ರಲ್ಲಿ ಇವರ ಸಂಖ್ಯೆಯಲ್ಲಿ 4.5% ರಷ್ಟು ಏರಿಕೆಯಾಗಿರುವುದು.


ಇನ್ನು ಈ ಬಗ್ಗೆ ಪ್ರತಿಕ್ರಯಿಸಿರುವ ನೈಟ್ ಫ್ರ್ಯಾಂಕ್ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ಆಗಿರುವ ಶಿಶಿರ್ ಬಜಾಜ್ ಹೇಳುವಂತೆ, ಕೋರ್ ಮತ್ತು ನಾನ್-ಕೋರ್ ಈ ಎರಡೂ ಕ್ಷೇತ್ರಗಳಲ್ಲಿ ಭಾರತದ ತೀವ್ರತರವಾದ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸಮಯದಲ್ಲಿ ಆರ್ಥಿಕ ಪ್ರಗತಿ ಗತಿ ಪಡೆಯಲು ನೆರವು ನೀಡಿವೆ. ಇದರ ಜೊತೆಗೆ ಭಾರತ ಸ್ಟಾರ್ಟಪ್ ಗಳ ಹೊಸ ಹಬ್ ಆಗಿ ರೂಪಗೊಳ್ಳುತ್ತಿರುವುದು ಈ ಒಟ್ಟಾರೆ ಪ್ರಗತಿಗೆ ಇನ್ನಷ್ಟು ಇಂಬು ನೀಡಿದೆ.

top videos


    ಇವುಗಳಲ್ಲದೆ, ಭಾರತದಲ್ಲಿ ಆಗುತ್ತಿರುವ ಜಾಗತಿಕ ಉತ್ಪಾದನೆ, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ಪ್ರಗತಿ ಇತ್ಯಾದಿ ಆರ್ಥಿಕ ಬೆಳವಣಿಗೆಯ ದರವನ್ನು ನಿರಂತರವಾಗಿ ಚಾಲನೆಯಲ್ಲಿಡಲಿದ್ದು ದೇಶದಲ್ಲಿ ಇನ್ನಷ್ಟು ಸಂಪತ್ತಿನ ಸೃಷ್ಟಿಗೆ ನೆರವಾಗಲಿವೆ. ಇದರ ಪರಿಣಾಮ ಮುಂಬರುವ ವರ್ಷಗಳಲ್ಲಿ ಮಗದಷ್ಟು ಸಿರಿವಂತ ವ್ಯಕ್ತಿಗಳು ಭಾರತದಲ್ಲಿ ಹೊರಹೊಮ್ಮಲಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು