Aadhar Card: ಆಧಾರ್ ಕಾರ್ಡ್ ಕಳೆದಿದೆಯಾ? ನಂಬರ್ ನೆನಪಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

Aadhar Card : ಆಧಾರ್ ಕಾರ್ಡ್ ಕಳೆದುಕೊಂಡಿದ್ರೆ ಚಿಂತಿಸಬೇಡಿ. ಏಕೆಂದರೆ ಅದನ್ನು ಹಿಂಪಡೆಯಲು ಸರಳವಾಗಿ ಮತ್ತು ಅತ್ಯಂತ ಬೇಗ ಪಡೆದುಕೊಳ್ಳುವ ಮಾರ್ಗವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಧಾರ್ ಕಾರ್ಡ್ (Aadhar Card) ಈಗ ಭಾರತದ ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆ(Document)ಯಾಗಿದೆ. ಇದು ದೇಶದಲ್ಲಿ ಪ್ರಾಥಮಿಕ ಗುರುತಿನ ಪುರಾವೆಯಾಗಿದೆ ಮತ್ತು ಬ್ಯಾಂಕ್ ಖಾತೆಯನ್ನು ತೆರೆಯುವುದು(Bank Account Open), ಚಾಲಕರ ಪರವಾನಗಿಯನ್ನು (Driving License) ಪಡೆಯುವುದು ಮತ್ತು ಪ್ರಯಾಣ ಟಿಕೆಟ್‌ಗಳನ್ನು (ticket Booking) ಕಾಯ್ದಿರಿಸುವಂತಹ ಹೆಚ್ಚಿನ ಸೇವೆಗಳನ್ನು ಪಡೆಯಲು ಬಳಸಲಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದರೆ ಅದು ನಿಮಗೆ ತುಂಬಾ ತೊಂದರೆಗಳು ಎದುರಿಸಬೇಕಾಗುತ್ತದೆ. ಏಕೆಂದರೆ ಇದು ದೇಶದ ಪ್ರತಿಯೊಂದು ಸೇವೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಪರಿಶೀಲನೆಗೆ ಅಗತ್ಯವಿದೆ. ಚಿಂತಿಸಬೇಡಿ, ಏಕೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ, ಅದನ್ನು ಹಿಂಪಡೆಯಲು ಸರಳ ಮತ್ತು ಅತ್ಯಂತ ಬೇಗ ಪಡೆದುಕೊಳ್ಳುವ ಮಾರ್ಗವಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರಿಗೆ ಡಿಜಿಟಲ್ ಸೇವೆಯನ್ನು ಪ್ರಾರಂಭಿಸಿದೆ. ಇದರಿಂದ ಜನರು ಯಾವುದೇ ತೊಂದರೆಗಳಿಲ್ಲದೆ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಹಿಂಪಡೆಯಬಹುದು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ನೀವು ನಿಮ್ಮ UID ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಹಿಂಪಡೆಯಬಹುದು.

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಹಿಂಪಡೆಯುವುದು ಹೇಗೆ?

UIDAI ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ.

ಮುಖಪುಟದಲ್ಲಿ, ಆಧಾರ್ ಸೇವೆಗಳ ಟ್ಯಾಬ್ ಅಡಿಯಲ್ಲಿ ನನ್ನ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಈಗ, 'ರಿಟ್ರೀವ್ ಲಾಸ್ಟ್ ಆರ್ ಫಾರ್ಗಾಟನ್ ಇಐಡಿ/ಯುಐಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ನೋಂದಾಯಿತ ಮೊಬೈಲ್ ಸಂಖ್ಯೆ, ಹೆಸರು ಮತ್ತು ಇಮೇಲ್ ಐಡಿಯಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ.

ನಿಮ್ಮ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ. ವೆಬ್‌ಸೈಟ್‌ನಲ್ಲಿ OTP ಅನ್ನು ನಮೂದಿಸಿ.

ನೀವು ವಿನಂತಿಸಿದ UID/EID ಸಂಖ್ಯೆಯನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ನೀವು ಯುಐಡಿ ಸಂಖ್ಯೆಯನ್ನು ಬಳಸಬಹುದು.

ಇದನ್ನೂ ಓದಿ:  LIC ಪ್ರೀಮಿಯಂ ಜಮೆ ಮಾಡಲು ಬಳಸಬಹುದು PF ಹಣ: ಇಲ್ಲಿದೆ ವಿವರ

ಆಧಾರ್ ಕಾರ್ಡ್ ಅನ್ನು ಮರುಮುದ್ರಣ ಮಾಡುವುದು ಹೇಗೆ?

UIDAI ನ ಅಧಿಕೃತ ವೆಬ್‌ಸೈಟ್‌ನಲ್ಲಿ, 'ಆರ್ಡರ್ ಆಧಾರ್ ಮರುಮುದ್ರಣ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ವೆಬ್‌ಪುಟದಲ್ಲಿ UID ಅಥವಾ EID ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈಗ, ಕ್ಯಾಪ್ಚಾ ಕೋಡ್‌ನೊಂದಿಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಯುಐಡಿ, ಇಐಡಿ ಅಥವಾ ವಿಐಡಿ ಅನ್ನು ನಮೂದಿಸಿ.

ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.

ಆನ್‌ಲೈನ್ ಪಾವತಿಯನ್ನು ಮಾಡಿ ಮತ್ತು ಅದರ ರಶೀದಿಯನ್ನು ಉಳಿಸಿ.

ದೃಢೀಕರಣವನ್ನು ನಿಮಗೆ SMS ಮೂಲಕ ಕಳುಹಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಕಾರ್ಡ್ ಅನ್ನು ಮುದ್ರಿಸಲಾಗುತ್ತದೆ ಮತ್ತು ನಿಮಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ:  ಯಾವುದೇ ಗ್ಯಾರಂಟಿ ಇಲ್ಲದೇ ರೈತರಿಗೆ ಸಿಗಲಿದೆ 1.60 ಲಕ್ಷ ರೂ. ಸಾಲ: ಹೇಗೆ ಅಂತೀರಾ? ಇಲ್ಲಿದೆ ಉತ್ತರ

ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಗೆ ಕನ್ನ

ಆಧಾರ್ ಕಾರ್ಡ್‌ನ ವಿತರಣಾ ಸಂಸ್ಥೆಯಾಗಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಜನರ ಮಾಹಿತಿ ರಕ್ಷಣೆ ಜೊತೆಗೆ ತನ್ನ ಸೇವೆಯನ್ನು ನೀಡುತ್ತಿದೆ. ಡಿಜಿಟಲ್ ವಹಿವಾಟಿನ ಸಮಯದಲ್ಲಿ ಹ್ಯಾಕರ್ ಗಳು ಆಧಾರ್ ನಂಬರ್ ಮೂಲಕ ಹಣಕ್ಕೆ ಕನ್ನ ಹಾಕುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಇಂತಹ ಮೋಸ ಮತ್ತು ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಆ ನಿಯಮಗಳು ಏನು ಎಂಬುದರ ಮಾಹಿತಿ ಇಲ್ಲಿದೆ.

ನಿಯಮ 1:  ನಿಮ್ಮ ಪ್ಯಾನ್ ಮತ್ತು ಆಧಾರ್ ಮಾಹಿತಿಯನ್ನು ಎಂದಿಗೂ ಬಹಿರಂಗಪಡಿಸಬೇಡಿ. ಅನಾವಶ್ಯಕವಾಗಿ ಸಣ್ಣ ಕೆಲಸಗಳಲ್ಲಿಯೂ ಈ ನಂಬರ್ ಗಳನ್ನು ಶೇರ್ ಮಾಡೋದರಿಂದ ದೂರವಿರಿ.

ನಿಯಮ 2: ಅಪರಿಚಿತ ಅಥವಾ ಪರಿಚಿತ ವ್ಯಕ್ತಿಗೆ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಎಂದಿಗೂ ಹಸ್ತಾಂತರಿಸಬೇಡಿ

ನಿಯಮ 3: ಆಧಾರ್ ಅಥವಾ ಪ್ಯಾನ್‌ಗೆ ಸಂಬಂಧಿಸಿದಂತೆ ನಿಮ್ಮ ಫೋನ್‌ಗೆ ಕಳುಹಿಸಲಾದ ಯಾವುದೇ OTP ಅನ್ನು ಎಲ್ಲಿಯೂ ಅಥವಾ ಯಾರೊಂದಿಗೂ ಹಂಚಿಕೊಳ್ಳಬಾರದು.
Published by:Mahmadrafik K
First published: