• Home
 • »
 • News
 • »
 • business
 • »
 • Business Ideas: ವಿಶ್ವದ ಅತ್ಯಾಕರ್ಷಕ ಅಮೆರಿಕದ ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯುವುದು ಹೇಗೆ?

Business Ideas: ವಿಶ್ವದ ಅತ್ಯಾಕರ್ಷಕ ಅಮೆರಿಕದ ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾರುಕಟ್ಟೆಯಲ್ಲಿರುವ ಹೊಸ ಪುಸ್ತಕವೊಂದರ ಪ್ರಕಾರ, ಅಮೆರಿಕ ಯುಕೆ ಮೂಲದ ಕಂಪನಿಗಳಿಗೆ ಶತ್ರುವಾಗಬೇಕೆಂದೇನಿಲ್ಲ, ಅಷ್ಟಕ್ಕೂ ಯುಕೆ ಮಾತ್ರವಲ್ಲದೇ ವಿಶ್ವದ ಯಾವುದೇ ದೇಶಕ್ಕೂ ಅಮೆರಿಕ ಉತ್ತಮವಾದ ಮಾರುಕಟ್ಟೆಯಾಗಬಹುದಾಗಿದೆ.

 • Share this:

  ಯುಎಸ್ ವಿಶ್ವ ಮಾರುಕಟ್ಟೆಯಲ್ಲಿ (World Market) ತನ್ನದೇ ಆದ ಛಾಪನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಯುಕೆ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ಆಕರ್ಷಿಸಲು ಪ್ರಯತ್ನಿಸಿ, ಯು ಎಸ್ ಮಾರುಕಟ್ಟೆಯನ್ನು (US Market) ಮೀರಿ ತನ್ನ ಆಧಿಪತ್ಯ ಸಾಧಿಸಲು ಸಾಧ್ಯವಿಲ್ಲವೆಂದು ಕಂಡುಕೊಂಡಿದೆ. ರಿಟೈಲ್ ಗ್ರೂಪ್ (Retail Group) ಆದ ಮಾರ್ಕ್ಸ್ ಆಂಡ್ ಸ್ಪೆನ್ಸರ್ಸ್ ಅವರ ಕ್ಲಾಥಿಂಗ್ ಬ್ರ್ಯಾಂಡ್ ಆಗಿದ್ದ ಬ್ರೂಕ್ಸ್ ಬ್ರದರ್ಸ್ ಅನ್ನು ಹದಿಮೂರು ವರ್ಷಗಳ ಹಿಂದೆ ಅವರು ಖರೀದಿಸಿದ್ದ ಮೊತ್ತ ಮೂರನೇ ಒಂದು ಭಾಗಕ್ಕೆ ಮಾರಾಟ ಮಾಡಿದ್ದು ವ್ಯವಹಾರದಲ್ಲಿ ಯಾವ ರೀತಿ ತಪ್ಪು ಉಂಟಾಗಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.


  ಮಾರುಕಟ್ಟೆಯಲ್ಲಿರುವ ಹೊಸ ಪುಸ್ತಕವೊಂದರ ಪ್ರಕಾರ, ಅಮೆರಿಕ ಯುಕೆ ಮೂಲದ ಕಂಪನಿಗಳಿಗೆ ಶತ್ರುವಾಗಬೇಕೆಂದೇನಿಲ್ಲ, ಅಷ್ಟಕ್ಕೂ ಯುಕೆ ಮಾತ್ರವಲ್ಲದೇ ವಿಶ್ವದ ಯಾವುದೇ ದೇಶಕ್ಕೂ ಅಮೆರಿಕ ಉತ್ತಮವಾದ ಮಾರುಕಟ್ಟೆಯಾಗಬಹುದಾಗಿದೆ.


  ಮೇಕ್ ಇಟ್ ಇನ್ ಅಮೆರಿಕದಲ್ಲಿ ಹೇಳಲಾಗಿರುವಂತೆ, ರಾಕೆಟ್ ಮಾರ್ಕೆಟ್ ಡೆವೆಲಪ್ಮೆಂಟ್ ನಲ್ಲಿ ತಂತ್ರಗಾರ, ಸಲಹೆಗಾರರಾಗಿರುವ ಮ್ಯಾಥಿ ಲೀ ಸಾಯರ್ ಅವರು ಅಮೆರಿಕದ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳು ಅವಕಾಶಗಳನ್ನು ಗುರುತಿಸಲು ನೆರವು ನೀಡುತ್ತಾರೆ. ಕಂಪನಿಗಳು ಹಾನಿಗೊಳಗಾಗದಂತೆ ಕೆಲ ನಿರ್ದಿಷ್ಟ ಉಪಕ್ರಮಗಳನ್ನು ಅವರು ಸೂಚಿಸುತ್ತಾರೆ.


  ಇದನ್ನೂ ಓದಿ: Business Loan: ಸಣ್ಣ ವ್ಯಾಪಾರೋದ್ಯಮಿಗಳು ತಮ್ಮ ವ್ಯಾಪಾರಕ್ಕಾಗಿ ಲೋನ್‌ಗಳನ್ನು ಹೇಗೆ ಪಡೆದುಕೊಳ್ಳಬಹುದು? ಅರ್ಹತೆಗಳೇನು?


  ಈ ಬಗ್ಗೆ ಸಾಯರ್ ಅವರು ಹಲವರಿಗೆ ನೆರವು ನೀಡಿದ್ದು ಒಂದು ನಿರ್ದಿಷ್ಟ ಪ್ರಸಂಗವೊಂದನ್ನು ನೆನಪಿಸಿಕೊಳ್ಳುತ್ತಾರೆ. ಆ ಪ್ರಕಾರ, ಟರ್ಕಿ ವಲಸಿಗರೊಬ್ಬರು ಫೆಟಾ ಚೀಸ್ ಮಾರಾಟ ಮಾಡುತ್ತಾ ದೀವಾಳಿಯಾಗಿದ್ದ ಡೈರಿ ಉದ್ಯಮವೊಂದನ್ನು ಖರೀದಿಸಿ ಮುಂದಿನ ಐದು ವರ್ಷಗಳಲ್ಲೇ ಅದು ಅಮೆರಿಕದಲ್ಲಿ ಹೆಚ್ಚು ಖರೀದಿಸಲ್ಪಡುವ ಚೊಬಾನಿ ಯಾಗರ್ಟ್ ತಯಾರಕ ಸಂಸ್ಥೆಯನ್ನಾಗಿ ಪರಿವರ್ತಿಸಿದರು. ಅಷ್ಟೇ ಅಲ್ಲ, ಹ್ಯುಂಡೈ ಎಂಬ ಕೋರಿಯಾ ಮೂಲದ ಆಟೋ ಕಂಪನಿಯು ಹೇಗೆ ಅಮೆರಿಕದಲ್ಲಿ ಗುರುತಿಸಿಕೊಂಡಿತು ಎಂಬುದನ್ನೂ ಸಹ ಸಾಯರ್ ನೆನಪಿಸಿಕೊಳ್ಳುತ್ತಾರೆ.


  ಇನ್ನು ವ್ಯವಹಾರದಲ್ಲಿ ಹೇಗೆ ತಪ್ಪಾಗಬಹುದೆಂದೂ ಅವರು ವಿವರಿಸುತ್ತಾರೆ. ಅವರ ಕೇಸ್ ಸ್ಟಡೀಸ್‌ ಕೊಲಂಬಿಯಾದ ಡೈರಿ ಮತ್ತು ಫುಡ್ ಕಂಪನಿಯಾದ ಆಲ್ಪಿನಾದ ಮೇಲೆ ಕೇಂದ್ರೀಕರಿಸುತ್ತದೆ.
  ಅಮೆರಿಕದಲ್ಲಿ ಬೆಳೆಯುತ್ತಿರುವ ಹಿಸ್ಪಾನಿಕ್ ಜನಸಂಖ್ಯೆ ಮತ್ತು $6 ಬಿಲಿಯನ್ ಮೌಲ್ಯದ ಯಾಗರ್ಟ್ ಮಾರುಕಟ್ಟೆ ಹಾಗೂ ವಾರ್ಷಿಕವಾಗಿ ಆ ಮಾರುಕಟ್ಟೆಯಲ್ಲಾಗುತ್ತಿರುವ 12ರಿಂದ 15% ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡು ಕೊಲುಂಬಿಯಾ ಡೈರಿ ಕಂಪನಿಯು 2007 ರಲ್ಲಿ ತನ್ನ ಶಾಖೆಯನ್ನು ಯುಎಸ್‌ಗೆ ವಿಸ್ತರಿಸಲು ನಿರ್ಧರಿಸಿತು. ಅದಾಗಲೇ ಆ ಸಮಯದಲ್ಲಿ ಎರಡು ಫ್ರೆಂಚ್ ಬ್ರ್ಯಾಂಡ್‌ಗಳಾದ ಡ್ಯಾನೋನ್ ಮತ್ತು ಯೋಪ್ಲೈಟ್‌ ನೊಂದಿಗೆ ಕೊಲುಂಬಿಯಾದ ಆಲ್ಪಿನಾ ಉತ್ಪನ್ನವು ಸ್ಪರ್ಧಿಸಬೇಕಾಗುತ್ತದೆ ಎಂಬುದರ ಅರಿವು ಕೊಲುಂಬಿಯಾ ಕಂಪನಿಗಿತ್ತು.


  ಸಾಯರ್ ಪ್ರಕಾರ, ಆದರೆ, ಕೊಲುಂಬಿಯಾ ಕಂಪನಿಯು ಅದೇ ವರ್ಷದಲ್ಲಿ ಅಮೆರಿಕದಲ್ಲಿ ಪ್ರವೇಶಿಸಿದ್ದ ಚೋಬಾನಿ ಯಾಗರ್ಟ್ ಅನ್ನು ಮರೆತೇ ಬಿಟ್ಟಿತ್ತು. ಇತ್ತ ಚೋಬಾನಿ ತನ್ನ ಕಡಿಮೆ ಸಿಹಿಯಾದ ಹಾಗೂ ದಪ್ಪವಾದ ಯಾಗರ್ಟ್ ನಿಂದಾಗಿ ಅಮೆರಿಕನ್ನರ ರುಚಿಯನ್ನೇ ಬದಲಾಯಿಸಿತು.


  ಚೋಬಾನಿ $460 ಮಿಲಿಯನ್ ಮೊತ್ತದ ಮಾರಾಟ ದಾಖಲಿಸಿ, ಮಾರುಕಟ್ಟೆಯ 10% ಪಾಲನ್ನು ಆಕ್ರಮಿಸಿಕೊಂಡಿದ್ದು ಮಾತ್ರವಲ್ಲದೇ ಯುಎಸ್ ನಲ್ಲಿ ಇಂದಿಗೂ ತನ್ನದೇ ಆದ ಸ್ಥಳವನ್ನು ಗುರುತಿಸಿಕೊಂಡಿದೆ.


  ಸಂಶೋಧನೆಯ ಪ್ರಕಾರ, ಕೊಲುಂಬಿಯಾದ ಕೊಲುಂಬಿಯಾದ ಆಲ್ಪಿನಾ ಉತ್ಪನ್ನವೂ ಸಹ ಅಮೆರಿಕದಲ್ಲಿದೆಯಾದರೂ ಅದರ ಉತ್ಪನ್ನಗಳು ಮುಖ್ಯವಾಗಿ ಲ್ಯಾಟಿನ್ ಅಮೇರಿಕನ್ ಗ್ರಾಹಕರನ್ನು ಪೂರೈಸುವ ವಿಶೇಷ ಮಳಿಗೆಗಳಲ್ಲಿವೆ ಎಂಬ ಅಂಶ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
  ಇನ್ನು ಈ ಎರಡು ವ್ಯವಹಾರಗಳು ತಮ್ಮನ್ನು ಸ್ಥಾಪಿಸಿಕೊಳ್ಳುವ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಕ್ರಮಗಳ ಮಧ್ಯದ ವ್ಯತ್ಯಾಸವನ್ನು ನೋಡುವುದಾದರೆ, ಅಲ್ಪಿನಾ ಕಂಪನಿಯು ಭಾರೀ ವೆಚ್ಚದ ಕಟ್ಟಡವನ್ನು ಖರೀದಿಸಿ ತನ್ನ ವ್ಯಾಪಾರವನ್ನು ಆರಂಭಿಸಿತು. ಆದರೆ, ಇತ್ತ ಚೋಬಾನಿ ಮಾರುಕಟ್ಟೆಯಲ್ಲಿ ದೀವಾಳಿಯಾಗಿ ಹೊರನಡೆಯುತ್ತಿದ್ದ ಡೈರಿ ಉದ್ಯಮವೊಂದನ್ನು ಬಲು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ತನ್ನ ವ್ಯವಹಾರ ಆರಂಭಿಸಿತು. ಅಷ್ಟಕ್ಕೂ ಚೋಬಾನಿ ನಿಧಾನವಾಗಿ ಯಶಸ್ಸಿನತ್ತ ಹೊರಳಬೇಕೆಂದು ನಡೆಯುತ್ತಿತ್ತು. ಆದರೆ, ಅದಕ್ಕೆ ತ್ವರಿತವಾಗಿ ಯಶಸ್ಸು ಸಿಕ್ಕಿತು.


  ಸಾಯರ್ ಪ್ರಕಾರ, ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸುವ ಅಂಶಗಳು ಮಾರುಕಟ್ಟೆಯಲ್ಲಿ ಅದರ ಅಸ್ತಿತ್ವವನ್ನು ಅವಲಂಬಿಸಿದೆ. ಅಷ್ಟಕ್ಕೂ ಸಾಯರ್ ಅವರ ನುಡಿಗಳು ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಕರಗತಗೊಳಿಸಿಕೊಳ್ಳಬೇಕಾದ ಎರಡು ಮೂಲ ತತ್ವಗಳನ್ನು ಆಸಕ್ತರಿಗೆ ನೀಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.


  ಇದನ್ನೂ ಓದಿ: Business Ideas: ವಿಶ್ವದ ಅತ್ಯಾಕರ್ಷಕ ಅಮೆರಿಕದ ಮಾರುಕಟ್ಟೆಯಲ್ಲಿ ಯಶಸ್ಸು ಪಡೆಯುವುದು ಹೇಗೆ?


  ಮೊದಲನೆಯದು, U.S. ನಲ್ಲಿ ಇಂಗ್ಲಿಷ್ ಇನ್ನೂ ಮುಖ್ಯ ಭಾಷೆಯಾಗಿದ್ದರೂ, U.K. ನಲ್ಲಿ ಮಾತನಾಡುವ ಭಾಷೆಯಂತೆ ಇಲ್ಲ.


  ಹಾಗಾಗಿ ಯುಕೆ ಮೂಲದ ಕಂಪನಿಗಳು ತಮ್ಮ ಇಂಗ್ಲೀಷ್ ಭಾಷೆ ಅಮೆರಿಕದಲ್ಲಿ ಹೊಂದಬಹುದೆಂದು ಆ ಬಗ್ಗೆ ಹೆಚ್ಚಿನ ಒತ್ತು ನೀಡದೆ ತಮ್ಮ ರೀತಿಯ ಇಂಗ್ಲೀಷಿನಲ್ಲಿಯೇ ವೆಬ್ ಸೈಟ್, ಮೆನು, ಬ್ರಾಶರ್ ಮುಂತಾದವುಗಳನ್ನು ಮಾಡುವ ಮೂಲಕ ಅಮೆರಿಕದ ಬಹು ಜನರಿಂದ ಅರ್ಥೈಸಿಕೊಳ್ಳಲಾಗದೆ ದೂರ ಉಳಿಯುತ್ತಾರೆ.


  ಎರಡನೇಯದಾಗಿ, ಅಮೆರಿಕ ಕೇವಲ ಒಂದು ಮಾರುಕಟ್ಟೆ ಅಲ್ಲ, ಇಲ್ಲಿ ಹಲವು ಮಾರುಕಟ್ಟೆಗಳಿವೆ. ಆಯಾ ಪ್ರದೇಶಗಳ ಪ್ರಬಲ ಸಮುದಾಯದವರ ಜನಸಂಖ್ಯೆಗಳ ಆಧಾರದ ಮೇಲೆ ಅವರ ಆಚಾರ-ವಿಚಾರ ಹಾಗೂ ಜೀವನಶೈಲಿಯನ್ನು ಅರ್ಥ ಮಾಡಿಕೊಂಡು ಅದಕ್ಕನುಸಾರವಾಗಿ ಸೇವೆಗಳನ್ನು ನೀಡಬೇಕಾಗುತ್ತದೆ ಎಂದಾಗಿದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು