Electric Scooter Safe: ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಳ್ಳಬಹುದು ಹುಷಾರ್! ಸೇಫ್ ಆಗಿ ಇರಲು ಹೀಗೆ ಮಾಡಿ!

ನೀವು ವಾಹನವನ್ನು ಓಡಿಸುವಾಗ ಬೆಂಕಿ ಕಾಣಿಸಿಕೊಂಡರೆ, ತಕ್ಷಣ ವಾಹನವನ್ನು ನಿಲ್ಲಿಸಬೇಕು. ಮುಂದೆ ಏನು ಮಾಡಬೇಕು? ಹೇಗೆ ಬೆಂಕಿ ನಂದಿಸಬೇಕು? ಇಲ್ಲಿದೆ ಮಾಹಿತಿ

ಎಲೆಕ್ಟ್ರಿಕ್ ಸ್ಕೂಟರ್​ಗೆ ಬೆಂಕಿ

ಎಲೆಕ್ಟ್ರಿಕ್ ಸ್ಕೂಟರ್​ಗೆ ಬೆಂಕಿ

  • Share this:
ಭಾರತದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳು ಹೊತ್ತಿ ಉರಿಯುವ ಪ್ರಕರಣಗಳು (Electric Vehicle Fire) ಹೆಚ್ಚಾಗುತ್ತಿವೆ. ಓಲಾ ಕಂಪನಿಯ (Ola EV Fire) ಹಲವು ಬೈಕ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆಗಳು ಕಳೆದ ಕೆಲವು ತಿಂಗಳಿಂದ ನಡೆಯುತ್ತಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟ, ಖರೀದಿ ಒಲವು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಉದ್ಯಮದ ಮೇಲೆ ಬೆಂಕಿಯು ಕರಿನೆರಳು ಬೀರಿದೆ. ಇವಿ ಬೈಕ್‌ಗಳಲ್ಲಿ ಸುಮಾರು ಒಂದು ತಿಂಗಳಲ್ಲಿ ಐದು ಅಗ್ನಿ ಅವಘಡಗಳು ನಡೆದಿದ್ದು, ಅವುಗಳಲ್ಲಿ ಒಂದರಲ್ಲಿ 80 ವರ್ಷದ ವ್ಯಕ್ತಿಯೊಬ್ಬರು ಪ್ರಾಣ (EV Battery Explosion) ಕಳೆದುಕೊಂಡಿದ್ದಾರೆ. ನಿಮ್ಮ ಬಳಿ ಎಲೆಕ್ಟ್ರಿಕ್ ವಾಹನವಿದ್ದರೆ, ಅದನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ವಾಹನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು (Electric Vehicle Safe) ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಇಂತಹ ಅವಘಡಗಳನ್ನು ತಪ್ಪಿಸಲು, ಇವಿಗಳಲ್ಲಿ ಬಳಸುವ ಬ್ಯಾಟರಿಗಳಿಗೆ ಹೊಸ ಗುಣಮಟ್ಟದ ನಿಯಂತ್ರಣ ಕ್ರಮಗಳನ್ನು ಘೋಷಿಸಲು ಸರ್ಕಾರ ಯೋಜಿಸುತ್ತಿದೆ.  ಉದ್ಯಮದವರು ಸಹ ಟೆಕ್ ಮತ್ತು ಬ್ಯಾಟರಿಗಳ ಸುಧಾರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಬ್ಯಾಟರಿಗಳಿಗೆ ಸಂಬಂಧಿಸಿದಂತೆ ಒಕಿನಾವಾ ಆಟೋಟೆಕ್ ಇತ್ತೀಚೆಗೆ 3,215 ಪ್ರೈಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ.

ಎಚ್ಚರ ವಹಿಸಿ
ಎಲೆಕ್ಟ್ರಿಕ್ ವಾಹನದಲ್ಲಿ ಬ್ಯಾಟರಿಗಳು ಅತಿದೊಡ್ಡ, ಅತ್ಯಂತ ದುಬಾರಿ ಮತ್ತು ಪ್ರಮುಖ ಅಂಶಗಳಾಗಿವೆ. ಇದು ಎಲೆಕ್ಟ್ರಿಕ್ ವಾಹನಗಳ ಹೃದಯವಿದ್ದಂತೆ. ಭಾರತೀಯ ಹವಾಮಾನ ಮತ್ತು ರಸ್ತೆ ಪರಿಸ್ಥಿತಿಗಳು ಆಧಾರದ ಮೇಲೆ ಹಾಗೂ ಬೈಕಿನ ಬ್ಯಾಟರಿ ಆರೈಕೆ ಹಾಗೂ ಚಾರ್ಜಿಂಗ್ ಅವಶ್ಯಕತೆಗಳ ಬಗ್ಗೆ ಎಚ್ಚರ ವಹಿಸಬೇಕು.

ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅಥವಾ ವಾಹನವನ್ನು ಸುರಕ್ಷಿತವಾಗಿರಿಸಲು ಮತ್ತು ಬ್ಯಾಟರಿಗಳ ಬಳಕೆ ಹೆಚ್ಚಿಸಲು ಇಲ್ಲಿ ಕೆಲವು ಸಲಹೆಗಳಿವೆ:

1) ಉಷ್ಣ ನಿರ್ವಹಣೆ
- EV ಬ್ಯಾಟರಿಯಲ್ಲಿನ ಥರ್ಮಲ್ ಮ್ಯಾನೇಜ್ಮೆಂಟ್ ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಅದು ತುಂಬಾ ಶೀತ ಅಥವಾ ತುಂಬಾ ಬಿಸಿ ವಾತಾವರಣದಲ್ಲಿ ಕಾರ್ಯನಿರ್ವಹಿಸುವಂತದ್ದು. ವಿಪರೀತ ತಾಪಮಾನದ ಸಮಯದಲ್ಲಿ ನಿಮ್ಮ ವಾಹನ ಮತ್ತು ಬ್ಯಾಟರಿಗಳನ್ನು ಕಾಪಾಡಿ. ನಿಮ್ಮ ಇವಿ ಸ್ಕೂಟರ್ ಅನ್ನು ಬಿಸಿಲಿನಲ್ಲಿ ಅಥವಾ ಶೀತದಲ್ಲಿ ದೀರ್ಘಕಾಲದವರೆಗೆ ನಿಲ್ಲಿಸುವುದನ್ನು ತಪ್ಪಿಸಿ.
- ನಿಮ್ಮ ಎಲೆಕ್ಟ್ರಿಕ್ ವಾಹನವನ್ನು ನೆರಳಿನಲ್ಲಿ ನಿಲ್ಲಿಸಿ ಅಥವಾ ಪ್ಲಗ್ ಇನ್ ಮಾಡಿ, ಇದರಿಂದ ಅದರ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಗ್ರಿಡ್ ಪವರ್ ಬಳಸಿ ಕಾರ್ಯನಿರ್ವಹಿಸುತ್ತದೆ.

ಇನ್ನೂ ಹೀಗೆಲ್ಲ ಇದೆ
- ನಿರ್ದಿಷ್ಟ ಬ್ಯಾಟರಿ ಪ್ರಕಾರಗಳಿಗೆ ಮೂಲ ಮತ್ತು ಅಧಿಕೃತ ಚಾರ್ಜರ್‌ಗಳನ್ನು ಮಾತ್ರ ಬಳಸಿ.
- ಕೋಣೆಯ ಉಷ್ಣಾಂಶದಲ್ಲಿ ಬ್ಯಾಟರಿಗಳನ್ನು ಇರಿಸಿ.
- ವಾಹನ ಓಡಿಸಿ ಬಂದ ತಕ್ಷಣ ಬ್ಯಾಟರಿಗಳನ್ನು ಚಾರ್ಜ್ ಮಾಡಬೇಡಿ. ಚಾರ್ಜ್ ಮಾಡುವ ಮೊದಲು ಬ್ಯಾಟರಿಗಳನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ
- ಬ್ಯಾಟರಿ ಮತ್ತು ಚಾರ್ಜರ್ ಅನ್ನು ಸ್ವಚ್ಛ, ಶುಷ್ಕ ಮತ್ತು ಗಾಳಿ ಇರುವ ಸ್ಥಳದಲ್ಲಿ ಇರಿಸಿ

- ಬ್ಯಾಟರಿ ಹಾನಿಗೊಳಗಾಗಿದ್ದರೆ ಅಥವಾ ನೀರಿನ ಒಳಹರಿವು ಕಂಡುಬಂದರೆ, ತಕ್ಷಣವೇ ಅದನ್ನು ಪ್ರತ್ಯೇಕಿಸಿ ನಿಮ್ಮ ಡೀಲರ್‌ಗೆ ತಿಳಿಸಿ.

ಇದನ್ನೂ ಓದಿ: Elon Musk: 14 ವರ್ಷದ ಎಲಾನ್ ಮಸ್ಕ್ ತಮ್ಮ ತಾಯಿಗೆ ನೀಡಿದ ಸಲಹೆ ಬ್ರೋಕರ್​ಗಳನ್ನೇ ಬೆಚ್ಚಿ ಬೀಳಿಸಿತ್ತು!

- ನೀವು ವಾಹನವನ್ನು ಓಡಿಸುವಾಗ ಬೆಂಕಿ ಕಾಣಿಸಿಕೊಂಡರೆ, ತಕ್ಷಣ ವಾಹನವನ್ನು ನಿಲ್ಲಿಸಬೇಕು. ಲಿಥಿಯಂ ಬ್ಯಾಟರಿ ಬೆಂಕಿಯನ್ನು ನೀವೇ ನಂದಿಸಲು ಪ್ರಯತ್ನಿಸದೆ ತುರ್ತು ಸೇವೆಗಳಿಗೆ ಕರೆ ಮಾಡಿ.

2) ಕಾಲಕಾಲಕ್ಕೆ ವಾಹನದ ಬ್ಯಾಟರಿಗಳನ್ನು ಪರಿಶೀಲಿಸಿ
ಎಲೆಕ್ಟ್ರಿಕ್ ವಾಹನವನ್ನು ನಿಲ್ಲಿಸಿದರೆ ಮತ್ತು ದೀರ್ಘಕಾಲದವರೆಗೆ ಬಳಕೆಯಲ್ಲಿಲ್ಲದಿದ್ದರೆ ಬ್ಯಾಟರಿ ಮಟ್ಟಗಳು ಖಾಲಿಯಾಗಬಹುದು. ಆದ್ದರಿಂದ, ನೀವು ಅದನ್ನು ಕೊನೆಯದಾಗಿ ಯಾವಾಗ ಚಾರ್ಜ್ ಮಾಡಿದ್ದೀರಿ ಎಂಬುದರ ಬಗ್ಗೆ ಗಮನವಹಿಸಿ.

3) ಬ್ಯಾಟರಿಗಳನ್ನು ಖಾಲಿ ಅಥವಾ ಪೂರ್ತಿಯಾಗಿ ಚಾರ್ಜ್ ಮಾಡುವುದನ್ನು ತಪ್ಪಿಸಿ
ನಿಮ್ಮ ವಾಹನದ ಬ್ಯಾಟರಿಯನ್ನು ಯಾವಾಗಲೂ 20-80% ನಡುವೆ ಇರಿಸಿಕೊಳ್ಳಲು ಪ್ರಯತ್ನಿಸಿ. ಪುನರಾವರ್ತಿತವಾಗಿ ಬ್ಯಾಟರಿಯನ್ನು ಪೂರ್ಣವಾಗಿ ಚಾರ್ಜ್ ಮಾಡುವುದರಿಂದ ಬ್ಯಾಟರಿ ವೇಗವಾಗಿ ಕ್ಷೀಣಿಸುತ್ತದೆ. ಆದರೆ ದೀರ್ಘ ಪ್ರಯಾಣಗಳಿಗೆ ಹೋಗುವಾಗ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

4) ನಿಯಮಿತ, ಸಣ್ಣ ಪ್ರವಾಸಗಳಿಗೆ ನಿಮ್ಮ ವಾಹನವನ್ನು ತೆಗೆದುಕೊಳ್ಳಿ
ಹಲವು ದಿನಗಳವರೆಗೆ ವಾಹನವನ್ನು ಓಡಿಸದೇ ಇರಿಸಬೇಡಿ. ಪೆಟ್ರೋಲ್ ಅಥವಾ ಡೀಸೆಲ್ ಕಾರುಗಳಂತೆಯೇ, ವಾಹನವನ್ನು ಆಗೊಮ್ಮೆ ಈಗೊಮ್ಮೆ ಡ್ರೈವ್ ಮಾಡುವುದು ವಾಹನದ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Alternative to Plastic: ಮೀನುಗಾರರು ಹಣ ಗಳಿಸೋಕೆ ಹೊಸ ಉಪಾಯ! ಸಮುದ್ರದಲ್ಲಿ ಸಿಕ್ತು ಪ್ಲಾಸ್ಟಿಕ್​ಗೆ ಪರ್ಯಾಯ!

5) ವೇಗದ ಚಾರ್ಜಿಂಗ್ ತಪ್ಪಿಸಿ
ವಾಹನದ ಬ್ಯಾಟರಿಗಳು ಶೀಘ್ರದಲ್ಲೇ ಖಾಲಿಯಾಗುತ್ತಿದ್ದರೆ ವೇಗದ ಚಾರ್ಜಿಂಗ್ ಉತ್ತಮವಾಗಿದೆ. ಆದರೂ, ಇದು ಕಡಿಮೆ ಅವಧಿಯಲ್ಲಿ ಬ್ಯಾಟರಿಗಳಿಗೆ ಹೆಚ್ಚು ಕರೆಂಟ್ ಅನ್ನು ನೀಡುತ್ತದೆ. ಇದು ನಿಮ್ಮ EV ಬ್ಯಾಟರಿಯನ್ನು ವೇಗವಾಗಿ ದುರ್ಬಲಗೊಳಿಸುತ್ತದೆ.
Published by:guruganesh bhat
First published: