Cryptocurrency: ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಲ್ಲಿ KYC ಪರಿಶೀಲನೆ ಮಾಡಿಕೊಳ್ಳುವುದು ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ

ಕ್ರಿಪ್ಟೊ ಎಕ್ಸ್‌ಚೇಂಜ್ ಅನ್ನು ಬಳಸುವಾಗ KYC ಪ್ರಕ್ರಿಯೆಯನ್ನು ಪೂರೈಸುವ ಸಂದರ್ಭದಲ್ಲಿ ಕೆಲವು ಸಂಗತಿಗಳನ್ನು ನೀವು ನೆನಪಿನಲ್ಲಿಡಬೇಕು. ಬಹುತೇಕ ಎಕ್ಸ್‌ಚೇಂಜ್‌ಗಳಾದ್ಯಂತ KYC ಪ್ರಕ್ರಿಯೆಗಳು ಪ್ರಮಾಣಿತವಾದ್ದರಿಂದ ಈ ಲೇಖನದಲ್ಲಿ ನಾವು ZebPay ಅನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Crypto: ಕ್ರಿಪ್ಟೊ ಸ್ವತ್ತುಗಳು ಎಲ್ಲೆಡೆ ಸ್ವೀಕೃತವಾಗುತ್ತಿರುವುದು ಹಾಗೂ Bitcoin ಮತ್ತು Etherನಂತಹ ಕಾಯಿನ್‌ಗಳು ಎಲ್ಲಾ ಸಮಯಗಳ ಏರಿಕೆ ಕಂಡಿರುವುದರಿಂದಾಗಿ, ಕ್ರಿಪ್ಟೊಗಳ ರೋಚಕ ಪ್ರಪಂಚಕ್ಕೆ ಪ್ರವೇಶಿಸಲು ಇದಕ್ಕಿಂತ ಅತ್ಯುತ್ತಮ ಸಮಯ ಬೇರೊಂದಿಲ್ಲ. ಇರಿ ಸ್ವಲ್ಪ, ನೀವು ಟ್ರೇಡಿಂಗ್ ಆರಂಭಿಸುವ ಮೊದಲು ಹಾಗೂ ಪವರ್ ಕ್ರಿಪ್ಟೊ ಬಳಕೆದಾರರಾಗುವ ಮೊದಲು, ನೀವು ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (KYC) ಪ್ರಕ್ರಿಯೆಯನ್ನು ಪೂರೈಸಬೇಕು. 

    ನೈಜ ಹೂಡಿಕೆದಾರರ ಫಂಡ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ZebPayಯಂತಹ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳು ಮೊದಲಿನಿಂದಲೇ ಕಠಿಣ KYC ತಂತ್ರವನ್ನು ಅಳವಡಿಸಿಕೊಂಡಿವೆ. ಇದಕ್ಕಿಂತ ಹೆಚ್ಚಿನದು ಏನೆಂದರೆ, ಕ್ರಿಪ್ಟೊ ಎಕ್ಸ್‌ಚೇಂಜ್‌ಗಳಲ್ಲಿ ಇರುವಷ್ಟು ಸರಳವಾದ KYC ದೃಢೀಕರಣ ಪ್ರಕ್ರಿಯೆಯು ಇನ್ನೆಲ್ಲಿಯೂ ಇರಲಾರದು.  

    ಕ್ರಿಪ್ಟೊ ಎಕ್ಸ್‌ಚೇಂಜ್ ಅನ್ನು ಬಳಸುವಾಗ KYC ಪ್ರಕ್ರಿಯೆಯನ್ನು ಪೂರೈಸುವ ಸಂದರ್ಭದಲ್ಲಿ ಕೆಲವು ಸಂಗತಿಗಳನ್ನು ನೀವು ನೆನಪಿನಲ್ಲಿಡಬೇಕು. ಬಹುತೇಕ ಎಕ್ಸ್‌ಚೇಂಜ್‌ಗಳಾದ್ಯಂತ KYC ಪ್ರಕ್ರಿಯೆಗಳು ಪ್ರಮಾಣಿತವಾದ್ದರಿಂದ ಈ ಲೇಖನದಲ್ಲಿ ನಾವು ZebPay ಅನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇವೆ. 

    ಹಂತ 1 – ನಿಮ್ಮ ಡಾಕ್ಯುಮೆಂಟ್‌ಗಳನ್ನು ಒಟ್ಟುಗೂಡಿಸಿ 

    ಕ್ರಿಪ್ಟೊ ಎಕ್ಸ್‌ಚೇಂಜ್‌ನಲ್ಲಿ ಖಾತೆ ತೆರೆದ ನಂತರ, KYC ದೃಢೀಕರಣಕ್ಕಾಗಿ ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:

    1 - PAN ಕಾರ್ಡ್ ಮತ್ತು

    2- ವಿಳಾಸದ ಪುರಾವೆ

    ವಿಳಾಸದ ಪುರಾವೆಯಾಗಿ ಸಾಮಾನ್ಯವಾಗಿ ನಿಮ್ಮ ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗಳಲ್ಲಿ ಯಾವುದಾದರೂ ಒಂದನ್ನು ಅಥವಾ ಕಳೆದ ಮೂರು ತಿಂಗಳುಗಳ ಯುಟಿಲಿಟಿ ಬಿಲ್‌ಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಅತ್ಯಂತ ಪ್ರಬಲವಾದ ಕ್ರಿಪ್ಟೊ ಎಕ್ಸ್‌ಚೇಂಜ್‌ಗಳು, ಉದಾಹರಣೆಗೆ ZebPay ಅಂತಹವು, ನಿಮ್ಮ ಖಾತೆಯನ್ನು ದೃಢೀಕರಿಸಲು ಚೆಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಹ ಕೇಳಬಹುದು. 

    ಹಂತ 2 – ಅನುಸರಿಸಬೇಕಾದ ಹಂತಗಳು 

    ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ನೀವು ಸಿದ್ಧವಾಗಿ ಇಟ್ಟುಕೊಂಡಾಗ, ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.

    1 – ನಿಮ್ಮ ಕ್ರಿಪ್ಟೊ ಎಕ್ಸ್‌ಚೇಂಜ್‌ನ ಸೆಟ್ಟಿಂಗ್‌ಗಳ ಪುಟಕ್ಕೆ ಹೋಗಿ ಮತ್ತು ಗುರುತು ದೃಢೀಕರಿಸಿ ಅಥವಾ KYC ಪೂರ್ಣಗೊಳಿಸಿ ಎಂಬ ಟ್ಯಾಬ್ ನೋಡಿ.

    2 - ಅಲ್ಲಿಂದ, ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮ ID ಪ್ರೂಫ್ ಅಪ್‌ಲೋಡ್ ಮಾಡಬೇಕು. ಈ ಹಂತದಲ್ಲಿ, ನಿಮ್ಮ PAN ಕಾರ್ಡ್ ಅನ್ನು ನಿಮ್ಮ ಫೋನ್ ಗ್ಯಾಲರಿಯಿಂದ ನೀವು ಅಪ್‌ಲೋಡ್ ಮಾಡಬಹುದು ಅಥವಾ PAN ಕಾರ್ಡ್‌ನ ಚಿತ್ರವನ್ನು ಕ್ಲಿಕ್ ಮಾಡಲು ನಿಮ್ಮ ಫೋನ್ ಕ್ಯಾಮರಾವನ್ನು ಬಳಸಿ.

    3 - ಈ ಹಂತದ ನಂತರ ನಿಮ್ಮ ವಿಳಾಸದ ಪುರಾವೆಯನ್ನು ಅಪ್‌ಲೋಡ್ ಮಾಡಬೇಕು. ಇದಕ್ಕಾಗಿ, ನೀವು ಅಪ್‌ಲೋಡ್ ಮಾಡಲಿರುವ ಗುರುತಿನ ಪುರಾವೆಯ ವಿಧವನ್ನು ಆಯ್ಕೆ ಮಾಡಿ, ಅದು ನಿಮ್ಮ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಅಥವಾ ಯುಟಿಲಿಟಿ ಬಿಲ್ ಆಗಿರಬಹುದು.

    4 - ಡಾಕ್ಯುಮೆಂಟ್ ವಿಧಕ್ಕೆ ಅನುಗುಣವಾಗಿ ಅಗತ್ಯವಿರುವ ಎಲ್ಲಾ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಅಪ್‌ಲೋಡ್ ಮಾಡುತ್ತಿದ್ದರೆ, ಕಾರ್ಡ್‌ನ ಮುಂಭಾಗದ ಮತ್ತು ಹಿಂಭಾಗದ ಎರಡೂ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

    5 - KYC ವಿವರಗಳನ್ನು ಭರ್ತಿ ಮಾಡುವುದು ಪ್ರಕ್ರಿಯೆಯ ಒಂದು ಭಾಗವಾಗಿದೆ. ಮುಂದಿನ ಹಂತವು ನಿಮ್ಮ ಬ್ಯಾಂಕ್ ವಿವರಗಳನ್ನು ಸೇರಿಸುವುದು ಮತ್ತು ದೃಢೀಕರಿಸುವುದನ್ನು ಒಳಗೊಂಡಿದೆ. ನಿಮ್ಮ ಎಕ್ಸ್‌ಚೇಂಜ್‌ನ ಸೆಟ್ಟಿಂಗ್‌ಗಳ ಪುಟದಲ್ಲಿ ಬ್ಯಾಂಕಿಂಗ್ ಎಂಬ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ಸೇರಿಸಲು ಸೂಚನೆಗಳನ್ನು ಅನುಸರಿಸಿ.

    6 - ಈ ವಿವರಗಳನ್ನು ಒದಗಿಸುವ ಜೊತೆಗೆ ನಿಮ್ಮ ಬ್ಯಾಂಕ್ ಚೆಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್‌ನ ಫೋಟೋವನ್ನು ಸಹ ಸೇರಿಸಬೇಕು. ಮೇಲೆ ವಿವರಿಸಿದಂತೆ, ನಿಮ್ಮ PAN ಕಾರ್ಡ್ ಸೇರಿಸಲು ಅನುಸರಿಸಿದ ವಿಧಾನವನ್ನೇ ಈ ಹಂತಕ್ಕೂ ಅನುಸರಿಸಿ. ಹಾಗೆಯೇ, ನಿಮ್ಮ ಹೆಸರು, ಖಾತೆ ಸಂಖ್ಯೆ ಹಾಗೂ IFSC ಕೋಡ್ ಸ್ಪಷ್ಟವಾಗಿ ಕಾಣಿಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

    ಇಷ್ಟು ಸರಳ ಹಂತಗಳನ್ನು ಪಾಲಿಸುವುದು, ಅಷ್ಟೇ! ಕ್ರಿಪ್ಟೊಕರೆನ್ಸಿಯ ಅತ್ಯಾಕರ್ಷಕ ಪ್ರಪಂಚದಲ್ಲಿ ನಿಮ್ಮ ಪ್ರಯಾಣವನ್ನು ಆರಂಭಿಸುವ ಮೊದಲು, ನಿಮ್ಮ ಕ್ರಿಪ್ಟೊ ಎಕ್ಸ್‌ಚೇಂಜ್ ನಿಮ್ಮ KYC ಮತ್ತು ಬ್ಯಾಂಕ್ ವಿವರಗಳನ್ನು ಅನುಮೋದಿಸುವವರೆಗೆ ಕಾಯಬೇಕಾಗುತ್ತದೆ.  

    ಹಂತ 3 – ನಿಮಗೇಕೆ KYC ಅಗತ್ಯವಿದೆ  

    ಹಣಕಾಸು ವಹಿವಾಟು ಒಳಗೊಂಡಿರುವ ಯಾವುದೇ ಪ್ರಕ್ರಿಯೆಗಳಾದರೂ ಸಹ ಅಂತಹ ಕಡೆಗಳಲ್ಲಿ KYC ಎಂಬುದು ಒಂದು ಕಡ್ಡಾಯ ಪ್ರಕ್ರಿಯೆಯಾಗಿದೆ, ಕ್ರಿಪ್ಟೊಕರೆನ್ಸಿಯಿಂದ ಹೊರತಾಗಿ ಬ್ಯಾಂಕ್‌ಗಳು ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ನಡೆಸುವ ವ್ಯವಹಾರಗಳಿಗೂ ಸಹ ಇದು ಕಡ್ಡಾಯ. ನಿಮ್ಮನ್ನು ಮತ್ತು ನಿಮ್ಮ ವಿವರಗಳನ್ನು KYCಯು ಪ್ರಮಾಣೀಕರಿಸುತ್ತದೆ ಹಾಗೂ ಕ್ರಿಪ್ಟೊ ಎಕ್ಸ್‌ಚೇಂಜ್‌ನ ಒಟ್ಟಾರೆ ಸುರಕ್ಷತೆಗೆ ಸೇರಿಸುತ್ತದೆ.

    ಯಾವುದೇ ಹಣಕಾಸು ವಹಿವಾಟು ನಡೆಸಬೇಕು ಎಂದರೂ, ಒಬ್ಬ ವ್ಯಕ್ತಿಯು KYC ಪ್ರಕ್ರಿಯೆಯನ್ನು ಅವಶ್ಯಕವಾಗಿ ಪೂರೈಸಲೇಬೇಕು. ನಿಮ್ಮ ದೃಢೀಕರಣವ ಪ್ರಕ್ರಿಯೆಯು ಪೂರ್ಣಗೊಂಡಾಗ, ಈಗ ನಾವು ಚರ್ಚಿಸುತ್ತಿರುವ ಸಂದರ್ಭದಲ್ಲಿ, ನೀವು ಕ್ರಿಪ್ಟೊ ಎಕ್ಸ್‌ಚೇಂಜ್‌ಗೆ ನಿಮ್ಮ ಗುರುತು, ವಿಳಾಸ ಮತ್ತು ಹಣಕಾಸು ಇತಿಹಾಸದ ಮಾಹಿತಿಯನ್ನು ನೀಡಿರುತ್ತೀರಿ. ಒಮ್ಮೆ ನಿಮ್ಮ ದೃಢೀಕರಣವು ಪೂರ್ಣಗೊಂಡಾಗ, ಬ್ಯಾಂಕ್‌ನಲ್ಲಿರುವ ನಿಮ್ಮ ಕರೆನ್ಸಿಯನ್ನು ಕ್ರಿಪ್ಟೊಕರೆನ್ಸಿ ಖರೀದಿಸಲು ವಿನಿಮಯ ಮಾಡಬಹುದು ಹಾಗೂ ಬ್ಲಾಕ್‌ಚೈನ್‌ನ ಮನಮೋಹಕ ಪ್ರಪಮಚಕ್ಕೆ ಪ್ರವೇಶಿಸಬಹುದು.

    ಹಂತ 4 –KYC ತಿರಸ್ಕೃತವಾಗುವ ಅಪಾಯವನ್ನು ಕನಿಷ್ಠಗೊಳಿಸಿ 

    ಈಗ ನೀವು KYC ಪ್ರಾಮುಖ್ಯತೆಯನ್ನು ತಿಳಿದುಕೊಂಡಿರುವಿರಿ. ಕ್ರಿಪ್ಟೊ ಎಕ್ಸ್‌ಚೇಂಜ್‌ನಲ್ಲಿ ನಿಮ್ಮ ಅರ್ಜಿಯು ತಿರಸ್ಕೃತವಾಗುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ಮೇಲೆ ತಿಳಿಸಿದ ಹಂತಗಳನ್ನು ಸರಿಯಾಗಿ ಅನುಸರಿಸಿದರೆ ನಿಮ್ಮ KYCಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ, ಆದರೆ ಕೆಲ ಸಂದರ್ಭಗಳಲ್ಲಿ ತಿರಸ್ಕೃತಗೊಂಡಿರುವ ಉದಾಹರಣೆಗಳೂ ಇವೆ. KYC ತಿರಸ್ಕೃತವಾಗುವುದನ್ನು ತಡೆಯಲು ಕೆಳಗೆ ತಿಳಿಸಿದ ಅಂಶಗಳನ್ನು ಅನುಸರಿಸಿ. 

    1 - ಮೊದಲಿಗೆ, ದೃಢೀಕರಣಕ್ಕೆ ನೀವು ಸಲ್ಲಿಸಿರುವ ಚಿತ್ರಗಳನ್ನು ಒಮ್ಮೆ ಪರಿಶೀಲಿಸಿ. ಕೆಲವೊಮ್ಮೆ, ಅವು ಮಸುಕಾಗಿ ಅಥವಾ ಅಸ್ಪಷ್ಟವಾಗಿದ್ದರೆ, ಆಗ ಕ್ರಿಪ್ಟೊ ಎಕ್ಸ್‌ಚೇಂಜ್ ನಿಮ್ಮ ಡಾಕ್ಯುಮೆಂಟ್‌ಗಳನ್ನು ಪ್ರಮಾಣೀಕರಿಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ಅದು KYC ತಿರಸ್ಕೃತಗೊಳ್ಳಲು ಕಾರಣವಾಗುತ್ತದೆ.

    2 - ಫೋಟೊ IDಗಳು, ಅಂದರೆ ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್‌ಗಳ ಅವಧಿಯು ಮೀರಿಲ್ಲ ಎಂಬುದನ್ನು ಎರಡೆರಡು ಬಾರಿ ಪರಿಶೀಲಿಸಿ, ಯಾಕೆಂದರೆ ಅಂತಹ ಸಂದರ್ಭಗಳಲ್ಲಿಯೂ ಈ ಡಾಕ್ಯುಮೆಂಟ್‌ಗಳು ಅಮಾನ್ಯಗೊಳ್ಳಬಹುದು. 

    3 - ಅಂತಿಮವಾಗಿ, ನೀವು ಒದಗಿಸಿರುವ ಬ್ಯಾಂಕ್ ವಿವರಗಳು ಸರಿಯಾಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಹಾಗೂ ಒಂದು ವೇಳೆ ನೀವು ಬೆಂಬಲಿತ ಡಾಕ್ಯುಮೆಂಟ್ ಆಗಿ ಚೆಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಅಪ್‌ಲೋಡ್ ಮಾಡುತ್ತಿದ್ದರೆ, ನಿಮ್ಮ ಹೆಸರು, ಖಾತೆ ಸಂಖ್ಯೆ ಹಾಗೂ IFSC ವಿವರಗಳಂತಹ ಮಾಹಿತಿಯು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

    ಯಶಸ್ವಿ ಕ್ರಿಪ್ಟೊ ಸ್ವತ್ತಿನ ಪ್ರಯಾಣವನ್ನು ಪಡೆದುಕೊಳ್ಳಲು KYC ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದು ಮೊದಲ ಹೆಜ್ಜೆಯಾಗಿದೆ. ಉದ್ಯಮವೊಂದರ ತ್ವರಿತ ಬೆಳವಣಿಗೆಯಿಂದಾಗಿ ನೈಜವಾದ, ಜೊತೆಗೆ ಅನಗತ್ಯವಾದ ಅಂಶಗಳು ಸಹ ಆಕರ್ಷಿತವಾಗಿ, ನಂತರದಲ್ಲಿ ಆಗಬಹುದಾದ ವಂಚನೆ ಪ್ರಕರಣಗಳನ್ನು ತಡೆಯಲು ಹಾಗೂ ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ರಾಥಮಿಕ ಹಂತದಲ್ಲಿಯೇ ಗುರುತು ಪರಿಶೀಲನೆಯನ್ನು ಮಾಡಲಾಗಿದೆ ಎಂದು ಖಚಿತಪಡಿಸಲು ಈ ಪ್ರಕ್ರಿಯೆಯನ್ನು ಜಾರಿಗೆ ತರಲಾಗಿದೆ.

    ನಿಮ್ಮ ಸಮಯವನ್ನು ತೆಗೆದುಕೊಳ್ಳಿ ಹಾಗೂ ಸುಲಭವಾದ ಮತ್ತು ಯಶಸ್ವಿ KYC ಅರ್ಜಿಗಾಗಿ ಇಲ್ಲಿ ವಿವರಿಸಲಾದ ಎಲ್ಲಾ ಹಂತಗಳನ್ನು, ಹಾಗೆಯೇ, ನಿಮ್ಮ ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್‌ಗೆ ಅಗತ್ಯವಾಗಿರುವ ನಿರ್ದಿಷ್ಟ ಹಂತಗಳ ಬಗ್ಗೆ ತಿಳಿದುಕೊಳ್ಳಿ. ಅಂತಿಮವಾಗಿ, ನಿಮ್ಮ ಕಾಯಿನ್‌ಗಳನ್ನು ಸುರಕ್ಷಿತವಾಗಿ ಇರಿಸುವ ಜೊತೆಗೆ ಸುಲಭವಾಗಿ ಅಪ್‌ಲೋಡ್ ಮಾಡುವ ಆಯ್ಕೆ ನೀಡುವ ZebPay ಅಂತಹ ಸುರಕ್ಷಿತವಾದ ಹಾಗೂ ವಿಶ್ವಾಸಾರ್ಹ ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ಅನ್ನು ಆಯ್ಕೆ ಮಾಡಿರುವಿರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
    Published by:Soumya KN
    First published: