• Home
  • »
  • News
  • »
  • business
  • »
  • Home Business: ಭರ್ಜರಿ ಲಾಭ ತಂದುಕೊಡುವ ಗೃಹೋದ್ಯಮ, ಎರೆಹುಳು ಸಾಕಿ ಸಾವಿರ ಸಾವಿರ ಸಂಪಾದಿಸಿ

Home Business: ಭರ್ಜರಿ ಲಾಭ ತಂದುಕೊಡುವ ಗೃಹೋದ್ಯಮ, ಎರೆಹುಳು ಸಾಕಿ ಸಾವಿರ ಸಾವಿರ ಸಂಪಾದಿಸಿ

ಎರೆಹುಳು ಗೊಬ್ಬರ

ಎರೆಹುಳು ಗೊಬ್ಬರ

ಸಾವಯವ ತ್ಯಾಜ್ಯ ಉತ್ಪನ್ನಗಳನ್ನು ಪೋಷಕಾಂಶಗಳಿಂದ ಸಮೃದ್ಧಗೊಂಡಿರುವ ಮಿಶ್ರಗೊಬ್ಬರವಾಗಿ ಪರಿವರ್ತಿಸುವ ಶಕ್ತಿ ಎರೆಹುಳುಗಳಿಗಿವೆ. ಎರೆಹುಳುಗಳನ್ನು ಮಾರಾಟ ಮಾಡಬಹುದು ಅಥವಾ ಅವು ಉತ್ಪಾದಿಸುವ ಕಾಂಪೋಸ್ಟ್ ಅನ್ನು ಮಾರಾಟ ಮಾಡಬಹುದು.

  • Share this:

ಮನೆಯಲ್ಲೇ ನಿರ್ವಹಿಸುವ ಉದ್ಯೋಗವನ್ನು (Employment) ನೀವು ಅರಸುತ್ತಿದ್ದರೆ ಎರೆಹುಳು ಸಾಕಣೆ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ಬೆಚ್ಚಗಿನ, ಗಾಢ ಮತ್ತು ಶುಷ್ಕ ಪ್ರದೇಶ ಬೇಕು. ಮನೆಯಲ್ಲೇ (Home) ಎರೆಹುಳು ಸಾಕಣೆಯನ್ನು ಮಾಡಬಹುದು ಇಲ್ಲದಿದ್ದರೆ ಅದಕ್ಕಾಗಿಯೇ ದೊರೆಯುವ ಕಿಟ್‌ಗಳನ್ನು ಖರೀದಿಸಿ ಅದರಲ್ಲೂ ಸಾಕಬಹುದು. ಕೃಷಿಕರಿಗೆ (Formers) ಎರೆಹುಳುಗಳು ಪ್ರಾಕೃತಿಕ (Natural) ಸಂಪತ್ತುಗಳಾಗಿವೆ. ಸಾವಯವ ತ್ಯಾಜ್ಯ ಉತ್ಪನ್ನಗಳನ್ನು ಪೋಷಕಾಂಶಗಳಿಂದ ಸಮೃದ್ಧಗೊಂಡಿರುವ ಮಿಶ್ರಗೊಬ್ಬರವಾಗಿ ಪರಿವರ್ತಿಸುವ ಶಕ್ತಿ ಎರೆಹುಳುಗಳಿಗಿವೆ. ಎರೆಹುಳುಗಳನ್ನು ಮಾರಾಟ ಮಾಡಬಹುದು ಅಥವಾ ಅವು ಉತ್ಪಾದಿಸುವ ಕಾಂಪೋಸ್ಟ್ (Compost) ಅನ್ನು ಮಾರಾಟ ಮಾಡಬಹುದು.


ಎರೆಹುಳುಗಳು ಲಾಭದಾಯಕ ಉದ್ಯಮವಾಗಿ ಹೇಗೆ ಮಾರ್ಪಟ್ಟಿದೆ?


ಹಣ ಉತ್ಪಾದಿಸಲು ಸುಲಭ ವಿಧಾನವಾಗಿ ಇಂದು ಎರೆಹುಳು ಸಾಕಣೆ ಖ್ಯಾತಿಗಳಿಸಿದೆ. ಉದ್ಯಾನ ನಿರ್ವಾಹಕರಿಗೆ ಕೃಷಿಕರಿಗೆ ಇವುಗಳನ್ನು ಮಾರಾಟ ಮಾಡಬಹುದಾಗಿದೆ. ಎರೆಹುಳುಗಳ ಮಿಶ್ರಗೊಬ್ಬರವನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದು. ಮೀನುಗಾರರಿಗೆ ಕೂಡ ಹುಳಗಳನ್ನು ಮಾರಬಹುದು.


ಎರೆಹುಳು ಸಾಕಣೆಯಿಂದ ದೊರೆಯುವ ಆದಾಯವೆಷ್ಟು?


ಎರೆಹುಳುಗಳ ಸಂಖ್ಯೆ ಅಥವಾ ಇವುಗಳನ್ನು ಸಾಕುವ ಕೆರೆ, ಹೊಂಡವನ್ನು ಆಧರಿಸಿ ಮಾರಾಟ ಮೌಲ್ಯವನ್ನು ನಿರ್ಧರಿಸಬಹುದಾಗಿದೆ. ಸ್ಕ್ವೇರ್ ಫೀಟ್ ಆಧರಿಸಿ 10 ಸಾವಿರದಿಂದ 15 ಸಾವಿರ ಹುಳುಗಳನ್ನು ನೀವು ಮಾರಾಟ ಮಾಡಬಹುದು.


ಸಾಕಣೆಗೆ ಏನು ಮಾಡಬೇಕು


ಎರೆಹುಳು ಸಾಕಣೆ ಅಷ್ಟೊಂದು ಪ್ರಯಾಸದಾಯಕವಲ್ಲ ಕೆಲಸವಲ್ಲ. ಇದಕ್ಕೆ ನಿಮಗೆ ತಗುಲುವ ಖರ್ಚು ಕೂಡ ಕಡಿಮೆ ಹಾಗೂ ಹೆಚ್ಚು ಕೆಲಸಗಾರರು ಬೇಕಾಗಿಲ್ಲ. ಆರೋಗ್ಯಕರ ಎರೆಹುಳುಗಳ ಸಾಕಣೆಯನ್ನು ನೀವೇ ಮಾಡಬಹುದು. ಎರೆಹುಳ ಸಾಕಣೆಗೆ ಮುನ್ನ ವ್ಯಾಪಾರದ ಹೆಸರು, ಬ್ರ್ಯಾಂಡ್ ಹಾಗೂ ನೋಂದಾವಣೆ ಅಗತ್ಯವಾಗಿರುತ್ತದೆ. ಆಕರ್ಷಕ ಹೆಸರು ನಿಮ್ಮ ಉದ್ಯಮವನ್ನು ಯಶಸ್ವಿಗೊಳಿಸುತ್ತದೆ.


ಸೂಕ್ತ ಯೋಜನೆ ಇರಲಿ


ಯಾವುದೇ ವ್ಯವಹಾರಕ್ಕೂ ಯೋಜನೆ ಮುಖ್ಯ. ಲಿಖಿತ ಯೋಜನೆಯನ್ನು ಆಧರಿಸಿ ವ್ಯಾಪಾರ ಮಾಡಿ. ಎರೆಹುಳು ಸಾಕಣೆಯನ್ನು ಮಾಡುವ ಉದ್ದೇಶವನ್ನು ವಿವರಿಸಿ


ವ್ಯವಹಾರದ ಎಲ್ಲಾ ಮಾನದಂಡಗಳನ್ನು ಪೂರೈಸಿ


ವ್ಯವಹಾರಕ್ಕೆ ಬೇಕಾದ ಎಲ್ಲಾ ನಿಬಂಧನೆಗಳನ್ನು ಪೂರ್ಣಗೊಳಿಸಿ. ಸಾಗಾಣೆ ಅನುಮತಿಯನ್ನು ಪಡೆದುಕೊಳ್ಳಿ


ಎರೆಹುಳುವಿನ ಪ್ರಕಾರ ಆರಿಸಿ


ಹೆಚ್ಚುಕಡಿಮೆ 3,000 ಎರೆಹುಳು ಪ್ರಭೇದಗಳಿವೆ. ಒಂದು ಮಣ್ಣಿನಲ್ಲಿರುತ್ತದೆ ಇನ್ನೊಂದು ಆಳವಾದ ಮಣ್ಣಿನ ಪದರದೊಳಗೆ ಇರುತ್ತವೆ ಹೀಗೆ ನಿಮಗೆ ಬೇಕಾದಂತೆ ಹುಳುಗಳ ಆಯ್ಕೆಯನ್ನು ಮಾಡಬಹುದು.


ಇದನ್ನೂ ಓದಿ: ಬೆಂಗಳೂರು ಗ್ರಾಮೀಣ, ಬೆಳಗಾವಿ ಸೇರಿ ಹಲವೆಡೆ ಪೆಟ್ರೋಲ್ ಬೆಲೆ ಇಳಿಕೆ


ಸೀಮಿತ ಹೊಣೆಗಾರಿಕೆ ಕಂಪನಿ (LLC) ಇದು ಉನ್ನತ ಆಯ್ಕೆಯಾಗಿದೆ, ಏಕೆಂದರೆ ಇದು ನಿಮ್ಮ ವೈಯಕ್ತಿಕ ಸ್ವತ್ತುಗಳನ್ನು ಕಾನೂನು ಹಕ್ಕುಗಳಿಂದ ರಕ್ಷಿಸುತ್ತದೆ.


ಎರೆಹುಳುಗಳಿಗೆ ಆಹಾರ ವೇಳಾಪಟ್ಟಿ ರಚಿಸಿ


ಆಹಾರವು 2 ರಿಂದ 1 ಅನುಪಾತವಾಗಿದೆ. 2 ಪೌಂಡ್ ಹುಳುಗಳಿಗೆ ಪ್ರತಿದಿನ 1 ಪೌಂಡ್ ಆಹಾರ ಬೇಕು. ಎರೆಹುಳುಗಳಿಗೆ ಪ್ರತೀದಿನ ಆಹಾರ ನೀಡಿ. ಇದರಿಂದ ಸಾವಯವ ಆಹಾರ ಮೂಲದಿಂದ ಬರುವ ವಾಸನೆ ಅಥವಾ ಹಣ್ಣಿಗೆ ಬರುವ ನೊಣಗಳ ಕಾಟ ಇರುವುದಿಲ್ಲ


ಅಗತ್ಯ ಪರಿಕರಗಳನ್ನು ಖರೀದಿಸಿ


ಎರೆಹುಳು ಕೃಷಿಗೆ ಬೇಕಾದ ಪರಿಕರಗಳು ಸರಳವಾಗಿದೆ. ಹುಳಗಳಿಗೆ ತೊಟ್ಟಿ, ರಂಧ್ರ ಮಾಡಲು ಬೇಕಾದ ಪರಿಕರ, ಕೈಗವಸು, ಗೊಬ್ಬರ ತಯಾರಿಸಲು ಪ್ರತ್ಯೇಕ ಬಿನ್, ಕೃಷಿ ಉಪಕರಣಗಳು ಇತ್ಯಾದಿ


ಹುಳಗಳ ತೊಟ್ಟಿಯನ್ನು ಖುದ್ದಾಗಿ ನಿರ್ಮಿಸಿ


ನೀವೇ ಹುಳಗಳ ತೊಟ್ಟಿಯನ್ನು ನಿರ್ಮಿಸಿ. ಸಣ್ಣದು ಇಲ್ಲವೇ ದೊಡ್ಡದು ಹುಳಗಳ ತೊಟ್ಟಿಯನ್ನು ವ್ಯಾಪಾರಕ್ಕೆ ಅನುಗುಣವಾಗಿ ಆಯ್ಕೆಮಾಡಬಹುದು. ಇವುಗಳಿರುವ ತೊಟ್ಟಿಯು 40 ರಿಂದ 80 ಡಿಗ್ರಿ ಉಷ್ಣಾಂಶದಲ್ಲಿರಲಿ. ಮರ ಇಲ್ಲವೇ ಪ್ಲಾಸ್ಟಿಕ್ ತೊಟ್ಟಿಯನ್ನು ಆರಿಸಬಹುದು. ತೊಟ್ಟಿಗಳ ಕೆಳಭಾಗದಲ್ಲಿ ರಂಧ್ರಗಳನ್ನು ನಿರ್ಮಿಸಿ. ಪ್ಲಾಸ್ಟಿಕ್ ತೊಟ್ಟಿಗಳನ್ನು ಸ್ವಚ್ಛಗೊಳಿಸುವುದು ಸುಲಭವಾಗಿದೆ.


ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್, ಬಿಸಿ ದೋಸೆಯಂತೆ ನಿಮಿಷಕ್ಕೊಂದರಂತೆ ಸೇಲ್!


ತೊಟ್ಟಿಗೆ ಹುಳಗಳನ್ನು ಹಾಕುವುದು


ಕಾಂಪೋಸ್ಟ್ ತೊಟ್ಟಿಗೆ ಹುಳಗಳನ್ನು ಹಾಕುವಾಗ ಆದಷ್ಟು ದೂರದೂರಕ್ಕೆ ಹರಡಿ. ಅವುಗಳು ಮುಕ್ತವಾಗಿ ಸಂಚರಿಸುತ್ತಿರಲಿ. ಹುಳಗಳನ್ನು ಸುದ್ದಿಪತ್ರಿಕೆಯಿಂದ ಮುಚ್ಚಿ. ಬೆಳಕಿಗೆ ಇವುಗಳು ಸಂಕೋಚಗೊಳ್ಳುವುದರಿಂದ ಮುಚ್ಚಿರುವ ಭಾಗದಿಂದಲೇ ಆಹಾರವನ್ನು ಸೇವಿಸುತ್ತವೆ. ಹೆಚ್ಚು ಬೆಳಕಿರುವ ಸ್ಥಳದಲ್ಲಿ ಇವುಗಳು ಕೆಲಸ ಮಾಡುವುದಿಲ್ಲ.


ವ್ಯಾಪಾರವನ್ನು ಮಾರುಕಟ್ಟೆಗೊಳಿಸಿ


ಸ್ಥಳೀಯ ಕೃಷಿ ಇಲಾಖೆಯಲ್ಲಿ ವ್ಯಾಪಾರದ ಹೆಸರು ನೋಂದಾಯಿಸಿಕೊಳ್ಳಿ. ಇದಕ್ಕಾಗಿಯೇ ವೆಬ್‌ಸೈಟ್ ತೆರೆಯಿರಿ ಹಾಗೂ ಸಾಮಾಜಿಕ ಮಾಧ್ಯಮದ ನೆರವನ್ನೂ ಪಡೆದುಕೊಳ್ಳಿ.

First published: