Business Startup: ಎಲಾನ್​​ ಮಸ್ಕ್ ಮಂಗಳ ಗ್ರಹಕ್ಕೆ ಹೋದ್ರೆ, ಅಲ್ಲಿಗೂ ಇವ್ರು ಡಿಸೇಲ್ ತಲುಪಿಸ್ತಾರಂತೆ!

ಇಂದಿನ ಆಧುನಿಕ ಕಾಲದಲ್ಲಿ ಈ ಸ್ಟಾರ್ಟ್‌ಅಪ್‌ ಗಳದ್ದೆ (Startup) ಕಾರುಭಾರು. ಎಲ್ಲಿ ನೋಡಿದ್ರೂ ಈ ಸ್ಟಾರ್ಟ್‌ಅಪ್‌ಗಳು ತಮ್ಮ ಛಾಯೆಯನ್ನು ಹರಿಸುತ್ತಿವೆ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲೊಂದು ಜೋಡಿ ಒಂದು ವಿಶಿಷ್ಟ ಸ್ಟಾರ್ಟ್‌ಅಪ್‌ ಅನ್ನು ಪ್ರಾರಂಭಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಆಧುನಿಕ ಕಾಲದಲ್ಲಿ ಈ ಸ್ಟಾರ್ಟ್‌ಅಪ್‌ ಗಳದ್ದೆ (Startup) ಕಾರುಭಾರು. ಎಲ್ಲಿ ನೋಡಿದ್ರೂ ಈ ಸ್ಟಾರ್ಟ್‌ಅಪ್‌ಗಳು ತಮ್ಮ ಛಾಯೆಯನ್ನು ಹರಿಸುತ್ತಿವೆ ಎಂದು ಹೇಳಿದರೆ ತಪ್ಪಾಗಲಾರದು. ಇಲ್ಲೊಂದು ಜೋಡಿ ಒಂದು ವಿಶಿಷ್ಟ ಸ್ಟಾರ್ಟ್‌ಅಪ್‌ ಅನ್ನು ಪ್ರಾರಂಭಿಸಿದ್ದಾರೆ. ಆ ಜೋಡಿಯಾದಂತಹ 25 ವರ್ಷದ ಅದಿತಿ ಭೋಸಲೆ ವಾಲುಂಜ್ (Aditi Bhosale Walunj) ಮತ್ತು ಅವರ ಪತಿ ಚೇತನ್ ವಾಲುಂಜ್ ಅವರು ಪುಣೆಯ ಪೆಟ್ರೋಲ್ ಪಂಪ್‌ನ (Petrol Pump) ತಮ್ಮ ಹಲವು ವರ್ಷಗಳ ಕುಟುಂಬದ ವ್ಯವಹಾರವನ್ನು ವಹಿಸಿಕೊಂಡಾಗ ಅವರು ಒಂದು ವಿಶಿಷ್ಟ ಕೆಲಸವನ್ನು ಮಾಡಿದರು. ಅದೇನೆಂದರೆ ಸಾಲದ ಮೇಲೆ ಡೀಸೆಲ್ (Diesel) ಖರೀದಿ ಮಾಡುವ ಮತ್ತು ಅದನ್ನು 15 ದಿನಗಳ ಒಳಗಾಗಿ ಮತ್ತೆ ಪಾವತಿ ಮಾಡುವ ಸಣ್ಣ ಉದ್ಯಮಿಗಳಿಗೆ ಈ ಕೆಲಸ ನಿರ್ವಹಿಸಲು ಕರೆ ನೀಡುತ್ತಾರೆ.

ಆದರೂ ಕೂಡ ಅವರು ತಮ್ಮ ಕ್ರೆಡಿಟ್ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು. ಹೀಗೆ ಒಂದು ದಿನ 2016ರಲ್ಲಿ ವಿದ್ಯುತ್ ಕಡಿತವಾಯಿತು ಮತ್ತು ಆಗ ಅವರು ಇನ್ನೂ ಐಟಿ ಕಂಪನಿಗೆ ಡೀಸೆಲ್ ಅನ್ನು ವಿತರಿಸುತ್ತಿದ್ದರು. ಅದೇ ಸಮಯದಲ್ಲಿಯೇ ಅದಿತಿ ಒಂದು ಇ-ಕಾಮರ್ಸ್ ವೆಬ್‌ಸೈಟ್‌ಗೂ ಒಂದು ಆರ್ಡ್‌ರ್‌ ಬುಕ್‌ ಮಾಡಿದ್ದಳು. ಅದು ಕೂಡ ಸರಿಯಾದ ಸಮಯಕ್ಕೆ ಬಂದು ತಲುಪಿದೆ ಎಂದು ಸಂದೇಶ ಬರುತ್ತದೆ.

ಏನಿದು ಹೊಸ ಸ್ಟಾರ್ಟ್ ಅಪ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ
ಅದಿತಿ ಈ ಡಿಸೇಲ್‌ ಅನ್ನು ಅಂತಿಮ ಗ್ರಾಹಕರಿಗೆ ಏಕೆ ತಲುಪಿಸಲು ಸಾಧ್ಯವಿಲ್ಲ ಎಂದು ಅವರು ತುಂಬಾನೇ ಆಶ್ಚರ್ಯಪಟ್ಟರು. ಕೆಲವು ತಿಂಗಳುಗಳ ನಂತರ, ಅವರು ಈ ಆಲೋಚನೆಯನ್ನು ರತನ್ ಟಾಟಾ ಅವರ ಮುಂದೆ ಪ್ರಸ್ತುತ ಪಡಿಸಿದರು. ಇದಕ್ಕೆ ಅವರು ಅದಿತಿಗೆ ಸಹಾಯ ಹಸ್ತವನ್ನು ಚಾಚಿದರ ಪ್ರಭಾವ ಅದಿತಿ ಅದಕ್ಕೆ ಬೇಕಾದ ಅಗತ್ಯವಾದ ಪರವಾನಗಿಗಳನ್ನು ಪಡೆಯಲು ದೆಹಲಿಗೆ ಹೋದರು. ಇಂಧನಕ್ಕಾಗಿ ವಿತರಣಾ ವ್ಯವಸ್ಥೆಯಂತಹ ಮೊದಲ ಇ-ಕಾಮರ್ಸ್ ಅನ್ನು ರಚಿಸಲು ಅದಿತಿಗೆ ಇದು ಮೊದಲ ಗೆಲುವು ಎಂದರೆ ಸುಳ್ಳಾಗದು.

ಇದನ್ನೂ ಓದಿ: Business: ನಟನೆಯಲ್ಲಿ ಯಶಸ್ಸು ಕಾಣದೆ ಇದ್ರೂ ಬಹುಕೋಟಿ ವ್ಯವಹಾರಕ್ಕೆ ಮಾಲೀಕರಾದ ನಟ ನಟಿಯರಿವರು

"ಭಾರತೀಯರು ಡೀಸೆಲ್‌ ಬಳಸಿ ಓಡಾಡುವ ವಾಹನದಲ್ಲಿ ಹೆಚ್ಚು ಪ್ರಯಾಣ ಮಾಡುತ್ತಾರೆ" ಎಂದು ಅದಿತಿ ಹೇಳುತ್ತಾರೆ ಮತ್ತು ದಿನಕ್ಕೆ 7.71 ಮಿಲಿಯನ್ ಟನ್‌ಗಳ ಡಿಸೇಲ್‌ ವ್ಯವಹಾರದ ದೊಡ್ಡ ಭಾಗವು ಕ್ರೆಡಿಟ್ ವ್ಯವಹಾರದಲ್ಲಿ ನಡೆಯುತ್ತದೆ. ಆರಂಭಿಕ ವಿನ್ಯಾಸದ ವಾಹನಗಳಲ್ಲಿ ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ಕನಿಷ್ಠ 100 ಲೀಟರ್ ಆರ್ಡರ್‌ನಲ್ಲಿ ಡೀಸೆಲ್ ಅನ್ನು ತಲುಪಿಸಲಾಗುತ್ತದೆ ಹಾಗೆಯೇ ಅಪ್ಲಿಕೇಶನ್ ಮೂಲಕ ಕೂಡ ಆರ್ಡರ್ ಮಾಡಬಹುದು, ಆದರೆ ಇದನ್ನು ನಿರ್ದಿಷ್ಟ ದಿನಾಂಕದಲ್ಲಿ ಮಾತ್ರ ವಿತರಿಸಲಾಗುತ್ತದೆ.

ಇದರಿಂದ ಇವರು ಗಳಿಸುವ ಆದಾಯವೆಷ್ಟು
ಪ್ರಸ್ತುತವಾಗಿ ಮೊಬೈಲ್ ಇಂಧನ ಪಂಪ್‌ಗಳು 220 ನಗರಗಳಲ್ಲಿ ಡಿಸೇಲ್‌ ಅನ್ನು ವಿತರಿಸುತ್ತವೆ ಮತ್ತು ಪೆಟ್ರೋಲ್ ಪಂಪ್‌ಗಳಿಂದ ಅಥವಾ BPCL, ಇಂಡಿಯನ್ ಆಯಿಲ್ ಮತ್ತು HPCL ನಂತಹ ಇಂಧನ ಮಾರುಕಟ್ಟೆ ಕಂಪನಿಗಳಿಂದ ಇಂಧನವನ್ನು ಪಡೆಯುತ್ತವೆ. ಕೈಗಾರಿಕಾ ಮಾರಾಟವು ಯಾವಾಗಲೂ ತೈಲ ಮಾರ್ಕೆಟಿಂಗ್ ಕಂಪನಿಗಳ ವ್ಯವಹಾರದ ಒಂದು ಸಣ್ಣ ಭಾಗವಾಗಿದೆ ಮತ್ತು ಸಹಜವಾಗಿ ಅವರು ಡಿಜಿಟಲ್‌ ಅಪ್ಲಿಕೇಶನ್ ಗಳನ್ನು ಹೆಚ್ಚು ಬಳಸುವುದಿಲ್ಲ. ಇಂಧನ ವಾಹನಗಳನ್ನು ಫ್ರ್ಯಾಂಚೈಸ್ ಆಧಾರದ ಮೇಲೆ ಆಸಕ್ತ ಜನರಿಗೆ ನೀಡಲಾಗುತ್ತದೆ. ಒಂದು ಕಂಪನಿಯಾಗಿ ಅವರು ಪ್ರತಿ ತಿಂಗಳು ಸುಮಾರು 60-70 ಕಿಲೋ ಲೀಟರ್ ಡೀಸೆಲ್ ಅನ್ನು ಮಾರಾಟ ಮಾಡುತ್ತಾರೆ ಮತ್ತು ಈ ವರ್ಷ ₹ 63 ಕೋಟಿ ಆದಾಯವನ್ನು ಗಳಿಸಿದ್ದಾರೆ.

ಇದನ್ನೂ ಓದಿ:  MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

“ ಪ್ರಸಿದ್ಧ ಉದ್ಯಮಿ ಮತ್ತು ಎಂದಿಗೂ ಹಣದ ಕೊರತೆ ಎದುರಿಸದ ವಿಶ್ವದ ಶ್ರೀಮಂತ ವ್ಯಕ್ತಿ ಎಲೊನ್‌ ಮಸ್ಕ್‌ ಅವರು ಮಂಗಳ ಗ್ರಹಕ್ಕೆ ಹೋಗಲು ಬಯಸಿದ್ದರೂ, ನಾವು ಅಲ್ಲಿಗೆ ಕೂಡ ಡೀಸೆಲ್ ಅನ್ನು ಅವರಿಗೆ ತಲುಪಿಸುತ್ತೇವೆ" ಎಂದು ಅದಿತಿ ಹೇಳುತ್ತಾರೆ.
Published by:Ashwini Prabhu
First published: