Beekeeping Business: ಕರ್ನಾಟಕದಲ್ಲಿ ಜೇನು ಕೃಷಿ ಉದ್ಯಮ ಮಾಡೋದು ಹೇಗೆ? ಏನು? ಎತ್ತ?

ಒಂದು ಜೇನು ಪೆಟ್ಟಿಗೆಯ ಬೆಲೆ ಸುಮಾರು 3500 ರೂ. ಎಂದುಕೊಳ್ಳೋಣ. ಒಟ್ಟು 10 ಜೇನು ಪೆಟ್ಟಿಗೆಗೆ ತಗಲುವ ವೆಚ್ಚ 35,000 ರೂ. ನಿಮಗೆ ಖರ್ಚನ್ನು ಕಳೆದು ಉಳಿಯುವ ನಿವ್ವಳ ಲಾಭ 1,05,000 ರೂ. ಆದಂತಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಎಲ್ಲೋ ಒಂದು ಕಡೆ ನೌಕರಿ ಮಾಡುವದಕ್ಕಿಂತ ಸ್ವಂತ ಉದ್ಯೋಗ ಮಾಡುವುದು ಬಹಳ ಲಾಭದಾಯಕವಾಗುತ್ತಿದೆ. ಹೀಗಾಗಿಯೇ ಗ್ರಾಮೀಣ ಪ್ರದೇಶದ ಜನರು ಕೃಷಿ ಆಧಾರಿತ ವ್ಯವಹಾರಗಳತ್ತ (Agriculture Business ಗಮನ ಹರಿಸುತ್ತಿದ್ದಾರೆ. ನೀವು ಸಹ ಗ್ರಾಮೀಣ ಭಾಗದಲ್ಲಿ (Rural Area) ವಾಸ ಮಾಡುತ್ತಿದ್ದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಗಳಿಸುವಂತಹ ಉದ್ಯೋಗ (Own Business Idea) ಮಾಡಬಹುದು. ಅದರಲ್ಲೂ ಗ್ರಾಮೀಣ ಭಾಗದ ಕೃಷಿ ಹಿನ್ನೆಲೆಯವರಿಗೆ ಜೇನು ಸಾಕಣೆ (Beekeeping Business) ಉತ್ತಮ ಆಯ್ಕೆ. ನಮ್ಮಲ್ಲಿನ ಪರಿಶುದ್ಧ ಜೇನಿಗೆ (Pure Honey) ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆಯಿದೆ.

ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದೆ ಆರಂಭಿಸಿರುವ ಆತ್ಮನಿರ್ಭರ ಯೋಜನಯಡಿ ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಇದರಲ್ಲಿ ಜೇನು ಕೃಷಿಗೆ ಅತ್ಯುತ್ತಮ ಉತ್ತೇಜನ ಸಿಗುತ್ತಿದೆ.

ಯುವಕ ಯುವತಿಯರು ನಿರುದ್ಯೋಗದಿಂದ ಬಳಲುವ ಬದಲು, ಕೇವಲ ನೌಕರಿ ಹುಡುಕುತ್ತ ಕಾಲ ಕಳೆಯುವ ಬದಲು ಜೇನು ಸಾಕಾಣಿಕೆ ಮಾಡಬಹುದು. ಅದೂ ಸ್ವಂತ ಊರಿನಲ್ಲಿ! ಹಚ್ಚ ಹಸಿರಿನ ನಡುವೆ ತುಂಬಾ ಒಳ್ಳೆಯ ಸ್ವಂತ ಉದ್ಯೋಗ ನಡೆಸಬಹುದು.

ಪರಿಶುದ್ಧ ಜೇನಿಗೆ ಭಾರೀ ಬೇಡಿಕೆ!
ಔಷಧಿಗಳಿಂದ ಆಹಾರ ಉತ್ಪನ್ನಗಳವರೆಗೆ ಜೇನುತುಪ್ಪವನ್ನು ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಜೇನುತುಪ್ಪಕ್ಕೆ ಉತ್ತಮ ಬೇಡಿಕೆ ಇದೆ. ಜೊತೆಗೆ ಜೇನುಸಾಕಣೆಯು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪನ್ನವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.

ಪರಾಗಸ್ಪರ್ಶಕ್ಕೂ ಅನುಕೂಲ!
ಜೇನುನೊಣಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತವೆ. ಇದರಿಂದ ಬೆಳೆ ಇಳುವರಿ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಅನೇಕ ರಾಜ್ಯಗಳಲ್ಲಿ ರೈತರು ಸಾಂಪ್ರದಾಯಿಕ ಕೃಷಿಯ ಜೊತೆಗೆ ಜೇನುಸಾಕಣೆಯನ್ನು ಆರಂಭಿಸುತ್ತಿದ್ದಾರೆ. ಇದರ ಮೂಲಕ ಉತ್ತಮ ಹಣ ಗಳಿಸುತ್ತಿದ್ದಾರೆ. ಸರ್ಕಾರವೂ ಅವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.

ತರಬೇತಿಯೂ ಸಿಗುತ್ತದೆ!
ತೋಟ-ಗದ್ದೆಗಳ ನಡುವೆ ಜೇನು ಸಾಕಾಣಿಕೆಯನ್ನು ಜೇನು ಸಾಕಣೆ ಎನ್ನುತ್ತಾರೆ. ಬೆಳೆ ಉತ್ಪಾದನೆಯ ವರ್ಧನೆಗಾಗಿ ಜೇನುಸಾಕಣೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಈ ಯೋಜನೆಯನ್ನು ತಂದಿದೆ. ಜೇನುಸಾಕಣೆ ವಲಯವನ್ನು ಅಭಿವೃದ್ಧಿಪಡಿಸುವುದು, ಬೆಳೆ ಉತ್ಪಾದಕತೆಯನ್ನು ಹೆಚ್ಚಿಸುವುದು, ತರಬೇತಿ ಮತ್ತು ಅರಿವು ನೀಡುವುದು ಯೋಜನೆಯ ಉದ್ದೇಶವಾಗಿದೆ.

ರಾಷ್ಟ್ರೀಯ ಜೇನು ಮಂಡಳಿ (NBB) ನಬಾರ್ಡ್ ಸಹಯೋಗದೊಂದಿಗೆ ಭಾರತದಲ್ಲಿ ಜೇನುಸಾಕಣೆಗೆ ಹಣಕಾಸು ಒದಗಿಸುತ್ತಿದೆ. ಜೇನುಸಾಕಣೆ ವ್ಯವಹಾರಕ್ಕೆ ಸರಕಾರ ಶೇ.80ರಿಂದ 85ರಷ್ಟು ಸಹಾಯಧನ ನೀಡುತ್ತದೆ.

1 ಪೆಟ್ಟಿಗೆಯಿಂದಲೂ ಆರಂಭಿಸಬಹುದು!
ಜೇನುಸಾಕಣೆಯನ್ನು ಮೊದಲು 1 ಪೆಟ್ಟಿಗೆಯಿಂದಲೂ ಆರಂಭಿಸಬಹುದು! 10 ಪೆಟ್ಟಿಗೆಗಳೊಂದಿಗೂ ಪ್ರಾರಂಭಿಸಬಹುದು. 10 ಜೇನು ಪೆಟ್ಟಿಗೆಗಳ ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಂದು ಪೆಟ್ಟಿಗೆಯಲ್ಲಿ 40 ಕೆ.ಜಿ ಜೇನುತುಪ್ಪ ಸಿಕ್ಕರೆ ಜೇನು ಪೆಟ್ಟಿಗೆ ಒಟ್ಟು ಜೇನು 400 ಕೆಜಿ ಜೇನು ಸಿಕ್ಕಂತಾಗುತ್ತದೆ.  ಕೆಜಿಗೆ ಕನಿಷ್ಠ 350 ರೂ.ನಂತೆ ಮಾರಾಟ ಮಾಡಿದರೂ 400 ಕೆಜಿ ಮಾರಾಟ ಮಾಡುವುದರಿಂದ 1.40 ಲಕ್ಷ ಆದಾಯ ಬರುತ್ತದೆ.

ಇದನ್ನೂ ಓದಿ: Business Idea: ಕಡಿಮೆ ಹಣದಿಂದ ಬ್ಯೂಟಿ ಪಾರ್ಲರ್ ಆರಂಭಿಸಿ! ಕಿಸೆ ತುಂಬಾ ಹಣ ಗಳಿಸುವುದು ಹೇಗೆಂದು ತಿಳಿಯಿರಿ

ಒಂದು ಜೇನು ಪೆಟ್ಟಿಗೆಯ ಬೆಲೆ ಸುಮಾರು 3500 ರೂ. ಎಂದುಕೊಳ್ಳೋಣ. ಒಟ್ಟು 10 ಜೇನು ಪೆಟ್ಟಿಗೆಗೆ ತಗಲುವ ವೆಚ್ಚ 35,000 ರೂ. ನಿಮಗೆ ಖರ್ಚನ್ನು ಕಳೆದು ಉಳಿಯುವ ನಿವ್ವಳ ಲಾಭ 1,05,000 ರೂ. ಆದಂತಾಗುತ್ತದೆ.

ಬೋನಸ್ ಆದಾಯ!
ಇದಲ್ಲದೇ ಇನ್ನೊಂದು ಲಾಭವಿದೆ. ಅದುವೇ ಜೇನುನೊಣಗಳ ಸಂಖ್ಯೆಯಲ್ಲಿನ ಹೆಚ್ಚಳ. ನೊಣಗಳ ಸಂಖ್ಯೆ ಹೆಚ್ಚಿದಂತೆ ನೀವು ಇನ್ನಷ್ಟು ಜೇನು ಪೆಟ್ಟಿಗೆ ಇಟ್ಟು ನಿಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಆದಾಯವು ಹೆಚ್ಚುತ್ತದೆ.

ಜೇನುಸಾಕಣೆಯು ಕೇವಲ ಜೇನುತುಪ್ಪ ಮತ್ತು ಮೇಣಕ್ಕೆ ಸಂಬಂಧಿಸಿದ್ದಲ್ಲ. ಜೇನುಮೇಣ, ರಾಯಲ್ ಜೆಲ್ಲಿ, ಪರಾಗ ಅಥವಾ ಬೀ ಗಮ್ ಅನ್ನು ಪರಾಗವಾಗಿ ಉತ್ಪಾದಿಸಬಹುದು. ಈ ಎಲ್ಲಾ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ದೊಡ್ಡಮಟ್ಟದ ಲಾಭ ಗಳಿಸುವ ಅವಕಾಶ
ನೀವು ಜೇನುಸಾಕಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಬಯಸಿದರೆ 100 ಪೆಟ್ಟಿಗೆಗಳನ್ನು ಸಹ ಇಟ್ಟುಕೊಳ್ಳಬಹುದು. ಇದರಿಂದ 4000 ಕೆಜಿ ಜೇನುತುಪ್ಪವು ಉತ್ಪಾದನೆಯಾಗುವ ಸಾಧ್ಯತೆ ಇರುತ್ತದೆ. 400 ಕೆಜಿ ಜೇನು ಕೆಜಿಗೆ 350 ರೂ.ಗೆ ಮಾರಾಟವಾದರೆ 14,00,00,000 ರೂ. ಒಂದು ಪೆಟ್ಟಿಗೆಯ ಬೆಲೆ 3500 ರೂ ಆಗಿದ್ದರೆ ಒಟ್ಟು ವೆಚ್ಚ 3,40,000 ರೂ. ಕೂಲಿ, ಪ್ರಯಾಣದಂತಹ ಇತರೆ ವೆಚ್ಚಗಳಿಗೆ ರೂ. 1,75,000 ಖರ್ಚಾಗುತ್ತದೆ ಎಂದುಕೊಳ್ಳಿ.

ಇದನ್ನೂ ಓದಿ: Short Term Investment: ಕಡಿಮೆ ಅವಧಿಗೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸುವ 4 ಆಯ್ಕೆಗಳು ಇಲ್ಲಿವೆ

ನಿಮಗೆ ಉಳಿಯುವ ನಿವ್ವಳ ಲಾಭ ರೂ.10,15,000! ತಿಂಗಳಿಗೊಮ್ಮೆ ಜೇನು ಮಾರಾಟ ಮಾಡಿ ತಿಂಗಳಿಗೆ ರೂ.70 ಸಾವಿರದಿಂದ 1 ಲಕ್ಷದವರೆಗೂ ಗಳಿಸಬಹುದು!

ಆದರೆ ಇಷ್ಟೆಲ್ಲ ಲಾಭ ಗಳಿಸುವ ಮುನ್ನ ನೀವು ಜೇನಿನ ಬಗ್ಗೆ ತಿಳಿವಳಿಕೆ ಹೊಂದಬೇಕು. ಜೇನುಕೃಷಿಯನ್ನು ಕಲಿಯಬೇಕು. ಸೂಕ್ತ ತಿಳಿವಳಿಕೆಯಿಲ್ಲದೇ ಕೈಹಾಕಬೇಡಿ.
Published by:guruganesh bhat
First published: