ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಒಂದು ವಿಶೇಷ ಕೆಲಸವೊಂದು ಭಾರಿ ಸದ್ದು ಮಾಡುತ್ತಿದೆ. ಬುಧವಾರ ಅವರು ದೆಹಲಿಯಲ್ಲಿನ ಸಂಸತ್ ಭವನಕ್ಕೆ (Parliament) ಹೈಡ್ರೋಜನ್ ಕಾರಿನಲ್ಲಿ ಬಂದಿಳಿದಿದ್ದಾರೆ. ಈಮೂಲಕ ಭವಿಷ್ಯದ ಕಾರುಗಳು (Future Cars) ಹೇಗಿರಲಿವೆ ಎಂದು ಭರ್ಜರಿ ಸಂದೇಶ ರವಾನಿಸಿದ್ದಾರೆ. ಈಗಿನಂತೆ ಪೆಟ್ರೋಲ್, ಡೀಸೆಲ್ ಕಾರುಗಳ ಬದಲಿಗೆ ಪರ್ಯಾಯ ಇಂಧನವಾಗಿ ಹೈಡ್ರೋಜನ್ ಕಾರುಗಳು (Hydrogen Car) ರಸ್ತೆಗಿಳಿಯಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ಆತ್ಮನಿರ್ಭರ ಭಾರತ ಯೋಜನೆಯನ್ನು ಸಾಧಿಸುವ ನಿಟ್ಟಿನಲ್ಲಿ ಹೈಡ್ರೋಜನ್ ಕಾರುಗಳನ್ನು ದೇಶದಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ ಗಡ್ಕರಿ ತಿಳಿಸಿದ್ದಾರೆ. ಇದು ನೀರಿನಿಂದ ತಯಾರಿಸಿದ ಗ್ರೀನ್ ಹೈಡ್ರೋಜನ್ನಿಂದ ಓಡುವ ಈ ಕಾರುಗಳು ಸ್ವಾವಲಂಬಿ ಭಾರತದ ಮುಂದಿನ ಹೆಜ್ಜೆ ಗುರುತುಗಳಾಗಲಿವೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿದೇಶಿ ಆಮದಿಗೆ ತಡೆ ಅಲ್ಲದೇ ಭಾರತದಲ್ಲೇ ಹೈಡ್ರೋಜನ್ ಕಾರುಗಳನ್ನು ತಯಾರಿಸುವ ಮೂಲಕ ವಿದೇಶಿ ಆಮದಿಗೆ ತಡೆ ಒಡ್ಡುವುದಾಗಿ ಅವರು ಭರವಸೆ ನೀಡಿದ್ದಾರೆ. ಇನ್ನೂ ಎರಡು ವರ್ಷಗಳಲ್ಲಿ ಭಾರತದಲ್ಲಿ ಹೈಡ್ರೋಜನ್ ಕಾರುಗಳು ಓಡಾಡುವುದನ್ನು ಕಾಣಬಹುದಾಗಿದೆ ಎಂದು ಅವರರು ಸಂಸತ್ನಲ್ಲಿಯೂ ಉಲ್ಲೇಖಿಸಿದ್ದಾರೆ.
Delhi | Union Road Transport & Highways minister Nitin Gadkari rides in a green hydrogen-powered car to Parliament pic.twitter.com/ymwtzaGRCm
ಕಾರಿನ ಹೆಸರು ಟೊಯೊಟಾ ಮಿರಾಯ್. ದೇಶದಲ್ಲಿ ಹೈಡ್ರೋಜನ್, FCEV ತಂತ್ರಜ್ಞಾನ ಮತ್ತು ಹೈಡ್ರೋಜನ್ ಆಧಾರಿತ ಸಮಾಜಗಳಿಗೆ ಸಹಾಯ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಹೈಡ್ರೋಜನ್ ಕಾರ್: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಸಹಯೋಗದೊಂದಿಗೆ ವಿಶ್ವದ ಅತ್ಯಾಧುನಿಕ FCEV ಟೊಯೋಟಾ ಮಿರಾಯ್ ಅನ್ನು ಅಧ್ಯಯನ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಪ್ರಾಯೋಗಿಕ ಯೋಜನೆಯನ್ನು ಕೈಗೊಂಡಿದೆ.
Green Hydrogen ~ An efficient, ecofriendly and sustainable energy pathway to make India 'Energy Self-reliant' pic.twitter.com/wGRI9yy0oE
ದೇಶದ ಮೊದಲ ಹೈಡ್ರೋಜನ್ ಕಾರು ಬುಧವಾರ ರಾಜಧಾನಿ ದೆಹಲಿಗೆ ಆಗಮಿಸಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೈಡ್ರೋಜನ್ ಚಾಲಿತ ಮಾಡರ್ನ್ ಫ್ಯೂಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಫ್ಸಿಇವಿ) ಗಾಗಿ ಪ್ರಾಯೋಗಿಕ ಯೋಜನೆ ನೀಡಿದ್ದರು.
ಈಮುನ್ನ ಕಡಿಮೆ ವೆಚ್ಚದಲ್ಲಿ ಈ ಕಾರನ್ನು ಓಡಿಸಬಹುದು ಎಂದು ನಿತಿನ್ ಗಡ್ಕರಿ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಹೇಳಿದ್ದರು. ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಹೈಡ್ರೋಜನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನಂತರ ಒಂದು ರೂಪಾಯಿಯಲ್ಲಿ ಎರಡು ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಅವರು ಹೇಳಿದ್ದರು.