Petrol Online Delivery: ಆನ್​ಲೈನ್​ನಲ್ಲೇ ಪೆಟ್ರೋಲ್ ಮಾರಿ! ಕರ್ನಾಟಕದಲ್ಲಿ ನೀವೇ ಶುರು ಮಾಡಿ!

How to: ಸದ್ಯ ನಮ್ಮ ಕರ್ನಾಟಕದಲ್ಲಿ ಇದು ಹೊಸ ವ್ಯವಹಾರವಾಗಿದೆ. ಆದ್ದರಿಂದ ನಿಮಗೆ ಹೆಚ್ಚು ಸ್ಪರ್ಧೆ ನೀಡುವವರು ಈ ಕ್ಷೇತ್ರದಲ್ಲಿ ಯಾರೂ ಇಲ್ಲ.

ಮನೆಮನೆಗೆ ಪೆಟ್ರೋಲ್ ಡೀಸೆಲ್ ವಿತರಿಸಿ!

ಮನೆಮನೆಗೆ ಪೆಟ್ರೋಲ್ ಡೀಸೆಲ್ ವಿತರಿಸಿ!

  • Share this:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಉದ್ಯೋಗದ ಬದಲು ವ್ಯಾಪಾರಕ್ಕೆ ಆದ್ಯತೆ ನೀಡುತ್ತಿದ್ದಾರೆ. ಉದ್ಯೋಗ ವ್ಯವಹಾರದಿಂದ ಹೆಚ್ಚಿನ ಹಣವನ್ನು (Earn Money) ಗಳಿಸಬಹುದು ಎಂಬ ನಂಬಿಕೆ ದಿನೇ ದಿನೇ  ಬಲವಾಗುತ್ತಿದೆ. ಜೊತೆಗೆ ಅದರಲ್ಲಿ ವೇಗವಾಗಿ ಬೆಳೆಯುವ, ಹಣ ಗಳಿಸುವ ಅನಿಯಮಿತ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಇದರಲ್ಲಿ ಒಬ್ಬ ವ್ಯಕ್ತಿಯು ತನ್ನ ಕೆಲಸಗಳನ್ನು ತನ್ನ ದಿನಚರಿಗೆ ಅನುಗುಣವಾಗಿ ಹೊಂದಿಸಬಹುದು. ಇದರಿಂದ ವ್ಯಾಪಾರದತ್ತ (Business Idea) ಜನರ ಒಲವು ಹೆಚ್ಚುತ್ತಿದೆ. ನೀವು ಸಹ ವ್ಯಾಪಾರ ಮಾಡುವ ಆಲೋಚನೆಯಲ್ಲಿದ್ದರೆ, ನೀವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆನ್‌ಲೈನ್‌ನಲ್ಲಿ (Petrol Diesel sale in Online) ವಿತರಿಸುವ ಬ್ಯುಸಿನೆಸ್ (Startup) ಪ್ರಾರಂಭಿಸಬಹುದು!

ಸದ್ಯ ನಮ್ಮ ಕರ್ನಾಟಕದಲ್ಲಿ ಇದು ಹೊಸ ವ್ಯವಹಾರವಾಗಿದೆ. ಆದ್ದರಿಂದ ನಿಮಗೆ ಹೆಚ್ಚು ಸ್ಪರ್ಧೆ ನೀಡುವವರು ಈ ಕ್ಷೇತ್ರದಲ್ಲಿ ಯಾರೂ ಇಲ್ಲ. ವಾಹನಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ ಈಗ ಪೆಟ್ರೋಲ್, ಡೀಸೆಲ್ ಬೇಡಿಕೆಯೂ ಹೆಚ್ಚುತ್ತಿದೆ. ಆದ್ದರಿಂದ ಈ ವ್ಯವಹಾರದಲ್ಲಿ ಚೆನ್ನಾಗಿ ಹಣ ಗಳಿಕೆಯನ್ನು ಮಾಡಬಹುದು.

ಈ ವ್ಯವಹಾರವನ್ನು ಹೀಗೆ ಪ್ರಾರಂಭಿಸಿ
2016 ರ ವರೆಗೆ, ದೇಶದಲ್ಲಿ ಆನ್​ಲೈನ್​ನಲ್ಲಿ ಪೆಟ್ರೋಲ್ ವಿತರಣೆ ಮಾಡಲು ಅನುಮತಿ ನೀಡಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಸರ್ಕಾರ ಆನ್‌ಲೈನ್‌ನಲ್ಲಿ ಇಂಧನ ವಿತರಣೆಗೆ ಅನುಮತಿ ನೀಡಿದೆ. ನೀವೂ ಕೂಡ ಈ ವ್ಯವಹಾರವನ್ನು ಮಾಡಬೇಕೆಂದಿದ್ದರೆ, ಮೊದಲು ನೀವು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಪೆಟ್ರೋಲಿಯಂ ಪ್ರೊಸೆಸ್ ಇಂಜಿನಿಯರಿಂಗ್ ಸರ್ವಿಸ್ ಕಂ. (ಪೆಸ್ಕೋ) ನಂತಹ ತೈಲ ಕಂಪನಿಗಳನ್ನು ಸಂಪರ್ಕಿಸಬೇಕು.

ಯೋಜನೆಯ ವಿವರವಾದ ಪ್ರಾಜೆಕ್ಟ್ ತಯಾರಿಸಿ
ತೈಲ ಕಂಪನಿಗಳು ನಿಮ್ಮ ಯೋಜನೆಯ ವಿವರವಾದ ಪ್ರಾಜೆಕ್ಟ್ (ಡಿಪಿಆರ್) ವರದಿಯನ್ನು ಕೇಳುತ್ತವೆ. ಈ ವರದಿಯನ್ನು ಬಹಳ ಎಚ್ಚರಿಕೆಯಿಂದ ತಯಾರಿಸಿ ತೈಲ ಕಂಪನಿಗೆ ಸಲ್ಲಿಸಿ. ತೈಲ ಕಂಪನಿಗಳು ನಿಮ್ಮ ಡಿಪಿಆರ್ ಅನ್ನು ಇಷ್ಟಪಟ್ಟರೆ, ಅವರು ಈ ಆನ್‌ಲೈನ್ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಅನುಮತಿ ನೀಡುತ್ತವೆ.

ಡೀಸೆಲ್-ಪೆಟ್ರೋಲ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು, ನೀವು ನಿಮ್ಮದೇ ಆದ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಅನ್ನು ರಚಿಸಬೇಕಾಗುತ್ತದೆ. ಏಕೆಂದರೆ ಅಪ್ಲಿಕೇಶನ್ ಮೂಲಕ ನೀವು ಆನ್‌ಲೈನ್ ಆರ್ಡರ್‌ಗಳನ್ನು ಸ್ವೀಕರಿಸಬಹುದು.

ನೋಯ್ಡಾದಲ್ಲಿ ನಡೆಯುತ್ತಿದೆ ಈ ವ್ಯವಹಾರ
ನೋಯ್ಡಾದಲ್ಲಿ http://Pepfuel.com ಹೆಸರಿನಲ್ಲಿ ಆನ್‌ಲೈನ್ ಪೆಟ್ರೋಲ್-ಡೀಸೆಲ್ ವಿತರಣೆ ನಡೆಯುತ್ತಿದೆ. ಈಗಾಗಲೇ ಪೆಪ್ ಫ್ಯುಯೆಲ್​ನ ವ್ಯವಹಾರ 100 ಕೋಟಿ ದಾಟಿದೆ. ಕಾರಿನಲ್ಲಿ ಪೆಟ್ರೋಲ್ ಖಾಲಿಯಾದ ಮೇಲೆ ಕಂಪನಿಯ ಸಂಸ್ಥಾಪಕರು ಪೆಟ್ರೋಲ್ ಪಂಪ್‌ಗಾಗಿ ಹುಡುಕುತ್ತಿದ್ದರು. 10 ಕಿ.ಮೀ.ವರೆಗೆ ಪೆಟ್ರೋಲ್ ಪಂಪ್ ಸಿಗದೇ ಇದ್ದಾಗ ಕಾರನ್ನು ತಳ್ಳಬೇಕಾಯಿತು. ಅದೇ ದಿನ, ಅವರು ಆನ್‌ಲೈನ್ ಡೀಸೆಲ್-ಪೆಟ್ರೋಲ್ ವಿತರಣೆಯನ್ನು ಮಾಡಲು ಯೋಚಿಸಿದರು. ಇದೇ ಪೆಪ್ ಇಂಧನ ಕಂಪನಿಗೆ ಅಡಿಪಾಯವಾಯಿತು. ಇಂದು ಈ ವ್ಯವಹಾರವು ಯಶಸ್ಸಿನ ಪತಾಕೆಯನ್ನು ಹಾರಿಸುತ್ತಿದೆ.

ಇದನ್ನೂ ಓದಿ: Ghol Fish: ಈ ಮೀನು ಸಿಕ್ಕರೆ ನೀವು ಕೋಟ್ಯಾಧಿಪತಿ! ಯಾವ ಮೀನು? ನಾವೂ ಹಿಡಿಯಬಹುದೇ?

ಇದಲ್ಲದೆ, ನೀವು ಈ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಪ್ರದೇಶದಲ್ಲಿ ಸಮೀಕ್ಷೆಯನ್ನು ಸಹ ಮಾಡಬೇಕಾಗುತ್ತದೆ. ಇದರಿಂದ ಜನರು ಹೇಗೆ ಮತ್ತು ಎಷ್ಟು ತೈಲವನ್ನು ಖರೀದಿಸಲು ಬಯಸುತ್ತಾರೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಇದರ ಹೊರತಾಗಿ, ನಿಮ್ಮ ವ್ಯಾಪಾರವನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಇತರೆಡೆ ಪ್ರಚಾರ ಮಾಡಬೇಕಾಗುತ್ತದೆ. ಇದರಿಂದ ಜನರು ಅದರ ಬಗ್ಗೆ ತಿಳಿದುಕೊಳ್ಳುತ್ತಾರೆ. ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಾರೆ.

ಇದನ್ನೂ ಓದಿ: Kashi Yatra Subsidy: ಕಾಶಿ ಯಾತ್ರೆಗೆ ಸಬ್ಸಿಡಿ ಪಡೆಯುವುದು ಹೇಗೆ?

ಈ ವ್ಯವಹಾರದಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಕಂಪನಿಯಿಂದ ಒಂದೇ ಬಾರಿಗೆ ಸಾಕಷ್ಟು ತೈಲವನ್ನು ಖರೀದಿಸಬೇಕಾಗಿರುವುದು ಇದಕ್ಕೆ ಕಾರಣ. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಗೆ ವಾಹನಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದಲ್ಲದೆ, ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ರಚಿಸಿ ನಿರ್ವಹಣೆ ಮಾಡಲು ಸಹ ಸಾಕಷ್ಟು ಖರ್ಚು ಇದೆ. ಅದೇ ರೀತಿ ಸಾಕಷ್ಟು ಪ್ರಮಾಣದಲ್ಲಿ ಹಣವನ್ನೂ ನೀವು ಗಳಿಸಬಹುದು.
Published by:guruganesh bhat
First published: