China Economy: ಜಾಗತಿಕ ಆರ್ಥಿಕತೆಯನ್ನು ಉಳಿಸುವ ಬಗೆ ಹೇಗೆ? ಚೀನಾದ ಧೋರಣೆಗೆ ವಿಶ್ವದ ಇತರ ದೇಶಗಳ ವಿರೋಧ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂತರಾಷ್ಟ್ರೀಯ ಹಣಕಾಸು ನಿಧಿ ಚೀನಾಗೆ ನೆರವು ನೀಡಲು ಮನಸ್ಸು ಮಾಡಿದೆ. ಇದು ಹೇಗೆ ಸಾಧ್ಯ? ಹಾಗಿದ್ದರೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಯೊಂದು ದೇಶದ ನೆರವಿಗೂ ಹಣಕಾಸು ನಿಧಿ ಮುಂದಾಗಬೇಕು ಎಂದು ಕಾಂತ್ ತಿಳಿಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಸಾಲದ ಸುಳಿಯಲ್ಲಿ ಬಳಲುತ್ತಿರುವ ಚೀನಾದ (China) ನೆರವಿಗೆ ಅಂತರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಮುಂದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ದೇಶವೇ ಸಾಲವನ್ನು ತೀರಿಸಲು ಹಣಕಾಸು ನಿಧಿಯ ನೆರವನ್ನು ಪಡೆದುಕೊಂಡರೆ ಜಾಂಬಿಯಾ ಹಾಗೂ ಶ್ರೀಲಂಕಾದಂತಹ (Srilanka) ದೇಶಗಳಿಗೆ ನೆರವು ಹೇಗೆ ದೊರೆಯಲು ಸಾಧ್ಯ ಎಂದು ನೀತಿ ಆಯೋಗ್‌ನ ಮಾಜಿ ಸಿಇಒ ಅಮಿತಾಬ್ ಕಾಂತ್ ಪ್ರಶ್ನಿಸಿದ್ದಾರೆ. ಹಾಗಾಗಿ ಚೀನಾ ಸಾಲದ (China Loan) ವಿವರಗಳನ್ನು ಪಾರದರ್ಶಕ ನೆಲೆಯಲ್ಲಿ ಮರುವಿನ್ಯಾಸಗೊಳಿಸಬೇಕಾಗಿದೆ ಹಾಗೂ ತನ್ನ ಆರ್ಥಿಕ ಸಂಕಷ್ಟಗಳ ಹೊಣೆಯನ್ನು ಹೊರಬೇಕಾಗಿದೆ ಎಂದು ಭಾರತ ಕರೆ ನೀಡಿದೆ. ಚೀನಾ ಮುಕ್ತವಾಗಿ ತನ್ನ ಸಾಲದ ಬಗ್ಗೆ ಮಾಹಿತಿ ನೀಡಬೇಕಾಗಿದ್ದು ಚೀನಾದ ಸಾಲದ ಪ್ರಮಾಣವೇನು ಹಾಗೂ ಅದನ್ನು ತೀರಿಸುವ ಬಗೆ ಹೇಗೆ ಎಂಬುದನ್ನು ಮುಕ್ತವಾಗಿ ತಿಳಿಸಬೇಕಾಗಿದೆ ಎಂದು ಕಾಂತ್ ತಿಳಿಸಿದ್ದಾರೆ.
ಚೀನಾಗೆ ನೆರವು ನೀಡುವ ಉದ್ದೇಶವೇನು?


ಅಂತರಾಷ್ಟ್ರೀಯ ಹಣಕಾಸು ನಿಧಿ ಚೀನಾಗೆ ನೆರವು ನೀಡಲು ಮನಸ್ಸು ಮಾಡಿದೆ. ಇದು ಹೇಗೆ ಸಾಧ್ಯ? ಹಾಗಿದ್ದರೆ ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಯೊಂದು ದೇಶದ ನೆರವಿಗೂ ಹಣಕಾಸು ನಿಧಿ ಮುಂದಾಗಬೇಕು ಎಂದು ಕಾಂತ್ ತಿಳಿಸಿದ್ದಾರೆ. ಚೀನಾದ ಈ ಧೋರಣೆ ಇನ್ನಿತರ ಬಡರಾಷ್ಟ್ರಗಳಿಗೆ ಬೆಂಬಲ ದೊರೆಯದಂತೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.


ಹಣಕಾಸು ನಿಧಿಯ ಯೋಜನೆ


ವಿಶ್ವದ 60% ದೇಶಗಳು ಬಡ ರಾಷ್ಟ್ರಗಳಾಗಿದ್ದು ಸಾಲದ ಒತ್ತಡದ ಹೆಚ್ಚಿನ ಅಪಾಯದಲ್ಲಿದೆ ಎಂದು ಹಣಕಾಸು ನಿಧಿ ಡೇಟಾ ತಿಳಿಸಿದೆ.

ಇಂತಹ ಸನ್ನಿವೇಶವನ್ನು ಎದುರಿಸಲೆಂದೇ ಜಿ-20 ಸಾಮಾನ್ಯ ಯೋಜನೆಯೊಂದನ್ನು ಮುಂದಿಟ್ಟಿದ್ದು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ದೇಶಗಳು ತಮ್ಮ ಸಾಲಗಳನ್ನು ಮರುರಚಿಸುವ ಕ್ರಮಕ್ಕೆ ಕರೆನೀಡಿದೆ. ಆದರೆ ಈ ವಿಷಯದಲ್ಲಿ ಚೀನಾ ಪ್ರತ್ಯೇಕ ಧೋರಣೆಯನ್ನು ಅನುಸರಿಸಿದ್ದು ಬಹುಪಕ್ಷೀಯ ಸಾಲದಾತರ ಸಾಲಗಳನ್ನು ಪುನರ್ ರಚನಾ ಯೋಜನೆಗಳಲ್ಲಿ ಸೇರಿಸಬೇಕೆಂಬ ಡ್ರ್ಯಾಗನ್ ಆಗ್ರಹಕ್ಕೆ ವಿಶ್ವ ಬ್ಯಾಂಕ್ ತಡೆಯೊಡ್ಡಿದೆ.


ಚೀನಾದ ಕ್ರಮಕ್ಕೆ ವಿರೋಧ


ಹಣಕಾಸು ನಿಧಿಯಿಂದ ಒಬ್ಬಂಟಿಯಾಗಿ ನೆರವು ಪಡೆಯುತ್ತಿರುವ ಚೀನಾದ ನಿರ್ಧಾರವನ್ನು ಸಾಂಪ್ರದಾಯಿಕ ಪಾಶ್ಚಿಮಾತ್ಯ ಸಾಲದಾತರು ವಿರೋಧ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Elon Musk ಪ್ರೈವೆಟ್​ ಜೆಟ್​ ಬೆಲೆಯಲ್ಲಿ, ನಿತ್ಯಾನಂದನ ಕೈಲಾಸನೇ ಕೊಂಡುಕೊಳ್ಳಬಹುದಿತ್ತು!


ವಿಷಯ ಪ್ರಸ್ತಾವನೆಯಾಗಲು ಕಾರಣವೇನು?


ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕ್ ಜಾಗತಿಕ ಸಾಲ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಿದ್ದು ಚೀನಾ ಸೇರಿದಂತೆ ಸಾಲಗಳ ಸುಸ್ಥಿರ ಪುನರ್‌ರಚನೆಗೆ ಸಾಲ ಪಡೆಯುವ ದೇಶಗಳನ್ನು ಒಟ್ಟುಗೂಡಿಸುವ ಉದ್ದೇಶ ಹೊಂದಿದೆ.


ಬಡರಾಷ್ಟ್ರಗಳ ಸಾಲದ ಅಂಕಿಅಂಶಗಳು


ಡಿಸೆಂಬರ್‌ನಲ್ಲಿ ವಿಶ್ವ ಬ್ಯಾಂಕ್ ಪ್ರಸ್ತುತಪಡಿಸಿರುವ ಅಂಕಿಅಂಶಗಳ ಪ್ರಕಾರ 2021 ರ ಅಂತ್ಯದ ವೇಳೆಗೆ 75 ಬಡಒರಾಷ್ಟ್ರಗಳು $ 326 ಶತಕೋಟಿ ಸಾಲವನ್ನು ತಮ್ಮ ಸಾಲದಾತರಿಗೆ ಬಾಕಿ ಇರಿಸಿವೆ ಎಂದು ವರದಿ ನೀಡಿವೆ.


ವಿಶ್ವ ಬ್ಯಾಂಕ್‌ನ ಹೇಗೆ ಯೋಜನೆ ರೂಪಿಸಬೇಕಾಗಿದೆ?


ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ವಿಶ್ವ ಬ್ಯಾಂಕ್ ಹಾಗೂ ಹಣಕಾಸು ನಿಧಿಗಳಿಂದ ಸಹಾಯ ಪಡೆದುಕೊಂಡರೆ ಬಡ ರಾಷ್ಟ್ರಗಳ ಗತಿ ಏನು ಎಂಬುದು ಚರ್ಚೆಗೆ ಗ್ರಾಸವಾಗಿದೆ. ಇಂತಹ ರಾಷ್ಟ್ರಗಳ ಸಾಲಗಳನ್ನು ಪುನರ್ ರಚಿಸಬೇಕಾಗಿದೆ. ಹಾಗೂ ಈ ಸಾಲಗಳ ಬಗ್ಗೆ ಪುನರ್ ವಿಮರ್ಶೆ ನಡೆಸಬೇಕಾಗಿದೆ ಎಂದು ಕಾಂತ್ ತಿಳಿಸಿದ್ದಾರೆ. ಕೆಲವು ಸಾಲವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಭಿನ್ನಾಭಿಪ್ರಾಯಗಳು ಎದುರಾಗಿದ್ದು ಪರಿಹಾರವನ್ನು ವಿಳಂಬಗೊಳಿಸುತ್ತಿವೆ ಎಂದು ಕಾಂತ್ ತಿಳಿಸಿದ್ದಾರೆ.


ಚೀನಾಗೆ ಭಾರತದ ಕರೆ ಏನು?


ಭಾರತದಲ್ಲಿ ಬೆಂಗಳೂರಿನಲ್ಲಿ ಜಿ-20 ರಾಷ್ಟ್ರಗಳ ಹಣಕಾಸು ಮತ್ತು ವಿತ್ತೀಯ ನಾಯಕರ ಸಭೆಯ ಮೊದಲು ಮಾತುಕತೆ ನಡೆಯಲಿದೆ. ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕರ್‌ಗಳು ಸಾಲವನ್ನು ವಿಸ್ತರಿಸುವ ವಿಶ್ವಬ್ಯಾಂಕ್‌ನ ಯೋಜನೆಯನ್ನು ಚರ್ಚಿಸುತ್ತಾರೆ ಎಂದು ಕಾಂತ್ ತಿಳಿಸಿದ್ದು, ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರ ಬೆಂಬಲ ಕೂಡ ಇದೆ ಎಂದು ತಿಳಿಸಿದ್ದಾರೆ.

Published by:ವಾಸುದೇವ್ ಎಂ
First published: