• Home
  • »
  • News
  • »
  • business
  • »
  • Business Idea: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ

Business Idea: ಬೈಕ್​ನಲ್ಲೇ ಇಡ್ಲಿ ವ್ಯಾಪಾರ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಪದವೀಧರನ ಕಥೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾಜಿಕ ಜಾಲತಾಣಗಳಿಂದಲೇ ಅನೇಕರು ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್‌ ಆಗ್ಬಿಡ್ತಾರೆ. ಹಲವಾರು ಜನರು ಇದರಿಂದಲೇ ದುಡಿಯುತ್ತಾರೆ. ಅನೇಕ ಕಥೆಗಳು ಇಲ್ಲಿ ತೆರೆದುಕೊಳ್ಳುತ್ತವೆ. ಹಲವರ ಸಾಧನೆಯ ಕಥೆ ಇನ್ನೂ ಅನೇಕರಿಗೆ ತಲುಪುತ್ತೆ. ಹೀಗೆ.. ಸದ್ಯ 3 ತಿಂಗಳಿಂದ ನಿರುದ್ಯೋಗಿಯಾಗಿದ್ದ ಪದವೀಧರರನೊಬ್ಬ ಇಡ್ಲಿ ಮಾರಾಟ ಮಾಡುವ ಕಥೆ ಇಂಟರ್‌ ನೆಟ್‌ ನಲ್ಲಿ ವೈರಲ್‌ ಆಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Haryana, India
  • Share this:

ಸಾಮಾಜಿಕ ಜಾಲತಾಣ (Social Media) ಇಂದಿನ ಕಾಲದ ಅಗತ್ಯತೆಗಳಲ್ಲಿ ಒಂದಾಗಿವೆ. ಸಾಮಾಜಿಕ ಜಾಲತಾಣಗಳಿಂದಲೇ ಅನೇಕರು ರಾತ್ರಿ ಬೆಳಗಾಗೋದ್ರಲ್ಲಿ ಫೇಮಸ್‌ (Famous) ಆಗ್ಬಿಡ್ತಾರೆ. ಹಲವರು ಇದರಿಂದಲೇ ದುಡಿದು ಹಣ ಸಂಪಾದಿಸುತ್ತಾರೆ. ಅನೇಕ ಕಥೆಗಳು ಇಲ್ಲಿ ತೆರೆದುಕೊಳ್ಳುತ್ತವೆ. ಹಲವರ ಸಾಧನೆಯ ಕಥೆ ಇನ್ನೂ ಅನೇಕರಿಗೆ ತಲುಪುತ್ತೆ. ಸದ್ಯ 3 ತಿಂಗಳಿಂದ ನಿರುದ್ಯೋಗಿಯಾಗಿದ್ದ (Unemployment) ಪದವೀಧರರನೊಬ್ಬ ಇಡ್ಲಿ ಮಾರಾಟ ಮಾಡುವ ಕಥೆ ಇಂಟರ್‌ ನೆಟ್‌ ನಲ್ಲಿ ವೈರಲ್‌ ಆಗಿದೆ. ಕೆಲವೊಮ್ಮೆ ಬದುಕು ಪೆಟ್ಟು ಕೊಡುತ್ತಿರುತ್ತದೆಮ ಆದರೆ ಅದೇ ಪೆಟ್ಟಿನಿಂದಲೇ ನಾವು ಇನ್ನಷ್ಟು ಗಟ್ಟಿಯಾಗುತ್ತೇವೆ ಅನ್ನೋ ಮಾತು ಹರಿಯಾಣದ ಫರಿದಾಬಾದ್‌ ನ ಅವಿನಾಶ್‌ ಕುಮಾರ್‌ ಶುಕ್ಲಾ (Avinash Kumar Shukla) ಅವರ ಪಾಲಿಗೆ ಹೇಳಿ ಮಾಡಿಸಿದ ಹಾಗಿದೆ.


ವಾಣಿಜ್ಯ ವಿಷಯದಲ್ಲಿ ಪದವೀಧರರಾಗಿರುವ ಶುಕ್ಲಾ
ದೆಹಲಿ ವಿಶ್ವವಿದ್ಯಾಲಯದ ಓಪನ್ ಸ್ಕೂಲ್ ಆಫ್ ಲರ್ನಿಂಗ್‌ನಿಂದ ವಾಣಿಜ್ಯ ವಿಷಯದಲ್ಲಿ ಪದವೀಧರರಾಗಿರುವ ಶುಕ್ಲಾ ಅವರು ರಿಲಯನ್ಸ್ ಟ್ರೆಂಡ್ಸ್, ಮೆಕ್‌ಡೊನಾಲ್ಡ್ಸ್, ಅಮೆಜಾನ್ ಮತ್ತು ಉಬರ್ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್‌, 2021ರಲ್ಲಿ ತಂದೆಯನ್ನು ಕಳೆದುಕೊಂಡ ಶುಕ್ಲಾ ಕಳೆದ ಮೂರು ತಿಂಗಳಿಂದ ನಿರುದ್ಯೋಗಿಯಾಗಿದ್ದರು.


ಅವಿನಾಶ್‌ ಕುಮಾರ್‌ ಶುಕ್ಲಾ


ಕೆಲಸವನ್ನು ಕಳೆದುಕೊಂಡ ಶುಕ್ಲಾಗೆ ಕಾಡಿದ್ದು ತೀವ್ರ ಹಣಕಾಸಿನ ತೊಂದರೆ. ಇದರಿಂದ ಹೊರಬರಲು ಅವರು ಏನಾದರೂ ಮಾಡಲು ನಿರ್ಧರಿಸಿದರು. ಫುಡ್‌ ಬ್ಯುಸಿನೆಸ್‌ ಮಾಡೋದು ಎಂದು ತೀರ್ಮಾನಿಸಿ ತಮ್ಮ ಮೋಟಾರ್‌ ಸೈಕಲ್‌ನಲ್ಲಿ ಇಡ್ಲಿ-ಸಾಂಬಾರ್ ಸ್ಟಾಲ್ ತೆರೆದರು.


ವೈರಲ್ ಆಗ್ತಿದೆ ಶುಕ್ಲಾ ಅವರ ಕಥೆ 
ಒಂದು ಪ್ಲೇಟ್ ಇಡ್ಲಿ-ಸಾಂಬಾರ್ ಗೆ 20 ರೂ ನಿಗದಿ ಪಡಿಸಿ ಮಾರಾಟ ಮಾಡೋಕೆ ಆರಂಭಿಸಿದರು. ಅವರ ಔಟ್ಲೆಟ್ ಫರಿದಾಬಾದ್‌ ನ 37 ನೇ ಮೇನ್‌ ಎಂಟ್ರೆನ್ಸ್‌ ನ NH2 ನಿಯರ್ ಸೆಕೆಂಡ್ನಲ್ಲಿದೆ. ಶುಕ್ಲಾ ಅವರ ಈ ಕಥೆಯನ್ನು ಯುಟ್ಯೂಬರ್‌ ಒಬ್ಬ ವೀಡಿಯೊಗ್ರಾಫ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಇದೀಗ ಶುಕ್ಲಾ ಕಥೆ ವೈರಲ್ ಆಗುತ್ತಿದೆ.


ಇದನ್ನೂ ಓದಿ: Ummul Kher: 8 ಶಸ್ತ್ರಚಿಕಿತ್ಸೆಯ ನಂತರ ಸಹ IAS ಪಾಸ್​ ಮಾಡಿದ ಉಮ್ಮುಲ್ ಖೇರ್, ಇವರ ಕಥೆ ನಿಜಕ್ಕೂ ಸ್ಫೂರ್ತಿ


“ಮೆಕ್‌ಡೊನಾಲ್ಡ್ಸ್‌ನಲ್ಲಿ ಕೆಲಸ ಮಾಡುತ್ತಿರುವಾಗ, ನನ್ನ ಸ್ವಂತ ಫುಡ್‌ ಬ್ಯುಸಿನೆಸ್‌ ಮಾಡುವ ಆಲೋಚನೆ ಇತ್ತು. ಆದರೆ ನನ್ನ ಬಳಿ ಸಾಕಷ್ಟು ಹಣವಿಲ್ಲದ ಕಾರಣ ಮೋಟಾರ್ ಸೈಕಲ್‌ನಲ್ಲಿ ವ್ಯಾಪಾರವನ್ನು ಪ್ರಾರಂಭಿಸುವ ಆಲೋಚನೆ ಕೆಲವು ದಿನಗಳ ಹಿಂದೆ ಬಂತು ಎಂದಿದ್ದಾರೆ ಶುಕ್ಲಾ.


ನಿರುದ್ಯೋಗದ ಬಗ್ಗೆ ಏನು ಹೇಳಿದ್ದಾರೆ?
ಕಳೆದ ಮೂರು ತಿಂಗಳಿನಿಂದ ನಾನು ನಿರುದ್ಯೋಗಿಯಾಗಿದ್ದೆ. ನನ್ನ ಮೋಟಾರ್‌ಸೈಕಲ್‌ನಲ್ಲಿ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸಿದೆ” ಎಂದು ಶುಕ್ಲಾ ಯೂಟ್ಯೂಬರ್‌ಗೆ ಹೇಳಿದ್ದಾರೆ. ಅವರ ಖಾತೆಯು ‘ಸ್ವಾಗ್ ಸೆ ಡಾಕ್ಟರ್’ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಶುಕ್ಲಾ ಅವರ ಕಥೆಯನ್ನು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 54,000 ಕ್ಕೂ ಹೆಚ್ಚು ಲೈಕ್‌ ಗಳಿಸಿದೆ.


ಅಂದಹಾಗೆ ಶುಕ್ಲಾ ಅವರು 12 ನೇ ತರಗತಿಯನ್ನು ಪೂರ್ಣಗೊಳಿಸಿದಾಗ ಅವರ ತಂದೆ ಮೋಟಾರ್‌ ಸೈಕಲ್‌ ಅನ್ನು ಉಡುಗೊರೆಯಾಗಿ ನೀಡಿದ್ದರಂತೆ. “ನಾನು ಯೂಟ್ಯೂಬ್‌ನಿಂದ ಮೋಟಾರ್‌ಸೈಕಲ್‌ನಲ್ಲಿ ಸಣ್ಣ ಪ್ರಮಾಣದ ಕೆಲಸವನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ. ಮೋಟಾರು ಸೈಕಲ್‌ಗಳಲ್ಲಿ ಮಾತ್ರವಲ್ಲದೆ ಸೈಕಲ್‌ಗಳಲ್ಲಿಯೂ ಜನರು ಇಡ್ಲಿ-ಸಾಂಬಾರ್, ದೋಸೆಗಳನ್ನು ಮಾರುವ ಬಹಳಷ್ಟು ವೀಡಿಯೊಗಳನ್ನು ನಾನು ನೋಡಿದ್ದೇನೆ” ಎನ್ನುತ್ತಾರೆ ಶುಕ್ಲಾ.


ಇದನ್ನೂ ಓದಿ: Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ


ಇನ್ನು ಶುಕ್ಲಾ ಅವರ ಪತ್ನಿ ಚೆನ್ನೈ ಮೂಲದವರಾಗಿದ್ದು, ಇಬ್ಬರೂ ಗ್ರಾಹಕರಿಗೆ ಇಡ್ಲಿ ಮತ್ತು ಸಾಂಬಾರ್ ತಯಾರಿಸುತ್ತಾರೆ. ಅಲ್ಲದೇ ಈ ದಂಪತಿಗೆ 1.5 ವರ್ಷದ ಮಗನಿದ್ದಾನೆ. ಮನೆಯಲ್ಲಿ ಅವರ ತಾಯಿ ಮತ್ತು ಕಿರಿಯ ಸಹೋದರ ಇದ್ದಾರೆ. ಒಟ್ಟಾರೆ, ಮೋಟಾರ್‌ ಸೈಕಲ್‌ ನಲ್ಲೇ ಇಡ್ಲಿ ವ್ಯಾಪಾರ ಮಾಡ್ತಿರೋ ಶುಕ್ಲಾ ಹಲವರ ಹಸಿವನ್ನು ತಣಿಸುತ್ತಿದ್ದಾರೆ. ಅಲ್ಲದೇ ಅವರ ಕಥೆ ಯುಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರೋ ಕಾರಣ ಅವರಿಗೆ ಮತ್ತಷ್ಟು ಗ್ರಾಹಕರೂ ಸಿಗಬಹುದು. ಈ ಸೋಷಿಯಲ್‌ ಮೀಡಿಯಾದಿಂದಲಾದರೂ ಅವರ ವ್ಯಾಪಾರ ಚೆನ್ನಾಗಿ ನಡೆದರೆ ವೈರಲ್‌ ಆಗಿದ್ದಕ್ಕೂ ಸಾರ್ಥಕವಾಗುತ್ತೆ.

Published by:Ashwini Prabhu
First published: