• Home
  • »
  • News
  • »
  • business
  • »
  • Recession: ಒಳಉಡುಪು ಮಾರಾಟ ಕುಸಿದ್ರೆ ಆರ್ಥಿಕ ಕುಸಿತದ ಮುನ್ಸೂಚನೆಯಂತೆ! ಇನ್ನೂ ಸಾಕಷ್ಟು ರೀಸನ್ಸ್​ ಇಲ್ಲಿದೆ​ ನೋಡಿ

Recession: ಒಳಉಡುಪು ಮಾರಾಟ ಕುಸಿದ್ರೆ ಆರ್ಥಿಕ ಕುಸಿತದ ಮುನ್ಸೂಚನೆಯಂತೆ! ಇನ್ನೂ ಸಾಕಷ್ಟು ರೀಸನ್ಸ್​ ಇಲ್ಲಿದೆ​ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗುವ ಮುನ್ನ ಯಾರಿಗೂ ಗೆಸ್ಸ್​ ಮಾಡೋದು ಕಷ್ಟ ಅಂತಾರೇ ತಜ್ಞರು. ಇದ್ದಕ್ಕಿದ್ದ ಹಾಗೇ ದೇಶದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಶುರುವಾಗುತ್ತೆ.

  • Share this:

ಕಾಯಕವೇ ಕೈಲಾಸ ಅಂತಾರೆ. ಕೆಲಸ (Job) ಕೊಡುವ ಕಂಪನಿ (Company) ಯಲ್ಲಿ ನಿಯತ್ತಾಗಿ ಕೆಲಸ ಮಾಡಿದರೆ ಯಾವುದೇ ತೊಂದರೆ ಇಲ್ಲ ಅನ್ನುತ್ತಾರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಯಾರ ಕೆಲಸ, ಯಾವಾಗ, ಎಲ್ಲಿ, ಹೇಗೆ ಹೋಗುತ್ತೆ ಅಂತಾನೇ ಗೊತ್ತಾಗಲ್ಲ. ಯಾಕಂದರೆ ವಿಶ್ವದ ದೊಡ್ಡ ದೊಡ್ಡ ಕಂಪನಿ (Company) ಗಳು ತನ್ನ ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ ವಜಾ  (Layoff) ಮಾಡುತ್ತಿದೆ. ಹೀಗೆ ಎಲ್ಲ ಕಂಪನಿಗಳು ತನ್ನ ಉದ್ಯೋಗಿ (Employees) ಗಳನ್ನು ಕೆಲಸದಿಂದ ವಜಾ ಮಾಡುತ್ತಾ ಬಂದರೆ ಮುಂದೆನು ಅನ್ನುವಂತಹ ಗೊಂದಲ ಶುರುವಾಗಿದೆ. ದೇಶದಲ್ಲಿ ಇರುವ ನಿರುದ್ಯೋಗ (Unemployment) ಹೆಚ್ಚುವುದಿಲ್ವಾ? ಅಂತ ನೀವು ಕೇಳಬಹುದು. ಕಂಡಿತ ಹೆಚ್ಚುತ್ತೆ. ಜಾಗತಿಕ ಆರ್ಥಿಕ ಹಿಂಜರಿತದ ಲಕ್ಷಣಗಳು ಈಗಲೇ ಆರಂಭವಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.


ಜಾಗತಿಕ ಆರ್ಥಿಕ ಹಿಂಜರಿತ ಆರಂಭವಾಗುವ ಮುನ್ನ ಯಾರಿಗೂ ಗೆಸ್ಸ್​ ಮಾಡೋದು ಕಷ್ಟ ಅಂತಾರೇ ತಜ್ಞರು. ಇದ್ದಕ್ಕಿದ್ದ ಹಾಗೇ ದೇಶದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಶುರುವಾಗುತ್ತೆ ಅಂತಾರೆ. ಆದರೆ, ಕೆಲವೊಂದು ಘಟನೆಗಳು ನಡೆಯುವುದಕ್ಕೆ ಶುರುವಾದರೆ ದೇಶದಲ್ಲಿ ಅಥವಾ ವಿಶ್ವದಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಶುರುವಾಗಿದೆ ಅಂತ ಹೇಳಬಹುದಂತೆ. ಅದು ಹೇಗೆ ಸಾಧ್ಯ? ಅಂತ ನೀವು ಕೇಳಬಹುದು. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.


1) ಗಂಡಸರ ಒಳ ಉಡುಪು ಮಾರಾಟ ಇಳಿಕೆ!


ಹೌದು, ಇದು ಕೇಳುವುದಕ್ಕೆ ಸ್ವಲ್ಪ ಫನ್ನಿ ಅನ್ನಿಸಹಬಹುದು. ಯುರೋಪಲ್ಲಿ ಗಂಡಸರ ಒಳ ಉಡುಪು ಮಾರಾಟ ಇಳಿಕೆಯಾದರೆ, ಆರ್ಥಿಕ ಕುಸಿತ ಶುರುವಾಗಿದೆ ಅಂತ ಅರ್ಥ. ಇದಕ್ಕೆ ಒಂದು ಬಲವಾದ ಕಾರಣವಿದೆ. ಯಾಕೆಂದರೆ ಗಂಡಸರು ಕೈಯಲ್ಲಿ ಹೆಚ್ಚಿನ ಹಣ ಇದ್ದಾಗ ಏನಾದರೂ ಕೊಂಡುಕೊಳ್ಳಲು ಬಯಸುತ್ತಾರೆ. ಆದರೆ, ಯುರೋಪ್​ನಲ್ಲಿ ಗಂಡಸರು ಹೆಚ್ಚಾಗಿ ಒಳುಡುಪುಗಳನ್ನು ಕೊಂಡುಕೊಳ್ಳಲು ಇಷ್ಟ ಪಡುತ್ತಾರೆ. ಆದರೆ, ಯಾರೂ ಒಳ ಉಡುಪುಗಳನ್ನು ಕೊಂಡುಕೊಳ್ಳುತ್ತಿಲ್ಲ ಅಂದರೆ  ಆರ್ಥಿಕ ಕುಸಿತ ಶುರುವಾಗಿದೆ ಅಂತ ಅರ್ಥ.


ಇದನ್ನೂ ಓದಿ: ಟ್ವಿಟರ್​ನಲ್ಲಿ ಬರೀ ಎಲಾನ್​ ಮಸ್ಕ್​ ಹಣ ಮಾತ್ರ ಇಲ್ಲ, ಇವ್ರೆಲ್ಲಾ ಇಲ್ಲಿ ಹೂಡಿಕೆ ಮಾಡಿದ್ದಾರೆ!


2) ಹೆಣ್ಣುಮಕ್ಕಳು ಶಾರ್ಟ್ ಕಟಿಂಗ್ ಮಾಡಿಸಿದರೆ ಆರ್ಥಿಕ ಕುಸಿತ!


ಹೌದು, ಇದು ಕೂಡ ಸತ್ಯ ಎನ್ನುತ್ತಾರೆ ತಜ್ಞರು. ಜಪಾನ್​ನಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಬ್ಯೂಟಿ ಪಾರ್ಲರ್​ಗೆ ಹೋಗುತ್ತಾರೆ. ಅದರಲ್ಲೂ ಪ್ರತಿನಿತ್ಯ ಹೆಣ್ಣುಮಕ್ಕಳು ಸುಂದರವಾಗಿ ಕಾಣಿಸಿಕೊಳ್ಳಲು ಗ್ರೂಮಿಂಗ್​ ಮಾಡಿಸಿಕೊಳ್ಳುತ್ತಾರೆ. ಇಲ್ಲಿನ ಹೆಣ್ಣು ಮಕ್ಕಳು ತಮ್ಮ ತಲೆ ಕೂದಲನ್ನು ಶಾರ್ಟ್ ಆಗಿ ಕಟ್ ಮಾಡಿಸುತ್ತಿದ್ದಾರೆ ಅಂದರೆ ಆರ್ಥಿಕ ಕುಸಿತ ಶುರುವಾಗಿದೆ ಅಂತ ಅರ್ಥ. ಯಾಕೆಂದರೆ ಅವರ ಕಾಸ್ಟ್​ ಆಫ್​ ಲಿವಿಂಗ್​ ಹೆಚ್ಚಿದೆ. ಹೀಗಾಗಿ ಹೆಚ್ಚಿನ ದುಡ್ಡು ಖರ್ಚು ಮಾಡುತ್ತಿದ್ದರೆ, ಎಲ್ಲರಿಗೂ ಬದುಕು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.


3) ಮನೆಯಲ್ಲಿ ತ್ಯಾಜ ಕಡಿಮೆಯಾದ್ರೂ ಕಷ್ಟ!


ಪ್ರತಿ ಮನೆ, ಅಂಗಡಿ, ಹೋಟೆಲ್​, ಮಾಲ್​ ಈ ರೀತಿಯ ಸ್ಥಳಗಳಲ್ಲಿ ಕಸ ಕಡಿಮೆಯಾದರೆ  ಆರ್ಥಿಕ ಕುಸಿತ ಶುರುವಾಗುವ ಮುನ್ಸೂಚನೆ ಅಂತ ಅರ್ಥ. ಯಾಕೆಂದರೆ ತ್ಯಾಜ್ಯ ಕಡಿಮೆಯಾದರೆ ಯಾರ ಏನನ್ನೂ ಕೊಂಡುಕೊಳ್ಳಲು ಹಣವಿಲ್ಲ ಎಂದು ಅರ್ಥ. ಕೆಲಸವಿದ್ದರೆ ಸಂಬಳ ಬರುತ್ತೆ. ಸಂಬಳ ಬಂದರೆ ಹೆಚ್ಚಿನ ವಸ್ತು, ಪದಾರ್ಥಗಳನ್ನು ಜನ ಕೊಂಡುಕೊಳ್ಳುತ್ತಾರೆ. ಇದರಿಂದ ತ್ಯಾಜ್ಯ ಉತ್ಪತ್ತಿಯಾಗುತ್ತೆ.


ಇದನ್ನೂ ಓದಿ: ಹೇಳದೇ ಕೇಳದೇ ಇಷ್ಟು ಮಂದಿ ಕೆಲಸದಿಂದ ವಜಾ, ಹೀಗಾದ್ರೆ ಮುಂದೇನ್​ ಕಥೆ ಅಂತಿದ್ದಾರೆ ಭಾರತೀಯರು!


4) ಮತ್ತೊಂದು ಹೆಣ್ಣುಮಕ್ಕಳ ವಿಚಾರ ಅಂದರೆ ಹೆಣ್ಣು ಮಕ್ಕಳು ಹೆಚ್ಚಾಗಿ ಸೌಂದರ್ಯವರ್ಧಕ ಪ್ರಾಡೆಕ್ಟ್​ಗಳನ್ನ ಹೆಚ್ಚಾಗಿ ಕೊಂಡುಕೊಳ್ಳುತ್ತಿದ್ದಾರೆ ಅಂದರೂ ಆರ್ಥಿಕ ಕುಸಿತ ಶುರುವಾಗುತ್ತೆ ಅಂತ ಅರ್ಥ


5) ಇನ್ನೂ ಕಡೆಯದ್ದು ಎಲ್ಲರಿಗೂ ಗೊತ್ತಿರುವುದೇ. ದೊಡ್ಡ ದೊಡ್ಡ ಕಂಪನಿಗಳು ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದ್ದಾರೆ ಎಂದಾದರೇ ಆರ್ಥಿಕ ಕುಸಿತ ಶುರುವಾಗಿದೆ ಅಂತ ಅರ್ಥ

Published by:ವಾಸುದೇವ್ ಎಂ
First published: