FD Interest Rate Hike: ಹೆಚ್ಚಾಯ್ತು ಎಫ್​ಡಿ ಬಡ್ಡಿದರ, ಹಣವನ್ನು ಬ್ಯಾಂಕಲ್ಲಿ ಇಡೋದೇ ಬೆಸ್ಟಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ICICI Bank, Kotak Mahindra Bank, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ  ಹಲವು ಬ್ಯಾಂಕ್​ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಅಂದಹಾಗೆ ನೀವು ಇಲ್ಲಿ ಪ್ರಮುಖ ಬ್ಯಾಂಕ್​ಗಳ ಬಡ್ಡಿದರವನ್ನು ಚೆಕ್ ಮಾಡಿ

  • Share this:

    ರಿಸರ್ಬ್ ಬ್ಯಾಂಕ್ ತನ್ನ ರೆಪೋ ರೇಟ್ ಹೆಚ್ಚಿಸಿದ (RBI Repo Rate Hike) ನಂತರ ಸಾರ್ವಜನಿಕರಿಗೆ ಒಂದಲ್ಲ ಒಂದು ಅಪ್​ಡೇಟ್ ಪ್ರತಿದಿನ ಬರುತ್ತಲೇ ಇವೆ. ಸಾಲದ ಬಡ್ಡಿದರಗಳು ಹೆಚ್ಚಳವಾದ ನಂತರ ಇದೀಗ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುವುದಾಗಿ (Fixed Deposit Interest Rate Hiked) ಹಲವು ಬ್ಯಾಂಕ್​ಗಳು ಘೋಷಿಸುತ್ತಿವೆ. ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ  ಹಲವು ಬ್ಯಾಂಕ್​ಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಅಂದಹಾಗೆ ನೀವು ಇಲ್ಲಿ ಪ್ರಮುಖ ಎರಡು ಬ್ಯಾಂಕ್​ಗಳ ಬಡ್ಡಿದರವನ್ನು(Check Hiked FD Rates) ಚೆಕ್ ಮಾಡಿ


    ಕೋಟಕ್ ಮಹೀಂದ್ರಾ ಬ್ಯಾಂಕ್ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಎಫ್‌ಡಿ ಬಡ್ಡಿ ದರವನ್ನು ಮೇ 6 ರಿಂದ ಜಾರಿಗೆ ತಂದಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಎಫ್‌ಡಿ ದರ ಹೆಚ್ಚಳವು 30 ರಿಂದ 50 ಬಿಪಿಎಸ್​ವರೆಗೆ ಇರುತ್ತದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಘೋಷಿಸಿದೆ. ಮತ್ತೊಂದೆಡೆ, ಬಂಧನ್ ಬ್ಯಾಂಕ್ ತನ್ನ ನಿಶ್ಚಿತ ಠೇವಣಿ ಬಡ್ಡಿದರಗಳನ್ನು 50 bps ವರೆಗೆ ಹೆಚ್ಚಿಸಿದೆ. ಬಂಧನ್ ಬ್ಯಾಂಕ್ ಎಫ್‌ಡಿ ಬಡ್ಡಿ ದರಗಳು ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯಿಸುತ್ತವೆ. ಬಂಧನ್ ಬ್ಯಾಂಕಕ್​ನ ಹೊಸ ಸ್ಥಿರ ಠೇವಣಿ ಬಡ್ಡಿದರಗಳು ಮೇ 4, ಬುಧವಾರದಿಂದ ಜಾರಿಗೆ ಬಂದಿವೆ.


    ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ (ವರ್ಷಕ್ಕೆ) ರೂ. 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಪರಿಷ್ಕೃತ ಬಡ್ಡಿ ದರಗಳು ಇಲ್ಲಿವೆ:


    7 ದಿನಗಳಿಂದ 14 ದಿನಗಳವರೆಗೆ - ಸಾಮಾನ್ಯ ಜನರಿಗೆ: 2.50 ಪ್ರತಿಶತ; ಹಿರಿಯ ನಾಗರಿಕರಿಗೆ: 3.00 ಶೇಕಡಾ ಬಡ್ಡಿದರ.


    15 ದಿನಗಳಿಂದ 30 ದಿನಗಳು - ಸಾಮಾನ್ಯ ಜನರಿಗೆ: 2.50 ಪ್ರತಿಶತ,  ಹಿರಿಯ ನಾಗರಿಕರಿಗೆ: 3.00 ಶೇಕಡಾ.


    31 ದಿನಗಳಿಂದ 45 ದಿನಗಳು - ಸಾಮಾನ್ಯ ಜನರಿಗೆ: 3.00 ಶೇಕಡಾ, ಹಿರಿಯ ನಾಗರಿಕರಿಗೆ: 3.50 ಶೇಕಡಾ


    46 ದಿನಗಳಿಂದ 90 ದಿನಗಳು - ಸಾಮಾನ್ಯ ಜನರಿಗೆ: 3.00 ಶೇಕಡಾ, ಹಿರಿಯ ನಾಗರಿಕರಿಗೆ: 3.50 ಶೇಕಡಾ


    91 ದಿನಗಳಿಂದ 120 ದಿನಗಳು - ಸಾಮಾನ್ಯ ಜನರಿಗೆ: 3.50 ಶೇಕಡಾ, ಹಿರಿಯ ನಾಗರಿಕರಿಗೆ: 4.00 ಶೇಕಡಾ


    121 ದಿನಗಳಿಂದ 179 ದಿನಗಳು - ಸಾಮಾನ್ಯ ಜನರಿಗೆ: 3.50 ಶೇಕಡಾ, ಹಿರಿಯ ನಾಗರಿಕರಿಗೆ: 4.00 ಶೇಕಡಾ


    180 ದಿನಗಳು - ಸಾಮಾನ್ಯ ಜನರಿಗೆ: 4.75 ಶೇಕಡಾ, ಹಿರಿಯ ನಾಗರಿಕರಿಗೆ: 5.25 ಶೇಕಡಾ


    181 ದಿನಗಳಿಂದ 269 ದಿನಗಳು - ಸಾಮಾನ್ಯ ಜನರಿಗೆ: 4.75 ಶೇಕಡಾ, ಹಿರಿಯ ನಾಗರಿಕರಿಗೆ: 5.25 ಶೇಕಡಾ


    ICICI ಬ್ಯಾಂಕ್ ಸ್ಥಿರ ಠೇವಣಿ ಬಡ್ಡಿ ದರ ಹೆಚ್ಚಳ
    ಇತ್ತೀಚಿಗಷ್ಟೇ ಕೆಲವು ಅವಧಿಗಳಿಗೆ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಹೆಚ್ಚಿಸಿದ್ದ ಐಸಿಐಸಿಐ ಬ್ಯಾಂಕ್ ಮತ್ತೆ ತನ್ನ FD ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಪೂರೈಕೆ ಕೊರತೆಯಂತಹ ಅಂಶಗಳ ನಡುವೆ ದೇಶದಲ್ಲಿ ಏರುತ್ತಿರುವ ಹಣದುಬ್ಬರವನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ RBI ರೆಪೊ ದರಗಳನ್ನು 0.40 ಪ್ರತಿಶತ ಅಥವಾ 40 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿತ್ತು.


    ಕೆಲವೇ ದಿನಗಳ ಹಿಂದಷ್ಟೇ ಬಡ್ಡಿದರ ಹೆಚ್ಚಿಸಿದ್ದ ಐಸಿಐಸಿಐ ಬ್ಯಾಂಕ್
    ಆ ನಂತರ ಐಸಿಐಸಿಐ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಐಸಿಐಸಿಐ ಬ್ಯಾಂಕ್ ಎಫ್‌ಡಿ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳವರೆಗೆ ಅಥವಾ ಶೇಕಡಾ 0.25 ರಷ್ಟು ಹೆಚ್ಚಿಸಲಾಗಿದೆ ಎಂದು ಬ್ಯಾಂಕ್ ಅಧಿಸೂಚನೆಯಲ್ಲಿ ತಿಳಿಸಿದೆ.


    ಇದನ್ನೂ ಓದಿ: Nirmala Sitharaman Viral Video: ವಿಡಿಯೋದಲ್ಲಿ ಬಯಲಾಯ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾನವೀಯತೆ! ವೈರಲ್ ವಿಡಿಯೋ ನೋಡಿ


    ಹೊಸ ಎಫ್‌ಡಿ ದರಗಳು ಮೇ 5, ಗುರುವಾರದಿಂದ ಜಾರಿಗೆ ಬಂದಿವೆ. ಐಸಿಐಸಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ.ಗಿಂತ ಹೆಚ್ಚಿನ ಮತ್ತು 5 ಕೋಟಿ ರೂ.ವರೆಗಿನ ಠೇವಣಿಗಳ ಮೇಲೆ ಇದು ಅನ್ವಯಿಸುತ್ತದೆ.


    ಮೇ 5, 2022 ರಿಂದ ಐಸಿಐಸಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ.ವರೆಗಿನ ಸ್ಥಿರ ಠೇವಣಿಗಳ ಮೇಲಿನ ಪರಿಷ್ಕೃತ ಬಡ್ಡಿ ದರಗಳು ಇಲ್ಲಿವೆ:


    7 ದಿನಗಳಿಂದ 14 ದಿನಗಳು: ಸಾಮಾನ್ಯ ಜನರಿಗೆ - 2.75 ಶೇಕಡಾ, ಹಿರಿಯ ನಾಗರಿಕರಿಗೆ - 2.75 ಶೇಕಡಾ


    15 ದಿನಗಳಿಂದ 29 ದಿನಗಳು: ಸಾಮಾನ್ಯ ಜನರಿಗೆ - 2.75 ಶೇಕಡಾ,  ಹಿರಿಯ ನಾಗರಿಕರಿಗೆ - 2.75 ಶೇಕಡಾ


    30 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ - 3.00 ಶೇಕಡಾ, ಹಿರಿಯ ನಾಗರಿಕರಿಗೆ - 3.00 ಶೇಕಡಾ


    46 ದಿನಗಳಿಂದ 60 ದಿನಗಳು: ಸಾಮಾನ್ಯ ಜನರಿಗೆ - 3.00 ಪ್ರತಿಶತ; ಹಿರಿಯ ನಾಗರಿಕರಿಗೆ - 3.00 ಶೇಕಡಾ


    ಇದನ್ನೂ ಓದಿ: RIL: ದಾಖಲೆಯ ವರಮಾನ ಕಂಡ ರಿಲಯನ್ಸ್ ಇಂಡಸ್ಟ್ರೀಸ್! ಇದೆಂಥಾ ಬದಲಾವಣೆ


    61 ದಿನಗಳಿಂದ 90 ದಿನಗಳು: ಸಾಮಾನ್ಯ ಜನರಿಗೆ - 3.25 ಪ್ರತಿಶತ; ಹಿರಿಯ ನಾಗರಿಕರಿಗೆ - 3.25 ಶೇಕಡಾ


    91 ದಿನಗಳಿಂದ 120 ದಿನಗಳು: ಸಾಮಾನ್ಯ ಜನರಿಗೆ - 3.50 ಪ್ರತಿಶತ; ಹಿರಿಯ ನಾಗರಿಕರಿಗೆ - 3.50 ಶೇಕಡಾ


    121 ದಿನಗಳಿಂದ 150 ದಿನಗಳು: ಸಾಮಾನ್ಯ ಜನರಿಗೆ - 3.50 ಪ್ರತಿಶತ; ಹಿರಿಯ ನಾಗರಿಕರಿಗೆ - 3.50 ಶೇಕಡಾ

    Published by:ಗುರುಗಣೇಶ ಡಬ್ಗುಳಿ
    First published: