• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • IBM Employee: 15 ವರ್ಷಗಳಿಂದ ಸಿಕ್‌ ಲೀವ್‌ನಲ್ಲಿರುವ IBM ಉದ್ಯೋಗಿ; ವೇತನ ಏರಿಕೆ ಮಾಡಿಲ್ಲ ಎಂದು ಕಂಪನಿಯ ವಿರುದ್ಧ ಮೊಕದ್ದಮೆ

IBM Employee: 15 ವರ್ಷಗಳಿಂದ ಸಿಕ್‌ ಲೀವ್‌ನಲ್ಲಿರುವ IBM ಉದ್ಯೋಗಿ; ವೇತನ ಏರಿಕೆ ಮಾಡಿಲ್ಲ ಎಂದು ಕಂಪನಿಯ ವಿರುದ್ಧ ಮೊಕದ್ದಮೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೇತನದ ವಿಚಾರವಾಗಿ ಉದ್ಯೋಗಿಗಳು ಮತ್ತು ಸಂಸ್ಥೆಗಳ ನಡುವೆ ಮನಿಸು, ವಾದ-ವಿವಾದ ಇದ್ದದ್ದೇ. ಕಂಪನಿಯಲ್ಲಿ ಒಮ್ಮೆ ಹಗಲಿರುಳು ದುಡಿದರೂ ವೇತನ ಏರಿಕೆ ಆಗೋದು ಅಷ್ಟರಲ್ಲೇ ಇರುತ್ತದೆ. ಅದೇ ರೀತಿ ಇಲ್ಲೊಂದು ಅನಾರೋಗ್ಯದಿಂದ ಬಳಲುತ್ತಿರುವ ಉದ್ಯೋಗಿಗೆ ಸಂಬಳ ನೀಡುತ್ತಾ ಮನೆಯಲ್ಲಿಯೇ ಇರುವಂತೆ ಹೇಳಿದೆ. ಆದರೆ ಈ ಉದ್ಯೋಗಿ ಮಾತ್ರ ಈ ಸಂಬಳ ನನಗೆ ಸಾಕಾಗ್ತಿಲ್ಲ ಅಂತಾ ರಾಗ ತೆಗೆದಿದ್ದಾನೆ.

ಮುಂದೆ ಓದಿ ...
 • Share this:

ವೇತನದ (Salary) ವಿಚಾರವಾಗಿ ಉದ್ಯೋಗಿಗಳು (Employees) ಮತ್ತು ಸಂಸ್ಥೆಗಳ ನಡುವೆ ಮನಿಸು, ವಾದ-ವಿವಾದ ಇದ್ದದ್ದೇ. ಕಂಪನಿಯಲ್ಲಿ ಒಮ್ಮೆ ಹಗಲಿರುಳು ದುಡಿದರೂ ವೇತನ ಏರಿಕೆ ಆಗೋದು ಅಷ್ಟರಲ್ಲೇ ಇರುತ್ತದೆ. ಇನ್ನೂ ಕಂಪನಿಗಳು ವೇತನ ವಿಚಾರದಲ್ಲಿ ಧಾರಳವಾಗಿರುತ್ತದೆ. ಇಲ್ಲೊಂದು ಕಂಪನಿ ಇದೆ. ಅನಾರೋಗ್ಯದಿಂದ ಬಳಲುತ್ತಿರುವ ಉದ್ಯೋಗಿಗೆ ಸಂಬಳ ನೀಡುತ್ತಾ ಮನೆಯಲ್ಲಿಯೇ ಇರುವಂತೆ ಹೇಳಿದೆ. ಆದರೆ ಈ ಉದ್ಯೋಗಿ ಮಾತ್ರ ಈ ಸಂಬಳ ನನಗೆ ಸಾಕಾಗ್ತಿಲ್ಲ ಅಂತಾ ರಾಗ ತೆಗೆದಿದ್ದಾನೆ. ವೇತನವನ್ನು ಕಳೆದುಕೊಳ್ಳದೆ ಉದೋಗಿಗಳು ಅನಾರೋಗ್ಯದ ಕಾರಣ ರಜೆ  (Sick Leave) ತೆಗೆದುಕೊಳ್ಳುವುದನ್ನು ಸಾಮಾನ್ಯವಾಗಿ ಅನಾರೋಗ್ಯ ರಜೆ ಅಥವಾ ಸಿಕ್‌ ಲೀವ್‌ ಎಂದು ಕರೆಯುತ್ತಾರೆ.


2008ರಿಂದ ಅನಾರೋಗ್ಯದ ರಜೆಯಲ್ಲಿರುವ (ಸಿಕ್‌ ಲೀವ್‌) ಹಿರಿಯ IBM ಐಟಿ ಉದ್ಯೋಗಿ ಇಯಾನ್ ಕ್ಲಿಫರ್ಡ್ ತನ್ನ ಕಂಪನಿಯವರು ಸಂಬಳವನ್ನು ಏರಿಕೆ ಮಾಡಿಲ್ಲ ಎಂದು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಕ್ಲಿಫರ್ಡ್ ಕಳೆದ 15 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ನೋಡುವುದ್ದಾದರೆ, ಅವರು 2013 ರಿಂದ "ಅನಾರೋಗ್ಯದ ಕಾರಣ ನಿವೃತ್ತರಾಗಿದ್ದಾರೆ" ಎಂದು ತಿಳಿದುಬಂದಿದೆ.


ಸಿಕ್ ಲೀವ್‌ನಲ್ಲಿಯೂ ಸಂಬಳ ಸಾಕಾಗುವುದಿಲ್ಲ


ಕ್ಲಿಫರ್ಡ್ ನಿಷ್ಕ್ರಿಯ ಉದ್ಯೋಗಿಯಾಗಿದ್ದರೂ, ಪ್ರತಿ ವರ್ಷ ಅವರು ಪಡೆಯುವ 54,000 ಪೌಂಡ್‌ಗಳ (₹ 55,30,556) ಸಂಬಳವು ‘ಸಾಕಷ್ಟು ಕಡಿಮೆ’ ಎಂದು ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಂಪನಿಯು ತನಗೆ ವೇತನ ಹೆಚ್ಚಳವನ್ನು ನೀಡಿಲ್ಲ ಎಂದು ಉದ್ಯೋಗಿ ಹೇಳಿಕೊಂಡಿದ್ದಾನೆ ಮತ್ತು ಹಣದುಬ್ಬರದಿಂದಾಗಿ ಈಗ ನೀಡುತ್ತಿರುವ ತನ್ನ ಸಂಬಳವು ಜೀವನ ನಡೆಸಲು ಸಾಕಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ.


ಇದನ್ನೂ ಓದಿ: ಇಂದಿನ ಫ್ಲೈಟ್​ಗಿಂತ ಅಂದಿನ ಪುಷ್ಪಕ ವಿಮಾನವೇ ಬೆಸ್ಟ್​ ಅಂತೆ! ಕಾರಣ ನೋಡಿ ನೀವೂ ಹೌದು ಅಂತೀರಾ!


ಆದರೆ, ಕ್ಲಿಫರ್ಡ್ ತಾನು ಕೆಲಸದಿಂದ ಹೊರಗುಳಿದ 15 ವರ್ಷಗಳಲ್ಲಿ ತನ್ನ ಸಂಬಳವನ್ನು ಹೆಚ್ಚಿಸದ ಕಾರಣ 'ಅಂಗವೈಕಲ್ಯ ತಾರತಮ್ಯ'ಕ್ಕೆ ಬಲಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಗಮನಾರ್ಹವಾಗಿ, IBM ಆರೋಗ್ಯ ಯೋಜನೆಯಡಿಯಲ್ಲಿ, IT ತಜ್ಞರು ವರ್ಷಕ್ಕೆ 54,000 ಪೌಂಡ್‌ಗಳಿಗಿಂತ ಹೆಚ್ಚು (₹55,30,556) ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ ಹಾಗೂ ಅವರು 65 ವರ್ಷ ವಯಸ್ಸಿನವರೆಗೆ ಸಂಬಳವನ್ನು ಪಡೆಯುವ ಭರವಸೆ ಇದೆ ಎಂದು ಮೂಲಗಳು ತಿಳಿಸಿವೆ.


ರಾಜಿ ಒಪ್ಪಂದ:


ಕ್ಲಿಫರ್ಡ್ ಮೊದಲ ಬಾರಿಗೆ ಸೆಪ್ಟೆಂಬರ್ 2008 ರಲ್ಲಿ ಅನಾರೋಗ್ಯದಿಂದ ಸಿಕ್‌ ಲೀವ್‌ ತೆಗೆದುಕೊಂಡರು ಮತ್ತು ಅವರ ದೂರನ್ನು ಗಮನದಲ್ಲಿಟ್ಟುಕೊಂಡು, IBM ಅವರಿಗೆ 'ರಾಜಿ ಒಪ್ಪಂದ'ವನ್ನು ನೀಡಿತು, ಅಲ್ಲಿ ಅವರನ್ನು ಕಂಪನಿಯ ಅಂಗವೈಕಲ್ಯ ಯೋಜನೆಗೆ ಸೇರಿಸಲಾಯಿತು.


ಸಾಂಕೇತಿಕ ಚಿತ್ರ


ಕೆಲಸ ಮಾಡಲು ಸಾಧ್ಯವಾಗದ ಜನರನ್ನು ವಜಾ ಮಾಡಲಾಗುವುದಿಲ್ಲ, ಆದರೆ ಉದ್ಯೋಗಿಗಳಾಗಿ ಉಳಿಯುತ್ತಾರೆ ಮತ್ತು "ಕೆಲಸ ಮಾಡಲು ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ" ಎಂದು ರಾಜಿ ಒಪ್ಪಂದ ಸೂಚಿಸುತ್ತದೆ.
ಯೋಜನೆಯಲ್ಲಿರುವ ಉದ್ಯೋಗಿಯು ಚೇತರಿಕೆ, ನಿವೃತ್ತಿ ಅಥವಾ ಮರಣದವರೆಗೆ 'ಹಕ್ಕನ್ನು' ಹೊಂದಿರುತ್ತಾರೆ, ಮೊದಲು ಒಪ್ಪಿದ ಗಳಿಕೆಯ 75% ವೇತನವನ್ನು ಹೊಂದಿದ್ದರು.


ಕೆಲವು ತಿಂಗಳ ನಂತರ, ಅವರ ಒಪ್ಪಿಗೆಯ ವೇತನವು 72,037 ಪೌಂಡ್‌ಗಳು, ಅಂದರೆ 2013 ರಿಂದ 25% ಕಡಿತಗೊಳಿಸಿದ ನಂತರ ಅವರಿಗೆ ವರ್ಷಕ್ಕೆ 54,028 ಪೌಂಡ್‌ಗಳನ್ನು ಪಾವತಿಸಲಾಗುತ್ತಿದೆ ಎಂದು ಕಂಪನಿಯ ಮೂಲಗಳು ಉಲ್ಲೇಖಿಸಿವೆ.


ಕ್ಲಿಫರ್ಡ್ ಅವರ ಆರೋಪವನ್ನು ವಜಾಗೊಳಿಸಿದ ಕೋರ್ಟ್‌


ಫೆಬ್ರವರಿ 2022 ರಲ್ಲಿ, ಕ್ಲಿಫರ್ಡ್ ಅಂಗವೈಕಲ್ಯ ತಾರತಮ್ಯದ ಹಕ್ಕುಗಳ ಕಾರಣದೊಂದಿಗೆ IBM ವಿರುದ್ಧ ಮೊಕದ್ದಮೆ ಹೂಡಿದರು. "ಕೆಲಸ ಮಾಡಲು ಸಾಧ್ಯವಾಗದ ಉದ್ಯೋಗಿಗಳಿಗೆ ಭದ್ರತೆಯನ್ನು ನೀಡುವುದು ಯೋಜನೆಯ ಉದ್ದೇಶವಾಗಿತ್ತು ಆದರೆ ವೇತನಗಳನ್ನು ಕಂಪನಿಯು ಸರಿಯಾಗಿ ನೀಡುತ್ತಿಲ್ಲ" ಎಂದು ಕ್ಲಿಫರ್ಡ್ ಕಂಪನಿಯ ವಿರುದ್ಧ ವಾಗ್ವಾದ ನಡೆಸಿದ್ದಾರೆ.
"ಸಕ್ರಿಯ ಉದ್ಯೋಗಿಗಳು ಏರಿಕೆಯನ್ನು ಪಡೆಯಬಹುದು ಆದರೆ ಸಕ್ರಿಯವಲ್ಲದ ಉದ್ಯೋಗಿಗಳು ವೇತನವನ್ನು ಪಡೆಯುವುದಿಲ್ಲ ಎಂಬ ಅಂಶದಲ್ಲಿ ವ್ಯತ್ಯಾಸವಿದೆ, ಆದರೆ ಇದು ಅಂಗವೈಕಲ್ಯದಿಂದ ಉಂಟಾದ ದುರ್ಬಲತೆಯಾಗಿ ನನಗೆ ತೋರುತ್ತಿಲ್ಲ ಎಂದು ಹೇಳುವುದರು ಮೂಲಕ ಕ್ಲಿಫರ್ಡ್ ಆರೋಪವನ್ನು ಜಡ್ಜ್ ಹೌಸ್ಗೋ ವಜಾಗೊಳಿಸಿದ್ದಾರೆ.

top videos


  ಯೋಜನೆಯ ಭಾಗವಾಗಿ ನಿಷ್ಕ್ರಿಯ ಉದ್ಯೋಗಿಯಾದ ಕ್ಲಿಫರ್ಡ್ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ, ಗಮನಿಸಿದರೆ ಏಪ್ರಿಲ್ 6, 2013 ರಿಂದ ಪಾವತಿಗಳು ನಿಗದಿತ ಮಟ್ಟದಲ್ಲಿವೆ, ಹಾಗೂ ಇನ್ನೂ 10 ವರ್ಷಗಳ ಅವರಿಗೆ ಕಂಪನಿಯು ವೇತನವನ್ನು ನೀಡುವುದಾಗಿ ತಿಳಿಸಿದೆ ಜಡ್ಜ್ ಹೌಸ್ಗೋ ತಿಳಿಸಿದ್ದಾರೆ.

  First published: