Bank Lunch Hour: ಲಂಚ್​ ಹೆಸರಿನಲ್ಲಿ ಬ್ಯಾಂಕ್ ನೌಕರರು ಗಂಟೆಗಟ್ಟಲೆ ಕಾಯಿಸುತ್ತಿದ್ದಾರಾ? ಹೀಗ್​ ಮಾಡಿ ಲಾಕ್​ ಮಾಡ್ಸಿ!

ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ ಉದ್ಯೋಗಿಯ ಇಂತಹ ವರ್ತನೆಯು ಗ್ರಾಹಕರಿಗೆ ಹಾನಿಯನ್ನುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಬ್ಯಾಂಕ್ ಉದ್ಯೋಗಿಯ ವಿರುದ್ಧ ದೂರು ನೀಡಬಹುದು. ಅದಕ್ಕೆ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲಸದಲ್ಲೇ ಬೆಸ್ಟ್ (Best)​ ಅಂದರೆ ಅದು ಬ್ಯಾಂಕ್​ ಕೆಲಸ (Bank Job) ಎನ್ನುತ್ತಾರೆ. ವಾರದಲ್ಲಿ 2 ದಿನ ರಜೆ, ವಿಶೇಷ ದಿನಗಳಲ್ಲಿ ರಜೆ (Holiday) . ಕೈ ತುಂಬಾ ಸಂಬಳ. 9 ರಿಂದ 6ರವರೆಗೆ ಕೆಲಸ. ಇನ್ನೇನು ಬೇಕು ಸಾಕು ಅಂದುಕೊಳ್ಳುತ್ತಾರೆ. ಬ್ಯಾಂಕ್ (Bank) ​ನಲ್ಲಿ ಕೆಲಸ ಮಾಡುವವರಿಗೆ ಒಂದು ಆದರೆ, ಬ್ಯಾಂಕ್​ ಕೆಲಸ (Bank) ಮಾಡಲು ಬಂದ ಗ್ರಾಹಕರ ಆರೋಪವೇ ಬೇರೆ. ಬ್ಯಾಂಕ್ ನೌಕರರು (Bank Workers) ಊಟದ ಸಮಯ ಅಂತ ಹೇಳಿ ಹೆಚ್ಚಿನ ಹೊತ್ತು ಕಾಯಿಸುತ್ತಿದ್ದಾರೆ ಅನ್ನುವುದನ್ನು ಕೇಳಿದ್ದೇವೆ.  ಅವರು ತಮ್ಮ ಸಮಯವನ್ನು ಮತ್ತು ಗ್ರಾಹಕರ ಸಮಯವನ್ನು ವ್ಯರ್ಥ ಮಾಡುತ್ತಾರೆ. ಇದರಿಂದಾಗಿ ಗ್ರಾಹಕರು ತೊಂದರೆಗೊಳಗಾಗಬೇಕಾಗುತ್ತದೆ. ಮತ್ತು ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ ಉದ್ಯೋಗಿಯ ಇಂತಹ ವರ್ತನೆಯು ಗ್ರಾಹಕರಿಗೆ ಹಾನಿಯನ್ನುಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಬ್ಯಾಂಕ್ ಉದ್ಯೋಗಿಯ ವಿರುದ್ಧ ದೂರು ನೀಡಬಹುದು. ಅದಕ್ಕೆ ಹೀಗೆ ಮಾಡಿ

ಊಟದ ಸಮಯದ ನೆಪದಲ್ಲಿ ನಿಮ್ಮ ಕೆಲಸವನ್ನು ಸ್ಥಗಿತಗೊಳಿಸುವ ಉದ್ಯೋಗಿಗಳ ವಿರುದ್ಧ ಈಗ ನೀವು ದೂರು ನೀಡಬಹುದು. ಬ್ಯಾಂಕ್ ಗ್ರಾಹಕರು ಈ ರೀತಿಯ ಹಕ್ಕುಗಳನ್ನು ಪಡೆಯುತ್ತಾರೆ, ಆದರೆ ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿದಿರುವುದಿಲ್ಲ. ಅಂತಹ ಉದ್ಯೋಗಿಗಳ ಬಗ್ಗೆ ನೀವು ಎಲ್ಲಿ ದೂರು ನೀಡಬಹುದು ಎಂಬ ಮಾಹಿತಿ ಇಲ್ಲಿದೆ ಸಂಪೂರ್ಣವಾಗಿ ಓದಿ.

ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಿ

ಊಟದ ವಿರಾಮದ ಹೆಸರಿನಲ್ಲಿ ಬ್ಯಾಂಕ್‌ನವರು ನಿಮಗೆ ತೊಂದರೆ ಕೊಟ್ಟರೆ, ನೀವು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡಬಹುದು. ಬ್ಯಾಂಕ್ ಉದ್ಯೋಗಿಗಳು ನಿಮ್ಮ ಕೆಲಸವನ್ನು ಮಾಡಲು ಹಿಂಜರಿಯುತ್ತಿದ್ದರೆ, ನೀವು ನೇರವಾಗಿ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರನ್ನು ನೀಡಿ.

ಶಾಖೆಯ ಮುಖ್ಯಸ್ಥರಿಗೆ ದೂರು ನೀಡಬಹುದು

ಬ್ಯಾಂಕ್ ಉದ್ಯೋಗಿ ಕೆಲಸ ಮಾಡದಿದ್ದಲ್ಲಿ ನೀವು ಬ್ಯಾಂಕ್ ಮುಖ್ಯಸ್ಥರಿಗೆ ದೂರು ನೀಡಬಹುದು. ಗ್ರಾಹಕರ ದೂರುಗಳನ್ನು ನಿಭಾಯಿಸಲು ಪ್ರತಿಯೊಂದು ಬ್ಯಾಂಕ್ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ಕುಂದುಕೊರತೆ ಪರಿಹಾರ ವ್ಯವಸ್ಥೆ ಎಂದೂ ಕರೆಯುತ್ತಾರೆ. ಗ್ರಾಹಕರು ಇಲ್ಲಿ ದೂರುಗಳನ್ನು ಸಲ್ಲಿಸಬಹುದು.

ಇದನ್ನೂ ಓದಿ: ನಿಮ್ಮ ಕನಸಿನ ಕಾರು ಖರೀದಿಸೋಕೆ ಈ ಬ್ಯಾಂಕ್​ಗಳು ಸಹಾಯ ಮಾಡುತ್ತೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ!

ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಬಹುದು!

ಇದಲ್ಲದೆ, ನೀವು ಬ್ಯಾಂಕ್‌ನ ಸಹಾಯವಾಣಿ ಸಂಖ್ಯೆಗೆ ಸಹ ಉದ್ಯೋಗಿಯ ವಿರುದ್ಧ ದೂರು ನೀಡಬಹುದು. ನಿಮ್ಮ ದೂರು ಇಡೀ ಶಾಖೆಯ ಬಗ್ಗೆ ಇದ್ದರೂ, ನೀವು ದೂರು ನೀಡಬಹುದು. ದೂರುಗಳನ್ನು ದಾಖಲಿಸಲು ಬ್ಯಾಂಕ್‌ಗಳು ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿವೆ. ಅನೇಕ ಬ್ಯಾಂಕ್‌ಗಳು ಆನ್‌ಲೈನ್ ದೂರು ಸೌಲಭ್ಯವನ್ನೂ ಒದಗಿಸುತ್ತವೆ. ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ನೀವು ಈ ಸಹಾಯವಾಣಿ ಸಂಖ್ಯೆಯನ್ನು ಕಾಣಬಹುದು.

ನೌಕರರು ಒಟ್ಟಿಗೆ ವಿರಾಮದಲ್ಲಿ ಹೋಗಲು ಸಾಧ್ಯವಿಲ್ಲ

ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ. ಅವರು ಒಬ್ಬರ ನಂತರ ಒಬ್ಬರನ್ನು ಊಟದ ವಿರಾಮವನ್ನು ತೆಗೆದುಕೊಳ್ಳಬಹುದು. ಈ ಸಮಯದಲ್ಲಿ ಸಾಮಾನ್ಯ ವಹಿವಾಟುಗಳು ಮುಂದುವರಿಯಬೇಕು. ಗ್ರಾಹಕರನ್ನು ಗಂಟೆಗಳ ಕಾಲ ಕಾಯುವಂತೆ ಮಾಡುವುದು ನಿಯಮಗಳಿಗೆ ವಿರುದ್ಧವಾಗಿದೆ. ಬ್ಯಾಂಕ್ ನೌಕರರು ಯಾವುದೇ ಗ್ರಾಹಕರನ್ನು ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಅಲ್ಲದೆ ಬಲವಂತವಾಗಿ ಒಪ್ಪಂದಕ್ಕೆ ಸಹಿ ಹಾಕುವಂತಿಲ್ಲ.

ಇದನ್ನೂ ಓದಿ: 5 ಸಾವಿರದಿಂದ ಈ ಬ್ಯುಸಿನೆಸ್​ ಶುರು ಮಾಡಿ, ರುಚಿ-ಶುಚಿ ಇದ್ರೆ ತಿಂಗಳಲ್ಲಿ ಲಕ್ಷಾಧಿಪತಿಗಳಾಗ್ತೀರಿ!

ಇನ್ನೂ ಮುಂದೆ ಯಾವುದೇ ಬ್ಯಾಂಕ್​ಗಳಲ್ಲಿ ಊಟ ಅಂತ ಹೇಳಿ ಹೆಚ್ಚಿನ ಸಮಯ ವ್ಯರ್ಥ ಮಾಡಿ ನಿಮಗೆ ತೊಂದರೆಯಾದರೆ, ಯಾಕಪ್ಪ ನಮಗೆ ಬೇಕು ಅಂತ ಸುಮ್ಮನಾಗಬೇಡಿ. ಮೇಲೆ ಹೇಳಿರುವ ರೀತಿ ಮಾಡಿ. ಯಾಕೆಂದರೆ ಬ್ಯಾಂಕ್​ಗೆ ಹೋಗುವವರಲ್ಲಿ ಎಷ್ಟು ಜನಕ್ಕೆ ಎಮರ್ಜೆನ್ಸಿ ಇರುತ್ತೆ ಅಂತ ಯಾರಿಗೂ ಗೊತ್ತಿಲ್ಲ.
Published by:Vasudeva M
First published: