• Home
  • »
  • News
  • »
  • business
  • »
  • Startup: ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನ ತಯಾರಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್!

Startup: ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನ ತಯಾರಿಸಿದ ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್ ಸಂಪೂರ್ಣವಾಗಿ ಮುಚ್ಚಿದ ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನವನ್ನು ಆವಿಷ್ಕರಿಸಿದೆ, ಇದು ಕಾರಿನ ಆರಾಮ ಮತ್ತು ದ್ವಿಚಕ್ರ ವಾಹನದ ಕುಶಲತೆಯನ್ನು ಹೊಂದಿದೆ ಅಂತ ಹೇಳಬಹುದು.

  • Share this:

ನಮ್ಮಲ್ಲಿ ಬಹುತೇಕರು ತಮಗೆ ನೀಡಿದ ಕೆಲಸ (Job) ವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿರುತ್ತಾರೆ ಮತ್ತು ಬೇರೆ ಹೊಸ ವಿಷಯ (New Matter) ದ ಬಗ್ಗೆ ಯಾವುದೇ ರೀತಿಯ ಯೋಚನೆಯನ್ನು ಅವರು ಮಾಡುತ್ತಿರುವುದಿಲ್ಲ. ಆದರೆ ಕೆಲವರು ಮಾತ್ರ ಏನಾದರೂ ಒಂದು ಹೊಸದಾಗಿ ಕಂಡು ಹಿಡಿಯಬೇಕು ಎಂದರೆ ಆವಿಷ್ಕಾರ (Invention) ಮನೋಭಾವನೆಯನ್ನು ಹೊಂದಿರುತ್ತಾರೆ ಅಂತ ಹೇಳಬಹುದು. ಸದಾ ಒಂದಲ್ಲ ಒಂದು ಹೊಸ ವಿಷಯಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ ಇವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದೇ ರೀತಿಯ ಮನೋಭಾವನೆ ಇರುವ ಇಬ್ಬರು ಯುವಕರು ಒಂದು ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್  ವಾಹನ (Reverse Trike Electric) ವನ್ನು ತಯಾರಿಸಿದ್ದಾರೆ ನೋಡಿ.


ನಾವು ಬೈಕ್ ಮೇಲೆ ಆಫೀಸಿಗೆ ಹೋಗುತ್ತಿರುವಾಗ ದಾರಿ ಮಧ್ಯೆದಲ್ಲಿ ಜೋರಾಗಿ ಮಳೆ ಬಂದರೆ ನಮ್ಮ ತಲೆಗೆ ಬರುವಂತಹ ಮೊದಲ ಯೋಚನೆಯೇ ‘ಅಯ್ಯೋ ಈ ಮಳೆಯಲ್ಲಿ ಒಂದು ಚಿಕ್ಕ ಕಾರ್ ಇರಬೇಕಿತ್ತು, ಬಟ್ಟೆ ಒದ್ದೆಯಾಗುತ್ತಿರಲಿಲ್ಲ’ ಅಂತ.


ಹೀಗೆ ಬೈಕ್ ಓಡಿಸಿದ ಹಾಗೆ ಇರಬೇಕು, ಆದರೆ ಕಾರಿನಲ್ಲಿ ಕುಳಿತು ಹೋದಂಗೆ ಇರಬೇಕು ಅನ್ನೋ ಒಂದು ಪರಿಕಲ್ಪನೆಯನ್ನು ಇಟ್ಟುಕೊಂಡು ಹುಬ್ಬಳ್ಳಿ ಮೂಲದ ಸ್ಟಾರ್ಟ್ಅಪ್ ಸಂಪೂರ್ಣವಾಗಿ ಮುಚ್ಚಿದ ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನವನ್ನು ಆವಿಷ್ಕರಿಸಿದೆ, ಇದು ಕಾರಿನ ಆರಾಮ ಮತ್ತು ದ್ವಿಚಕ್ರ ವಾಹನದ ಕುಶಲತೆಯನ್ನು ಹೊಂದಿದೆ ಅಂತ ಹೇಳಬಹುದು.


ಹೇಗಿದೆ ಈ ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನ?


ಏನಿದು ಇದರ ಹೆಸರು ರಿವರ್ಸ್ ಟ್ರೈಕ್ ಎಲೆಕ್ಟ್ರಿಕ್ ವಾಹನ ಅಂತ ಇದೆಯಲ್ಲಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಹೌದು.. ಸ್ಪಾಟರ್ ಮೊಬಿಲಿಟಿ ಮುಂಭಾಗದಲ್ಲಿ ಎರಡು ಚಕ್ರಗಳು ಮತ್ತು ಹಿಂಭಾಗದಲ್ಲಿ ಒಂದು ಚಕ್ರವನ್ನು ಹೊಂದಿರುವ ವಾಹನವನ್ನು ಅಭಿವೃದ್ಧಿಪಡಿಸಿದೆ. ಕ್ಯಾಬಿನ್ ಎರಡು ಆಸನಗಳನ್ನು ಹೊಂದಿದೆ ಮತ್ತು ಸ್ಕೂಟರ್ ಸವಾರಿ ಮಾಡುವ ಯಾವುದೇ ವ್ಯಕ್ತಿಯು ಇದನ್ನು ತುಂಬಾನೇ ಸುಲಭವಾಗಿ ಓಡಿಸಬಹುದು.


ಸ್ಟಾರ್ಟ್ಅಪ್ ನ ಸಹ ಸಂಸ್ಥಾಪಕರಾದ ಪ್ರಸಾದ್ ಪಾಟೀಲ್ ಮತ್ತು ಅರುಣ್ ಅಗಡಿ ಅವರು ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು ಮತ್ತು ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ವಾಹನವನ್ನು ಪ್ರದರ್ಶಿಸುತ್ತಿದ್ದಾರೆ, ಅವರು ಈಗ ಎರಡು ವರ್ಷಗಳಿಂದ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದರು.


ಏನ್ ಹೇಳ್ತಾರೆ ಇದನ್ನು ಆವಿಷ್ಕಾರ ಮಾಡಿದವರು?


"ಎಲ್ಲಾ ಮೆಟ್ರೋ ನಗರಗಳಲ್ಲಿ, ಜನರು ಕೆಲಸಕ್ಕೆ ಹೋಗಲು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ದ್ವಿಚಕ್ರ ವಾಹನಗಳು ಅನುಕೂಲಕರವಾಗಿದ್ದರೂ, ವಿಶೇಷವಾಗಿ ಮಳೆ ಬಂದಾಗ ಅವರಿಗೆ ಈ ಕಾರುಗಳು ನೀಡುವಂತಹ ಆರಾಮವನ್ನು ನೀಡಲು ಸಾಧ್ಯವಿಲ್ಲ. ಎರಡು ಮತ್ತು ನಾಲ್ಕು ಚಕ್ರಗಳ ವಾಹನಗಳ ನಡುವಿನ ಅಂತರ ಎಂದರೆ ಬಹುಶಃ ಇದೇ ಅಂತ ಅನ್ನಿಸುತ್ತದೆ. ನಾವು ವಿನ್ಯಾಸಗೊಳಿಸಿದ ರಿವರ್ಸ್ ಟ್ರೈಕ್ ಈ ಒಂದು ಅಂತರವನ್ನು ಭರ್ತಿ ಮಾಡುವ ನಿರೀಕ್ಷೆಯಿದೆ" ಎಂದು ಪಾಟೀಲ್ ಹೇಳಿದರು.


ಇದನ್ನೂ ಓದಿ: ಕಡಿಮೆ ಬಂಡವಾಳ, ಕೈ ತುಂಬಾ ಕಾಸು! ಈ ಬ್ಯುಸಿನೆಸ್​ ಆರಂಭಿಸಿ ಪ್ರತಿದಿನ 4 ಸಾವಿರ ಗಳಿಸಿ


ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿದ್ಯಂತೆ!


"ನಾವು ಮಾರುಕಟ್ಟೆಯ ಬಗ್ಗೆ ಸಂಶೋಧನೆ ಮಾಡಿದಾಗ, ಅನೇಕರು ಅಂತಹದ್ದನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು ಆದರೆ ಯಾವುದೇ ಲಭ್ಯತೆ ಇರಲಿಲ್ಲ. ಆದ್ದರಿಂದ, ನಾವು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಇತರ ಪ್ರಕ್ರಿಯೆಗಳೊಂದಿಗೆ ಈ ನಿಟ್ಟಿನಲ್ಲಿ ಮುಂದೆ ಸಾಗಿದೆವು. ವಾಹನವು ಕಡಿಮೆ ವೆಚ್ಚದ ಹೊರತಾಗಿಯೂ ಪಾರ್ಕಿಂಗ್ ಮತ್ತು ಕುಶಲತೆಯ ಜೊತೆಗೆ ಸುರಕ್ಷತೆ, ಆರಾಮ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.


ಪಾರ್ಕಿಂಗ್​ ಸಮಸ್ಯೆಗೆ ಪರಿಹಾರ!


"ನಗರಗಳಲ್ಲಿ ಪಾರ್ಕಿಂಗ್ ಸ್ಥಳದ ಕೊರತೆಯಿರುವುದರಿಂದ, ದ್ವಿಚಕ್ರ ವಾಹನಗಳಿಗಿಂತ ಕೆಲವೇ ಸೆಂಟಿ ಮೀಟರ್ ಗಳಷ್ಟೇ ಅಗಲವಿರುವ ರೀತಿಯಲ್ಲಿ ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಕಾರಿನ ಜಾಗದಲ್ಲಿ ಎರಡು ವಾಹನಗಳನ್ನು ನಿಲ್ಲಿಸಬಹುದು" ಎಂದು ಅವರು ಹೇಳಿದರು.


"ನಾವು ಪ್ರತಿ ಬಾರಿ ಚಾರ್ಜ್ ಮಾಡಿದಾಗ ಕನಿಷ್ಠ 150 ಕಿಲೋ ಮೀಟರ್ ದೂರವನ್ನು ಚಲಿಸುವ ನಿಟ್ಟಿನಲ್ಲಿ ಈ ವಾಹನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅಲ್ಲದೆ, ಇದು ಹವಾನಿಯಂತ್ರಣ ಸೌಲಭ್ಯ, ಹಿಂಭಾಗದ ಕ್ಯಾಮೆರಾದೊಂದಿಗೆ ರಿವರ್ಸ್ ಗೇರ್ ಮತ್ತು ಇತರ ಕಾರಿನಂತೆ ಆಡಿಯೊ ವ್ಯವಸ್ಥೆಯನ್ನು ಸಹ ಇದು ಹೊಂದಿರುತ್ತದೆ" ಎಂದು ಪಾಟೀಲ್ ಹೇಳಿದರು.


ಇದನ್ನೂ ಓದಿ: ನೋಡೋಕೆ ಮಾತ್ರ ಈ ಹಣ್ಣು ಮುಳ್ಳು! ಈ ಬೆಳೆ ಬೆಳೆದ್ರೆ ರೈತರ ಹಣೆ ಬರಹವೇ ಬದಲಾಗುತ್ತೆ


ಇತ್ತೀಚೆಗೆ, ಸಂಸ್ಥೆಯು ಈ ವಾಹನದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ನಿಂದ ಅನುಮೋದನೆ ಮಾತ್ರ ಬಾಕಿ ಇದೆ."ನಾವು ಶೀಘ್ರದಲ್ಲಿಯೇ ಈ ಅನುಮೋದನೆಯನ್ನು ಪಡೆಯಲಿದ್ದೇವೆ ಮತ್ತು ನಾವು 2023 ರಲ್ಲಿ ಮಾರುಕಟ್ಟೆಗೆ ತರಲು ಯೋಚಿಸುತ್ತಿದ್ದೇವೆ" ಎಂದು ಅರುಣ್ ಅಗಡಿ ಹೇಳಿದರು.

Published by:ವಾಸುದೇವ್ ಎಂ
First published: