TDS ರಿಫಂಡ್ ಕ್ಲೈಮ್ ಮಾಡಿದ್ದೀರಾ? ಹಾಗಿದ್ರೆ ಈ ವಿಚಾರಗಳನ್ನು ಗಮದಲ್ಲಿಡಲೇಬೇಕು!

ತೆರಿಗೆ ವಿನಾಯಿತಿ (Tax Exemption) ಅದರಲ್ಲೂ ಟಿಡಿಎಸ್ (TDS) ವಿನಾಯಿತಿ ಪಡೆಯಲು ತೆರಿಗೆದಾರರು ಮಾಡಿದ ಕಡಿತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮರು ಪರಿಶೀಲಿಸಲು ಮತ್ತು ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆಯ (Income Tax Department) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಇಮೇಲ್ ಸೂಚನೆಯ ಮೂಲಕ ತೆರಿಗೆದಾರರನ್ನು ಎಚ್ಚರಿಸುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ತೆರಿಗೆ ವಿನಾಯಿತಿ (Tax Exemption) ಅದರಲ್ಲೂ ಟಿಡಿಎಸ್ (TDS) ವಿನಾಯಿತಿ ಪಡೆಯಲು ತೆರಿಗೆದಾರರು ಮಾಡಿದ ಕಡಿತಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮರು ಪರಿಶೀಲಿಸಲು ಮತ್ತು ಸಂಗ್ರಹಿಸಲು ಆದಾಯ ತೆರಿಗೆ ಇಲಾಖೆಯ (Income Tax Department) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್ ಇಮೇಲ್ ಸೂಚನೆಯ ಮೂಲಕ ತೆರಿಗೆದಾರರನ್ನು ಎಚ್ಚರಿಸುತ್ತಿದೆ. ಜುಲೈ 31 ರವರೆಗೆ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳ (Income Tax Return) ಪ್ರಕ್ರಿಯೆಯಲ್ಲಿ, ಟಿಡಿಎಸ್ ಕಡಿತಗೊಂಡ ತೆರಿಗೆದಾರರು ಕ್ಲೈಮ್ ಮಾಡಿದ ವಿನಾಯಿತಿಗಳನ್ನು AI ಆಧಾರದ ಮೇಲೆ ಈ ವರ್ಷ ಇಲಾಖೆಯು ಕಂಡುಹಿಡಿಯುತ್ತಿದ್ದು, ಟಿಡಿಎಸ್ ಕಡಿತಗೊಂಡ ತೆರಿಗೆದಾರರು ಈ ಮೊತ್ತ ಸರಿಯಾಗಿದ್ದರೂ ತಪ್ಪಾಗಿದ್ದರೂ ಮರುಪಾವತಿಯಾಗಿ ಪಡೆಯಲು ಕ್ಲೈಮ್ ಮಾಡಿದ್ದಾರೆ.


ಸೂಚನೆಯನ್ನು ಹೇಗೆ ಪಡೆಯುತ್ತಾರೆ?
ತೆರಿಗೆದಾರರು ಬೇರೆ ಬೇರೆ ವಿಭಾಗಗಳಡಿಯಲ್ಲಿ ಹೆಚ್ಚಿನ ರಿಫಂಡ್‌ಗಳನ್ನು ಕ್ಲೈಮ್ ಮಾಡಿದ್ದರೆ, ಅದೇ ರೀತಿಯ ಸೂಚನೆಯನ್ನು ಅವರು ಪಡೆಯುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಲವು ತೆರಿಗೆದಾರರಿಗೆ ಮೇಲ್ ಬರುತ್ತಿದ್ದು, ತೆರಿಗೆದಾರರ ಬಳಿ ಹೂಡಿಕೆಯ ಪುರಾವೆ ಇಲ್ಲದಿದ್ದರೆ ಅಥವಾ ತೆರಿಗೆದಾರರು ರಿಟರ್ನ್‌ನಲ್ಲಿ ತಪ್ಪು ವಿನಾಯಿತಿ ಪಡೆದಿದ್ದರೆ, ತಕ್ಷಣ ಅದನ್ನು ಪರಿಶೀಲಿಸಿ ಮತ್ತು ರಿಟರ್ನ್ ಅನ್ನು ಪರಿಷ್ಕರಿಸಿ ಎಂದು ತಿಳಿಸುವ ಮೇಲ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ರಿಫಂಡ್ ಅನ್ನು ಕಡಿಮೆ ಮಾಡುವುದು ಅಥವಾ ಸರಿಪಡಿಸುವುದು ಈ ಸೂಚನೆಗಳ ಹಿಂದಿನ ಉದ್ದೇಶವಾಗಿದೆ.


ಇದನ್ನೂ ಓದಿ: Post Office Scheme: ಪ್ರತಿ ತಿಂಗಳು 1200 ರೂಪಾಯಿ ಉಳಿಸಿ, ಒಂದು ಕೋಟಿವರೆಗೂ ಲಾಭ ಪಡೆಯಿರಿ!

ವಿಭಾಗ 80G (ತೆರಿಗೆದಾರರು ಯಾವುದೇ ನಿಧಿ ಅಥವಾ ಸಂಸ್ಥೆ ಅಥವಾ ಚಾರಿಟೇಬಲ್ ಟ್ರಸ್ಟ್‌ಗೆ ದೇಣಿಗೆಯಾಗಿ ಪಾವತಿಸಿದ ಮೊತ್ತವನ್ನು ಅನುಮತಿಸಲಾಗಿದೆ) ಯಲ್ಲಿ ವಿನಾಯಿತಿ ಪಡೆದಿರುವ ಅಂತಹ ಸಂಬಳದಾರರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಲಾಗುತ್ತಿದೆ.ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 200% ದಂಡ ಮತ್ತು ಹೆಚ್ಚುವರಿ ಬಡ್ಡಿಯನ್ನು ವಿಧಿಸಬಹುದು


ರಿಟರ್ನ್‌ನಲ್ಲಿ ಕ್ಲೈಮ್ ಕಡಿತವನ್ನು ಪರಿಶೀಲಿಸಿ:
ಫಾರ್ಮ್ 16 ನಲ್ಲಿರುವ ಮೊತ್ತಕ್ಕಿಂತ ಕಡಿತವು ಹೆಚ್ಚಿನದಾಗಿದ್ದರೆ ರಿಟರ್ನ್‌ನಲ್ಲಿ ಕ್ಲೈಮ್ ಕಡಿತವನ್ನು ಪರಿಶೀಲಿಸಿ ಮತ್ತು ಅದನ್ನು ಫಾರ್ಮ್ 16 ರೊಂದಿಗೆ ಸರಿಯಾಗಿ ಹೊಂದಿಸಿ ಎಂದು ನೋಟಿಸ್‌ನಲ್ಲಿ ಕಾರಣವನ್ನು ನೀಡಲಾಗಿದೆ. ಉದ್ಯಮಿಗಳಿಗೆ ಕಳುಹಿಸಲಾದ ನೋಟಿಸ್‌ನಲ್ಲಿ, ಸೂಚನೆಯನ್ನು ನೀಡಲಾಗಿದ್ದು ಘೋಷಿಸಿದ ಒಟ್ಟು ಆದಾಯದಲ್ಲಿ (ಅಂದರೆ ಒಟ್ಟು ಆದಾಯ) ಇಳಿಕೆಯಾಗಿದ್ದು, ಪರಿಶೀಲಿಸಲು ತಿಳಿಸಲಾಗಿದೆ. ಈ ಇಮೇಲ್‌ನ ಉದ್ದೇಶವು ಯಾವುದೇ ತಪ್ಪು ಕ್ಲೈಮ್‌ನ ಕುರಿತು ನಿಮಗೆ ಎಚ್ಚರಿಕೆ ನೀಡುವುದಾಗಿದೆ ಮತ್ತು ನೀವು ಅದನ್ನು AIS ನಲ್ಲಿ ತೋರಿಸಿರುವ ಆದಾಯದೊಂದಿಗೆ ಹೊಂದಿಸಬಹುದು ಎಂದು ಸಹ ತಿಳಿಸಲಾಗಿದೆ.


ಇಂದೋರ್ ಸಿಎ ಶಾಖೆಯ ಮಾಜಿ ಅಧ್ಯಕ್ಷ ಸಿಎ ಪಂಕಜ್ ಶಾ ಅವರು ಇಂತಹ ಸಂದರ್ಭಗಳಲ್ಲಿ ಬರುತ್ತಿರುವ ಸೂಚನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ಮೊದಲ ಬಾರಿಗೆ ಸೆಕ್ಷನ್ 80 ಜಿ ಅಡಿಯಲ್ಲಿ ವಿನಾಯಿತಿ ಪಡೆದ ಅಂತಹ ಸಂಬಳದಾರರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಹೇಳಿದರು. ಅದೇ ರೀತಿ ಎಲ್‌ಐಸಿ ಅಡಿಯಲ್ಲಿ ವಿನಾಯಿತಿ ಪಡೆದ ತೆರಿಗೆದಾರರಿಗೂ ನೋಟಿಸ್‌ಗಳು ಬರುತ್ತಿವೆ. ಗೃಹ ಸಾಲದ ಮೇಲಿನ ಬಡ್ಡಿ ವಿನಾಯತಿ, ಬಾಡಿಗೆ ವಿನಾಯಿತಿ, ಇತರೆ ಯಾವುದೇ ತೆರಿಗೆ ರಹಿತ ಹೂಡಿಕೆಯನ್ನು ಗುರುತಿಸಿ ತೆರಿಗೆದಾರರಿಗೆ ನೋಟಿಸ್ ಕಳುಹಿಸಲಾಗುತ್ತಿದೆ. ಅಂತಹ ನೋಟಿಸ್‌ಗಳನ್ನು ಸ್ವೀಕರಿಸುವ ತೆರಿಗೆದಾರರು ಮೊದಲು ಅವರು ಕ್ಲೈಮ್ ಮಾಡಿದ ಎಲ್ಲಾ ಹೂಡಿಕೆಗಳ ಪುರಾವೆಗಳನ್ನು ಸಂಗ್ರಹಿಸಬೇಕು.


ಇದನ್ನೂ ಓದಿ:  EPFO Alert: ಯಾವುದೇ ಸಮಯದಲ್ಲಿಯೂ ಈ ತಪ್ಪುಗಳನ್ನ ಮಾಡಬೇಡಿ; PF ಖಾತೆದಾರರಿಗೆ EPFO ಎಚ್ಚರಿಕೆ

ತೆರಿಗೆದಾರರಿಗೆ ಪ್ರತಿಕ್ರಿಯಿಸಲು 15 ದಿನಗಳ ಕಾಲಾವಕಾಶವಿದೆ. ವಿನಾಯಿತಿಯ ಪುರಾವೆ ತೆರಿಗೆದಾರರ ಬಳಿ ಇಲ್ಲದಿದ್ದರೂ ರಿಟರ್ನ್ ಅನ್ನು ಪರಿಷ್ಕರಿಸುವುದು ಉತ್ತಮ, ಇಲ್ಲದಿದ್ದರೆ ಮೌಲ್ಯಮಾಪನದಲ್ಲಿ ಹೆಚ್ಚುವರಿ ಬಡ್ಡಿ ಮತ್ತು 200% ದಂಡಕ್ಕೆ ಕಾರಣವಾಗಬಹುದು. ರಿಟರ್ನ್ ಅನ್ನು ಪರಿಷ್ಕರಿಸುವ ಮೂಲಕ ದಂಡವನ್ನು ತಪ್ಪಿಸಬಹುದು.

Published by:Ashwini Prabhu
First published: