ಬ್ಯುಸಿನೆಸ್ (Business) ಮಾಡಬೇಕು, ಹೆಚ್ಚು ಹಣ (Money) ಸಂಪಾದಿಸಬೇಕು ಎಂಬುದು ಹೆಚ್ಚಿನವರ ಹಂಬಲವಾಗಿರುತ್ತದೆ. ಬ್ಯುಸಿನೆಸ್‌ನಲ್ಲಿ ಹಣ ಹೂಡಿಕೆ (Money Investment) ಹೆಚ್ಚು ಮಾಡಬೇಕಾಗುತ್ತದೆ ಒಮ್ಮೊಮ್ಮೆ ಬ್ಯುಸಿನೆಸ್‌ನಿಂದ ವಿಪರೀತ ಖರ್ಚಾಗುತ್ತದೆ (Expense) ಎಂಬ ಭಾವನೆ ಕೂಡ ತಲೆದೋರಬಹುದು. ಆದರೆ ನೀವು ಹೂಡಿಕೆ ಮಾಡಿದ ಹಣ ನಿಮ್ಮ ಕೈಸೇರುತ್ತಿದ್ದಂತೆ ಲಾಭ ಗಳಿಸಲು ಆರಂಭಿಸುತ್ತಿದ್ದಂತೆಯೇ ವ್ಯಾಪಾರಕ್ಕೆ ಖರ್ಚು ಮಾಡಿದ್ದು ಸಾರ್ಥಕ ಎಂಬ ಮನೋಭಾವ ತಲೆದೋರುತ್ತದೆ. ಈ ಸಮಯದಲ್ಲಿ ಹಣವನ್ನು ಉಳಿತಾಯ (Money Saving) ಮಾಡುವುದು ಬುದ್ಧಿವಂತಿಕೆಯಾಗಿದೆ ಎಂಬುದು ಆರ್ಥಿಕ ತಜ್ಞರ ಸಲಹೆಯಾಗಿದೆ.
ಹಣ ಸಂಗ್ರಹಿಸುವತ್ತ ಗಮನ ಹರಿಸುವುದು ಮುಖ್ಯ
ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿದೆ ಹಾಗೂ ಲಾಭ ಗಳಿಸುತ್ತಿದೆ ಎಂಬುದು ಅನ್ನಿಸಿದೊಡನೆ ಹಣ ಸಂಗ್ರಹಿಸುವತ್ತ ಗಮನ ಹರಿಸಿ ಎಂಬುದು ತಜ್ಞರ ಸೂಚನೆಯಾಗಿದೆ. ಈ ಉಳಿಸಿದ ಹಣ ನಿಮ್ಮ ವ್ಯಾಪಾರವನ್ನು ಇನ್ನಷ್ಟು ವೃದ್ಧಿಗೊಳಿಸುತ್ತದೆ ಹಾಗೂ ಉನ್ನತೀಕರಣಗೊಳಿಸುತ್ತದೆ ಎಂಬುದು ತಜ್ಞರ ಸಲಹೆಯಾಗಿದೆ.
ಬ್ಯುಸಿನೆಸ್‌ನಲ್ಲಿ ಹಣ ಉಳಿಸುವುದು ಹೇಗೆ ಎಂಬುದನ್ನು ನೀವು ಅರಿತುಕೊಂಡಿರಬೇಕಾಗುತ್ತದೆ. ಅದಕ್ಕಾಗಿ ಇಲ್ಲಿದೆ ಕೆಲವೊಂದು ಟಿಪ್ಸ್
ಕ್ರೆಡಿಟ್ ಆಧಾರಿತ ಸಾಲ
ಹೆಚ್ಚಿನ ಬ್ಯುಸಿನೆಸ್‌ಗೆ ಫಂಡಿಂಗ್ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಫಂಡಿಂಗ್ ಸುಲಭವಾಗಿ ಕೈ ಸೇರುತ್ತದೆ.
ಇಂತಹ ಸಾಲಗಳು ನಿಮಗೆ ಹಣ ಉಳಿತಾಯ ಮಾಡಲು ನೆರವಾಗುತ್ತವೆ. ಕ್ರೆಡಿಟ್ ಲೋನ್ ಕಂಪನಿಗಳು ಸಾಲ ನೀಡುವಾಗ ಒಂದು ನಿರ್ದಿಷ್ಟ ಅವಧಿಯಲ್ಲಿ ಆ ಸಾಲ ತೀರಿಸಲು ನೀವು ಬದ್ಧರಾಗಿರುತ್ತೀರಿ.
ನಿಗದಿತ ಅವಧಿಯಲ್ಲಿ ಸ್ಥಿರ ಪಾವತಿಗಳನ್ನು ಮಾಡುತ್ತೀರಿ. ಸಾಲದ ಅವಧಿಯ ಕೊನೆಯಲ್ಲಿ, ಮೊತ್ತವನ್ನು ಪಡೆದುಕೊಳ್ಳಬಹುದು ಹಾಗೂ ನಿಮಗೆ ಬೇಕಾದ ವ್ಯಾಪಾರದಲ್ಲಿ ಹಣ ತೊಡಗಿಸಿಕೊಳ್ಳಬಹುದು.
ವ್ಯಾಪಾರ ಪರಿಕರಗಳ ವೆಚ್ಚವನ್ನು ತಗ್ಗಿಸಲು ನೋಡಿ
ಕಟ್ಟಡದ ಗುತ್ತಿಗೆಗಳು, ವಿದ್ಯುತ್, ಉಪಕರಣಗಳು ಮತ್ತು ಇತರ ಅಗತ್ಯತೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಆದಷ್ಟು ತಗ್ಗಿಸಿ. ಉತ್ತಮ ಡೀಲ್‌ಗಳನ್ನು ಹುಡುಕಲು ಶಾಪಿಂಗ್ ಮಾಡಿ. ಕಡಿಮೆ ಖರ್ಚಿನಲ್ಲಿ ಉತ್ಕೃಷ್ಟ ಪರಿಕರಗಳನ್ನು ಹೇಗೆ ಖರೀದಿಸಬಹುದು ಎಂಬುದನ್ನು ಪರಿಶೀಲಿಸಿ. ಅನಗತ್ಯ ಖರ್ಚುಗಳಿಗೆ ವಿದಾಯ ಹೇಳಿ.
ಖರ್ಚುವೆಚ್ಚಗಳನ್ನು ಲೆಕ್ಕಾಚಾರ ಮಾಡಿ
ಹಣ ಬಂದಷ್ಟೇ ವೇಗವಾಗಿ ಖರ್ಚಾಗುತ್ತದೆ. ಇದರಿಂದ ಹಾನಿಯುಂಟಾಗುವುದು ವ್ಯಾಪಾರದ ಮಾಲೀಕರಿಗೆ ಹಾಗಾಗಿ ಲಾಭಗಳಿಸುವ ಸಮಯದಲ್ಲಿ ಹಣವನ್ನು ಉಳಿತಾಯ ಮಾಡುವ ವಿಧಾಗಳತ್ತ ಕೂಡ ಗಮನಹರಿಸಬೇಕಾಗುತ್ತದೆ.
ಖರ್ಚು ವೆಚ್ಚಗಳನ್ನು ಲೆಕ್ಕಾಚಾರ ಮಾಡುವ ಮೂಲಕ ಹಣಕಾಸಿನ ಮೇಲ್ವಿಚಾರಣೆ ಮಾಡಿ. ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್ ವಿವರ, ವ್ಯಾಪಾರಕ್ಕೆ ಅಗತ್ಯವಿಲ್ಲದ ಸಾಲಗಳ ವಿವರ, ನಿಯತಕಾಲಿಕೆಗಳಿಗೆ ಅನಗತ್ಯವಾಗಿ ಚಂದಾದಾರಾಗಿರುವುದು ಹೀಗೆ ಬೇಡದೇ ಇರುವ ಖರ್ಚುವೆಚ್ಚಗಳನ್ನು ತಗ್ಗಿಸಿ.
ವ್ಯಾಪಾರ ಪ್ರಯಾಣ ಮಿತಿಗೊಳಿಸಿ
ಬ್ಯುಸಿನೆಸ್ ಪ್ರಯಾಣಗಳು ವಾರ್ಷಿಕವಾಗಿ ಹೆಚ್ಚಿನ ಖರ್ಚುವೆಚ್ಚಗಳಿಗೆ ಕಾರಣವಾಗಿವೆ. ನಿಮ್ಮ ತಂಡದೊಂದಿಗೆ ಮಾತುಕತೆ ನಡೆಸಲು, ಪ್ರಾಜೆಕ್ಟ್‌ಗಳ ಬಗ್ಗೆ ವಿವರ ಸಂಗ್ರಹಿಸಲು ಹೆಚ್ಚಾಗಿ ಪ್ರಯಾಣಿಸುವವರು ನೀವಾಗಿದ್ದೀರಿ ಎಂದಾದಲ್ಲಿ ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್‌ಗಳನ್ನು ಬಳಸಿ. ಅಗತ್ಯವಿದ್ದರೆ ಮಾತ್ರವೇ ಪ್ರಯಾಣಿಸಿ.
ಕ್ಲೈಂಟ್ ಮೀಟಿಂಗ್‌ಗಳನ್ನು ನಡೆಸಲು ನೀವು ಪ್ರಯಾಣವೇ ಮಾಡಬೇಕು ಎಂದಿಲ್ಲ ಆನ್‌ಲೈನ್ ಮೀಟಿಂಗ್‌ಗಳನ್ನು ನಡೆಸಬಹುದು ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಿ ಕೂಡ ಹೂಡಿಕೆದಾರರು, ಸಂಸ್ಥೆಯ ಉದ್ಯೋಗಿಗಳನ್ನು ಭೇಟಿ ಮಾಡಬಹುದಾಗಿದೆ.
ಮಾರುಕಟ್ಟೆ ತಂತ್ರಗಳನ್ನು ವಿಮರ್ಶಿಸಿ
ಟಿವಿ, ಆಡಿಯೋ ಹಾಗೂ ಸುದ್ದಿಪತ್ರಿಕೆಗಳಲ್ಲಿ ವ್ಯಾಪಾರೀ ಸಂಬಂಧಿತ ಜಾಹೀರಾತುಗಳನ್ನು ನೀಡುವುದು ಖರ್ಚುದಾಯಕವಾಗಿದೆ. ಮಾರುಕಟ್ಟೆ ಎಂಬುದು ನೀವೆಣಿಸಿದಂತೆ ಹೆಚ್ಚು ಖರ್ಚಿನದ್ದಲ್ಲ.
ಇದನ್ನೂ ಓದಿ: Pension Scheme: ಪ್ರತಿ ದಿನ 200 ರೂಪಾಯಿ ಉಳಿಸಿ, ತಿಂಗಳಿಗೆ 50 ಸಾವಿರ ಪಿಂಚಣಿ ಪಡೆಯಿರಿ!
ನಿಮ್ಮ ಬಜೆಟ್ ಅನ್ನು ಪುನರ್ ವಿಮರ್ಶಿಸುವ ಮೂಲಕ ಹಾಗೂ ಡಿಜಿಟಲ್ ಮಾರುಕಟ್ಟೆ ತಂತ್ರಜ್ಞರೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಕಡಿಮೆ ಬಜೆಟ್‌ನಲ್ಲೂ ವ್ಯಾಪಾರವನ್ನು ಮಾರ್ಕೆಟಿಂಗ್ ಮಾಡಬಹುದು.
ಸಾಮಾಜಿಕ ತಾಣಗಳು, ಗೂಗಲ್ ಜಾಹೀರಾತುಗಳು, ಇಮೇಲ್ ಮಾರ್ಕೆಟಿಂಗ್ ಹೀಗೆ ಕಡಿಮೆ ವೆಚ್ಚದ ಮಾರ್ಕೆಟಿಂಗ್ ತಂತ್ರಗಳನ್ನು ಬ್ಯುಸಿನೆಸ್‌ನ ಜಾಹೀರಾತಿಗೆ ಬಳಸಿ. ಈ ವಿಧಾನಗಳು ಟಾರ್ಗೆಟ್ ಪ್ರೇಕ್ಷಕರನ್ನು ಬೇಗನೇ ತಲುಪುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ