Business Ideas: ಕರ್ನಾಟಕದಲ್ಲಿ ಕುರಿಸಾಕಾಣಿಕೆ ಉದ್ಯಮ ಪ್ರಾರಂಭಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದನಗಳಿಗೆ ಬೇಕಾಗಿರುವಂತೆ ಕುರಿಗಳನ್ನು ಸಾಕಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ. ಹಾಗೂ ದನಕರುಗಳನ್ನು ಬೆಳೆಸುವಾಗ ತಗಲುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕುರಿ ಸಾಕಾಣಿಕೆ ಮಾಡಬಹುದಾಗಿದೆ.

  • Trending Desk
  • 2-MIN READ
  • Last Updated :
  • Share this:

ಭಾರತ (India) ದ ದಕ್ಷಿಣ ಭಾಗದಲ್ಲಿ ನೆಲೆಸಿರುವ ಕರ್ನಾಟಕ (Karnataka) ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿಸಾಕಾಣಿಕಾ ಪ್ರದೇಶವಾಗಿ ಗಮನಸೆಳೆಯುತ್ತದೆ. ಮೇಕೆ (Goat) , ಆಡು ಅಥವಾ ಕುರಿಗಳು ತಮ್ಮ ಗಡಸುತನ ಹಾಗೂ ವಾತಾವರಣಕ್ಕೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯದಿಂದಾಗಿ ವೈವಿಧ್ಯಮಯ ಪರಿಸರ ಪ್ರಭಾವವುಳ್ಳಂತಹ ಕರ್ನಾಟಕದಲ್ಲಿ ನಿರಾಯಾಸವಾಗಿ ಹೊಂದಿಕೊಳ್ಳುವಂತಹ ಪ್ರಾಣಿಗಳಾಗಿವೆ. ಈ ಜಾನುವಾರು (Cattle) ಗಳು ಕೇವಲ ಚರ್ಮ ಹಾಗೂ ತುಪ್ಪಳವಲ್ಲದೆ ಆಹಾರ (Food) ದ ಮೂಲಗಳಾಗಿಯೂ ಹೆಚ್ಚು ಜನಪ್ರೀಯವಾಗಿವೆ. ಅಲ್ಲದೆ ಕುರಿಗಳು ಇತರೆ ಜಾನುವಾರುಗಳಿಗೆ ಹೋಲಿಸಿದರೆ ಕಡಿಮೆ ಊಟದ ಜೊತೆಗೆ ಪ್ರತಿ ಪೌಂಡಿಗೆ ಹೆಚ್ಚು ಮಾಂಸ  ಹಾಗೂ ಹಾಲು ನೀಡುವ ಪಶುಗಳಾಗಿದ್ದು ಉತ್ತಮ ಆದಾಯದ ಮೂಲವಾಗಿಯೂ ಗುರುತಿಸಿಕೊಳ್ಳುತ್ತವೆ.


ಕುರಿ ಸಾಕಾಣಿಕೆ ಮಾಡುವುದು ಹೇಗೆ?


ದನಗಳಿಗೆ ಬೇಕಾಗಿರುವಂತೆ ಕುರಿಗಳನ್ನು ಸಾಕಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ. ಹಾಗೂ ದನಕರುಗಳನ್ನು ಬೆಳೆಸುವಾಗ ತಗಲುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕುರಿ ಸಾಕಾಣಿಕೆ ಮಾಡಬಹುದಾಗಿದೆ.


ಕರ್ನಾಟಕದಲ್ಲಿ ಕುರಿ ಸಾಕಾಣಿಕೆ


ಕರ್ನಾಟಕದಲ್ಲಿ ಕುರಿಗಳನ್ನು ಅವುಗಳ ಮಾಂಸ, ಹಾಲು ಹಾಗೂ ತುಪ್ಪಳಕ್ಕಾಗಿ ಸಾಕಾಣಿಕೆ ಮಾಡಲಾಗುತ್ತದೆ. ಪ್ರದೇಶದಲ್ಲಿ ಕುರಿ ಮಾಂಸ ಅಥವಾ ಮಟನ್ ಜನಪ್ರೀಯ ಮಾಂಸ ಭಕ್ಷ್ಯವಾಗಿದ್ದು ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನೂ ಸಹ ಹೊಂದಿರುತ್ತದೆ. ಅಲ್ಲದೆ ಕುರಿ ಹಾಲಿನ ಉದ್ಯಮವು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು ಅದರಿಂದ ಹಲವಾರು ವೈವಿಧ್ಯಮಯ ಡೈರಿ ಉತ್ಪನ್ನಗಳನ್ನು ಸಹ ಉತ್ಪಾದಿಸಲಾಗುತ್ತದೆ. ಹಾಗಾಗಿ ಕುರಿಗಳಿಗೆ ಸ್ಥಳೀಯವಾಗಿ ಮತ್ತು ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ.


ಕರ್ನಾಟಕದಲ್ಲಿ ಕುರಿಸಾಕಾಣಿಕೆಗಿರುವ ಸವಾಲು


ಸಾಕಣಿಕೆ ಉದ್ಯಮ ಆಕರ್ಷಕವಾಗಿದ್ದರೂ ಅದರಲ್ಲಡಗಿರುವ ಅದರದ್ದೆ ಆದ ಸವಾಲು ಇರುವುದು ಸಹಜ. ಕರ್ನಾಟಕದಲ್ಲಿ ಕುರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಇರುವ ಮುಖ್ಯ ಸವಾಲು ಎಂದರೆ ಸಾಕಲು ಯೋಗ್ಯವಾದ ಕುರಿ ತಳಿಯನ್ನು ಹುಡುಕುವುದು.


ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ಉದ್ಯಮಿಗಳು ಆರೋಗ್ಯಕರವಾದ ಹಾಗೂ ಗಟ್ಟಿಮುಟ್ಟಾದ ಗುಣಮಟ್ಟದ ಕುರಿ ತಳಿಗಳನ್ನು ಗುರುತಿಸುವುದಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಸರ್ಕಾರವು ತಳಿ ಅಭಿವೃದ್ಧಿ ಕೇಂದ್ರಗಳು ಹಾಗೂ ಗುಣಮಟ್ಟದ ಕುರಿ ಫಾರ್ಮ್ ಗಳನ್ನು ಸ್ಥಾಪಿಸಿದೆ.


ಇದರ ಜೊತೆಗೆ ಸರ್ಕಾರವು ಕುರಿ ಸಾಕಾಣಿಕೆಯಲ್ಲಿ ತೊಡಗುವ ರೈತರಿಗೆ ವಿವಿಧ ಬಗೆಯ ಪ್ರೋತ್ಸಾಹನ ಬೆಂಬಲಗಳನ್ನೂ ಸಹ ಒದಗಿಸುತ್ತದೆ. ಇದು ತರಬೇತಿ ಕಾರ್ಯಕ್ರಮಗಳು, ಸಾಕಾಣಿಕಾ ತಂತ್ರಗಾರಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರವು ರೈತರಿಗೆ ಪ್ರೋತ್ಸಾಹನ ಹಾಗೂ ಸಬ್ಸಿಡಿಗಳನ್ನು ಸಹ ನೀಡುತ್ತದೆ.'


ಇದನ್ನೂ ಓದಿ: 1947ರಲ್ಲಿ ಟ್ರೈನ್​ ಟಿಕೆಟ್ ಬೆಲೆ ಎಷ್ಟಿದೆ ಗೊತ್ತಾ? ನೋಡಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ!


ಈ ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಲ್ಪಟ್ಟು ಕರ್ನಾಟಕದಲ್ಲಿ ಪ್ರಸ್ತುತ ಕುರಿ ಸಾಕಾಣಿಕೆ ಉದ್ಯಮವು ಒಂದು ಮಹತ್ವದ ಉದ್ಯಮವಾಗಿ ಗುರುತಿಸಿಕೊಂಡಿದೆ. ಈ ಉದ್ಯಮವು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಷ್ಟೇ ಅಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜೀವನೋಪಾಯದ ಮಾರ್ಗವಾಗಿಯೂ ಕೆಲಸ ಮಾಡುತ್ತಿದೆ.


ಕುರಿ ಸಾಕಾಣಿಕೆ ಉದ್ಯಮ ಪ್ರಾರಂಭಿಸುವುದು ಹೇಗೆ?


ಈ ಉದ್ಯಮ ಆರಂಭಿಸುವುದಕ್ಕೂ ಮುನ್ನ ಈ ಕೆಳಗೆ ನೀಡಲಾದ ಅಂಶಗಳ ಬಗ್ಗೆ ಗಮನಹರಿಸುವುದು ಮಹತ್ತರವಾಗಿದೆ.


ಕುರಿಗಳ ಶೆಲ್ಟರ್


ಕುರಿಗಳ ಮೇಲೆ ವಾತಾವರಣದ ಬದಲಾವಣೆಗಳು ಸಾಕಷ್ಟು ಪ್ರಭಾವ ಬೀರುವುದರಿಂದ ಕುರಿಗಳು ವಾಸಿಸಲು ಶೆಲ್ಟರ್ ನಿರ್ಮಾಣ ಪ್ರಮುಖವಾಗಿದೆ. ಹೀಗೆ ನಿರ್ಮಿಸಲಾಗುವ ಕುರಿಗಳ ವಾಸಸ್ಥಳವು ಒಣವಾಗಿದ್ದು, ಸ್ವಚ್ಛವಾಗಿರಬೇಕು. ಸಾಕಷ್ಟು ಗಾಳಿ-ಬೆಳಕು ಆಡುವಂತಿರಬೇಕು. ಇಲ್ಲಿ ಮುಖ್ಯವಾದ ವಿಷಯವೆಂದರೆ ಅದು ಯಾವಾಗಲೂ ತೆರೆದಿರುವ ಅಥವಾ ಮುಚ್ಚಿರುವ ಸ್ಥಿತಿಯಲ್ಲಿರಬಾರದು ಬದಲಾಗಿ ಭಾಗಶಃ ಮಾತ್ರ ಮುಚ್ಚಿರಬೇಕು.


ಕುರಿ ಶೆಲ್ಟರ್ ಅಗಲವು 20 ಅಡಿ ಮೀರುವಂತಿರಬಾರದು ಆದರೆ ಅದು ಎಷ್ಟು ಬೇಕಾದರೂ ಉದ್ದವಾಗಿರಬಹುದು. ಅಲ್ಲದೆ ಕುರಿಗಳಿಗೆ ಸದಾ ಕಾಲ ಕುಡಿಯಲು ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು.


ತಳಿ


ಸಾಮಾನ್ಯವಾಗಿ ಎಲ್ಲರೂ ಉತ್ತಮ ತಳಿಯ ಕುರಿಗಳನ್ನು ಸಾಕ ಬಯಸುತ್ತಾರೆ. ಪ್ರದೇಶಗಳಿಂದ ಪ್ರದೇಶಕ್ಕೆ ತಳಿಗಳು ಬದಲಾದ ಹಾಗೆ ಅವುಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತವೆ. ಹಾಗಾಗಿ ಕರ್ನಾಟಕದ ವಾತಾವರಣಕ್ಕೆ ಹೊಂದುವಂತೆ ಸೂಕ್ತವಾಗಿರುವ ತಳಿಗಳನ್ನು ಗುರುತಿಸಿ ಸಾಕುವುದು ಉತ್ತಮ. ಇದಕ್ಕಾಗಿ ಸಂಬಂಧಿಸಿದ ತಾಂತ್ರಿಕ ಅಧಿಕಾರಿಗಳಿಂದ ಸಲಹೆ ಪಡೆಯಬಹುದು. ಆರಂಭಿಕ ಹಂತದಲ್ಲಿ ಕರ್ನಾಟಕಕ್ಕೆ ಸ್ಥಳೀಯವಾಗಿರುವ ಕುರಿಗಳನ್ನು ಸಾಕುವುದು ಉತ್ತಮ.


ಕರ್ನಾಟಕದ ಪರಿಸ್ಥಿತಿಗೆ ಸೂಕ್ತವಾಗಿರುವ ತಳಿಗಳು


- ಒಸ್ಮಾನಾಬಾದಿ
- ಬೊಯೇರ್
- ಮಲಬರಿ
- ಸಿರೋಹಿ
- ಸನ್ನೆನ್
- ಕಣ್ಣಿ ಆಡು


ಕುರಿ ಮೇವು


ಕುರಿಸಾಕಾಣಿಕೆ ಉದ್ಯಮದ ಮಹತ್ತರ ಗುರಿ ಕುರಿಗಳ ತೂಕವನ್ನು ಹೆಚ್ಚಿಸುವುದಾಗಿದೆ. ನೀವು ಕೊಡುವ ಆಹಾರದ ಗುಣಮಟ್ಟವು ಕುರಿಗಳ ಒಟ್ಟಾರೆ ಬೆಳವಣಿಗೆ ಹಾಗೂ ಅವು ಪಡೆಯುವಂತಹ ತೂಕವನ್ನು ಪ್ರಭಾವಿಸುತ್ತದೆ. ಇದಕ್ಕೆ ನೀಡಲಾಗುವ ಆಹಾರವು ಸಾಕಷ್ಟು ಹಸಿರು, ಒಣ ಹಾಗೂ ಪೊಷಕಾಂಶಯುಕ್ತವಾಗಿರಬೇಕು.


ಕುರಿಗಳ ನಿರ್ವಹಣೆ ಮತ್ತು ಆರೈಕೆ


ಶೆಲ್ಟರ್ ಅನ್ನು ನಿರ್ಮಿಸಿ ಕುರಿಗಳನ್ನು ಸಾಕಿಕೊಂಡ ಹೋದರಾಯಿತು ಎನ್ನುವಷ್ಟು ಸುಲಭದ ಮಾತಲ್ಲ ಇದು. ಕುರಿಗಳ ನಿರ್ವಹಣೆ ಹಾಗೂ ಅವುಗಳ ಆರೈಕೆಯು ಈ ಉದ್ಯಮದಲ್ಲಿ ಗಮನಾರ್ಹವಾಗಿ ನಿರ್ವಹಿಸಬೇಕಾದ ಜವಾಬ್ದಾರಿಯಾಗಿದೆ.


ಕುರಿಗಳು ಒಣ ಪ್ರದೇಶದಲ್ಲಿ ಹೆಚ್ಚಾಗಿ ಇರಬಯಸುತ್ತವೆ. ಹಾಗಾಗಿ ಅವಿರುವ ಪ್ರದೇಶ ಡ್ರೈ ಆಗಿರುವುದಲ್ಲದೆ ಸ್ವಚ್ಛ ಹಾಗೂ ಹೈಜೆನಿಕ್ ಆಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹರೆಯದ ಕುರಿಗಳು, ಗರ್ಭದರಿಸಿದ ಕುರಿಗಳು, ಕ್ಯಾಸ್ಟ್ರೇಟ್ ಮಾಡಲಾದ ಕುರಿಗಳು ತಮ್ಮದೆ ಆದ ಪ್ರತ್ಯೇಕ ವಾಸಿಸುವ ಸ್ಥಳ ಅಥವಾ ಪಂಜರಗಳನ್ನು ಹೊಂದಿರಬೇಕು.

Published by:ವಾಸುದೇವ್ ಎಂ
First published: