• Home
  • »
  • News
  • »
  • business
  • »
  • Business Idea: ಫುಡ್ ಬ್ಯುಸಿನೆಸ್ ಸ್ಟಾರ್ಟ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಕೆಲ ಸಲಹೆಗಳು

Business Idea: ಫುಡ್ ಬ್ಯುಸಿನೆಸ್ ಸ್ಟಾರ್ಟ್ ಮಾಡೋದು ಹೇಗೆ? ಇಲ್ಲಿದೆ ನೋಡಿ ಕೆಲ ಸಲಹೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಚ್‌ಗಳು ಅಂದರೆ ತರಬೇತುದಾರರು ನಿಮಗೆ ವ್ಯಾಪಾರದ ಕುರಿತು ಉತ್ತಮ ತಿಳುವಳಿಕೆಯನ್ನು ನೀಡುತ್ತಾರೆ ಅಂತೆಯೇ ಸಣ್ಣ ಹೂಡಿಕೆಯೊಂದಿಗೆ ವ್ಯಾಪಾರ ಆರಂಭಿಸುವುದು ಹೇಗೆ ಎಂಬ ಸಲಹೆಯನ್ನು ನೀಡುತ್ತಾರೆ.

  • Trending Desk
  • 4-MIN READ
  • Last Updated :
  • Share this:

ಇತ್ತೀಚಿನ ದಿನಗಳಲ್ಲಿ ಆಹಾರ ಉದ್ಯಮ (Food Business) ಕ್ಷೇತ್ರವು ಹೊಸ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯಲ್ಲಿ (Market) ಲಾಭವನ್ನು ಗಳಿಸುತ್ತಿದೆ. ಆದರೆ ಆಹಾರ ಉದ್ಯಮವನ್ನೇ ಪೂರ್ಣ ಪ್ರಮಾಣದ ವ್ಯಾಪಾರವನ್ನಾಗಿಸಲು ನಿಮಗೆ ವ್ಯಾಪಾರದ ಜ್ಞಾನವಿರುವುದು ಅತ್ಯಗತ್ಯವಾಗಿದೆ. ಗ್ರಾಹಕರ ಆದ್ಯತೆಯ ಮೇರೆಗೆ ಆಹಾರ ತಯಾರಕರು (Businessman) ಕಾರ್ಯನಿರ್ವಹಿಸುವುದರಿಂದ ಅದೇ ರೀತಿಯಾಗಿ ನಿಮ್ಮ ಉದ್ಯಮದಲ್ಲೂ ಪ್ರಾಶಸ್ತ್ಯ ನೀಡಬೇಕಾಗುತ್ತದೆ.


ವ್ಯಾಪಾರ ತರಬೇತುದಾರರು ಏಕೆ ಅವಶ್ಯಕ


ಇಂತಹ ಸಲಹೆಗಳನ್ನು ಪಡೆದುಕೊಳ್ಳಲು ಬ್ಯುಸಿನೆಸ್ ಕೋಚ್‌ಗಳು ನಿಮ್ಮ ಸಹಾಯಕ್ಕೆ ಬರುತ್ತಾರೆ. ಕೋಚ್‌ಗಳು ಅಂದರೆ ತರಬೇತುದಾರರು ನಿಮಗೆ ವ್ಯಾಪಾರದ ಕುರಿತು ಉತ್ತಮ ತಿಳುವಳಿಕೆಯನ್ನು ನೀಡುತ್ತಾರೆ ಅಂತೆಯೇ ಸಣ್ಣ ಹೂಡಿಕೆಯೊಂದಿಗೆ ವ್ಯಾಪಾರ ಆರಂಭಿಸುವುದು ಹೇಗೆ ಎಂಬ ಸಲಹೆಯನ್ನು ನೀಡುತ್ತಾರೆ.


ವ್ಯಾಪಾರ ಪರಿಣಿತೆ ಸಾರಿ ಕಿಂಬೆಲ್ ಕುರಿತು


ಇಂತಹುದೇ ವ್ಯಾಪಾರ ಪರಿಣಿತಿಯನ್ನು ಹೊಂದಿರುವವರು ಸಾರಿ ಕಿಂಬೆಲ್. ವ್ಯಾಪಾರೋದ್ಯಮದಲ್ಲಿ ನುರಿತ ತರಬೇತಿ ಹೊಂದಿರುವ ಕಿಂಬೆಲ್ ತರಬೇತುದಾರರಾಗಿ ಹಲವಾರು ವ್ಯಾಪಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಹಾಗೂ ವ್ಯಾಪಾರದಲ್ಲಿ ಯಶಸ್ಸು ಸಾಧಿಸಲು ಕಾರಣರಾಗಿದ್ದಾರೆ.


ಕಿಂಬೆಲ್ ಕೊಲೊರಾಡೋದಲ್ಲಿನ ಸ್ಥಳೀಯ ಸಾವಯವ ಫಾರ್ಮ್‌ಗಾಗಿ ಕೆಲಸ ಮಾಡಿದ ಪರಿಣಿತಿ ಪಡೆದುಕೊಂಡಿದ್ದಾರೆ. ಈ ಫಾರ್ಮ್ ಅತಿದೊಡ್ಡ ಸಮುದಾಯ ಬೆಂಬಲಿತ ಕೃಷಿ ಕಾರ್ಯಕ್ರಮವನ್ನು (CSA) ನಡೆಸಿತು ಮತ್ತು ಪ್ರಮುಖ ಚಿಲ್ಲರೆ ವ್ಯಾಪಾರಿಗಳಿಗೆ ಉತ್ಪನ್ನಗಳನ್ನು ಪೂರೈಸಿತು.


ಈಕೆ ನೇರವಾಗಿ ರೆಸ್ಟೋರೆಂಟ್‌ಗಳು ಹಾಗೂ ರಿಟೇಲ್ ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಹಾಗಾಗಿ ಫುಡ್ ಬ್ಯುಸಿನೆಸ್ ಕ್ಷೇತ್ರದಲ್ಲಿ ಆಕೆ ಅಪಾರ ಜ್ಞಾನ ಗಳಿಸಿಕೊಂಡಿದ್ದಾರೆ.


ಆಹಾರ ಉದ್ಯಮದ ಸಕಲ ತಂತ್ರಗಳನ್ನು ಕಲಿತಿರುವ ಕಿಂಬೆಲ್ ಸಾವಯವ ಫಾರ್ಮ್‌ನಲ್ಲಿ ಕೆಲಸಮಾಡುವುದು, ರೈತರ ಮಾರುಕಟ್ಟೆ ನಿರ್ವಹಣೆ, ಫುಡ್ ಬ್ಯುಸಿನೆಸ್ ನಡೆಸುವುದು ಮೊದಲಾದ ಕ್ಷೇತ್ರಗಳಲ್ಲಿ ಪರಿಣಿತರೊಂದಿಗೆ ತರಬೇತಿಗಳನ್ನು ಪಡೆದುಕೊಂಡಿದ್ದಾರೆ.


ಗ್ರಾಹಕ ಪ್ಯಾಕೇಜ್ಡ್ ಗೂಡ್ಸ್ (CPG) ಕ್ಷೇತ್ರದಲ್ಲಿ ಯಾವುದು ಕೆಲಸ ಮಾಡುತ್ತದೆ ಯಾವುದು ಕೆಲಸ ಮಾಡುವುದಿಲ್ಲ ಎಂಬುದನ್ನು ಕಿಂಬೆಲ್ ಅರಿತುಕೊಂಡಿದ್ದಾರೆ. ಕಿಂಬೆಲ್ ಫುಡ್ ಬ್ಯುಸಿನೆಸ್ ಕ್ಷೇತ್ರದಲ್ಲಿ ಲಾಭ ಗಳಿಸಲು ಕೆಲವೊಂದು ಸಲಹೆಗಳನ್ನು ನೀಡಿದ್ದು ಅವುಗಳನ್ನು ತಿಳಿದುಕೊಳ್ಳೋಣ.


ಆಹಾರ ಉದ್ಯಮ ಕ್ಷೇತ್ರದಲ್ಲಿ ಲಾಭ ಗಳಿಸುವುದು ಹೇಗೆ?


ಕಿಂಬೆಲ್ ಆಹಾರ ಉದ್ಯಮದಲ್ಲಿ ಹೇಗೆ ಲಾಭ ಗಳಿಸಬಹುದು ಎಂಬ ಸಲಹೆಯನ್ನು ನೀಡಿದ್ದು ಸ್ವಾದಿಷ್ಟ ಉತ್ಪನ್ನದ ನಿರ್ಮಾಣ, ಹಣಕಾಸಿನ ಅಂಶಗಳನ್ನು ಮೇಲ್ವಿಚಾರಣೆ ಮಾಡುವುದು ಹಾಗೂ ಗ್ರಾಹಕರಿಗೆ ಉತ್ಪನ್ನವನ್ನು ದೊರಕಿಸಿಕೊಡುವುದು ಇದೆಲ್ಲಾ ಅಂಶಗಳಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದ್ದಾರೆ.


ಆಹಾರ ಉದ್ಯಮದಲ್ಲಿ ಯಶಸ್ಸು ಪಡೆದುಕೊಳ್ಳಲು ಹಲವಾರು ತರಬೇತಿಗಳು, ಕೋರ್ಸ್‌ಗಳು ಲಭ್ಯವಿದ್ದು ಇದರಿಂದ ವ್ಯಾಪಾರವನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬಹುದು ಎಂಬ ಸಲಹೆಯನ್ನು ಕಿಂಬೆಲ್ ನೀಡುತ್ತಾರೆ.


ಇದನ್ನೂ ಓದಿ: 21 ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಿದ ಮೈಕ್ರೋಸಾಫ್ಟ್!




ಉತ್ಪನ್ನದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ


ಯಾವುದೇ ಉದ್ಯಮವನ್ನು ಪೂರ್ಣ ಪ್ರಮಾಣದಲ್ಲಿ ಅಥವಾ ಪಾರ್ಟ್‌ ಟೈಮ್‌ನಲ್ಲಿ ನಿರ್ವಹಿಸಬಹುದು ಎಂಬುದು ಕಿಂಬೆಲ್ ಸಲಹೆಯಾಗಿದೆ. ಸರಿಯಾಗಿ ಉದ್ಯಮವನ್ನು ನಿಭಾಯಿಸಿದರೆ ಅದು ಪೂರ್ಣ ಪ್ರಮಾಣದ ಲಾಭವನ್ನು ಪಡೆದುಕೊಳ್ಳುವ ವೃತ್ತಿಯಾಗಿ ಮಾರ್ಪಡುತ್ತದೆ ಎಂಬುದು ಕಿಂಬೆಲ್ ಹೇಳಿಕೆಯಾಗಿದೆ.


ಆಹಾರ ಉದ್ಯಮ ಕ್ಷೇತ್ರದಲ್ಲಿ ಮುಖ್ಯವಾಗಿ ಹೂಡಿಕೆಗಿಂತಲೂ ಯಾವುದು ಲಾಭವನ್ನು ನೀಡುತ್ತದೆ ಯಾವುದು ನಷ್ಟಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ತಿಳಿದುಕೊಳ್ಳುವುದಾಗಿದೆ ಎಂದು ಕಿಂಬೆಲ್ ಸಲಹೆ ನೀಡುತ್ತಾರೆ.


ಆಹಾರ ಉದ್ಯಮವನ್ನು ಹೇಗೆ ಪ್ರಾರಂಭಿಸಬಹುದು?


ಆಹಾರ ಉದ್ಯಮವನ್ನು ತಮ್ಮ ತಮ್ಮ ಮನೆಗಳಿಂದಲೇ ಆರಂಭಿಸಬಹುದು ಎಂದು ಸಲಹೆ ನೀಡುವ ಕಿಂಬೆಲ್ ಸ್ಥಳೀಯ ರೈತರ ಮಾರುಕಟ್ಟೆಯ ಸಹಾಯ, ಆನ್‌ಲೈನ್ ವೇದಿಕೆಗಳ ಸಹಾಯ, ಸಣ್ಣ ಬ್ರ್ಯಾಂಡ್‌ಗಳ ಮೂಲಕ ಉದ್ಯಮವನ್ನು ಆರಂಭಿಸಬಹುದು ಎಂಬ ಸಲಹೆಯನ್ನು ಆಕೆ ನೀಡುತ್ತಾರೆ.


ಈ ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ ನೀವು ಉತ್ಪನ್ನದ ಕುರಿತು ಸೂಕ್ಷ್ಮವಾಗಿ ಗಮನಿಸಿ ಬೆಲೆಗಳನ್ನು ಹೋಲಿಕೆ ಮಾಡಿ ನಂತರ ವ್ಯಾಪಾರಕ್ಕೆ ಇಳಿಯಬೇಕು ಎಂಬ ಸಲಹೆಯನ್ನು ನೀಡುತ್ತಾರೆ.


ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ 2023 ಇತಿಹಾಸದಲ್ಲೇ ಅತ್ಯಂತ ಕೆಟ್ಟ ವರ್ಷವಾಗಲಿದೆಯಂತೆ, ಏಕೆ?


ಸಾರಿ ಕಿಂಬೆಲ್ ಕೋಚಿಂಗ್


ಸಾರಿ ಕಿಂಬೆಲ್ ಕೋಚಿಂಗ್ ಪೂರ್ಣ-ಸೇವಾ ಏಜೆನ್ಸಿಯಾಗಿದ್ದು, 200 ಕ್ಕೂ ಹೆಚ್ಚು ಉದ್ಯಮಿಗಳಿಗೆ ಆಹಾರ ಉದ್ಯಮ ಕ್ಷೇತ್ರದಲ್ಲಿ ವ್ಯಾಪಾರ ನಡೆಸಲು ಅನುಕೂಲತೆಯನ್ನು ಒದಗಿಸುತ್ತದೆ. ವ್ಯಾಪಾರವನ್ನು ಪ್ರಾರಂಭಿಸುವ ಅಥವಾ ಬೆಳೆಸುವ ಪ್ರಕ್ರಿಯೆಯ ಮೂಲಕ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್, ಆರ್ಥಿಕ ಲಾಭದಾಯಕತೆ, ವಿತರಣೆ ಮತ್ತು ಮಾರಾಟ ತಂತ್ರಗಳಿಗೆ ಮಾರ್ಗದರ್ಶನ ನೀಡಿದೆ.

Published by:Sandhya M
First published: